ನಿಮ್ಮ ಸ್ಮಾರ್ಟ್ ಫೋನ್ ಹ್ಯಾಕ್ ಆಗಿದ್ಯಾ? ಸಿಂಪಲ್ ಟೆಕ್ನಿಕ್ ಮೂಲಕ ತಿಳಿದುಕೊಳ್ಳಬಹುದು; ಹೇಗೆ ಗೊತ್ತಾ?
Smartphone Hack: ನಿಮ್ಮ ಸ್ಮಾರ್ಟ್ ಫೋನ್ ಹ್ಯಾಕ್ ಆಗಿರುವ ಬಗ್ಗೆ ಸಿಂಪಲ್ ಟೆಕ್ನಿಕ್ ಗಳ ಮೂಲಕ ತಿಳಿದುಕೊಳ್ಳಬಹುದು.
Smartphone Techniques: ಇತ್ತೀಚಿಗೆ ಸ್ಮಾರ್ಟ್ ಫೋನ್ ಹ್ಯಾಕ್ ಆಗುತ್ತೆ ಎನ್ನುವ ವಿಚಾರ ತುಂಬಾ ಕಾಮನ್ ಆಗಿಬಿಟ್ಟಿದೆ. ಆದರೆ ಫೋನ್ ಹ್ಯಾಕ್ ಆದರೆ ಅದರ ಪರಿಣಾಮ ಅಷ್ಟೇ ಕೆಟ್ಟದ್ದಾಗಿರುತ್ತದೆ. ಹಾಗಾಗಿ ಸ್ಮಾರ್ಟ್ ಫೋನ್ ಹ್ಯಾಕ್ ಆಗುವ ಬಗ್ಗೆ, ಫೋನ್ ಹ್ಯಾಕ್ ಆದರೆ ಏನು ಮಾಡಬೇಕು ಎನ್ನುವ ಬಗ್ಗೆ ತಿಳಿದುಕೊಳ್ಳುವುದು ಅತ್ಯವಶ್ಯಕ. ನಿಮ್ಮ ಫೋನ್ ಹ್ಯಾಕ್ ಆಗಿದೆಯೋ ಇಲ್ಲವೋ ಅಂತಾ ತಿಳಿದುಕೊಳ್ಳೋಕೆ ಒಂದು ಸಿಂಪಲ್ ಟೆಕ್ನಿಕ್ ಗಳು ಇವೆ. ಅವು ಯಾವುವು ಅಂತಾ ಈ ಸ್ಟೋರಿ ಓದಿ.
ಯಾರಾದ್ರೂ ಕಿಡಿಗೇಡಿಗಳು ನಿಮ್ಮ ಸ್ಮಾರ್ಟ್ ಫೋನ್ ಹ್ಯಾಕ್ ಮಾಡಿದ್ದರೆ ಅದನ್ನು ಸಣ್ಣದೊಂದು ಲೈಟ್ ತಿಳಿಸುತ್ತೆ. ಅದು ನಿಮ್ಮ ಮೊಬೈಲ್ ಫೋನ್ ನಲ್ಲೇ ಇರುವ ಲೈಟ್. ಸ್ಮಾರ್ಟ್ ಫೋನ್ ಹ್ಯಾಕ್ ಆದಾಗ ತನ್ನ ಮಾಲೀಕನನ್ನು ಎಚ್ಚರಿಸಲೆಂದೇ ಅಳವಡಿಸಲಾಗಿರುವ ಲೈಟ್. ಬಹಳ ಜನಕ್ಕೆ ಇದು ಗೊತ್ತಿಲ್ಲ. ನಿಮಗೂ ಗೊತ್ತಿಲ್ಲದಿದ್ದರೆ. ಮುಂದಿನ ಮಾಹಿತಿಗಳನ್ನು ಓದಿ. ಅದಕ್ಕೂ ಮೊದಲು ಒಂದೊಮ್ಮೆ ನಿಮ್ಮ ಸ್ಮಾರ್ಟ್ ಫೋನ್ ಹ್ಯಾಕ್ ಆದ್ರೆ ಏನೆಲ್ಲಾ ಸಮಸ್ಯೆ ಆಗುತ್ತೆ ಅಂತಾ ನೋಡಿ…
ಒಂದೊಮ್ಮೆ ಹ್ಯಾಕರ್ ಗಳು ನಿಮ್ಮ ಸ್ಮಾರ್ಟ್ ಫೋನ್ ಅನ್ನು ಹ್ಯಾಕ್ ಮಾಡಿದ್ರು ಅಂದ್ರೆ ನಿಮ್ಮ ಸ್ಮಾರ್ಟ್ ಫೋನಿನ ರಿಮೋಟ್ ಅವರಿಗೆ ಸಿಕ್ಕಿತು ಅಂತಾ ಅರ್ಥ. ಅವರು ಸಂಪೂರ್ಣವಾಗಿ ನಿಮ್ಮ ಸ್ಮಾರ್ಟ್ ಫೋನ್ ಅನ್ನು ನಿಯಂತ್ರಿಸಬಹುದು. ನಿಮ್ಮ ಎಲ್ಲಾ ಖಾಸಗಿ ಮಾಹಿತಿಗಳು ಅವರಿಗೆ ಲಭ್ಯವಾಗತೊಡಗುತ್ತವೆ. ನಿಮ್ಮ ಸ್ಮಾರ್ಟ್ ಫೋನಿಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯ ಕೀಲಿ ಕೈ ಅವರಿಗೆ ಸಿಕ್ಕಂತಾಗುತ್ತದೆ. ಆದುದರಿಂದ ಫೋನ್ ಹ್ಯಾಕ್ ಬಗ್ಗೆ ಎಚ್ಚರಿಕೆಯಿಂದ ಇರಬೇಕಾಗುತ್ತದೆ.
