ನವದೆಹಲಿ: ಚಂಡಮಾರುತಗಳು ಕೇವಲ ಭೂಮಿಗೆ ಮಾತ್ರ ಅಪ್ಪಳಿಸುವುದಿಲ್ಲ, ಸೌರವ್ಯೂಹದ ಇತರ ಅನೇಕ ಗ್ರಹಗಳು ಸಹ ಚಂಡಮಾರುತದಿಂದ ವಂಚಿತವಾಗಿಲ್ಲ. ನಮ್ಮ ಗ್ರಹದಂತೆ, ಇತರ ಗ್ರಹಗಳ ಮೇಲೆ ಮೋಡಗಳು ಸಿಡಿಯುತ್ತವೆ ಮತ್ತು ಸಿಡಿಲು ಬೀಳುತ್ತದೆ. ನಮ್ಮ ಸೌರವ್ಯೂಹದ ಅತಿದೊಡ್ಡ ಗ್ರಹವಾದ ಗುರು ( Jupiter) ಭಯಾನಕ ಚಂಡಮಾರುತವನ್ನು ಹೊಂದಿದೆ ಮತ್ತು ಈ ಸಮಯದಲ್ಲಿ ಅಲ್ಲಿ ಮಿಂಚು ಬೀಳುತ್ತಿದೆ. ಅಲ್ಲಿ ಮೋಡಗಳ ಚಂಡಮಾರುತಗಳು ರೂಪುಗೊಳ್ಳುತ್ತಿವೆ. ಈ ಕುರಿತಾದ ಆಶ್ಚರ್ಯಚಕಿತಗೊಳಿಸುವ ಚಿತ್ರಗಳು ಇದೀಗ ಹೊರಹೊಮ್ಮಿವೆ.
ಇದನ್ನು ಓದಿ- ಹೊಸ ಆಕಾಶಗಂಗೆಯನ್ನು ಪತ್ತೆಹಚ್ಚಿದ ಭಾರತೀಯ ವಿಜ್ಞಾನಿಗಳು, ಭೇಷ್ ಎಂದ NASA
ಗುರುಗ್ರಹದ ಮೇಲೆ ನಿರ್ಮಾಣಗೊಂಡಿದೆ ಭೀತಿ ಹುಟ್ಟಿಸುವ ಚಂಡಮಾರುತ
ಯುಎಸ್ ಬಾಹ್ಯಾಕಾಶ ಸಂಸ್ಥೆ ನಾಸಾದ (NASA) ಜುನೋ ಬಾಹ್ಯಾಕಾಶ ನೌಕೆ ಈ ಬಿರುಗಾಳಿಗಳು, ಗುಡುಗು ಮಿಂಚು ಮತ್ತು ತುಂಬಿ ಹರಿಯುವ ಮೋಡಗಳ ಚಿತ್ರಗಳನ್ನು ತೆಗೆದಿದೆ. ಸಾಮಾನ್ಯ ಕ್ಯಾಮೆರಾದ ಹೊರತಾಗಿ, ಇನ್ಫ್ರಾರೆಡ್ ಮತ್ತು ನೇರಳಾತೀತ ಕ್ಯಾಮೆರಾಗಳೊಂದಿಗೆ ಫೋಟೋಗಳನ್ನು ಸಹ ತೆಗೆದುಕೊಳ್ಳಲಾಗುತ್ತದೆ. ಜುನೊದಿಂದ ಪಡೆದ ಛಾಯಾಚಿತ್ರಗಳನ್ನು ಅಧ್ಯಯನ ಮಾಡಿದ ನಂತರ, ಇವು ಎರಡು ರೀತಿಯ ಮಿಂಚುಗಳಿವೆ ಎಂದು ಪತ್ತೆಹಚ್ಚಲಾಗಿದೆ.
Shallow lightning, clouds of ammonia and water, and a hail of “mushballs” – my instruments are revealing more about Jupiter’s stormy interior: https://t.co/36PAy6a5mJ pic.twitter.com/E52DLT5lBp
— NASA's Juno Mission (@NASAJuno) August 5, 2020
ನಾಸಾ ವಿಜ್ಞಾನಿಗಳು ಒಂದು ರೀತಿಯ ಮಿಂಚನ್ನು ಸ್ಪ್ರೈಟ್ (Sprite) ಮತ್ತು ಇನ್ನೊಂದನ್ನು ಎಲ್ವೆಸ್(Elves) ಎಂದು ಹೆಸರಿಸಿದ್ದಾರೆ. ಆದರೆ ಈ ಮಿಂಚುಗಳು ಗ್ರಹದ ಮೇಲ್ಮೈಗೆ ಅಪ್ಪಳಿಸುತ್ತಿಲ್ಲ. ಇವು ಗ್ರಹದ ವಾತಾವರಣದ ಮೇಲೆ ಅಪ್ಪಳಿಸುತ್ತಿವೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಈ ಕಾರಣದಿಂದಾಗಿ, ಮುಂಚು ಅಪ್ಪಳಿಸಿದ ಜಾಗದಲ್ಲಿ ಬೆಳಕು ಗೋಚರಿಸುತ್ತಿದೆ.
