ಕೇವಲ 1 ಗಂಟೆಯಲ್ಲಿ ಫುಲ್ ಚಾರ್ಜ್ ಆಗಬಲ್ಲ, 450kg ತೂಕದ ಮಿನಿ ಎಲೆಕ್ಟ್ರಿಕ್ ಕಾರ್, ಮೈಲೇಜ್ ಕೇಳಿದ್ರೆ ಶಾಕ್ ಆಗ್ತೀರಾ!
Mini Electric Car: ಪ್ರಸ್ತುತ ಆಗಸದತ್ತ ಮುಖ ಮಾಡಿರುವ ಪೆಟ್ರೋಲ್-ಡೀಸೆಲ್ ದರದಿಂದಾಗಿ ಬೇಸತ್ತಿರುವ ಜನರು ಎಲೆಕ್ಟ್ರಿಕ್ ವಾಹನಗಳತ್ತ ಒಲವು ತೋರುತ್ತಿದ್ದಾರೆ. ಆದರೆ, ಚಾರ್ಜಿಂಗ್ ಸಮಯ, ಮೈಲೇಜ್ ದೃಷ್ಟಿಯಿಂದಾಗಿ ಇನ್ನೂ ಕೆಲವರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವುದು ಎಷ್ಟು ಸರಿ ಎಂಬ ಬಗ್ಗೆ ಚಿಂತಿಸುತ್ತಿದ್ದಾರೆ. ಆದರೆ, ನಿಮ್ಮೆಲ್ಲಾ ಸಮಸ್ಯೆಗಳಿಗೆ ಸುಲಭ ಪರಿಹಾರ ನೀಡಬಲ್ಲದು ಈ ಮಿನಿ ಎಲೆಕ್ಟ್ರಿಕ್ ಕಾರ್.
Mini Electric Car: ಒಂದೆಡೆ ಪೆಟ್ರೋಲ್-ಡೀಸೆಲ್ ದರ ಹೆಚ್ಚಳ, ಇನ್ನೊಂದೆಡೆ ಸ್ಥಳಾವಕಾಶದ ಕೊರತೆಯಿಂದಾಗಿ ಜನರು ಕಾರ್ ಖರೀದಿಸುವ ಬಗ್ಗೆ ಚಿಂತಿಸುತ್ತಾರೆ. ಕಾರ್ ಪಾರ್ಕಿಂಗ್ ಮಾತ್ರವಲ್ಲ ಟ್ರಾಫಿಕ್ ಜಾಮ್‌ನಲ್ಲಿ ನಾಲ್ಕು ಚಕ್ರ ವಾಹನಗಳಿಗಿಂತ ದ್ವಿಚಕ್ರ ವಾಹನಗಳು ಫಾಸ್ಟ್ ಆಗಿ ಮೂವ್ ಆಗಬಹುದು ಎಂದು ಕೆಲವರು ಕಾರ್ ಬಳಸುವುದನ್ನು ತಪ್ಪಿಸುತ್ತಾರೆ. ಆದರೆ, ನಿಮ್ಮ ಈ ಎಲ್ಲಾ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ನೀಡಲು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಮಿನಿ ಎಲೆಕ್ಟ್ರಿಕ್ ಕಾರ್.
ಇಸ್ರೇಲ್‌ನ ಸಿಟಿ ಟ್ರಾನ್ಸ್‌ಫಾರ್ಮರ್ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಸ್ಟಾರ್ಟಪ್ ಮಿನಿ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಿದೆ. ಈ ಮಿನಿ ಎಲೆಕ್ಟ್ರಿಕ್ ಕಾರಿಗೆ CT-2 ಎಂದು ಹೆಸರಿಡಲಾಗಿದೆ. ಈ ಕಾರನ್ನು ವಿಶೇಷವಾಗಿ ಬೆಂಗಳೂರಿನಂತರ ಟ್ರಾಫಿಕ್ ದಟ್ಟಣೆಯ ನಗರಗಳಲ್ಲಿ ಸಂಚಾರಕ್ಕೆ ಅನುಕೂಲವಾಗುವಂತೆ ತಯಾರಿಸಲಾಗಿದೆ. ಕಾರಣ, ಈ ಕಾರ್ ಟ್ರಾಫಿಕ್ ಜಾಮ್‌ನಲ್ಲಿ ದ್ವಿಚಕ್ರ ವಾಹನಗಳಂತೆ ಸುಲಭವಾಗಿ ಮುನ್ನುಗ್ಗಲು ಸಾಧ್ಯವಾಗುವಷ್ಟು ಪುಟ್ಟದಾಗಿದೆ. ಹಾಗಾಗಿ, ಎಂತಹ ದಟ್ಟಣೆಯ ಜಾಗದಲ್ಲಿಯೂ ಈ ಕಾರನ್ನು ಸುಲಭವಾಗಿ ಪಾರ್ಕ್ ಮಾಡಬಹುದು.
