)
Vi Cheapest Recharge Plan: ಭಾರತೀಯ ಟೆಲಿಕಾಂ ಜಗತ್ತಿನಲ್ಲಿ ಬಿಎಸ್‌ಎನ್‌ಎಲ್ 4ಜಿ ಆರಂಭದ ಬಳಿಕ ಹೆಚ್ಚಿನ ಗ್ರಾಹಕರು ಬಿಎಸ್‌ಎನ್‌ಎಲ್ ನತ್ತ ಮುಖ ಮಾಡುತ್ತಿದ್ದಾರೆ. ಗ್ರಾಹಕರು ಪೋರ್ಟ್ ಆಗುವುದನ್ನು ತಪ್ಪಿಸಲು ರಿಲಯನ್ಸ್ ಜಿಯೋ ಈಗಾಗಲೇ ಕೆಲವು ಕೈಗೆಟುಕುವ ರಿಚಾರ್ಜ್ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಈ ಮಧ್ಯೆ, ಅಂಬಾನಿಗೆ ಶಾಕ್ ನೀಡಿರುವ ವೋಡಾಫೋನ್ ಐಡಿಯಾ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಯೋಜನೆಯಲ್ಲಿ ಭರ್ಜರಿ ಕೊಡುಗೆಗಳನ್ನು ಘೋಷಿಸಿದೆ.
ವೋಡಾಫೋನ್ ಐಡಿಯಾದ ಅಗ್ಗದ ರಿಚಾರ್ಜ್ ಯೋಜನೆ:
ವೋಡಾಫೋನ್ ಐಡಿಯಾ ಬಿಡುಗಡೆ ಮಾಡಿರುವ ಈ ರಿಚಾರ್ಜ್ ಯೋಜನೆಯ ಬೆಲೆ ಕೇವಲ 175 ರೂಪಾಯಿ. ಆದರೆ, ಈ ಯೋಜನೆಯಲ್ಲಿ ಗ್ರ್ಹಾಕರಿಗೆ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದ್ದು ಬೇರೆ ಯಾವುದೇ ಟೆಲಿಕಾಂ ಕಂಪನಿಗಳು ಇಷ್ಟು ಪ್ರಯೋಜನಗಳನ್ನು ನೀಡುತ್ತಿಲ್ಲ. ಇದರಲ್ಲಿರುವ ಪ್ರಯೋಜನಗಳೆಂದರೆ...
ವೋಡಾಫೋನ್ ಐಡಿಯಾ 175 ರೂಪಾಯಿ ರೀಚಾರ್ಜ್ ಪ್ಲಾನ್ ಪ್ರಯೋಜನಗಳು:
ವೋಡಾಫೋನ್ ಐಡಿಯಾ ಈ ಅಗ್ಗದ ಬೆಲೆಯ ರಿಚಾರ್ಜ್ ಪ್ಲಾನ್‌ನಲ್ಲಿ ಗ್ರಾಹಕರಿಗೆ 10 ಜಿಬಿ ಉಚಿತ ಡೇಟಾ ಜೊತೆಗೆ 15 ಓಟಿಟಿ ಪ್ಲಾಟ್‌ಫಾರ್ಮ್ ಗಳಿಗೂ ಉಚಿತ ಪ್ರವೇಶವನ್ನು ನೀಡುತ್ತಿದೆ.
ವಿಐ ಪರಿಚಯಿಸಿರುವ ಈ ರಿಚಾರ್ಜ್ ಪ್ಲಾನ್ ಒಟಿಟಿ ಮೂಲಕ ವೆಬ್ ಸೀರೀಸ್, ಮೂವಿ ವೀಕ್ಷಿಸುವ ಗ್ರಾಹಕರಿಗೆ ಹೆಚ್ಚು ಲಾಭದಾಯಕ ಎಂದು ಸಾಬೀತುಪಡಿಸಲಿದೆ. ಕಳೆದ ವರ್ಷ ವೋಡಾಫೋನ್-ಐಡಿಯಾ ಮೂವೀಸ್ ಹಾಗೂ ಟಿವಿ ಆ್ಯಪ್ ಲಾಂಚ್ ಮಾಡಿದ್ದು, ಇದರಲ್ಲಿ ಒಟ್ಟು 17 ಒಟಿಟಿ ಆ್ಯಪ್, 350 ಲೈವ್ ಟಿವಿ ಚಾನೆಲ್ ಒಳಗೊಂಡಂತೆ ಹಲವು ಪ್ರಯೋಜನಗಳನ್ನು ನೀಡುತ್ತಿದೆ. ಗ್ರಾಹಕರ ಪ್ರಕಾರ, ಜಿಯೋ ಪ್ಲಾನ್‌ಗೆ ಹೊಲಿಸಿದರೆ ವಿಐ ನ ಈ ಪ್ಲಾನ್ ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ರಿಚಾರ್ಜ್ ಯೋಜನೆಯಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.