Musheer Khan broke legendary Sachin's record: ಭಾರತದ ಕ್ರಿಕೆಟಿಗ ಸರ್ಫರಾಜ್ ಖಾನ್ ಅವರ ಸಹೋದರ ಮುಶೀರ್ ಖಾನ್ ದುಲೀಪ್ ಟ್ರೋಫಿಯಲ್ಲಿ ಸಂಚಲನ ಮೂಡಿಸಿದ್ದಾರೆ. 19 ವರ್ಷದ ಮುಶೀರ್ ಖಾನ್, ದುಲೀಪ್ ಟ್ರೋಫಿಯಲ್ಲಿ ತನ್ನ ಮೊದಲ ಪಂದ್ಯವನ್ನು ಆಡುತ್ತಿದ್ದು, ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ ಶತಕ ಗಳಿಸಿದ್ದಾರೆ. ಈ ಇನ್ನಿಂಗ್ಸ್‌ನೊಂದಿಗೆ ಅವರು 3 ದಶಕಗಳ ಹಿಂದಿನ ಶ್ರೇಷ್ಠ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದರು. ಭಾರತ B ತಂಡದ ಪರ ಬ್ಯಾಟಿಂಗ್ ಮಾಡುತ್ತಿದ್ದ ಮುಶೀರ್ ಭಾರತ A ವಿರುದ್ಧ 181 ರನ್‌ಗಳ ಭರ್ಜರಿ ಶತಕವನ್ನು ಬಾರಿಸಿದರು. ಈ ಇನ್ನಿಂಗ್ಸ್‌ನಿಂದ ಭಾರತ B ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 321 ರನ್‌ಗಳನ್ನು ಕಲೆ ಹಾಕಿದೆ.
ಮೊದಲ ದಿನವೇ ಶತಕ ಸಾಧನೆ
Musheer Khan brings up his 💯 🙌
A special celebration and a special appreciation from brother Sarfaraz Khan 👏#DuleepTrophy | @IDFCFIRSTBank
Follow the match ▶️ https://t.co/eQyu38Erb1 pic.twitter.com/92lj578cAs
— BCCI Domestic (@BCCIdomestic) September 5, 2024
ದುಲೀಪ್ ಟ್ರೋಫಿಯಲ್ಲಿ ಮೊದಲ ಪಂದ್ಯದ ಮೊದಲ ದಿನವೇ ಮುಶೀರ್ ಶತಕ ಬಾರಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಮೊದಲ ದಿನವೇ ಅದ್ಭುತ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದ 19 ವರ್ಷದ ಈ ಯುವಕ 2ನೇ ದಿನವೂ ತನ್ನ ಅದ್ಭುತ ಆಟವನ್ನು ಮುಂದುವರಿಸಿದ್ದಾರೆ. ಆದರೆ 2ನೇ ದಿನದಲ್ಲಿ ದ್ವಿಶತಕ ಪೂರೈಸುವಲ್ಲಿ ವಂಚಿತರಾದರು. 181 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತಮ್ಮ ಎರಡನೇ 150+ ಸ್ಕೋರ್ ಗಳಿಸಿದರು. ಮುಶೀರ್ 373 ಎಸೆತಗಳಲ್ಲಿ 16 ಬೌಂಡರಿ ಮತ್ತು 5 ಸಿಕ್ಸರ್‌ಗಳಿದ್ದ 181 ರನ್ ಗಳಿಸಿದರು. ಇದರೊಂದಿಗೆ ದುಲೀಪ್ ಟ್ರೋಫಿಯಲ್ಲಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದರು.
ಇದನ್ನೂ ಓದಿ: ವಾಮಿಕಾ ಜನಿಸಿದ ಬಳಿಕ ನಮ್ಮ ಬದುಕಲ್ಲಿ ಹೀಗಾಯ್ತು... ಮಗಳ ಬಗ್ಗೆ ಅನುಷ್ಕಾ ಶರ್ಮಾ ಹೇಳಿಕೆ ವೈರಲ್
ಸಚಿನ್ ತೆಂಡೂಲ್ಕರ್ ದಾಖಲೆ ಧೂಳಿಪಟ!
Stumps on Day 1!
