Game Over: Zee News ರಹಸ್ಯ ಕಾರ್ಯಾಚರಣೆ: ರಹಸ್ಯ ಕ್ಯಾಮರಾದಲ್ಲಿ ಬಯಲಾಯ್ತು BCCI ರಹಸ್ಯ!
Zee News Sting Operation: ಟೀಂ ಇಂಡಿಯಾದಲ್ಲಿ ಯಾವ ರೀತಿ ಫಿಟ್ನೆಸ್ ಗಾಗಿ ನಕಲಿ ಇಂಜೆಕ್ಷನ್ ಗಳನ್ನು ತೆಗೆದುಕೊಳ್ಳುತ್ತಾರೆಂಬ ವಿಚಾರವನ್ನು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಸೌರವ್ ಗಂಗೂಲಿ ಮತ್ತು ವಿರಾಟ್ ಕೊಹ್ಲಿ ನಡುವಿನ ವಿವಾದಕ್ಕೆ ನಿಜವಾದ ಕಾರಣ ಏನು ಎಂಬುದನ್ನು ಸಹ ಇಂದು ಚೇತನ್ ಶರ್ಮಾ ಹೇಳಿದ್ದಾರೆ.
Zee News Sting Operation: ZEE NEWS ಮಹತ್ವದ ಕಾರ್ಯಾಚರಣೆಯನ್ನು ಕೈಗೊಂಡಿದ್ದು, ಇಡೀ ಭಾರತವೇ ಬೆಚ್ಚಿ ಬೀಳುವಂತಹ ರಹಸ್ಯ ಸೀಕ್ರೆಟ್ ಕ್ಯಾಮಾರಾದಲ್ಲಿ ಸೆರೆಯಾಗಿದೆ. ಇಂದಿನ ದಿನಮಾನದಲ್ಲಿ ನೀವು ಇಷ್ಟಪಡುವ ಸ್ಟಾರ್ ಕ್ರಿಕೆಟಿಗರ ವೃತ್ತಿಜೀವನವನ್ನು ಹಾಳುಮಾಡುವಷ್ಟು ಶಕ್ತಿಶಾಲಿಯಾಗಿರುವ ವ್ಯಕ್ತಿಯೇ ಈ ಮಾಹಿತಿಗಳನ್ನು ನೀಡಿದ್ದಾರೆ. ಅವರು ಬೇರೆ ಯಾರೂ ಅಲ್ಲ, ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐನ ಆಯ್ಕೆ ಸಮಿತಿಯ ಅಧ್ಯಕ್ಷ ಚೇತನ್ ಶರ್ಮಾ. ಹೌದು, ಬಿಸಿಸಿಐ ಎಂಬ ನಾಲ್ಕು ಗೋಡೆಯ ಒಳಗೆ ಇದ್ದ ZEE ಮೀಡಿಯಾದ ಹಿಡನ್ ಕ್ಯಾಮೆರಾದಲ್ಲಿ ಚೇತನ್ ಶರ್ಮಾ ರಹಸ್ಯಗಳನ್ನು ಸಾರಾಸಗಟಾಗಿ ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: IND vs AUS: ರಹಸ್ಯವಾಗಿ ವಿವಾಹವಾದ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್? ಜೋಡಿಯ ಖಾಸಗಿ ಫೋಟೋ ವೈರಲ್
ಟೀಂ ಇಂಡಿಯಾದಲ್ಲಿ ಯಾವ ರೀತಿ ಫಿಟ್ನೆಸ್ ಗಾಗಿ ನಕಲಿ ಇಂಜೆಕ್ಷನ್ ಗಳನ್ನು ತೆಗೆದುಕೊಳ್ಳುತ್ತಾರೆಂಬ ವಿಚಾರವನ್ನು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಸೌರವ್ ಗಂಗೂಲಿ ಮತ್ತು ವಿರಾಟ್ ಕೊಹ್ಲಿ ನಡುವಿನ ವಿವಾದಕ್ಕೆ ನಿಜವಾದ ಕಾರಣ ಏನು ಎಂಬುದನ್ನು ಸಹ ಇಂದು ಚೇತನ್ ಶರ್ಮಾ ಹೇಳಿದ್ದಾರೆ. ಟೀಮ್ ಇಂಡಿಯಾದಲ್ಲಿ ನಿಮ್ಮ ನೆಚ್ಚಿನ ಆಟಗಾರರನ್ನು ಹೊರಗಿಡಲು ಯಾರು ಸ್ಕ್ರಿಪ್ಟ್ ಬರೆಯುತ್ತಾರೆ? ಬಿಸಿಸಿಐನಿಂದ ಟೀಮ್ ಇಂಡಿಯಾದವರೆಗೆ ಯಾರನ್ನು ಮುಳುಗಿಸಲು ಪ್ರಯತ್ನ ಪಡುತ್ತಿದ್ದೇನೆ ಎಂಬುದನ್ನು ಸಹ ಚೇತನ್ ಶರ್ಮಾ ಹೇಳಿಕೊಂಡಿದ್ದಾರೆ.
