12 ವರ್ಷಗಳಿಂದ ಕಟ್ಟಿಕೊಂಡು ಬಂದಿದ್ದ‌ "ವಿರಾಟ್"‌ ದಾಖಲೆ ನೆಲಸಮ! ಶುಭ್ಮನ್‌ ಗಿಲ್‌ 2023 ರ ಅತ್ಯಧಿಕ ರನ್‌ ಗೆಟ್ಟರ್..

BCCI 2023 ODI Rank :  ಭಾರತದ ಕ್ರಿಕೆಂಟ್‌ ಮಂಡಳಿಯು 2023ರಲ್ಲಿ ಭಾರತದ ಪರ ಅತ್ಯಧಿಕ ರಾಂಕ್‌ಗಳಿಸಿದವರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆ ಸಾಲಿನಲ್ಲಿ  ಶುಭ್ಮನ್‌ ಗಿಲ್‌ ಮತ್ತು ಮೊಹಮ್ಮದ್‌ ಸಿರಾಜ್‌ ಸ್ಥಾನ ಪಡೆದಿದ್ಧಾರೆ.  12 ವರ್ಷಗಳ ಬಳಿಕ ಕೊಹ್ಲಿ ಈ ಪಟ್ಟಿಯಿಂದ ಕಾಣೆಯಾಗಿದ್ದಾರೆ. 

Written by - Zee Kannada News Desk | Last Updated : Jan 5, 2024, 07:55 PM IST
  • ಶುಭ್ಮನ್‌ ಗಿಲ್‌ ಭಾರತದ ಪರ 2023ರ ಅತ್ಯಧಿಕ ರಾಂಕ್‌ ಪಡದ ಆಟಗಾರ
  • ಈ ಮೂಲಕ 12 ವರ್ಷಗಳ ವಿರಾಟ್‌ ದಾಖಲೆಗೆ ಬ್ರೇಕ್‌ ಹಾಕಿದ್ಧಾರೆ
  • ವಿರಾಟ್‌ ಕೊಹ್ಲಿ 2011 ರಿಂದ 2022ರವರೆಗೆ ಭಾರತದ ಅತ್ಯಧಿಕ ರಾಂಕರ್‌ ಆಗಿದ್ಧಾರೆ
12 ವರ್ಷಗಳಿಂದ ಕಟ್ಟಿಕೊಂಡು ಬಂದಿದ್ದ‌ "ವಿರಾಟ್"‌ ದಾಖಲೆ ನೆಲಸಮ! ಶುಭ್ಮನ್‌ ಗಿಲ್‌ 2023 ರ ಅತ್ಯಧಿಕ ರನ್‌ ಗೆಟ್ಟರ್.. title=

Shubman gill  : 2023ನೇ ವರ್ಷವು ಭಾರತದ ಆಟಗಾರ ಶುಭ್ಮನ್‌ಗಿಲ್‌ ಅವರ ವರ್ಷವಾಗಿದೆ. 2023ರ ಆರಂಭದಿಂದಲು ಶುಭ್ಮನ್‌ ಗಿಲ್‌ ಉತ್ತಮ ಫಾರ್ಮ್‌ನ್ಲಿ ಕಂಡರು. ನ್ಯೂಜಿಲೆಂಡ್‌ ವಿರುದ್ದದ ಪಂದ್ಯದಲ್ಲಿ ಅಮೋಘ ದ್ವಿಶತಕವನ್ನು ಸಿಡಿಸಿ ಮಿಂಚಿದರು. ಅಷ್ಟೇ ಅಲ್ಲದೇ ಈ ವರ್ಷ ಅನೇಕ ದಾಖಲೆಗಳನ್ನು ತಮ್ಮ ಮುಡಿಗೇರಿಸಿಕೊಂಡರು. ಈಗ 2023ರ ಅಂತ್ಯದೊಂದಿದೆ ವಿರಾಟ್‌ ಹೆಸರಿನಲ್ಲಿದ್ದ 12 ವರ್ಷಗಳ ನಿರಂತರ ದಾಖಲೆಗೆ ಬ್ರೇಕ್‌ ನೀಡಿದ್ಧಾರೆ.

ಏಕದಿನ ಕ್ರಿಕೆಟ್‌ನಲ್ಲಿ ಅತ್ಯತ್ತಮ ಪ್ರದರ್ಶನ ನೀಡಿದ ಗಿಲ್‌ 29 ಪಂದ್ಯಗಳನ್ನು ಆಡಿದ್ದು,63.36ರ ಸರಾಸರಿಯಲ್ಲಿ 1584 ರನ್‌ ಕಲೆಹಾಕಿದ್ಧಾರೆ. ಅಷ್ಟೇ ಅಲ್ಲದೇ 5 ಶತಕಗಳನ್ನು ಹಾಗೂ 9 ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್‌ ಗಳಿಸದ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಇವರ ನಂತರ ಸ್ಥಾನದಲ್ಲಿ ವಿರಾಟ್‌ ಉಳಿದು ಕೊಂಡಿದ್ದಾರೆ.

