ಬೆಂಗಳೂರು :  Vodafone-Idea ಭರ್ಜರಿ ಆಫರ್ ನೊಂದಿಗೆ ಬಂದಿದೆ.   ಒಂದೆಡೆ, ಭಾರತೀಯರು 5G ಸೇವೆಯತ್ತ ಸಾಗುತ್ತಿರುವ ಮಧ್ಯೆಯೇ 2G ಬಳಸುತ್ತಿರುವ ಕೋಟಿಗಟ್ಟಲೆ ಬಳಕೆದಾರರಿದ್ದಾರೆ. ಹಲವು ಟೆಲಿಕಾಂ ಕಂಪನಿಗಳು ಇಂತಹ ಆಫರ್ ಗಳನ್ನು ತರುತ್ತಿದ್ದು, ಇದರಿಂದ 2ಜಿ ಬಳಕೆದಾರರನ್ನು 4ಜಿಗೆ ವರ್ಗಾಯಿಸಬಹುದಾಗಿದೆ. ವೊಡಾಫೋನ್-ಐಡಿಯಾ ಕೂಡ ಇದೇ ರೀತಿಯ ಯೋಜನೆಯನ್ನು ರೂಪಿಸಿದೆ. ಟೆಲಿಕಾಂಟಾಕ್ ವರದಿಯ ಪ್ರಕಾರ, ಕಂಪನಿಯು ರೀಚಾರ್ಜ್ ಮಾಡುವ ಬಳಕೆದಾರರಿಗೆ ಒಟ್ಟು  2400 ರೂ ಕ್ಯಾಶ್ಬ್ಯಾಕ್ ನೀಡುತ್ತದೆ. 


COMMERCIAL BREAK
SCROLL TO CONTINUE READING

2G ಗ್ರಾಹಕರಿಗೆ  Vodafone-Idea 4G ಸ್ಮಾರ್ಟ್‌ಫೋನ್ ಆಫರ್ : 
ನೆನಪಿರಲಿ ಈ ಆಫರ್ ಜೂನ್ 30ರವರೆಗೆ ಮಾತ್ರ ಇರಲಿದೆ. ಈ ಕೊಡುಗೆಯ ಲಾಭವನ್ನು ಪಡೆಯುವುದು ಹೇಗೆ  ತಿಳಿಯಿರಿ. 
ಹಂತ 1: ನೀವು Viನ 2G ಹ್ಯಾಂಡ್‌ಸೆಟ್ ಬಳಕೆದಾರರಾಗಿದ್ದರೆ, 4G ಫೋನ್‌ಗೆ ಅಪ್‌ಗ್ರೇಡ್ ಮಾಡಬೇಕಾಗುತ್ತದೆ.
ಹಂತ 2: ನೀವು ಅರ್ಹ ಗ್ರಾಹಕರಾಗಿದ್ದರೆ, Vi ನಿಂದ ಸಂದೇಶವನ್ನು ಸ್ವೀಕರಿಸುತ್ತೀರಿ.
ಹಂತ 3: ಸತತ 24 ತಿಂಗಳುಗಳವರೆಗೆ ಪ್ರತಿ ತಿಂಗಳು 100 ರೂ.  ಕ್ಯಾಶ್‌ಬ್ಯಾಕ್ ಪಡೆಯಲು  299 ರೂ. ಪ್ಲಾನ್ ಅಥವಾ ಅದಕ್ಕಿಂತ ಹೆಚ್ಚಿನ ಅನಿಯಮಿತ ಪ್ಯಾಕ್‌ನೊಂದಿಗೆ ರೀಚಾರ್ಜ್ ಮಾಡಬೇಕಾಗುತ್ತದೆ. 
ಹಂತ 4: My Coupons  ವಿಭಾಗದಲ್ಲಿ 100 x 24 ಮಾಸಿಕ ಕ್ಯಾಶ್‌ಬ್ಯಾಕ್ ಕೂಪನ್‌ಗಳನ್ನು ನೋಡಲು Vi ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ.
ಹಂತ 5: 299 ರೂ. ಮತ್ತು ಅದಕ್ಕಿಂತ ಹೆಚ್ಚಿನ ಅನಿಯಮಿತ ಯೋಜನೆಗಳ ಮುಂದಿನ 24 ರೀಚಾರ್ಜ್‌ಗಳಿಗಾಗಿ 100 ರೂ. ಮಾಸಿಕ ಕ್ಯಾಶ್‌ಬ್ಯಾಕ್ ಕೂಪನ್ ಅನ್ನು ಪಡೆದುಕೊಳ್ಳಿ.