ಇದನ್ನೂ ಓದಿ- ಹೊಸ ವರ್ಷದಲ್ಲಿ ಕೈಗೆಟುಕುವ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿವೆ ಎಲೆಕ್ಟ್ರಿಕ್ ಕಾರುಗಳು
ಕೇವಲ 1 ಮೀಟರ್ ಅಗಲವಿರುವ ಮಿನಿ ಎಲೆಕ್ಟ್ರಿಕ್ ಕಾರ್:
ಸುಮಾರು 450kg ತೂಕವಿರುವ ಈ ಮಿನಿ ಎಲೆಕ್ಟ್ರಿಕ್ ಕಾರ್ ಕೇವಲ ಮೀಟರ್ ಅಗಲವಾಗಿದೆ. ಸಿಟಿ ಟ್ರಾನ್ಸ್‌ಫಾರ್ಮರ್ CT-2 ಬಹುತೇಕ ಸಣ್ಣ ಪುಟ್ಟ ಬೀದಿಗಳಲ್ಲೂ ಸುಲಭವಾಗಿ ಸಂಚರಿಸಬಲ್ಲ ಸ್ಲಿಮ್ ಕಾರ್ ಆಗಿದೆ. ಅಷ್ಟೇ ಅಲ್ಲ, ಸಾಮಾನ್ಯವಾಗಿ ಒಂದು ಕಾರ್ ನಿಲ್ಲುವ ಜಾಗದಲ್ಲಿ ನಾಲ್ಕು ಸಿಟಿ-2 ಕಾರುಗಳನ್ನು ನಿಲ್ಲಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ.
ನಿಸ್ಸಂಶಯವಾಗಿ, ಸಿಟಿ ಟ್ರಾನ್ಸ್‌ಫಾರ್ಮರ್ CT-2 ಕುಟುಂಬದ ಕಾರ್ ಅಲ್ಲ. ಈ ಮಿನಿ ಎಲೆಕ್ಟ್ರಿಕ್ ಕಾರಿನಲ್ಲಿ ಚಾಲಕ ಮತ್ತು ಓರ್ವ ಪ್ರಯಾಣಿಕರು ಆರಾಮವಾಗಿ ಕುಳಿತುಕೊಳ್ಳಬಹುದು. ಟ್ರಾಫಿಕ್ ಹೆಚ್ಚಿರುವಂತಹ ನಗರ ಪ್ರದೇಶಗಳಲ್ಲಿ ಸ್ಕೂಟರ್ ಬದಲಿಗೆ ಆರಾಮದಾಯಕ ಪ್ರಯಾಣಕ್ಕಾಗಿ ಈ ಕಾರ್ ಹೆಚ್ಚು ಸೂಕ್ತ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ- ಹೊಸ ವರ್ಷದಲ್ಲಿ ರೋಡಿಗಿಳಿಯಲಿದೆ MG 4 ಎಲೆಕ್ಟ್ರಿಕ್ ಕಾರು.!
ಸಿಟಿ ಟ್ರಾನ್ಸ್‌ಫಾರ್ಮರ್ CT- ಫುಲ್ ಚಾರ್ಜ್‌ನಲ್ಲಿ 180KM ಚಲಿಸಬಲ್ಲದು:
ಕಡಿಮೆ ತೂಕದ ಈ ಎಲೆಕ್ಟ್ರಿಕ್ ಕಾರ್ ತುಂಬಾ ಹಗುರವಾಗಿದ್ದರೂ ಕೂಡ ಒಮ್ಮೆ ಫುಲ್ ಚಾರ್ಜ್ ಆದ ಬಳಿಕ ಸುಮಾರು 180KM ಕ್ರಮಿಸಬಲ್ಲದು ಎಂದು ಕಂಪನಿ ಹೇಳಿಕೊಂಡಿದೆ. ಕಾರ್ಯಕ್ಷಮತೆಯ ಮೋಡ್‌ನಲ್ಲಿ, ಇದು 90 kmph ವೇಗದ ವೇಗವನ್ನು ಸಹ ಮುಟ್ಟಬಹುದು.
ಮಿನಿ ಎಲೆಕ್ಟ್ರಿಕ್ ಕಾರ್ ಲಭ್ಯತೆ:
ಲಭ್ಯವಿರುವ ಮಾಹಿತಿಗಳ ಪ್ರಕಾರ, ಈ ಸಿಟಿ ಟ್ರಾನ್ಸ್‌ಫಾರ್ಮರ್ ಪಶ್ಚಿಮ ಯುರೋಪ್‌ನಲ್ಲಿ 2024 ರ ಕೊನೆಯಲ್ಲಿ ಗ್ರಾಹಕರಿಗೆ ಲಭ್ಯವಾಗುವ ಸಾಧ್ಯತೆ ಇದೇ ಎಂದು ಹೇಳಲಾಗುತ್ತಿದೆ. ಇದರ ಬೆಲೆ ಸುಮಾರು $16,000 (ಸುಮಾರು ₹13 ಲಕ್ಷ) ಎಂದು ಅಂದಾಜಿಸಲಾಗಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.