ಇದನ್ನು ಓದಿ-2023ಐಸಿಸಿ ಪುರುಷರ ಏಕದಿನ ಕ್ರಿಕೆಟಿಗ ಪ್ರಶಸ್ತಗೆ ಆಯ್ಕೆಯಾದ ಮೂವರು ಭಾರತೀಯರು! "ರೋಹಿತ್ ಶರ್ಮಾ" ಜಸ್ಟ್‌ ಮಿಸ್‌...

2023ರ ವರ್ಷದಲ್ಲಿ ಭಾರತದ ಪರ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್‌ಗಳಿಸದ ಆಟಗಾರನಾಗಿ ಶುಭ್ಮನ್‌ ಗಿಲ್‌ ಹೊರಹೊಮ್ಮಿದ್ಧಾರೆ. ಇದು ವಿರಾಟ್‌ ಕೊಹ್ಲಿ 12 ವರ್ಷಗಳಿಂದ ನಿರಂತರವಾಗಿ ಕಟ್ಟಿಕೊಂಡು ಬಂದಿದ್ದ ದಾಖಲೆಗೆ ಬ್ರೇಕ್‌ ನೀಡಿದೆ.

ವಿರಾಟ್‌ 2011 ರಿಂದ 2022ರ ವರೆಗೆ ನಿರಂತರವಾಗಿ ಭಾರತ ಪರ ಅತ್ಯಧಿಕ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್‌ಗಳಿಸಿದ ಆಟಗಾರನಾಗಿ ಹೊರಹೊಮ್ಮುತ್ತಿದ್ದರು. ಆದರೆ ಈ ವರ್ಷ ಗಿಲ್‌ ವರ್ಷವಾಗಿರುವುದರಿಂದ ಆ ಸ್ಥಾನದಲ್ಲಿ ಗಿಲ್‌ ಕಾಣಿಸಿಕೊಂಡಿದ್ದಾರೆ.

ಇದನ್ನು ಓದಿ-W,0,W,0,W,0... ಈ ಬೌಲರ್ ಬಿರುಗಾಳಿಗೆ ಮಂಕಾದ ಎದುರಾಳಿ ತಂಡ !

ಇನ್ನು ಜಸ್ಪ್ರಿತ್‌ ಬುಮ್ರ ಅವರು ಕೂಡ ವಿರಟ್‌ ಜೊತೆಗೆ 2017 ರಿಂದ ಇಲ್ಲಿಯವರೆಗೆ ಭಾರತ ಪರ ಬೌಲಿಂಗ್‌ ವಿಭಾಗದಲ್ಲಿ ಅತ್ಯಧಿಕ ರಾಂಕ್‌ ಪಡೆದ ಆಟಗಾರನಾಗಿ ಬರುತ್ತಿದ್ದರು. ಆದರೆ ಗಿಲ್‌ ಮತ್ತು ಮೊಹಮ್ಮದ್‌ ಸಿರಾಜ್‌ ಈ ಭಾರಿಯ ಅತ್ಯಧಿಕ ರಾಂಕ್‌ಗಳಿಸಿದ ಆಟಗಾರರಾಗಿ ಹೊರಹೊಮ್ಮಿದ್ಧಾರೆ. 

2023ರ ಐಸಿಸಿ ODI ಬ್ಯಾಟಿಂಗ್‌ ರಾಂಕಿಂಗ್ ಪಟ್ಟಿಯಲ್ಲಿ ಶುಭ್ಮನ್‌ ಗಿಲ್‌ 2ನೇ ಸ್ಥಾನದಲ್ಲಿದ್ದು, ವಿರಾಟ್‌ ಮೂರನೆ ಸ್ಥಾನದಲ್ಲಿದ್ಧಾರೆ. ಐಸಿಸಿ ODI ಬೌಲಿಂಗ್ ರಾಂಕಿಂಗ್‌ನಲ್ಲಿ ಮೊಹ್ಮದ್‌ ಸಿರಾಜ್‌ 3ನೇ ರಾಂಕ್‌ ಮತ್ತು ಜಸ್ಪ್ರಿತ್‌ ಬುಮ್ರಾ 6ನೇ ಸ್ಥಾನದಲ್ಲಿದ್ಧಾರೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News