ಬೆಂಗಳೂರು : Realme ಸ್ಮಾರ್ಟ್‌ಫೋನ್ ಅನ್ನು ಚೀನಾದ TENAA ಸರ್ಟಿಫಿಕೇಶನ್ ಸೈಟ್‌ನಲ್ಲಿ ಮಾಡೆಲ್ ಸಂಖ್ಯೆ RMX3613 ನೊಂದಿಗೆ ಗುರುತಿಸಲಾಗಿದೆ. ಇಲ್ಲಿ ಈ ಫೋನ್‌ನ ಸಂಪೂರ್ಣ ವೈಶಿಷ್ಟ್ಯ ಮತ್ತು ಅದರ ವಿನ್ಯಾಸದ ಬಗ್ಗೆ ಬಹಿರಂಗಪಡಿಸಲಾಗಿದೆ. Realme RMX3613 5G ಹ್ಯಾಂಡ್‌ಸೆಟ್ ಆಗಿರಲಿದ್ದು, ಆಕ್ಟಾ-ಕೋರ್ ಪ್ರೊಸೆಸರ್, 6.58-ಇಂಚಿನ HD+ ಡಿಸ್ಪ್ಲೇ ಮತ್ತು LED ಫ್ಲ್ಯಾಷ್‌ನೊಂದಿಗೆ 50-ಮೆಗಾಪಿಕ್ಸೆಲ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುತ್ತದೆ.
Realme RMX3613 ವಿಶೇಷಣಗಳು :
TENAA ಲಿಸ್ಟಿಂಗ್ ಪ್ರಕಾರ, Realme RMX3613 1080×2408 ಪಿಕ್ಸೆಲ್‌ಗಳ HD+ ರೆಸಲ್ಯೂಶನ್‌ನೊಂದಿಗೆ 6.58-ಇಂಚಿನ LCD ಡಿಸ್ಪ್ಲೇಯನ್ನು ಹೊಂದಿದೆ. ಇದು 5G-ರೆಡಿ 2.2GHz ಆಕ್ಟಾ-ಕೋರ್ ಚಿಪ್‌ಸೆಟ್‌ನಿಂದ ಚಾಲಿತವಾಗುತ್ತದೆ. ಈ ಸ್ಮಾರ್ಟ್ಫೋನ್ 4GB, 6GB ಮತ್ತು 8GB RAM ಜೊತೆಗೆ 64GB, 128GB ಮತ್ತು 256GB ಸ್ಟೋರೇಜ್ ಅನ್ನು ನೀಡುತ್ತದೆ. Realme ಸ್ಮಾರ್ಟ್‌ಫೋನ್ ಮೈಕ್ರೊ SD ಕಾರ್ಡ್ ಸ್ಲಾಟ್ ಅನ್ನು ಹೊಂದಿದ್ದು1TB ವರೆಗೆ ಹೆಚ್ಚುವರಿ ಸ್ಟೋರೇಜ್ ಅನ್ನು ಸಪೋರ್ಟ್ ಮಾಡುತ್ತದೆ.
ಇದನ್ನೂ ಓದಿ : Electricity Bill: ಮನೆಯಲ್ಲಿ ಈ ಪ್ಲಗ್ ಅಳವಡಿಸಿದರೆ ಅರ್ಧಕ್ಕಿಂತ ಕಡಿಮೆ ಆಗುತ್ತೆ ವಿದ್ಯುತ್ ಬಿಲ್
Realme RMX3613 ಕ್ಯಾಮೆರಾ :
Realme ಹ್ಯಾಂಡ್‌ಸೆಟ್ 50MP ಪ್ರೈಮರಿ ಸೆನ್ಸಾರ್ ನೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು LED ಫ್ಲ್ಯಾಷ್‌ನೊಂದಿಗೆ 2MP ಲೆನ್ಸ್ ಅನ್ನು ಹೊಂದಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 8MP ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. ಸಾಧನವು ಪೂರ್ಣ-HD ವೀಡಿಯೊಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗಿದೆ.
Realme RMX3613 ಬ್ಯಾಟರಿ :
RMX313 4,890mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ( ಹ್ಯಾಂಡ್ಸೆಟ್ ಕಪ್ಪು ಮತ್ತು ಗೋಲ್ಡ್ ಬಣ್ಣದ ರೂಪಾಂತರಗಳಲ್ಲಿ ಬರಲಿದೆ.
Realme RMX3613 ಬೆಲೆ :
ವೈಶಿಷ್ಟ್ಯಗಳನ್ನು ನೋಡುವಾಗ, ಇದು ಬಜೆಟ್ ಫೋನ್ ಎನ್ನುವುದು ಸ್ಪಷ್ಟವಾಗುತ್ತದೆ. ಇದರ ಬೆಲೆ 20 ಸಾವಿರಕ್ಕಿಂತಲೂ ಕಡಿಮೆ ವಇರಲಿದೆ ಎನ್ನಲಾಗಿದೆ.
ಇದನ್ನೂ ಓದಿ : WhatsAppನಲ್ಲಿ ಡಿಲೀಟ್ ಮಾಡಿರುವ ಮೆಸೇಜ್ ಅನ್ನು ಕೂಡಾ ಸುಲಭವಾಗಿ ಓದಲು ಈ ಟ್ರಿಕ್ ಬಳಸಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.