ಇದನ್ನು ಓದಿ- ಎಚ್ಚರ! ಭೂಮಿ ಬಗ್ಗೆ ಹೊಸ ಭವಿಷ್ಯ ನುಡಿದ ನಾಸಾ
ಬೆರಗುಗೊಳಿಸಿವೆ ಭಾವಚಿತ್ರಗಳು
ವಾತಾವರಣದಲ್ಲಿರುವ ಸಾರಜನಕ ಕಣಗಳು ಇತರ ಅನಿಲಗಳೊಂದಿಗೆ ಘರ್ಶನೆಗೊಂದು ಮತ್ತು ಈ ರೀತಿಯ ಕ್ರಿಯೆಯನ್ನು ನಿರ್ವಹಿಸುತ್ತಿವೆ ಎಂದು ನಾಸಾ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. 2016 ಮತ್ತು 2020 ರ ನಡುವೆ, ಜುನೋ ಬಾಹ್ಯಾಕಾಶ ನೌಕೆ ಗುರು ಗ್ರಹದ ಮೇಲೆ 11 ವೇಗವಾಗಿರುವ ಮತ್ತು ಅತಿ ದೊಡ್ಡಸಿಡಿಲುಗಳ ಬೀಳುವಿಕೆಯನ್ನು ದಾಖಲಿಸಿದೆ. ಈ ಸಿಡಿಲುಗಳು ತೀವ್ರತೆ ಮತ್ತು ಕ್ಷೇತ್ರಫಲಕ್ಕೆ ಅನುಗುಣವಾಗಿ ಗಾತ್ರದಲ್ಲಿ ದೊಡ್ಡದಾಗಿವೆ.
ಈ ಬಿರುಗಾಳಿಗಳು, ಮಿಂಚಿನ ಘಟನೆಗಳು ಮತ್ತು ಮೋಡಗಳ ಕುರಿತಾದ ಸಂಶೋಧನೆಗಳು ಜರ್ನಲ್ ಆಫ್ ಜಿಯೋಫಿಸಿಕಲ್ ಪ್ಲಾನೆಟ್ಸ್ ವರದಿಯಲ್ಲಿ ಪ್ರಕಟಿಸಲಾಗಿದೆ. ನಮ್ಮ ಬಳಿ ಈ ಕುರಿದಾದ ವಿದ್ಯುತ್ ದಾಖಲೆಗಳು ಮತ್ತು ಪುರಾವೆಗಳಿವೆ ಎಂದು ವಿಜ್ಞಾನಿ ರೋಹಿಣಿ ಜಿಲ್ಸ್ ಬರೆದಿದ್ದಾರೆ. ಅದ್ಭುತವಾಗಿರುವ ಈ ಬೆಳಕುಗಳು ಗುರು ಗ್ರಹದ ಮೇಲ್ಮೈ ಮತ್ತು ವಾತಾವರಣದಿಂದ ನೂರಾರು ಕಿಲೋಮೀಟರ್ ದೂರದಿಂದ ಗೋಚರಿಸುತ್ತವೆ ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ- ಮಂಗಳನ ಅಂಗಳದಲ್ಲಿ ಮಾನವನ ಅಸ್ತಿತ್ವ ಹುಡುಕಾಟಕ್ಕೆ ಕೌಂಟ್ ಡೌನ್ ಆರಂಭ, NASAದಿಂದ ಸಿದ್ಧತೆ
ಜುನೋ ಬಾಹ್ಯಾಕಾಶ ನೌಕೆ ಈ ಚಿತ್ರಗಳನ್ನು ದೂರದ ಗ್ರಹದಿಂದ ತೆಗೆದುಕೊಂಡಿದೆ. ಅದು ಹತ್ತಿರವಾದಾಗ ನಾವು ಹೆಚ್ಚು ನಿಖರವಾದ ಚಿತ್ರಗಳನ್ನು ಪಡೆಯುತ್ತೇವೆ. ಇದು ನಮಗೆ ಹೆಚ್ಚು ಆಳವಾಗಿ ಅಧ್ಯಯನ ಮಾಡಲು ಅವಕಾಶ ನೀಡಲಿದೆ ಎಂದು ರೋಹಿಣಿ ಜಿಲ್ಸ್ ಹೇಳುತ್ತಾರೆ.