ಟೀಂ ಇಂಡಿಯಾ ನಾಯಕನಿಗೆ ಹೃದಯ ಶಸ್ತ್ರ ಚಿಕಿತ್ಸೆ ! ಕ್ಯಾಪ್ಟನ್ ಹಾರ್ಟ್ ಸರ್ಜರಿಯಿಂದ ಭಾರತೀಯ ಕ್ರಿಕೆಟ್ ತಂಡದ ಮೇಲೆ ಪರಿಣಾಮ !
ಹೃದಯದಲ್ಲಿ ರಂಧ್ರ ಕಾಣಿಸಿಕೊಂಡ ಕಾರಣ ಯಶ್ ಧುಲ್ ಅವರು ತುರ್ತು ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಾಯಿತು.
Heart Surgery: ಕ್ರಿಕೆಟ್ ಜಗತ್ತಿನಲ್ಲಿ ಅನೇಕ ಆಟಗಾರರ ಕಠಿಣ ಪರಿಶ್ರಮ ಅವರನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಆದರೆ ಕೆಲವೊಮ್ಮೆ ಯಶಸ್ಸು ಸಾಧಿಸುವ ಸಮಯ ಬಂದಾಗ, ಅದೃಷ್ಟ ಅವರನ್ನು ಹಿಂದಕ್ಕೆ ಎಳೆದು ಬಿಡುತ್ತದೆ.ಅಂಡರ್-19 ವಿಶ್ವಕಪ್‌ನಲ್ಲಿ ಭಾರತವನ್ನು ಚಾಂಪಿಯನ್ ಮಾಡಿದ ನಾಯಕ ಯಶ್ ಧುಲ್ ಅವರ ಅaದೃಷ್ಟ ಕೂಡಾ ಅವರೊಂದಿಗೆ ಹೀಗೆಯೇ ಮಾಡಿದೆ.ಯಶ್ ಧುಲ್ ಬಗ್ಗೆ ಆಘಾತಕಾರಿ ಸುದ್ದಿಯೊಂದು ಬಂದಿದೆ. ಅವರ ಹೃದಯದಲ್ಲಿ ರಂಧ್ರವಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
ಸೆಂಟ್ರಲ್ ಡೆಲ್ಲಿ ಕಿಂಗ್ಸ್‌ನ ನಾಯಕತ್ವ :
2022 ರ ಅಂಡರ್-19 ವಿಶ್ವಕಪ್‌ನಲ್ಲಿ ಯಶ್ ಧುಲ್ ಭಾರತದ ಸಾರಥ್ಯ ವಹಿಸಿದ್ದರು. ಅಲ್ಲದೆ ತಂಡವನ್ನು ಸಮರ್ಥವಾಗಿ ಮುನ್ನಡೆಸಿ ಚಾಂಪಿಯನ್ ಆಗಿ ಮಾಡುವಲ್ಲಿ ಯಶಸ್ಸು ಹೊಂದಿದ್ದರು. ಆದರೆ ಇದರ ನಂತರ ನಾಪತ್ತೆಯಾಗಿದ್ದರು.ಇತ್ತೀಚೆಗೆ, ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ಆಡುತ್ತಿರುವ ಯುವ ಬ್ಯಾಟ್ಸ್‌ಮನ್‌ಗೆ ಸೆಂಟ್ರಲ್ ದೆಹಲಿ ಕಿಂಗ್ಸ್ ನಾಯಕತ್ವ ವಹಿಸಲಾಗಿತ್ತು.ಆದರೆ ಪಂದ್ಯಾವಳಿಯ ಮಧ್ಯದಲ್ಲಿ ಅವರು ತಮ್ಮ ನಾಯಕತ್ವದಿಂದ ಹಿಂದೆ ಸರಿದಿದ್ದು ಬಳಿಕ ತಂಡದ ಸಾರಥ್ಯವನ್ನು ಜಾಂಟಿ ಸಿಧುಗೆ ಹಸ್ತಾಂತರಿಸಲು ನಿರ್ಧರಿಸಲಾಯಿತು.ಇದೀಗ ಇದೆಲ್ಲದರ ಹಿಂದಿನ ಕಾರಣ ಬಹಿರಂಗವಾಗಿದೆ.
ಇದನ್ನೂ ಓದಿ : IPL 2025: ಮ್ಯಾಕ್ಸಿಗೆ ಒಲಿದ ಅದೃಷ್ಟ!ಮೂವರು ಆಟಗಾರರ ಕೈ ಬಿಟ್ಟ RCB
ಇತ್ತೀಚಿನ ದಿನಗಳಲ್ಲಿ, ಯಶ್ ತಮ್ಮ ಹಳೆಯ ಲಯ ಮತ್ತು ಫಿಟ್‌ನೆಸ್ ಅನ್ನು ಮರಳಿ ಪಡೆಯಲು ಸಾಕಷ್ಟು ಬೆವರು ಹರಿಸುತ್ತಿದ್ದಾರೆ.ಡಿಪಿಎಲ್‌ನಲ್ಲಿ ನಾಯಕತ್ವವನ್ನು ವಹಿಸಿಕೊಂಡ ನಂತರ,ಅವರು ಪ್ರಭಾವಿ ಆಟಗಾರನಾಗಿ ಆಡಬೇಕಾಗುತ್ತದೆ. ಅಂಡರ್-19 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿ ಅತ್ಯುತ್ತಮ ನಾಯಕತ್ವದ ಮೂಲಕ ವಿಶ್ವಕಪ್ ಗೆದ್ದು ಎಲ್ಲರ ಮನ ಗೆದ್ದಿದ್ದರು.
ಯಶ್ ಹೃದಯದಲ್ಲಿ ರಂಧ್ರ :
ಯಶ್ ಧುಲ್‌ನ ಹೃದಯದಲ್ಲಿ ರಂಧ್ರವಿದೆ ಎನ್ನುವ ಸತ್ಯ ಏಕಾಏಕಿ ಗಮನಕ್ಕೆ ಬಂತು. ಇದರಿಂದಾಗಿ ಅವರು ತುರ್ತು ಶಸ್ತ್ರಚಿಕಿತ್ಸೆಗೂ ಒಳಗಾಗಬೇಕಾಯಿತು.ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಶಿಬಿರದಲ್ಲಿ ಅವರನ್ನು ತಪಾಸಣೆಗೆ ಒಳಪಡಿಸಿದಾಗ ಅವರ ಹೃದಯದಲ್ಲಿ ರಂಧ್ರವಿರುವುದು ಕಂಡುಬಂದಿದೆ.ಈ ಅವಧಿಯಲ್ಲಿ ಅವರು ಬಿಸಿಸಿಐನ ಮೇಲ್ವಿಚಾರಣೆಯಲ್ಲಿದ್ದರು.
ಇದನ್ನೂ ಓದಿ : ತಾಯಿಯ ಕೊನೆ ಆಸೆ ಈಡೇರಿಸಲು ತಂಗಿಯನ್ನೇ ಮದುವೆಯಾದ ಖ್ಯಾತ ಕ್ರಿಕೆಟಿಗ ! ಇಲ್ಲಿದೆ ನೋಡಿ ಈ ಜೋಡಿಯ ಫೋಟೋ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.