2023ರ ಮಾರ್ಚ್ ತಿಂಗಳ ಅಂತ್ಯದ ವೇಳೆಗೆ, ಐವರು 301ನೇ ಫೈಟರ್ ಸ್ಕ್ವಾಡ್ರನ್‌ಗೆ ಸೇರಿದ ಎಫ್-22ಎ ರಾಪ್ಟರ್ ಪೈಲಟ್‌ಗಳು ಅಮೆರಿಕಾದ ಫ್ಲೋರಿಡಾದ ಇಗ್ಲಿನ್ ವಾಯುನೆಲೆಯಿಂದ ನೂತನ, ಚಂದದ, ಹಗುರವಾದ 'ನೆಕ್ಸ್ಟ್ ಜನರೇಶನ್ ಫಿಕ್ಸ್ಡ್ ವಿಂಗ್ ಹೆಲ್ಮೆಟ್' ಎಂದು ಕರೆಯುವ ಹೆಲ್ಮೆಟ್ ಧರಿಸಿ ಹಾರಾಟ ನಡೆಸಿದರು. ಈ ಹೆಲ್ಮೆಟ್‌ಗಳು ಕದನದ ಸಂದರ್ಭದಲ್ಲಿ ಇನ್ನಷ್ಟು ಸ್ಪಷ್ಟವಾಗಿ ನೋಡಲು ಅನುಕೂಲ ಕಲ್ಪಿಸುತ್ತವೆ.


COMMERCIAL BREAK
SCROLL TO CONTINUE READING

4+ ತಲೆಮಾರಿನ ಯುದ್ಧ ವಿಮಾನ ಪೈಲಟ್‌ಗಳ ಹೆಲ್ಮೆಟ್ ಅತ್ಯಂತ ಆಧುನಿಕವಾಗಿದೆ. ಅವುಗಳನ್ನು ಪೈಲಟ್‌ಗಳಿಗೆ ಸಾಕಷ್ಟು ಅನುಕೂಲತೆಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಅವುಗಳಲ್ಲಿರುವ ಕೆಲವು ಮಹತ್ವದ ವೈಶಿಷ್ಟ್ಯಗಳೆಂದರೆ,


ಹೆಲ್ಮೆಟ್‌ಗೆ ಅಳವಡಿಸಿರುವ ಡಿಸ್‌ಪ್ಲೇ:


ಹೆಲ್ಮೆಟ್ ಮೌಂಟೆಡ್ ಡಿಸ್‌ಪ್ಲೇ (ಎಚ್ಎಂಡಿ) ಗುರಿಯ ಕುರಿತ ಮಾಹಿತಿ, ನ್ಯಾವಿಗೇಶನ್ ಮಾಹಿತಿ ಹಾಗೂ ಅಪಾಯದ ಮುನ್ಸೂಚನೆಗಳಂತಹ ವಿವರಗಳನ್ನು ಹೆಲ್ಮೆಟ್‌ನ ಗಾಜಿನಲ್ಲಿ ಮೂಡಿಸುತ್ತವೆ. ಇದರಿಂದಾಗಿ ಪೈಲಟ್ ಆಗಸವನ್ನು ನೋಡುತ್ತಲೇ ಮಾಹಿತಿಗಳನ್ನು ವೀಕ್ಷಿಸಲು ಅನುಕೂಲವಾಗುತ್ತದೆ.


ಇದನ್ನೂ ಓದಿ-General Election 2024: ಮಹಿಳೆಯರ ಓಲೈಕೆಗೆ ಇಲ್ಲಿದೆ ಬಿಜೆಪಿ ಬೃಹತ್ ಪ್ಲಾನ್


ರಾತ್ರಿ ವೀಕ್ಷಣೆಯ ಕನ್ನಡಕ: ರಾತ್ರಿ ವೀಕ್ಷಣೆಯ ಕನ್ನಡಕ (ನೈಟ್ ವಿಷನ್ ಗಾಗಲ್ಸ್ - ಎನ್‌ವಿಜಿ) ಪೈಲಟ್‌ಗಳಿಗೆ ಕಡಿಮೆ ಬೆಳಕಿನ ಸಂದರ್ಭದಲ್ಲೂ ವೀಕ್ಷಿಸಲು ಅನುಕೂಲ ಕಲ್ಪಿಸುತ್ತವೆ. ಇದು ರಾತ್ರಿ ವೇಳೆ ಅಥವಾ ಕೆಟ್ಟ ಹವಾಮಾನದಲ್ಲಿ ಹಾರಾಟ ನಡೆಸಲು ಅತ್ಯಗತ್ಯವಾಗಿದೆ.


