IND vs WI, 1st Test Series: ಭಾರತದ ಸ್ಫೋಟಕ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರು ಟೀಮ್ ಇಂಡಿಯಾದ ಡ್ಯಾಶಿಂಗ್ ಕ್ರಿಕೆಟಿಗನ ಟೆಸ್ಟ್ ವೃತ್ತಿಜೀವನವನ್ನು ಬಹುತೇಕ ಅಂತ್ಯಗೊಳಿಸಿದ್ದಾರೆ. ಇದೀಗ ಭಾರತೀಯ ಟೆಸ್ಟ್ ತಂಡದಲ್ಲಿ ಯಶಸ್ವಿ ಜೈಸ್ವಾಲ್ ಕಾರಣ, ಆ ಆಟಗಾರ ಟೀಂ ಇಂಡಿಯಾಗೆ ಮರಳುವ ಎಲ್ಲಾ ಸಾಧ್ಯತೆಗಳು ಮುಚ್ಚಿವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಚೊಚ್ಚಲ ಟೆಸ್ಟ್’ನಲ್ಲಿ ಶತಕ ಸಿಡಿಸಿದ್ದ 23ರ ಹರೆಯದ Team Indiaದ ಈ ಸ್ಟಾರ್ ಕ್ರಿಕೆಟಿಗ ನಿವೃತ್ತಿ ಘೋಷಣೆ!


ವೆಸ್ಟ್ ಇಂಡೀಸ್ ವಿರುದ್ಧ ಡೊಮಿನಿಕಾದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ 350 ಎಸೆತಗಳಲ್ಲಿ 143 ರನ್ ಗಳಿಸಿ ಕ್ರೀಸ್‌ ನಲ್ಲಿದ್ದಾರೆ. ಯಶಸ್ವಿ ಜೈಸ್ವಾಲ್ ತಮ್ಮ ಇನ್ನಿಂಗ್ಸ್‌ ನಲ್ಲಿ ಇದುವರೆಗೆ 14 ಬೌಂಡರಿಗಳನ್ನು ಬಾರಿಸಿದ್ದಾರೆ. ಟೆಸ್ಟ್ ಪಂದ್ಯದ ಮೂರನೇ ದಿನ ಅಂದರೆ ಇಂದು (ಶುಕ್ರವಾರ), ಜೈಸ್ವಾಲ್ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಬಾರಿಸುವ ಕನಸು ಕಾಣುತ್ತಿದ್ದಾರೆ.


ಇನ್ನು ವೆಸ್ಟ್ ಇಂಡೀಸ್ ವಿರುದ್ಧ ಡೊಮಿನಿಕಾದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಯಶಸ್ವಿ ಜೈಸ್ವಾಲ್ ಭಾರತೀಯ ಬ್ಯಾಟ್ಸ್‌ಮನ್‌ ಗೆ ಶತ್ರುವಾಗಿದ್ದಾರೆ. ಯಶಸ್ವಿ ಜೈಸ್ವಾಲ್ ಅವರ ಚೊಚ್ಚ ಟೆಸ್ಟ್ ಪಂದ್ಯದ ಶತಕದಿಂದ ಕೆಎಲ್ ರಾಹುಲ್ ಅವರ ಸ್ಥಾನಕ್ಕೆ ಕುತ್ತು ತಂದಿದ್ದಾರೆ. ಇನ್ನು ಶುಭ್ಮನ್ ಗಿಲ್ ಅವರು ಭಾರತ ಟೆಸ್ಟ್ ತಂಡದಲ್ಲಿ 3ನೇ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ. ಹೀಗಿರುವಾಗ ಕೆಎಲ್ ರಾಹುಲ್ ಭಾರತ ಟೆಸ್ಟ್ ತಂಡಕ್ಕೆ ಮರಳುವ ಎಲ್ಲಾ ಲಕ್ಷಣಗಳು ಕಡಿಮೆ ಎನಿಸುತ್ತಿದೆ.


ಯಶಸ್ವಿ ಜೈಸ್ವಾಲ್ ಇದೇ ರೀತಿ ಪ್ರದರ್ಶನ ನೀಡಿದರೆ, ಕೆಎಲ್ ರಾಹುಲ್ ಮತ್ತೊಮ್ಮೆ ಟೆಸ್ಟ್ ಕ್ರಿಕೆಟ್‌ ಗೆ ಎಂಟ್ರಿ ಕೊಡೋದು ಕಷ್ಟಸಾಧ್ಯ. ಯಶಸ್ವಿ ಟೀಮ್ ಇಂಡಿಯಾದ ಖಾಯಂ ಓಪನರ್ ಆಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ.