ಇದನ್ನೂ ಓದಿ : ಹುಡುಗಿಯರು ಒಬ್ಬರೇ ಇರುವಾಗ Googleನಲ್ಲಿ ಅತಿ ಹೆಚ್ಚು ಸರ್ಚ್ ಮಾಡುವ ವಿಷಯಗಳಿವು ..!


ಪ್ರಿಪೇಯ್ಡ್ ಬಳಕೆದಾರರಿಗೆ ಮಾತ್ರ ಈ ಆಫರ್ : 
ಮೊದಲನೆಯದಾಗಿ, ಈ ಕೊಡುಗೆಯು ಪ್ರಿಪೇಯ್ಡ್ ಬಳಕೆದಾರರಿಗೆ ಮಾತ್ರ ಅನ್ವಯಿಸುತ್ತದೆ. ಮುಂದಿನ 24 ತಿಂಗಳವರೆಗೆ 299 ರೂ. ಮತ್ತು ಅದಕ್ಕಿಂತ ಹೆಚ್ಚಿನ ಪ್ರಿಪೇಯ್ಡ್ ಪ್ಲಾನ್‌ನೊಂದಿಗೆ ರೀಚಾರ್ಜ್ ಮಾಡುಬೇಕಾಗುತ್ತದೆ. ಇಲ್ಲದಿದ್ದರೆ ಆಫರ್ ಅನ್ನು ಹಿಂಪಡೆಯಲಾಗುತ್ತದೆ.


ಕ್ಯಾಶ್‌ಬ್ಯಾಕ್ ಕೂಪನ್ 30 ದಿನಗಳವರೆಗೆ ಮಾತ್ರ ಮಾನ್ಯವಾಗಿರುತ್ತದೆ :
ಈ ಕೊಡುಗೆಯು 2G ಯಿಂದ 4G ಸಾಧನಗಳಿಗೆ ಬದಲಾಯಿಸುವ ಮತ್ತು ಈಗಾಗಲೇ Vi ಬಳಕೆದಾರರಾಗಿರುವ ಬಳಕೆದಾರರಿಗೆ ಮಾತ್ರ ಅನ್ವಯಿಸುತ್ತದೆ. Vi ಅಪ್ಲಿಕೇಶನ್‌ನಲ್ಲಿ ನೀವು ಪಡೆಯುವ 100 ರೂ. ಕ್ಯಾಶ್‌ಬ್ಯಾಕ್ ಕೂಪನ್ 30 ದಿನಗಳವರೆಗೆ ಮಾತ್ರ ಮಾನ್ಯವಾಗಿರುತ್ತದೆ. ಆದ್ದರಿಂದ, ಪ್ರತಿ 30 ದಿನಗಳಿಗೊಮ್ಮೆ ಕೆಲವು ರೀತಿಯ ರೀಚಾರ್ಜ್‌ಗಾಗಿ ಈ ವೋಚರ್‌ಗಳನ್ನು ಬಳಸುತ್ತಿರಬೇಕು ಇಲ್ಲದಿದ್ದರೆ  ಆಫರ್ ನ ಲಾಭವನ್ನು ಪಡೆಯುವುದು ಸಾಧ್ಯ ವಾಗುವುದಿಲ್ಲ . 


ಇದನ್ನೂ ಓದಿ : OMG! ಇಷ್ಟು ಕಡಿಮೆ ಬೆಲೆಗೆ Realme ಬಿಡುಗಡೆ ಮಾಡುತ್ತಿದೆ 5G Smartphone..!


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.