ಸಂವಹನ ವ್ಯವಸ್ಥೆ:


ಈ ಹೆಲ್ಮೆಟ್‌ನಲ್ಲಿ ಆಂತರಿಕ ಸಂವಹನ ವ್ಯವಸ್ಥೆ ಅಡಕವಾಗಿದ್ದು, ಇದು ಪೈಲಟ್‌ಗೆ ಇತರ ವಿಮಾನಗಳ ಪೈಲಟ್‌ಗಳು ಮತ್ತು ನಿಯಂತ್ರಣ ಕೇಂದ್ರದೊಡನೆ ಸಂವಹನ ನಡೆಸಲು ಅನುಕೂಲ ಕಲ್ಪಿಸುತ್ತದೆ.


ಆಂತರಿಕ ಧ್ವನಿ ವ್ಯವಸ್ಥೆ: ಹೆಲ್ಮೆಟ್‌ನಲ್ಲಿ ಆಂತರಿಕ ಧ್ವನಿ ವ್ಯವಸ್ಥೆ ಅಳವಡಿಸಲಾಗಿದ್ದು, ಪೈಲಟ್‌ಗಳಿಗೆ ಸಂಗೀತ ಹಾಗೂ ಇತರ ಧ್ವನಿ ಮಾಹಿತಿಗಳನ್ನು ಕೇಳಲು ಅನುಕೂಲಕರವಾಗಿದೆ.


ಆಂತರಿಕ ಆಕ್ಸಿಜನ್ ಮಾಸ್ಕ್: ಹೆಲ್ಮೆಟ್ ಒಳಗೆ ಆಂತರಿಕ ಆಮ್ಲಜನಕದ ಮಾಸ್ಕ್ ಅಳವಡಿಸಲಾಗಿದ್ದು, ಕ್ಯಾಬಿನ್ ಒತ್ತಡ ಕಡಿಮೆಯಾದ ಸಂದರ್ಭದಲ್ಲಿ ಪೈಲಟ್‌ಗೆ ಅಗತ್ಯವಿರುವ ಆಮ್ಲಜನಕ ಪೂರೈಸುತ್ತದೆ.


ಬ್ಯಾಲಿಸ್ಟಿಕ್ ರಕ್ಷಣೆ:


ಒಂದು ವೇಳೆ ವಿಮಾನ ಅಪಘಾತಕ್ಕೊಳಗಾದರೆ, ಅಥವಾ ದಾಳಿಗೊಳಗಾದರೆ ಪೈಲಟ್ ತಲೆಯನ್ನು ರಕ್ಷಿಸುವ ರೀತಿಯಲ್ಲಿ ಈ ಹೆಲ್ಮೆಟ್ ವಿನ್ಯಾಸಗೊಂಡಿದೆ.


4+ ತಲೆಮಾರಿನ ಪೈಲಟ್ ಹೆಲ್ಮೆಟ್‌ಗಳು ಪೈಲಟ್‌ಗಳಿಗೆ ಅತ್ಯಂತ ಮಹತ್ವದ ಉಪಕರಣವಾಗಿವೆ. ಅವುಗಳು ಸಾಕಷ್ಟು ವಿಶೇಷತೆಗಳನ್ನು ಒಳಗೊಂಡಿದ್ದು, ಪೈಲಟ್‌ಗಳಿಗೆ ಪರಿಸ್ಥಿತಿಯ ಅರಿವು, ಜಾಗೃತಿ ಮೂಡಿಸಿ, ಹಾರಾಟ ಗುಣಮಟ್ಟ ಹೆಚ್ಚಿಸಿ, ಅಪಘಾತದ ಸಂದರ್ಭದಲ್ಲಿ ಅವರನ್ನು ಸುರಕ್ಷಿತವಾಗಿಡುತ್ತದೆ. ಎಚ್ಎಂಡಿ ಹೆಲ್ಮೆಟ್‌ಗಳು ಸೈನಿಕರಿಗೆ, ರಕ್ಷಣಾ ಕಾರ್ಯಾಚರಣೆ ನಡೆಸುವವರಿಗೆ, ವೈದ್ಯರಿಗೆ, ಶಸ್ತ್ರಚಿಕಿತ್ಸಕರಿಗೆ ಹಾಗೂ ಇತರ ಉದ್ಯೋಗಿಗಳಿಗೆ ಅನುಕೂಲಕರವಾಗಿವೆ.


