5G Service Launch Date : ಭಾರತದಲ್ಲಿ ಶೀಘ್ರದಲ್ಲಿಯೇ  5ಜಿ  ಸೇವೆ ಆರಂಭವಾಗಲಿದೆ.  ರಾಷ್ಟ್ರ ರಾಜಧಾನಿಯಲ್ಲಿ ಮೊದಲು ಈ ಸೇವೆ ಲಭ್ಯವಾಗಲಿದೆ. ಅಕ್ಟೋಬರ್ 1 ರಂದು ಪ್ರಗತಿ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ,  ಇಂಡಿಯಾ ಮೊಬೈಲ್ ಕಾಂಗ್ರೆಸ್ ಅನ್ನು ಉದ್ಘಾಟಿಸಲಿದ್ದಾರೆ. ಭಾರತದಲ್ಲಿ 5G ಸೇವೆ ಆರಂಭವಾಗುವ ವಿಶೇಷ ಉದ್ದೇಶದ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ. ಅಕ್ಟೋಬರ್ ಒಂದರಿಂದಲೇ  ಭಾರತದಲ್ಲಿ 5G ಸೇವೆ ಆರಂಭವಾಗಲಿದೆ ಎಂದು ಕೂಡಾ ಹೇಳಲಾಗುತ್ತಿದೆ. ಕಾರ್ಯಕ್ರಮ ದೆಹಲಿಯಲ್ಲಿಯೇ ನಡೆಯುತ್ತಿರುವ ಕಾರಣ, 5G ನೆಟ್‌ವರ್ಕ್ ಲಾಂಚ್ ಕೂಡಾ ಅದೇ ಕಾರ್ಯಕ್ರಮದಲ್ಲಿ ನೆರವೇರಲಿದೆ ಎಂದು ಹೇಳಲಾಗುತ್ತಿದೆ. 


COMMERCIAL BREAK
SCROLL TO CONTINUE READING

5G ಬಿಡುಗಡೆಯ ನಂತರದ ನಿರೀಕ್ಷೆ ಏನು ?
5G ಸೇವೆ ಆರಂಭಕ್ಕೂ ಮುನ್ನವೇ ಈ ಬಗ್ಗೆ ಏನನ್ನು ಕೂಡಾ ಹೇಳುವುದು ಕಷ್ಟ. ಆದರೆ, 4G ಯೋಜನೆಗಳಿಗಿಂತ 5G ಯೋಜನೆಗಳು ದುಬಾರಿಯಾಗಿರಬಹುದು ಎಂದು  ಹೇಳಲಾಗುತ್ತಿದೆ. ಇನ್ನು ಟೆಲಿಕಾಂ ಕಂಪನಿಗಳು ಗ್ರಾಹಕರನ್ನು ತನ್ನತ್ತ ಸೆಳೆಯಲು ವಿಶೇಷ ಯೋಜನೆಗಳನ್ನು ಪ್ರಕಟಿಸಲೂಬಹುದು. 5G ನೆಟ್‌ವರ್ಕ್ ಲಾಂಚ್ ಬಳಿಕ ಆಪರೇಟರ್‌ಗಳ ಪ್ರತಿ ಯೂನಿಟ್‌ನ ಸರಾಸರಿ ಆದಾಯದ ಅಂಕಿಅಂಶದಲ್ಲಿ ವ್ಯತ್ಯಾಸವಾಗಬಹುದು ಎನ್ನುವುದು ವಿಶ್ಲೇಷಕರ ಅನಿಸಿಕೆ. 


ಇದನ್ನೂ ಓದಿ : Apple iPhone 13: ಅತ್ಯಂತ ಕಡಿಮೆ ಬೆಲೆಗೆ ಆ್ಯಪಲ್ ಐಫೋನ್ 13 ಖರೀದಿಸಿ!


ವೇಗವಾಗಿ ಮಾರಾಟವಾಗುತ್ತಿವೆ 5G ಸ್ಮಾರ್ಟ್‌ಫೋನ್‌ಗಳು  :
5Gಯನ್ನು ಸಪೋರ್ಟ್ ಮಾಡುವ ಸಾಧನಗಳನ್ನು ಹೊಂದಿರುವ ಗ್ರಾಹಕರು 5G ನೆಟ್‌ವರ್ಕ್ ಸೇವೆಗಳನ್ನು ಆನಂದಿಸಲು ಸಾಧ್ಯವಾಗುತ್ತದೆ.  ಇದೀಗ ಹಬ್ಬದ ಸೀಸನ್ ನಡೆಯುತ್ತಿದ್ದು ಎಲ್ಲೆಡೆ ಸೇಲ್ ಆರಂಭವಾಗಿದೆ. ಸೇಲ್ ನಲ್ಲಿ 5G ಸ್ಮಾರ್ಟ್‌ಫೋನ್‌ಗಳ ಮಾರಾಟ ಕೂಡಾ ಹೆಚ್ಚಾಗಿದೆ. 5G ಸ್ಮಾರ್ಟ್‌ಫೋನ್‌ಗಳ ಮಾರಾಟ ಹೆಚ್ಚುತ್ತಿರುವ ಕಾರಣ, ಟೆಲಿಕಾಂ ಕಂಪನಿಗಳಿಗೆ ಹೆಚ್ಚಿನ ಸಂಖ್ಯೆಯ ಗ್ರಾಹಕರು ಕೂಡಾ ಲಭ್ಯವಾಗುತ್ತಾರೆ. 


ಜಿಯೋ ಮತ್ತು ಏರ್‌ಟೆಲ್‌ನ 5G ಸೇವೆಯನ್ನು ಮೊದಲು ಆರಂಭಿಸಬಹುದು :
5G ಯೊಂದಿಗೆ ಅತಿ ಕಡಿಮೆ ಲೇಟೆನ್ಸಿಯೊಂದಿಗೆ ಹೆಚ್ಚಿನ ವೇಗದ ನೆಟ್‌ವರ್ಕ್ ಅನ್ನು ಬಳಕೆದಾರರು ಪಡೆಯಲು ಸಾಧ್ಯವಾಗುತ್ತದೆ. 5ಜಿ ಆರಂಭದ ನಂತರ ಗ್ರಾಹಕರಿಗೆ ಮಾತ್ರವಲ್ಲದೆ ಉದ್ಯಮಗಳಿಗೂ ಹೆಚ್ಚಿನ ಪ್ರಯೋಜನವಾಗಲಿದೆ. ಭಾರತದಲ್ಲಿ, Jio ಮತ್ತು Airtel ಮೊದಲು 5G ಅನ್ನು ಪ್ರಾರಂಭಿಸುವ ನಿರೀಕ್ಷೆಯಿದೆ.  ಇದಾದ ನಂತರ Vodafone Idea 5G ಸೇವೆಯನ್ನು ಪರಿಚಯಿಸಬಹುದು.


ಇದನ್ನೂ ಓದಿ : Fake Smartphone ಹಾವಳಿಗೆ ಬ್ರೇಕ್ ಹಾಕಲು ಸರ್ಕಾರದಿಂದ ಬಂತು ಖಡಕ್ ರೂಲ್ಸ್!


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.