ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ, ಭಾರತ ಕ್ರಿಕೆಟ್ ತಂಡದಲ್ಲಿ ಒಂದಕ್ಕಿಂತ ಹೆಚ್ಚು ಶ್ರೇಷ್ಠ ಆಟಗಾರರಿದ್ದರು. ಆ ದಿಗ್ಗಜರು ಪಂದ್ಯವನ್ನು ಎಂತಹದ್ದೇ ಸಂಕಷ್ಟದ ಸಂದರ್ಭದಲ್ಲಿ ಗೆಲುವಿನತ್ತ ಕೊಂಡೊಯ್ಯುತ್ತಿದ್ದರು. ಈ ಮಹಾನ್ ಆಟಗಾರರು ವಿಶ್ವಕಪ್‌ನಂತಹ ಪಂದ್ಯಗಳಲ್ಲಿ ಮ್ಯಾಚ್ ವಿನ್ನರ್‌ಗಳಾಗಿ ಪಾತ್ರವನ್ನು ವಹಿಸಿದ್ದಾರೆ. 


COMMERCIAL BREAK
SCROLL TO CONTINUE READING

ಆದರೆ ವಿರಾಟ್ ಕೊಹ್ಲಿ ನಾಯಕತ್ವ ವಹಿಸಿದ ತಕ್ಷಣ, ಈ ಆಟಗಾರರ ವೃತ್ತಿಜೀವನವು ಫ್ಲಾಪ್ ಆಗಿದೆಯೇನೋ ಎಂಬಂತೆ ಭಾಸವಾಗುತ್ತಿದೆ. ಈ ಆಟಗಾರರು ಧೋನಿ ನಾಯಕತ್ವದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಕೊಹ್ಲಿ ನಾಯಕರಾದ ತಕ್ಷಣ ಅವರು ವಿಫಲತೆಯನ್ನು ಕಂಡರು.  ಆ ಇಬ್ಬರು ಆಟಗಾರರು ಯಾರೆಂದು ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ. 


ಇದನ್ನೂ ಓದಿ: IPL 2022: ಲೀಗ್‍ನಿಂದ ಚಾಂಪಿಯನ್ಸ್ ಔಟ್, ಈ ಸಲ ಹೊಸಬರಿಗೆ ಕಪ್..!


ಯುವರಾಜ್ ಸಿಂಗ್: 
ಭಾರತ 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಯುವರಾಜ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು. ಸೌರವ್ ಗಂಗೂಲಿ ನಾಯಕತ್ವದಲ್ಲಿ ಯುವರಾಜ್ ಸಿಂಗ್ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಬಳಿಕ ಟೀಂ ಇಂಡಿಯಾದಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಇದಾದ ಬಳಿಕ ಮಹೇಂದ್ರ ಸಿಂಗ್ ಧೋನಿ ಭಾರತ ತಂಡದ ನಾಯಕನಾದಾಗ ಯುವರಾಜ್ ಸಿಂಗ್ ಅಬ್ಬರದ ಪ್ರದರ್ಶನ ನೀಡಿದ್ದರು. 


ಯುವರಾಜ್ ಸಿಂಗ್ ಭಾರತೀಯ ಕ್ರಿಕೆಟ್ ಅನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು. ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಯುವರಾಜ್ ಸಿಂಗ್ 2007 ರ T20 ವಿಶ್ವಕಪ್ ಮತ್ತು 2011 ODI ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಜೊತೆಗೆ ಪಂದ್ಯಶ್ರೇಷ್ಠರಾಗಿ ಹೊರಹೊಮ್ಮಿದ್ದರು. ಯುವರಾಜ್ ಸಿಂಗ್ ಧೋನಿ ಪಡೆಯ ದೊಡ್ಡ ಮ್ಯಾಚ್ ವಿನ್ನರ್ ಎಂದೇ ಹೇಳಲಾಗುತ್ತದೆ. ಆದರೆ ಧೋನಿ ನಾಯಕತ್ವವನ್ನು ತೊರೆದ ನಂತರ, ಯುವಿ ಕೊಹ್ಲಿ ನಾಯಕತ್ವದಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳುವಲ್ಲಿ ವಿಫಲರಾದರು. ಆ ಬಳಿಕ ಅವರು ಟೀಮ್ ಇಂಡಿಯಾದಿಂದ ನಿವೃತ್ತರಾದರು. 


ಇದನ್ನೂ ಓದಿ: IPL 2022: ಇಲ್ಲಿದೆ ಐಪಿಎಲ್‌ನ Orange Cap-Purple Cap ಬಗ್ಗೆ ನಿಮಗರಿದ ಸತ್ಯಾಂಶ!


ಸುರೇಶ್ ರೈನಾ: 
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದಲ್ಲಿ ಅನೇಕ ಆಟಗಾರರು ತಮ್ಮ ವೃತ್ತಿಜೀವನದ ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಅಂತಹ ಸಾಧಕರಲ್ಲಿ ಸುರೇಶ್ ರೈನಾ ಕೂಡ ಒಬ್ಬರು. ಸುರೇಶ್ ರೈನಾ ಅವರು ಅತ್ಯಂತ ಉಪಯುಕ್ತ ಮತ್ತು ವಿಶ್ವಾಸಾರ್ಹ ಆಟಗಾರನಾಗಿ ಧೋನಿ ತಂಡದಲ್ಲಿ ತೊಡಗಿಸಿಕೊಂಡಿದ್ದರು. ಇನ್ನು ಸುರೇಶ್ ರೈನಾ ಅವರು ಧೋನಿ ನಾಯಕತ್ವದಲ್ಲಿ ಭಾರತ ತಂಡದಲ್ಲಿ ದೀರ್ಘಕಾಲ ಆಟವಾಡಿದ್ದಾರೆ. ಧೋನಿ ನಾಯಕತ್ವದಲ್ಲಿ ಒಟ್ಟು 228 ODI ಪಂದ್ಯಗಳನ್ನು ರೈನಾ ಆಡಿದ್ದಾರೆ. ಜೊತೆಗೆ 35 ರ ಸರಾಸರಿಯೊಂದಿಗೆ 6228 ರನ್ ಗಳಿಸಿದ ದಾಕಲೆ ಇವರದ್ದು. ಆದರೆ ಧೋನಿ ನಾಯಕತ್ವದ ಬಳಿಕ ಕೊಹ್ಲಿ ನಾಯಕತ್ವದಲ್ಲಿ ಆಟವಾಡಿದ ರೈನಾಗೆ ಅದೃಷ್ಟ ಅಷ್ಟರಮಟ್ಟಿಗೆ ಖುಲಾಯಿಸಲಿಲ್ಲ.  ಕೊಹ್ಲಿ ನಾಯಕತ್ವದಲ್ಲಿ 26 ಏಕದಿನ ಪಂದ್ಯಗಳನ್ನಾಡಿದ್ದು, 542 ರನ್ ಗಳಿಸಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.