ಇದನ್ನೂ ಓದಿ-G-7 Summit Update: G7 ಶೃಂಗಸಭೆಯಲ್ಲಿ ಭಾಗಿಯಾಗಲು ಜಪಾನ್ ತೆರಳಲಿದ್ದಾರೆ ಪಿಎಂ ಮೋದಿ


4+ ತಲೆಮಾರಿನ ಹೆಲ್ಮೆಟ್‌ಗಳ ಪ್ರಯೋಜನಗಳು:


ಹೆಚ್ಚಿನ ಪರಿಸ್ಥಿತಿಯ ಅರಿವು: ಎಚ್ಎಂಡಿ ಹಾಗೂ ಎನ್‌ವಿಜಿಗಳು ಪೈಲಟ್‌ಗಳಿಗೆ ವಿಶಾಲವಾದ ನೋಟವನ್ನು ಒದಗಿಸಿ, ಕಡಿಮೆ ಬೆಳಕಿನ ಸನ್ನಿವೇಶದಲ್ಲೂ ಸ್ಪಷ್ಟವಾಗಿ ನೋಡಲು ಅನುಕೂಲವಾಗುವಂತೆ ಮಾಡುತ್ತವೆ. ಇದು ಪೈಲಟ್‌ಗಳಿಗೆ ಅಪಾಯವನ್ನು ಅರಿತುಕೊಂಡು, ಸೂಕ್ತ ನಿರ್ಧಾರ ಕೈಗೊಳ್ಳಲು ಅನುಕೂಲಕರವಾಗಿದೆ.


ಹಾರಾಟ ಸಾಮರ್ಥ್ಯ ಹೆಚ್ಚಳ:


ಎಚ್ಎಂಡಿ ಹಾಗೂ ಎನ್‌ವಿಜಿಗಳು ಪೈಲಟ್‌ಗಳಿಗೆ ವಿಶಾಲ ಆಕಾಶವನ್ನು ಗಮನಿಸುತ್ತಲೇ ಸಂದೇಶ ಮತ್ತು ಮಾಹಿತಿಗಳನ್ನು ನೋಡಲು ಅನುಕೂಲ ಮಾಡುತ್ತವೆ. ಇದರ ಪರಿಣಾಮವಾಗಿ ಪೈಲಟ್ ಇನ್ನಷ್ಟು ಸುಗಮವಾಗಿ ಮತ್ತು ನಿಖರವಾಗಿ ಹಾರಾಟ ನಡೆಸಬಹುದಾಗಿದೆ.


ಹೆಚ್ಚಿನ ಸುರಕ್ಷತೆ: ಬ್ಯಾಲಿಸ್ಟಿಕ್ ರಕ್ಷಣೆ ಹೊಂದಿರುವುದರಿಂದ ಅಪಘಾತದ ಸಂದರ್ಭದಲ್ಲೂ ಈ ಹೆಲ್ಮೆಟ್ ಪೈಲೆಟ್‌ಗೆ ಸುರಕ್ಷತೆ ಒದಗಿಸುತ್ತದೆ.