ಈ ಐದು ಲಕ್ಷಣಗಳನ್ನು ಗಮನಿಸಿ.
ವಿಚಿತ ಜಾಹಿರಾತುಗಳ ಪ್ರತ್ಯಕ್ಷ:
ಧಿಡೀರನೆ ನಿಮ್ಮ ಸ್ಮಾರ್ಟ್ ಫೋನಿಗೆ ಚಿತ್ರವಿಚಿತ್ರವಾದ ಜಾಹಿರಾತುಗಳು ಮತ್ತು ಪಾಪ್-ಅಪ್ ಗಳು ಬರತೊಡಗುತ್ತವೆ. ವಿಶೇಷವಾಗಿ ನೀವು ಬ್ರೌಸ್ ಮಾಡುತ್ತಿರುವಾಗ ಅಥವಾ ಸುಮ್ಮನೆ ಸ್ಕ್ರೋಲ್ ಮಾಡುತ್ತಿರುವಾಗ ವಿಚಿತ್ರವಾದ ಜಾಹಿರಾತುಗಳು ಅಥವಾ ಪೆಕ್ಯೂಲರ್ ಪಾಪ್-ಅಪ್ ಗಳು ಬರುತ್ತಿವೆ ಎಂದರೆ ಫೋನ್ ಹ್ಯಾಕ್ ಆಗಿರುವ ಸಾಧ್ಯತೆ ಇದೆ ಎನ್ನುವುದರ ಸೂಚನೆ.
ಇದನ್ನೂ ಓದಿ- ಜಿಯೋ ರಿಚಾರ್ಜ್ ಪ್ಲಾನ್ಸ್: ಎರಡು ಪ್ಲಾನ್ಸ್ ನಡುವೆ ₹1 ಅಷ್ಟೇ ವ್ಯತ್ಯಾಸ, ಆದರೆ ಪ್ರಯೋಜನ ಮಾತ್ರ ಅಗಾಧ..!
ವಿಪರೀತ ಡೇಟಾ ಬಳಕೆ:
ಎರಡನೇ ಲಕ್ಷಣ ಏನೆಂದರೆ ನಿಮಗೆ ಗೊತ್ತಿಲ್ಲದ್ದಂತೆ ನಿಮ್ಮ ಸ್ಮಾರ್ಟ್ ಫೋನ್ ಡೇಟಾ ಖಾಲಿಯಾಗತೊಡಗುತ್ತದೆ. ಅದು ಏಕೆ ಖಾಲಿಯಾಗುತ್ತದೆ ಎಂದರೆ ನೀವು ಸುಮ್ಮನಿದ್ದರೂ ನಿಮ್ಮ ಸ್ಮಾರ್ಟ್ ಫೋನ್ ಅನ್ನು ಮತ್ತೊಬ್ಬರು, ಅಂದರೆ ಹ್ಯಾಕರ್ ಗಳು ನಿಯಂತ್ರಿಸುತ್ತಿರುವ ಕಾರಣಕ್ಕೆ.