ಇನ್ನು ಭಾರತೀಯ ಟೆಸ್ಟ್ ತಂಡಕ್ಕಾಗಿ ಮ್ಯಾನೇಜ್‌ಮೆಂಟ್ ಶಕ್ತಿಶಾಲಿ ಆರಂಭಿಕ ಆಟಗಾರನನ್ನು ಹುಡುಕುತ್ತಿದೆ. ಇದೀಗ ಮ್ಯಾನೇಜ್‌ಮೆಂಟ್ ಯಶಸ್ವಿ ಜೈಸ್ವಾಲ್ ಮೇಲೆ ಕಣ್ಣಿಟ್ಟಿದ್ದು, ಭಾರತೀಯ ಟೆಸ್ಟ್ ತಂಡದಲ್ಲಿ ರೋಹಿತ್ ಶರ್ಮಾ ಜೊತೆ ಆರಂಭಿಕರಾಗಿ ಕಣಕ್ಕಿಳಿಸಲು ಮುಂದಾಗಿದೆ. ಕೆಎಲ್ ರಾಹುಲ್ ಗೆ ಟೆಸ್ಟ್ ಕ್ರಿಕೆಟ್ ಬಾಗಿಲು ಬಹುತೇಕ ಮುಚ್ಚಿದ್ದು, ತಮ್ಮ ಕೊನೆಯ ಟೆಸ್ಟ್ ಪಂದ್ಯಗಳಲ್ಲಿ ತೋರಿದ ಪ್ರದರ್ಶನದ ನಂತರ ಮತ್ತೊಮ್ಮೆ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವುದು ಕಷ್ಟವಾಗಿದೆ.


ಈ ವರ್ಷದ ಫೆಬ್ರವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ರೋಹಿತ್ ಶರ್ಮಾ ಆರಂಭಿಕ ಆಟಗಾರ ಕೆಎಲ್ ರಾಹುಲ್‌ ಗೆ ಅವಕಾಶ ನೀಡಿದ್ದರ, ಆದರೆ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಇದಾದ ಬಳಿಕ ಕೆಎಲ್ ರಾಹುಲ್ ಅವರನ್ನು ಉಪನಾಯಕ ಸ್ಥಾನದಿಂದ ಕೆಳಗಿಳಿಸಲಾಯಿತು.


ಇದನ್ನೂ ಓದಿ: ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಗಳಿವರು


ಯಶಸ್ವಿ ಜೈಸ್ವಾಲ್ ಅವರು ಭಾರತೀಯ ಟೆಸ್ಟ್ ತಂಡಕ್ಕೆ ಅಗತ್ಯವಿರುವ ಸ್ಫೋಟಕ ಆರಂಭಿಕ ಆಟಗಾರರಾಗಿದ್ದಾರೆ. ಯಶಸ್ವಿ ಜೈಸ್ವಾಲ್ ಟೀಂ ಇಂಡಿಯಾದ ದೊಡ್ಡ ಅಸ್ತ್ರ ಎಂದು ಸಾಬೀತುಪಡಿಸಬಹುದು. ಯಶಸ್ವಿ ಜೈಸ್ವಾಲ್ ಅವರ ಅತ್ಯುತ್ತಮ ವಿಷಯವೆಂದರೆ ಅವರು ಎಡಗೈ ಬ್ಯಾಟ್ಸ್‌ಮನ್. ಎಡಗೈ ಬ್ಯಾಟ್ಸ್‌ಮನ್‌ಗಳು ಯಾವುದೇ ತಂಡಕ್ಕೆ X ಅಂಶವೆಂದು ಸಾಬೀತುಪಡಿಸುತ್ತಾರೆ. ಯಶಸ್ವಿ ಜೈಸ್ವಾಲ್ ಅವರಿಂದಲೂ ಟೀಮ್ ಇಂಡಿಯಾ ಬಲಿಷ್ಠ ಬ್ಯಾಲೆನ್ಸ್ ಪಡೆಯಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