ಭಾರತದ ಈ ಮೂವರು ವೇಗಿಗಳು ಜಗತ್ತಿನ ಯಾವುದೇ ತಂಡವನ್ನು ಬೇಕಾದ್ರೂ ನಡುಗಿಸಬಲ್ಲರು: ಜಹೀರ್ ಖಾನ್ ಕೊಂಡಾಡಿದ್ದು ಯಾರನ್ನು?
Zaheer Khan predicts India’s Best Trio: Cricbuzz ಜೊತೆಗಿನ ಇತ್ತೀಚಿನ ಚರ್ಚೆಯಲ್ಲಿ, ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬುಮ್ರಾ ಮತ್ತು ಸಿರಾಜ್ ಅವರ ಅಸಾಧಾರಣ ಪ್ರದರ್ಶನಗಳನ್ನು ಜಹೀರ್ ಖಾನ್ ಮೆಚ್ಚಿದ್ದಾರೆ.
Zaheer Khan predicts India’s Best Trio: ಭಾರತದ ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಇತ್ತೀಚೆಗೆ ಟೀಂ ಇಂಡಿಯಾ ಅದ್ಭುತ ವೇಗದ ಬೌಲಿಂಗ್ ವಿಭಾಗದ ಬಗ್ಗೆ ಮಾತನಾಡಿದ್ದಾರೆ. ಅದರಲ್ಲೂ ಯಾವುದೇ ತಂಡವನ್ನು ಬೇಕಾದ್ರೂ ಅಲ್ಲೋಲ ಕಲ್ಲೋಲ ಮಾಡುವ ಸಾಮಾರ್ಥ್ಯವನ್ನು ಹೊಂದಿರುವ ಮೂವರು ಆಟಗಾರರ ಬಗ್ಗೆಯೂ ಮನಬಿಚ್ಚಿದ್ದಾರೆ.
ಇದನ್ನೂ ಓದಿ: ಟಿ20 ವಿಶ್ವಕಪ್‌ನಲ್ಲಿ ರೋಹಿತ್ - ಕೊಹ್ಲಿ ಇರಲೇಬೇಕು, ಟೀಂ ಇಂಡಿಯಾ ಬಗ್ಗೆ ಈ ಅನುಭವಿ ಆಟಗಾರ ಹೇಳಿದ್ದೇನು?
Cricbuzz ಜೊತೆಗಿನ ಇತ್ತೀಚಿನ ಚರ್ಚೆಯಲ್ಲಿ, ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬುಮ್ರಾ ಮತ್ತು ಸಿರಾಜ್ ಅವರ ಅಸಾಧಾರಣ ಪ್ರದರ್ಶನಗಳನ್ನು ಜಹೀರ್ ಖಾನ್ ಮೆಚ್ಚಿದ್ದಾರೆ. ಈ ಸರಣಿಯಲ್ಲಿ ಬುಮ್ರಾ ಆಕರ್ಷಕ 12 ವಿಕೆಟ್ ಪಡೆದರೆ, ಸಿರಾಜ್ 9 ವಿಕೆಟ್ ಪಡೆದಿದ್ದರು. ಆದರೆ ದುರದೃಷ್ಟವಶಾತ್, ಸರಣಿಯ ವೇಳೆ ಪಾದದ ಗಾಯದಿಂದ ಶಮಿ ಹೊರಗುಳಿದಿದ್ದರು.
ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಟೀಂ ಇಂಡಿಯಾದ ಅದ್ಭುತವೆಂದು ಜಹೀರ್ ಖಾನ್ ಕೊಂಡಾಡಿದ್ದಾರೆ.
ಇದನ್ನೂ ಓದಿ: 12 ವರ್ಷಗಳಿಂದ ಕಟ್ಟಿಕೊಂಡು ಬಂದಿದ್ದ "ವಿರಾಟ್" ದಾಖಲೆ ನೆಲಸಮ! ಶುಭ್ಮನ್ ಗಿಲ್ 2023 ರ ಅತ್ಯಧಿಕ ರನ್ ಗೆಟ್ಟರ್..
“ಮೊಹಮ್ಮದ್ ಶಮಿ ಅವರ ಅಸಾಧಾರಣ ವಿಕೆಟ್ ಟೇಕಿಂಗ್ ಸಾಮರ್ಥ್ಯವನ್ನು ನಾವು ನೋಡಿದ್ದೇವೆ. ಜಸ್ಪ್ರೀತ್ ಬುಮ್ರಾ ನಿರಂತರವಾಗಿ ತಾನೊಬ್ಬ ಮ್ಯಾಚ್ ವಿನ್ನರ್ ಎಂದು ಸಾಬೀತುಪಡಿಸುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಮೊಹಮ್ಮದ್ ಸಿರಾಜ್ ಅವರ ಪ್ರಭಾವಶಾಲಿ ಪ್ರಗತಿ ಸ್ಪಷ್ಟವಾಗಿದೆ. ಈ ಮೂವರೂ ಜೊತೆಯಾಗಿ ಯಾವುದೇ ತಂಡವನ್ನೂ ಬೇಕಾದರೂ ನಡುಗಿಸಬಲ್ಲರು'' ಎಂದು ಹೇಳಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