Best Mileage Desi SUV : ಮಾರುತಿ ಸುಜುಕಿ 2022ರಲ್ಲಿ ಮಾರುತಿ ಸುಜುಕಿ ಗ್ರಾಂಡ್ ವಿಟಾರಾವನ್ನು ಬಿಡುಗಡೆ ಮಾಡಿತ್ತು.ಇದು ಹೈಬ್ರಿಡ್ ಎಸ್ ಯುವಿ.ಆದರೆ ಈ ಹೈಬ್ರಿಡ್ ಕಾರು ಅನೇಕ ಹ್ಯಾಚ್‌ಬ್ಯಾಕ್ ಮತ್ತು ಸೆಡಾನ್ ಕಾರುಗಳಿಗಿಂತ ಹೆಚ್ಚು ಮೈಲೇಜ್ ನೀಡುತ್ತದೆ.ಗ್ರಾಂಡ್ ವಿಟಾರಾದಲ್ಲಿ,ಗ್ರಾಹಕರು 1.5L 4-ಸಿಲಿಂಡರ್ ಮೈಲ್ಡ್ -ಹೈಬ್ರಿಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.ಇದು ಪೆಟ್ರೋಲ್ ಎಂಜಿನ್ ಜೊತೆಗೆ  ಶಕ್ತಿಯುತವಾದ ಎಲೆಕ್ಟ್ರಿಕ್ ಮೋಟರ್ ಅನ್ನು ಸಹ ಹೊಂದಿದೆ.


COMMERCIAL BREAK
SCROLL TO CONTINUE READING

ಮಾರುತಿ ಗ್ರಾಂಡ್ ವಿಟಾರಾ: ಬೆಲೆ ಮತ್ತು ರೂಪಾಂತರಗಳು:
ಮಾರುತಿಯ ಕಾಂಪ್ಯಾಕ್ಟ್ ಎಸ್‌ಯುವಿ ಬೆಲೆ 10,99,000 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗುತ್ತದೆ.ಸಿಗ್ಮಾ,ಡೆಲ್ಟಾ,ಝೀಟಾ,ಝೀಟಾ+,ಆಲ್ಫಾ ಮತ್ತು ಆಲ್ಫಾ+ ಎನ್ನುವ ಒಟ್ಟು ಆರು ಟ್ರಿಮ್‌ಗಳಲ್ಲಿ ಲಭ್ಯವಿದೆ.ಇದರ ಪ್ಲಸ್ ಟ್ರಿಮ್‌ಗಳು ಸಸ್ಟ್ರಾಂಗ್ -ಹೈಬ್ರಿಡ್ ಪವರ್‌ಟ್ರೇನ್ ಆಯ್ಕೆಯೊಂದಿಗೆ ಲಭ್ಯವಿದೆ.ಡೆಲ್ಟಾ ಮತ್ತು ಝೀಟಾ ಟ್ರಿಮ್‌ಗಳ ಮಾನ್ಯುಯಲ್ ವೆರಿಯೆಂಟ್ ಈಗ ಕಾರ್ಖಾನೆಯಲ್ಲಿ ಅಳವಡಿಸಲಾದ CNG ಆಯ್ಕೆಯೊಂದಿಗೆ ಲಭ್ಯವಿದೆ.


ಇದನ್ನೂ ಓದಿ : ಜಿಯೋದಿಂದ ಅತಿ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಬಿಡುಗಡೆ, 84 ದಿನಗಳವರೆಗೆ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ


ಮಾರುತಿ ಗ್ರ್ಯಾಂಡ್ ವಿಟಾರಾ: ವೈಶಿಷ್ಟ್ಯಗಳು :
ಕಾರು 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಪನೋರಮಿಕ್ ಸನ್‌ರೂಫ್,ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಫೋನ್ ಚಾರ್ಜರ್,ವೆಂಟಿಲೇಟೆಡ್ ಫ್ರಂಟ್ ಸೀಟ್ ಮತ್ತು ಹೆಡ್-ಅಪ್ ಡಿಸ್ಪ್ಲೇಯೊಂದಿಗೆ ಬರುತ್ತದೆ.ಇದು 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), EBD ಜೊತೆಗೆ ABS ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಪಡೆಯುತ್ತದೆ.ಇದಲ್ಲದೆ,ಇದು 360-ಡಿಗ್ರಿ ಕ್ಯಾಮೆರಾ, ಹಿಲ್-ಡಿಸೆಂಟ್ ಕಂಟ್ರೋಲ್ ಮತ್ತು ISOFIX ಚೈಲ್ಡ್-ಸೀಟ್ ಆಂಕರ್‌ಗಳನ್ನು ಹೊಂದಿದೆ.


ಹೆಚ್ಚು ಮೈಲೇಜ್ :
ಹೈಬ್ರಿಡ್ ಕಾರುಗಳು ಒಂದಕ್ಕಿಂತ ಹೆಚ್ಚು  ಎನರ್ಜಿ  ಮೂಲಗಳಲ್ಲಿ ಕಾರ್ಯನಿರ್ವಹಿಸುತ್ತವೆ.ಇದು ಪೆಟ್ರೋಲ್ ಅಥವಾ ಡೀಸೆಲ್ ಎಂಜಿನ್ ಮತ್ತು ಎಲೆಕ್ಟ್ರಿಕ್ ಮೋಟರ್‌ನ ಸಂಯೋಜನೆಯಾಗಿದೆ. ಈ ಎರಡೂ ವ್ಯವಸ್ಥೆಗಳು ಒಟ್ಟಿಗೆ ಕೆಲಸ ಮಾಡುತ್ತವೆ. ಕೆಲವೊಮ್ಮೆ ಕಾರುಗಳು ಎಲೆಕ್ಟ್ರಿಕ್ ಮೋಟರ್‌ನಲ್ಲಿ ಮಾತ್ರ ಚಲಿಸಬಹುದು.ಇದು ಕಡಿಮೆ ಇಂಧನ ಬಳಕೆಯಾಗುತ್ತದೆ. ಹಾಗಾಗಿ ಇಂಧನ ದಕ್ಷತೆಯನ್ನು ಸುಧಾರಿಸುತ್ತದೆ.ಹೈಬ್ರಿಡ್ ತಂತ್ರಜ್ಞಾನದ ಬಗ್ಗೆ ಮಾತನಾಡುವುದಾದರೆ ಈ ತಂತ್ರಜ್ಞಾನದಲ್ಲಿ ಬ್ಯಾಟರಿಯನ್ನು ಇಂಟರ್ನಲ್ ಸಿಸ್ಟಮ್ ನಿಂದ ಚಾರ್ಜ್ ಮಾಡಲಾಗುತ್ತದೆ.ಆದ್ದರಿಂದ,ಬ್ಯಾಟರಿಗೆ ಪ್ರತ್ಯೇಕ ಚಾರ್ಜಿಂಗ್ ಅಗತ್ಯವಿಲ್ಲ.ಹಲವು ವಿಧದ ಹೈಬ್ರಿಡ್ ತಂತ್ರಜ್ಞಾನಗಳು ಲಭ್ಯವಿದ್ದರೂ, ಪ್ರಸ್ತುತ  ಮೈಲ್ಡ್  ಹೈಬ್ರಿಡ್ ಮತ್ತು ಸ್ಟ್ರಾಂಗ್ ಹೈಬ್ರಿಡ್ ತಂತ್ರಜ್ಞಾನಗಳು ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿವೆ.


ಇದನ್ನೂ ಓದಿ: Vi ಅಗ್ಗದ ರಿಚಾರ್ಜ್‌ಗೆ ಅಂಬಾನಿ ಶಾಕ್! 175 ರೂ.ಗೆ ಸಿಗುತ್ತೆ ಭರ್ಜರಿ ಡೇಟಾ, 15 ಒಟಿಟಿ ಪ್ಲಾಟ್‌ಫಾರ್ಮ್ ಉಚಿತ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.