Indian Cricket Team: ಟೆಸ್ಟ್ ಕ್ರಿಕೆಟ್‌ ನಲ್ಲಿ ಆಡುವುದು ಪ್ರತಿಯೊಬ್ಬ ಕ್ರಿಕೆಟಿಗನ ಕನಸಾಗಿರುತ್ತದೆ. ಆದರೆ ಕೆಲವೇ ಆಟಗಾರರು ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಟೀಂ ಇಂಡಿಯಾದಲ್ಲಿಯೂ ಅಂತಹ ಒಬ್ಬ ಆಟಗಾರನಿದ್ದಾರೆ, ಅವರ ವೃತ್ತಿಜೀವನವು ಟೀಮ್ ಇಂಡಿಯಾದಲ್ಲಿ 7 ವರ್ಷಗಳಿಂದ ನಡೆಯುತ್ತಿದೆ. ಆದರೆ ಒಮ್ಮೆಯೂ ಟೆಸ್ಟ್ನಲ್ಲಿ ಆಡುವ ಅವಕಾಶ ಸಿಕ್ಕಿಲ್ಲ. ಟೀಂ ಇಂಡಿಯಾ ಪರ ಒಂದೇ ಒಂದು ಟೆಸ್ಟ್ ಪಂದ್ಯವನ್ನಾಡಿಲ್ಲ ಎಂಬ ಈ ಆಟಗಾರನ ನೋವು ಇದೀಗ ಮುನ್ನೆಲೆಗೆ ಬಂದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಗುಡ್ ನ್ಯೂಸ್..! ವಿಶ್ವಕಪ್’ಗೂ ಮುನ್ನ ತಂಡಕ್ಕೆ ಹೊಸ ಕೋಚ್ ನೇಮಕ


ಟೀಂ ಇಂಡಿಯಾದ ಮಾಂತ್ರಿಕ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಏಕದಿನ ಮತ್ತು ಟಿ20 ಮಾದರಿಯಲ್ಲಿ ತಂಡಕ್ಕಾಗಿ ಹಲವು ಪಂದ್ಯಗಳನ್ನು ಗೆದ್ದಿದ್ದಾರೆ. ಆದರೆ ಟೆಸ್ಟ್ ಕ್ರಿಕೆಟ್‌ ನಲ್ಲಿ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ಯಜುವೇಂದ್ರ ಚಹಾಲ್ ಟಿ20ಯಲ್ಲಿ ಟೀಂ ಇಂಡಿಯಾ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಕೂಡ ಹೌದು. ಇತ್ತೀಚೆಗೆ, ಯುಜ್ವೇಂದ್ರ ಚಹಾಲ್ ಅವರು ಕೆಂಪು ಬಾಲ್ ಕ್ರಿಕೆಟ್‌ ನಲ್ಲಿ ಆಡುವ ಕನಸಿನ ಬಗ್ಗೆ ಹೇಳಿಕೆ ನೀಡಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಚಹಾಲ್, ನಾನು ಇನ್ನೂ ತನ್ನ ಚೊಚ್ಚಲ ಟೆಸ್ಟ್ ಪಂದ್ಯದ ಕನಸು ಕಾಣುತ್ತಿದ್ದೇನೆ ಎಂದು ಹೇಳಿದ್ದಾರೆ.


'ಪ್ರತಿಯೊಬ್ಬರೂ ತಮ್ಮ ದೇಶಕ್ಕಾಗಿ ಆಡುವ ಕನಸು ಕಾಣುತ್ತಾರೆ. ನನ್ನ ಕನಸು ಕೂಡ ಇದೇ ರೀತಿಯದ್ದು. ನಾನು ಬಿಳಿ ಚೆಂಡು ಕ್ರಿಕೆಟ್‌ ನಲ್ಲಿ ಸಾಕಷ್ಟು ಸಾಧಿಸಿದ್ದೇನೆ. ಆದರೆ ಕೆಂಪು ಬಾಲ್ ಕ್ರಿಕೆಟ್ ಇನ್ನೂ ನನ್ನ ಪರಿಶೀಲನಾಪಟ್ಟಿಯಲ್ಲಿದೆ. ಟೆಸ್ಟ್ ಕ್ರಿಕೆಟಿಗ ಎಂಬುದು ನನ್ನ ಹೆಸರಿನ ಮುಂದೆ ಬರಬೇಕು. ನಾನು ಅದನ್ನು ಎದುರು ನೋಡುತ್ತೇನೆ. ನನ್ನ ಕನಸು ನನಸಾಗಲು ದೇಶೀಯ ಕ್ರಿಕೆಟ್ ಮತ್ತು ರಣಜಿಯಲ್ಲಿ ನನ್ನ ಅತ್ಯುತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನೆ. ಶೀಘ್ರದಲ್ಲೇ ನನಗೂ ಭಾರತ ಟೆಸ್ಟ್ ತಂಡದೊಂದಿಗೆ ಆಡುವ ಅವಕಾಶ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದರು.