4+ ತಲೆಮಾರಿನ ಹೆಲ್ಮೆಟ್ ಉತ್ಪಾದಿಸುವ ಪ್ರಸಿದ್ಧ ಸಂಸ್ಥೆಗಳು:


• ಬಿಎಇ ಸಿಸ್ಟಮ್ಸ್


• ಕಾಲಿನ್ಸ್ ಏರೋಸ್ಪೇಸ್


• ಎಲ್‌ಬಿಟ್ ಸಿಸ್ಟಮ್ಸ್


• ಜನರಲ್ ಡೈನಾಮಿಕ್ಸ್


• ಎಲ್-3 ಟೆಕ್ನಾಲಜಿ


• ಲಾಕ್‌ಹೀಡ್‌ ಮಾರ್ಟಿನ್


• ನಾರ್ಥ್ರೋಪ್ ಗ್ರಮ್ಮನ್


• ಥೇಲ್ಸ್ ಗ್ರೂಪ್


• ವುಜಿ಼ಕ್ಸ್


• ಕ್ಸಿಮ್ಮರ್ಸ್


ಈ ಉತ್ಪಾದಕ ಸಂಸ್ಥೆಗಳು ವಿಶಾಲ ಶ್ರೇಣಿಯ ಎಚ್ಎಂಡಿ ಹೆಲ್ಮೆಟ್‌ಗಳನ್ನು ಮಿಲಿಟರಿ ಹಾಗೂ ವಾಣಿಜ್ಯಿಕ ಬಳಕೆಗೆ ಉತ್ಪಾದಿಸುತ್ತಾರೆ. ಈ ಹೆಲ್ಮೆಟ್‌ಗಳು ಬಳಕೆದಾರರು ಮತ್ತು ಅವಶ್ಯಕತೆಗೆ ತಕ್ಕಂತೆ ವಿನ್ಯಾಸ ಹೊಂದಿರುತ್ತವೆ.


ಎಚ್ಎಂಡಿ ಹೆಲ್ಮೆಟ್‌ಗಳನ್ನು ಬೇರೆ ಬೇರೆ ಕಾರಣಗಳಿಗೆ ಬಳಸಲಾಗುತ್ತದೆ


ಮಿಲಿಟರಿ: ಎಚ್ಎಂಡಿ ಹೆಲ್ಮೆಟ್‌ಗಳನ್ನು ಪೈಲಟ್‌ಗಳು, ಸೈನಿಕರು, ಹಾಗೂ ಮಿಲಿಟರಿ ಸಿಬ್ಬಂದಿಗಳು ಪರಿಸ್ಥಿತಿಯ ಅರಿವಿಗೆ, ಗುರಿಯ ಕುರಿತ ಸ್ಪಷ್ಟತೆಗೆ ಮತ್ತು ನ್ಯಾವಿಗೇಶನ್‌ಗೆ ಬಳಸುತ್ತಾರೆ.


ವಾಣಿಜ್ಯಿಕ ಬಳಕೆ: ಎಚ್ಎಂಡಿ ಹೆಲ್ಮೆಟ್‌ಗಳನ್ನು ವಾಣಿಜ್ಯಿಕ ಪೈಲಟ್‌ಗಳು, ಅಗ್ನಿ ನಿರೋಧಕ ಸಿಬ್ಬಂದಿಗಳು ಬಳಸುತ್ತಾರೆ.


ವೈದ್ಯಕೀಯ: ಎಚ್ಎಂಡಿ ಹೆಲ್ಮೆಟ್‌ಗಳನ್ನು ವೈದ್ಯರು, ಶಸ್ತ್ರಚಿಕಿತ್ಸಕರು, ಹಾಗೂ ಇತರ ವೈದ್ಯಕೀಯ ಸಿಬ್ಬಂದಿಗಳು ಶಸ್ತ್ರಚಿಕಿತ್ಸೆ ಮತ್ತು ಇತರ ತುರ್ತು ಸಂದರ್ಭದಲ್ಲಿ ಸಹಾಯ ನೀಡಲು ಬಳಸುತ್ತಾರೆ.


ಮನೋರಂಜನೆ: ಎಚ್ಎಂಡಿ ಹೆಲ್ಮೆಟ್‌ಗಳನ್ನು ಆಟವಾಡಲು, ವರ್ಚುವಲ್ ರಿಯಾಲಿಟಿ ಮತ್ತು ಇತರ ಮನೋರಂಜನಾ ಉದ್ದೇಶಗಳಿಗೆ ಬಳಸುತ್ತಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