Yuvraj Singh On World Cup 2023: “ಭಾರತ ವಿಶ್ವಕಪ್ ಗೆದ್ದು 10 ವರ್ಷಗಳಿಗಿಂತಲೂ ಹೆಚ್ಚು ಸಮಯವಾಗಿದೆ. ಎಲ್ಲವನ್ನೂ ಪಣಕ್ಕಿಟ್ಟು, ಈ ಬಾರಿ ಶ್ರಮವಹಿಸಿ ಪಂದ್ಯವನ್ನಾಡಿ” ಎಂದು 2011ರ ವಿಶ್ವಕಪ್ ವಿಜೇತ ತಂಡದ ಆಟಗಾರ ಯುವರಾಜ್ ಸಿಂಗ್, ಈ ಬಾರಿಯ ವಿಶ್ವಕಪ್ ಭಾರತ ತಂಡಕ್ಕೆ ವಿಶೇಷ ಸಲಹೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಇಂದು ಭಾರತ-ಇಂಗ್ಲೆಂಡ್ ವಿಶ್ವಕಪ್ ಅಭ್ಯಾಸ ಪಂದ್ಯ: ಎಷ್ಟು ಗಂಟೆಗೆ, ಎಲ್ಲಿ, ಉಚಿತ ವೀಕ್ಷಣೆ ಹೇಗೆ?


IANS ಜೊತೆಗಿನ ಸಂವಾದದಲ್ಲಿ ಯುವರಾಜ್ ಮಾತನಾಡಿದ್ದು, “ನಾವು ಐಸಿಸಿ ಟ್ರೋಫಿ ಗೆದ್ದು ಬಹಳ ಸಮಯವಾಗಿದೆ. ಎರಡು ಫೈನಲ್‌’ಗಳನ್ನು ಆಡಿದ್ದೇವೆ. ಇನ್ನು ಇದು ತಂಡದ ಕೆಲವು ಆಟಗಾರರಿಗೆ ಕೊನೆಯ ವಿಶ್ವಕಪ್ ಆಗಿರಬಹುದು ಎಂದು ನಾನು ಭಾವಿಸುತ್ತೇನೆ. ಈ ವಿಶ್ವಕಪ್ ಗೆಲ್ಲಲು ಪ್ರತಿಯೊಬ್ಬರೂ ತಮ್ಮ ದೇಹವನ್ನು ಪಣಕ್ಕಿಟ್ಟು ಶ್ರಮವಹಿಸಬೇಕು. ಸ್ವರೂಪವು ವಿಭಿನ್ನವಾಗಿದೆ” ಎಂದಿದ್ದಾರೆ.


1983 ಮತ್ತು 2011ರ ಚಾಂಪಿಯನ್ ಭಾರತವು ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್ 8 ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ವಿಶ್ವಕಪ್‌’ನಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ಭಾರತಕ್ಕೆ ಕಠಿಣ ಸವಾಲನ್ನು ನೀಡಬಹುದು ಎಂದು ಯುವರಾಜ್ ಹೇಳಿದರು.


“ಆಸ್ಟ್ರೇಲಿಯಾ ಯಾವಾಗಲೂ ಬಲಿಷ್ಠ ತಂಡವಾಗಿದೆ ಮತ್ತು ಈ ಹಿಂದೆಯೂ ಅನೇಕ ಪ್ರಶಸ್ತಿಗಳನ್ನು ಗೆದ್ದಿದೆ. ಒತ್ತಡದ ಪಂದ್ಯಗಳನ್ನು ಗೆಲ್ಲುವ ಸಾಮರ್ಥ್ಯ ಅವರಲ್ಲಿದೆ. ನ್ಯೂಜಿಲೆಂಡ್ ಉತ್ತಮ ತಂಡವಾಗಿದೆ ಎಂದು ನಾನು ಭಾವಿಸುತ್ತೇನೆ, ಇಂಗ್ಲೆಂಡ್ ಕೂಡ ಉತ್ತಮ ODI ತಂಡವಾಗಿದ್ದು, ಆಫ್ರಿಕಾ ಕೂಡ ಉತ್ತಮ ಪ್ರದರ್ಶನ ನೀಡುತ್ತಿದೆ” ಎಂದಿದ್ದಾರೆ.


ಇದನ್ನೂ ಓದಿ: ಈ ಭಾಗಗಳಲ್ಲಿ ಮುಂದಿನ 3 ದಿನಗಳ ಕಾಲ ಭಾರೀ ಮಳೆ! ಚಂಡಮಾರುತದ ಜೊತೆ ಸುಳಿಗಾಳಿ ಬೀಸುವ ಮುನ್ನೆಚ್ಚರಿಕೆ


“ಪಂದ್ಯವನ್ನು ಗೆಲ್ಲುವಲ್ಲಿ ಬೌಲರ್‌’ಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ.ಮಧ್ಯಮ ಓವರ್‌’ಗಳಲ್ಲಿ ಸ್ಪಿನ್ನರ್‌’ಗಳು ಪ್ರಮುಖ ಪಾತ್ರ ವಹಿಸುತ್ತಾರೆ, ಹತ್ತು ವಿಕೆಟ್‌’ಗಳನ್ನು ಕಬಳಿಸಬಲ್ಲ ಉತ್ತಮ ಬೌಲರ್‌ಗಳಿದ್ದಾರೆ ನಮ್ಮಲ್ಲಿ. ಈ ವಿಶ್ವಕಪ್‌’ನಲ್ಲಿ ಬೌಲರ್‌’ಗಳು ಹೆಚ್ಚಿನ ಪಂದ್ಯಗಳನ್ನು ಗೆದ್ದುಕೊಡುವ ಸಾಧ್ಯತೆ ಇದೆ” ಎಂದು ಹೇಳಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್