ವೈಟ್ ಬಾಲ್ ಕ್ರಿಕೆಟ್‌’ನಲ್ಲಿ ಉತ್ತಮ ದಾಖಲೆ:


ಯುಜುವೇಂದ್ರ ಚಹಾಲ್ 2016 ರಲ್ಲಿ ಟೀಂ ಇಂಡಿಯಾ ಪರ ಮೊದಲ ODI ಆಡಿದ್ದರು. ಈ ವರ್ಷ ಟಿ20ಗೆ ಪದಾರ್ಪಣೆ ಮಾಡಿದ್ದರು. ಟೀಂ ಇಂಡಿಯಾ ಪರ ಇದುವರೆಗೆ 72 ಏಕದಿನ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 121 ವಿಕೆಟ್ ಪಡೆದಿದ್ದಾರೆ. ಇನ್ನು 75 ಟಿ20 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಅವರು 91 ವಿಕೆಟ್ಗಳನ್ನು ಕಬಳಿಸಿದ್ದಾರೆ. ಈ ಶ್ರೇಷ್ಠ ದಾಖಲೆಯ ನಂತರವೂ ಯುಜುವೇಂದ್ರ ಚಹಾಲ್ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿಲ್ಲ.


ಇದನ್ನೂ ಓದಿ: 1 ವರ್ಷದ ನಂತರ ಬದಲಾಗಲಿದೆ ಈ ರಾಶಿಗಳ ಲಕ್! ಹೆಜ್ಜೆಯಿಟ್ಟಲ್ಲೆಲ್ಲಾ ಸಾಟಿಯಿಲ್ಲದ ಯಶಸ್ಸು-ಸೂರ್ಯದೃಷ್ಟಿಯೇ ಇವರಿಗೆ ಸಂಪತ್ತು


ಐಪಿಎಲ್‌’ನ ಅತ್ಯಂತ ಯಶಸ್ವಿ ಬೌಲರ್:


ಯುಜ್ವೇಂದ್ರ ಚಹಾಲ್ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್. ಐಪಿಎಲ್ 2023 ರಲ್ಲಿ ಅತಿ ಹೆಚ್ಚು ವಿಕೆಟ್‌ ಗಳನ್ನು ಪಡೆಯುವ ವಿಷಯದಲ್ಲಿ ವೇಗದ ಬೌಲರ್ ಡ್ವೇನ್ ಬ್ರಾವೋ ಅವರನ್ನು ಹಿಂದಿಕ್ಕಿದ್ದರು. ಬ್ರಾವೋ ಐಪಿಎಲ್‌ ನಲ್ಲಿ 183 ವಿಕೆಟ್‌ ಗಳನ್ನು ಪಡೆದಿದ್ದರು. ಮತ್ತೊಂದೆಡೆ ಯುಜುವೇಂದ್ರ ಚಹಾಲ್ ಐಪಿಎಲ್‌ ನಲ್ಲಿ ಇದುವರೆಗೆ ಒಟ್ಟು 187 ವಿಕೆಟ್‌ ಗಳನ್ನು ಹೊಂದಿದ್ದಾರೆ. ಚಹಾಲ್ ಐಪಿಎಲ್ 2023ರ 14 ಪಂದ್ಯಗಳಲ್ಲಿ 21 ವಿಕೆಟ್ ಕಬಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