ನವದೆಹಲಿ : ಈ ಬ್ರಹ್ಮಾಂಡದಲ್ಲಿ (Solar system) ಹಲವು ರಹಸ್ಯಗಳು ಅಡಗಿವೆ. ಸೂರ್ಯನನ್ನು ಸೌರ ಮಂಡಲದ ಸಂಚಾಲಕ  ಎನ್ನಬಹುದು.  ಸೂರ್ಯನ ಪರಿಕ್ರಮದ ಮೇಲೆ ಭೂಮಿಯ ಬದಲಾವಣೆ ಅವಲಂಬಿತವಾಗಿದೆ.  ಈಗ ಬ್ರಹ್ಮಾಂಡದ ರಹಸ್ಯ ಹೊರತೆಗೆಯುವ ಪ್ರಯತ್ನ ಆರಂಭವಾಗಿದೆ.  ಈ ನಿಟ್ಟಿನಲ್ಲಿ ಇನ್ನೊಂದು ಹೆಜ್ಜೆ, ಸೌರಮಂಡಲದ ಗಡಿ ರೇಖೆಯ ಗುರುತಿಸುವಿಕೆ. ಹೌದು, ವಿಜ್ಞಾನಿಗಳು ಕಷ್ಟ ಪಟ್ಟು ಸೌರಮಂಡಲದ ಗಡಿರೇಖೆ ಗುರುತಿಸಿದ್ದಾರೆ. 


COMMERCIAL BREAK
SCROLL TO CONTINUE READING

ಸೌರಮಂಡಲದ ತ್ರಿಡಿ ಮ್ಯಾಪ್ :
ಸೌರ ಮಂಡಲದ (Solar system) ರಹಸ್ಯ ಅರಿಯುವ ಉದ್ದೇಶದಿಂದ ಈಗಲೂ ಕೂಡಾ ಕೆಲವು ದೇಶಗಳು ಸೌರಮಂಡಲಕ್ಕೆ ಸುತ್ತು ಹೊಡೆಯುತ್ತಿವೆ. ಇದೀಗ ಸೌರ ಮಂಡಲದ ಮೊದಲ ತ್ರಿಡಿ ಮ್ಯಾಪ್ (3D map) ಕೂಡಾ ಸಿದ್ದವಾಗಿದೆ.  ಈ ಸೌರ ಮಂಡಲಕ್ಕೊಂದು ಗಡಿರೇಖೆ ಇರಬಹುದು ಎಂಬುದರ ಬಗ್ಗೆ ನೀವು ಯಾವತ್ತಾದರೂ ಯೋಚನೆ ಮಾಡಿದ್ದೀರಾ..? ಸೌರಮಂಡಲದ ಪರಿಮಿತಿ ರೇಖೆಯ ರಹಸ್ಯ ಏನಿದ್ದಿರಬಹುದು. .? ಇವೆಲ್ಲಾ ಮಾಹಿತಿ ಈ ತ್ರಿಡಿ ಮ್ಯಾಪ್ ಮೂಲಕವೇ ತಿಳಿದು ಬಂದಿದೆ. 


ಇದನ್ನೂ ಓದಿ : 20000ಕ್ಕೂ ಕಡಿಮೆ ಬೆಲೆಗೆ ಸಿಗಲಿದೆ 108 MP ಕ್ಯಾಮರಾ ಇರುವ ಸ್ಮಾರ್ಟ್ ಫೋನ್ ಗಳು


ನಮ್ಮ ಸೌರಮಂಡಲದ ಗಡಿರೇಖೆ ಹೇಗಿದೆ..? ಅಲ್ಲಿ ಏನಿದೆ..?
ಬ್ರಹ್ಮಾಂಡೀಯ ಶಕ್ತಿಗಳು ಒಂದಕ್ಕೊಂದು ಟಕ್ಕರ್ ಹೊಡೆಯುವ ಜಾಗವೇ ಸೌರಮಂಡಲದ ತಟ ಅಥವಾ ಗಡಿ ರೇಖೆ (edge of solar system). ಈ ಗಡಿರೇಖೆಯಲ್ಲಿ ಸೌರ ಹವೆ ಇರುತ್ತದೆ.  ಇದರಲ್ಲಿ ಸೂರ್ಯ ಹೊರಸೂಸುವ ಅವಶೇಷಗಳ ಕಣ ಇರುತ್ತದೆ.  ಅದೇ ಇನ್ನೊಂದು ದಿಕ್ಕಿನಲ್ಲಿ ಅಂತರಿಕ್ಷದ ಗಾಳಿ ಇರುತ್ತದೆ.  ಅದು ಸುತ್ತಮುತ್ತಲಿನ  ಶತಕೋಟಿ ನಕ್ಷತ್ರಗಳ ಅವಶೇಷಿತ ವಿಕಿರಣಗಳಿಂದ ಮುಚ್ಚಿಹೋಗಿವೆ.  ಇದೇ ಸೌರ ಗಾಳಿ  ಬ್ರಹ್ಮಾಂಡದ ರೇಡಿಯೇಶನ್ ನಿಂದ ಗ್ರಹಗಳನ್ನು ರಕ್ಷಿಸುವ ಕೆಲಸವನ್ನೂ ಮಾಡುತ್ತದೆ. 


ವಿಜ್ಞಾನಿಗಳ (Scientist) ಪ್ರಕಾರ ಸೌರಗಾಳಿಯು ನಮ್ಮ ಸೌರಮಂಡಲದ ಸುರಕ್ಷೆಯ ಕೆಲಸ ಮಾಡುತ್ತದೆ.  ಸೌರ ಗಾಳಿಯ ಕಾರಣದಿಂದಾಗಿ ಶೇ. 70 ರಷ್ಟು ವಿಕಿರಣ  ಸೌರಮಂಡಲ ಪ್ರವೇಶಮಾಡಲು ಸಾಧ್ಯವಾಗುವುದಿಲ್ಲ.  ಈ ಸುರಕ್ಷಾ ಪರದೆಯನ್ನೇ ಹೇಲಿಯೋಸ್ಪೀಯರ್ ಎಂದು ಕರೆಯಲಾಗುತ್ತದೆ.  ಹಾಗಾಗಿ ಸೌರಮಂಡಲದ ಗಡಿಯನ್ನು ಹೇಲಿಯೋಪಾಸ್ ಎಂದು ಕರೆಯಲಾಗುತ್ತದೆ.  ಇಲ್ಲಿಯ ಒಂದು ಮಿತಿಯಲ್ಲಿ ಸೌರಮಂಡಲದ ಭೌತಿಕ ಗಡಿ ಇದೆ. ಇಲ್ಲಿ ಸೌರಮಂಡಲ ಸಮಾಪ್ತವಾಗುತ್ತದೆ. 


ಇದನ್ನೂ ಓದಿ : ಫೋನಿನಲ್ಲಿ ನಂಬರ್ ಸೇವ್ ಮಾಡದೆ WhatsApp ಮೆಸೇಜ್ ಮಾಡುವ ಸುಲಭ ಉಪಾಯ ಇಲ್ಲಿದೆ


ವಿಜ್ಞಾನಿಗಳು ಸೌರಮಂಡಲದ ತ್ರಿಡಿಮ್ಯಾಪ್ ತಯಾರು ಮಾಡಿದ್ದು. ಅದರ ಮೂಲಕ  ಸೌರಮಂಡಲದ ಗಡಿಯನ್ನು ಗುರುತಿಸಿದ್ದಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.