ರಾಜ್ಯಕ್ಕೆ ಪ್ರಧಾನಿ ಆಗಮನ: ರಸ್ತೆ ಅಭಿವೃದ್ಧಿಗೆ ಮುಂದಾದ ಆಡಳಿತ, ವಾಹನ ಸವಾರರಿಗೆ ಸಂಕಷ್ಟ

ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ ರಸ್ತೆ, ಎಂಜಿ ರೋಡ್, ರೈಲ್ವೆ ನಿಲ್ದಾಣದ ರಸ್ತೆ, ಮೈಸೂರು ವಿವಿಗೆ ತೆರಳುವ ಮಾರ್ಗ, ಅರಮನೆ ಸುತ್ತಲಿನ ಮಾರ್ಗಗಳನ್ನು ಕಾಮಗಾರಿ ಮಾಡಲಾಗುತ್ತಿದೆ. ಆದರೆ ಈ ಕಾಮಗಾರಿ ಪ್ರಕ್ರಿಯೆಯಿಂದಾಗಿ ವಾಹನ ಸವಾರರರು ಸಂಕಷ್ಟ ಎದುರಿಸುತ್ತಿದ್ದಾರೆ.   

Written by - Bhavishya Shetty | Last Updated : Jun 13, 2022, 09:52 AM IST
  • ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆ
  • ರಸ್ತೆಗಳ ಕಾಮಗಾರಿ ನಡೆಸುತ್ತಿರುವ ಆಡಳಿತ
  • ಪ್ರಕ್ರಿಯೆಯಿಂದ ವಾಹನ ಸವಾರರಿಗೆ ಸಂಕಷ್ಟ
ರಾಜ್ಯಕ್ಕೆ ಪ್ರಧಾನಿ ಆಗಮನ: ರಸ್ತೆ ಅಭಿವೃದ್ಧಿಗೆ ಮುಂದಾದ ಆಡಳಿತ, ವಾಹನ ಸವಾರರಿಗೆ ಸಂಕಷ್ಟ title=
Narendra Modi

ಬೆಂಗಳೂರು: ಜೂನ್‌ 21ರಂದು ವಿಶ್ವ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಸಂಚರಿಸಲಿರುವ ಪ್ರದೇಶದ ರಸ್ತೆಗಳ ಕಾಮಗಾರಿ ನಡೆಸಲಾಗುತ್ತಿದೆ. ಆದರೆ ಈ ಪ್ರಕ್ರಿಯೆಯು ಜನರಿಗೆ ಸಂಕಷ್ಟ ತಂದೊಡ್ಡಿದೆ.

ಇದನ್ನು ಓದಿ: ಉಕ್ರೇನ್ ಮೇಲೆ ಈ 'ಬ್ರಹ್ಮಾಸ್ತ್ರ' ಚಲಾಯಿಸಲಿದ್ದಾರಾ ಪುಟಿನ್? ಬ್ರಿಟನ್ ಎಚ್ಚರಿಕೆ!!

ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ ರಸ್ತೆ, ಎಂಜಿ ರೋಡ್, ರೈಲ್ವೆ ನಿಲ್ದಾಣದ ರಸ್ತೆ, ಮೈಸೂರು ವಿವಿಗೆ ತೆರಳುವ ಮಾರ್ಗ, ಅರಮನೆ ಸುತ್ತಲಿನ ಮಾರ್ಗಗಳನ್ನು ಕಾಮಗಾರಿ ಮಾಡಲಾಗುತ್ತಿದೆ. ಆದರೆ ಈ ಕಾಮಗಾರಿ ಪ್ರಕ್ರಿಯೆಯಿಂದಾಗಿ ವಾಹನ ಸವಾರರರು ಸಂಕಷ್ಟ ಎದುರಿಸುತ್ತಿದ್ದಾರೆ. 

ವಾಹನ ಸವಾರರ ಪರದಾಟ: 
ರಾಜ್ಯಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ಜೂನ್‌ 20ರಂದು ಆಗಮಿಸಲಿದ್ದಾರೆ. ಆದರೆ ಇದಕ್ಕೂ ಮುನ್ನ ಕೈಗೊಂಡಿರುವ ಕಾಮಗಾರಿ ಪ್ರಕ್ರಿಯೆಯು ವಾಹನ ಸವಾರರಿಗೆ ಸಂಕಷ್ಟ ತಂದೊಡ್ಡಿದೆ. ಕಾಮಗಾರಿ ಹಿನ್ನೆಲೆಯಲ್ಲಿ ಬದಲಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದರೂ ಸಹ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. 

ಇದನ್ನೂ ಓದಿ: ಡಾರ್ಲಿಂಗ್ ಕೃಷ್ಣಗೆ ಜನ್ಮದಿನದ ಸಂಭ್ರಮ.. ದಿಲ್ ಪಸಂದ್ ಗ್ಲಿಂಪ್ಸ್ ಬಿಡುಗಡೆ

ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿನ ರೇಸ್‌ ಕೋರ್ಸ್‌ ಮೈದಾನದಲ್ಲಿ ಲಕ್ಷಾಂತರ ಯೋಗಪಟುಗಳ ಸಮ್ಮುಖದಲ್ಲಿ ಯೋಗ ದಿನಾಚರಣೆಗೆ ಚಾಲನೆ ನೀಡಲಿದ್ದಾರೆ. ಈಗಾಗಲೇ ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿಯವರ ಜೊತೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತುಕತೆ ನಡೆಸಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News