Musheer Khan's brilliant rearguard of 105* takes India B to 202/7 after they suffered a collapse, losing five wickets in the second session. #DuleepTrophy | @IDFCFIRSTBank
Follow the match ▶️ https://t.co/eQyu38Erb1 pic.twitter.com/JrHX5GRZxC
— BCCI Domestic (@BCCIdomestic) September 5, 2024
ಮುಶೀರ್ ಅವರ 181 ರನ್‌ಗಳ ಇನ್ನಿಂಗ್ಸ್ ಈಗ ದುಲೀಪ್ ಟ್ರೋಫಿಯಲ್ಲಿ ಚೊಚ್ಚಲ ಪಂದ್ಯದಲ್ಲಿ ಯಾವುದೇ ಬ್ಯಾಟ್ಸ್‌ಮನ್ ಗಳಿಸಿದ 3ನೇ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. ಈ ಮೂಲಕ ಸಚಿನ್ ತೆಂಡೂಲ್ಕರ್ ಅವರ 33 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ. ಅವರಿಗಿಂತ ಮೊದಲು ಜನವರಿ 1991ರಲ್ಲಿ ಗುವಾಹಟಿಯಲ್ಲಿ ಪೂರ್ವ ವಲಯದ ವಿರುದ್ಧ ಪಶ್ಚಿಮ ವಲಯದ ಪರ ಬ್ಯಾಟಿಂಗ್ ಮಾಡಿದ್ದ ಸಚಿನ್ 159 ರನ್‌ಗಳ ಇನ್ನಿಂಗ್ಸ್ ಆಟವಾಡಿದ್ದರು. ಆದರೆ ಮುಶೀರ್ ಖಾನ್ ಅವರು ಯಶ್ ಧುಲ್ ಮತ್ತು ಬಾಬಾ ಅಪರಾಜಿತ್ ಅವರನ್ನು ಹಿಂದಿಕ್ಕಲು ಸಾಧ್ಯವಾಗಲಿಲ್ಲ. ಬಾಬಾ ಅಪರಾಜಿತ್ 212 ರನ್ ಗಳಿಸಿ ನಂಬರ್ 1 ಸ್ಥಾನದಲ್ಲಿದ್ದಾರೆ. ಇವರು ದುಲೀಪ್ ಟ್ರೋಫಿಯಲ್ಲಿ ಚೊಚ್ಚಲ ಪಂದ್ಯದಲ್ಲೇ ದ್ವಿಶತಕ ಸಿಡಿಸಿದ ಏಕೈಕ ಆಟಗಾರನಾಗಿದ್ದು, ಮೊದಲ ಪಂದ್ಯದಲ್ಲಿ 193 ರನ್ ಗಳಿಸಿದ್ದ ಯಶ್ ಧುಲ್ 2ನೇ ಸ್ಥಾನದಲ್ಲಿದ್ದಾರೆ. ಸಚಿನ್ 3ನೇ ಸ್ಥಾನದಲ್ಲಿದ್ದರು.
ಉತ್ತಮ ಸ್ಕೋರ್ ಗಳಸಲು ಸಹಕಾರಿ
ಭಾರತ B ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 94/7 ರಿಂದ ಚೇತರಿಸಿಕೊಂಡು 321 ರನ್‌ಗಳಿಗೆ ಮುಕ್ತಾಯಗೊಳಿಸಿದ್ದು, ಮುಶೀರ್‌ಗೆ ಬ್ಯಾಟಿಂಗ್‌ನಿಂದ ತಂಡವು ಉತ್ತಮ ಸ್ಕೋರ್ ಕಲೆಹಾಕಲು ಸಹಕಾರಿಯಾಯಿತು. ನವದೀಪ್ ಸೈನಿ ಕೂಡ ಅರ್ಧಶತಕ ಬಾರಿಸುವ ಮೂಲಕ ಮುಶೀರ್ ಖಾನ್ ಅವರಿಗೆ ಉತ್ತಮ ಬೆಂಬಲ ನೀಡಿದರು. ಮುಶೀರ್ ಖಾನ್ ಇದುವರೆಗಿನ ತಮ್ಮ ವೃತ್ತಿಜೀವನದಲ್ಲಿ ಹೊಸ ಎತ್ತರ ಮುಟ್ಟುತ್ತಿದ್ದಾರೆ. ಇಲ್ಲಿಯವರೆಗೆ ಅವರು 7 ಪ್ರಥಮ ದರ್ಜೆ ಪಂದ್ಯಗಳಲ್ಲಿ 3 ಶತಕ ಮತ್ತು 2 ಅರ್ಧ ಶತಕವನ್ನು ಗಳಿಸಿದ್ದಾರೆ. ಇದರಲ್ಲಿ ಅವರ ಅತ್ಯುತ್ತಮ ಸ್ಕೋರ್ 203 ಆಗಿದೆ. ಇಲ್ಲಿಯವರೆಗೆ ಅವರು ರೆಡ್ ಬಾಲ್ ಮಾದರಿಯಲ್ಲಿ 64.54 ಸರಾಸರಿಯಲ್ಲಿ 11 ಇನ್ನಿಂಗ್ಸ್‌ಗಳಲ್ಲಿ 710 ರನ್ ಗಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.