ಭಾರತೀಯ ಕ್ರಿಕೆಟ್‌ನ 21 ನೇ ಶತಮಾನದ ಅತಿದೊಡ್ಡ ಹಗರಣವನ್ನು ZEE NEWS Exclusive ಆಗಿ ಬಯಲಿಗೆಳೆದಿದೆ. ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐನ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ, ಜೀ ಮೀಡಿಯಾದ ರಹಸ್ಯ ಕ್ಯಾಮೆರಾದಲ್ಲಿ ಇಂತಹ ಹಲವು ಸಂಗತಿಗಳನ್ನು ಬಹಿರಂಗಪಡಿಸಿದ್ದು, ಬಿಸಿಸಿಐ ಮಾತ್ರವಲ್ಲದೆ ಕ್ರಿಕೆಟ್, ಐಸಿಸಿನಂತಹ ದೊಡ್ಡ ಸಂಸ್ಥೆಗಳಲ್ಲಿ ಸಂಚಲನ ಮೂಡಿಸುವುದು ಖಚಿತ.
ಈ ವರದಿಗಳನ್ನು ಕಂಡಾಗ, ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಯಾವ ರೀತಿ ಮೋಸ ಹೋಗಿದ್ದಾರೆ ಎಂಬುದು ತಿಳಿಯುತ್ತದೆ. ಕ್ರಿಕೆಟ್...ಟೀಮ್ ಇಂಡಿಯಾ...ನೀವು ತುಂಬಾ ಪ್ರೀತಿಸುವ ಆಟಗಾರರು...ನೀವು ಆರಾಧಿಸುವವರು, ಇವರೆಲ್ಲಾ ತಮ್ಮ ಸ್ವಾರ್ಥಕ್ಕಾಗಿ ನಿಮ್ಮನ್ನು ಹೇಗೆ ಮೋಸ ಮಾಡುತ್ತಿದ್ದಾರೆ ಎಂದು ನಿಮಗೆ ಅನಿಸುತ್ತದೆ.
ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಅವರಂತಹ ನಿಮ್ಮ ನೆಚ್ಚಿನ ಕ್ರಿಕೆಟಿಗರು ಮುಖ್ಯ ಆಯ್ಕೆದಾರರನ್ನು ಹೇಗೆ ಮೆಚ್ಚಿಸುತ್ತಾರೆ?. ಅಷ್ಟೇ ಅಲ್ಲ ದೊಡ್ಡ ಆಟಗಾರರನ್ನು ಹೇಗೆ ವಿರಾಮ ತೆಗೆದುಕೊಳ್ಳಲು ಒತ್ತಾಯಿಸಲಾಗುತ್ತದೆ? ವಿಶ್ರಾಂತಿ ತೆಗೆದುಕೊಳ್ಳಲು ಹೇಳುವುದು ಅವರನ್ನು ತಂಡದಿಂದ ತೆಗೆದುಹಾಕುವ ಯೋಜನೆ ಒಂದು ಮಾರ್ಗವೇ? ಟೀಂ ಇಂಡಿಯಾದಲ್ಲಿ ಚುಚ್ಚುಮದ್ದು ಹಾಕಿಸಿಕೊಂಡು ಆಟಗಾರರು ಹೇಗೆ ನಕಲಿ ಫಿಟ್ನೆಸ್ ಆಟ ಆಡುತ್ತಿದ್ದಾರೆ? ಟೀಂ ಇಂಡಿಯಾದ ಮುಖ್ಯ ಆಯ್ಕೆಗಾರರಿಗೆ ಎಲ್ಲವೂ ಗೊತ್ತಿದ್ದರೂ ಈ ಅಪರಾಧವನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಏಕೆ?
ಇದನ್ನೂ ಓದಿ: IND vs AUS: ದೆಹಲಿಯ ಎರಡನೇ ಟೆಸ್ಟ್ ಗೂ ಮುನ್ನ ಹೊರಬಿತ್ತು ಅಭಿಮಾನಿಗಳ ಮನ ನೋಯಿಸುವ ಸುದ್ದಿ!
ಈ ಎಲ್ಲಾ ವಿಚಾರದ ಬಗ್ಗೆ ಮಾಹಿತಿ ಬಹಿರಂಗವಾಗಿದೆ. ಇದು ವಿಶ್ವದ ಟಿವಿ ಇತಿಹಾಸದಲ್ಲಿ ಅತಿದೊಡ್ಡ ರಹಸ್ಯ ಕಾರ್ಯಾಚರಣೆಯಾಗಿದೆ. ಈ ವಿವಾದದಲ್ಲಿ ಯಾರು ಸರಿ! ಯಾರು ಸುಳ್ಳು ಹೇಳುತ್ತಿದ್ದಾರೆ ಎಂಬುದನ್ನು ಜೀ ಮೀಡಿಯಾದ ಹಿಡನ್ ಕ್ಯಾಮೆರಾದಲ್ಲಿ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷರು ಬಹಿರಂಗಪಡಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.