ಹೊಸ ಅಪ್ಲಿಕೇಶನ್ ಗಳ ಇನ್ಸ್ಟಾಲ್:
ನಿಮ್ಮ ಸ್ಮಾರ್ಟ್ ಫೋನಿನಲ್ಲಿ ನಿಮಗೆ ಗೊತ್ತಿಲ್ಲದಂತೆ ಯಾವುದಾದ್ರೂ ಹೊಸ ಅಪ್ಲಿಕೇಷನ್ ಇನ್ಸ್ಟಾಲ್ ಆಗಿದೆ ಅಂದ್ರೆ ನಿಮ್ಮ ಫೋನ್ ಹ್ಯಾಕ್ ಆಗಿದೆ ಅಂತಾ ನೀವು ಅರ್ಥ ಮಾಡಿಕೊಳ್ಳಬೇಕು. ಏಕೆಂದರೆ ನೀವು ಹೊಸ ಅಪ್ಲಿಕೇಶನ್ ಅನ್ನು ಡೌನ್ ಲೋಡ್ ಮಾಡಿಲ್ಲದಿದ್ದರೂ ನಿಮ್ಮ ಫೋನ್ ಅನ್ನು ಹ್ಯಾಕ್ ಮಾಡಿರುವ ಆ ಕಿಡಿಗೇಡಿ ಡೌನ್ ಲೋಡ್ ಮಾಡಿರುತ್ತಾನೆ. ನಿಮ್ಮ ಫೋನಿಗೆ ವೈರಸ್ ಹರಡಲು ಮತ್ತು ನಿಮ್ಮ ಮಾಹಿತಿಗಳನ್ನು ಕದಿಯಲು ಈ ಅಪ್ಲಿಕೇಶನ್ ಗಳನ್ನು ಇನ್ಸ್ಟಾಲ್ ಮಾಡಿರಲಾಗುತ್ತದೆ.
ಮಾತು ಮಾತಿಗೂ ಬ್ಯಾಟರಿ ಖತಂ:
ಇದ್ದಕ್ಕಿದ್ದಂತೆ ನಿಮ್ಮ ಸ್ಮಾರ್ಟ್ ಫೋನ್ ಬ್ಯಾಟರಿ ಖಾಲಿಯಾಗಲು ಶುರುವಾಯಿತು ಅಂದ್ರೆ ಕೂಡ ನೀವು ಹ್ಯಾಕ್ ಆಗಿರಬಹುದು ಅಂತಾ ಎತ್ತೆಚ್ಚುಕೊಳ್ಳಬೇಕು. ಏಕೆಂದರೆ ನೀವು ನಿಮ್ಮ ಫೋನ್ ಅನ್ನು ಬಳಸದಿದ್ದರೂ ಹ್ಯಾಕರ್ಸ್ ಬಳಸುತ್ತಿರುತ್ತಾನೆ. ಅದೇ ಕಾರಣಕ್ಕೆ ನೀವು ಸುಮ್ಮನಿದ್ದರೂ ನಿಮ್ಮ ಸ್ಮಾರ್ಟ್ ಫೋನ್ ಬ್ಯಾಟರಿ ಖಾಲಿಯಾಗುತ್ತಿರುತ್ತದೆ.
ಕ್ಯಾಮರಾ ಲೈಟ್:
ಇದು ಬಹಳ ಮುಖ್ಯ. ನಿಮ್ಮ ಫೋನ್ ಹ್ಯಾಕ್ ಆಗಿದೆಯೋ ಇಲ್ಲವೋ ಎನ್ನುವ ಸಂಗತಿಯನ್ನು ನಿಮ್ಮ ಫೋನಿನಲ್ಲೇ ಇರುವ ಒಂದು ಸಣ್ಣ ಲೈಟ್ ತಿಳಿಸಿಕೊಡುತ್ತದೆ. ಅದು ಕ್ಯಾಮರಾ ಲೈಟ್. ಇದನ್ನು ಯಾರಾದ್ರೂ ನಿಮ್ಮ ಫೋನ್ ಅನ್ನು ಹ್ಯಾಕ್ ಮಾಡಿದ್ರೆ ತಕ್ಷಣವೇ ನಿಮಗೆ ಮಾಹಿತಿ ಕೊಡಲಿ ಎನ್ನುವ ಕಾರಣಕ್ಕಾಗಿಯೇ ಈ ಕ್ಯಾಮರಾ ಲೈಟ್ ಅನ್ನು ಅಳವಡಿಸಲಾಗಿರುತ್ತದೆ.
ಇದನ್ನೂ ಓದಿ- ಏರ್ಟೆಲ್ನ ಆಕರ್ಷಕ ಪ್ಲಾನ್: 30 ರೂ.ಗಿಂತ ಕಡಿಮೆ ಬೆಲೆಯಲ್ಲಿ ಸಿಗುತ್ತೆ ಈ ಎಲ್ಲಾ ಪ್ರಯೋಜನ
ಈ ಕ್ಯಾಮರಾ ಲೈಟ್ ಮೂಲಕ ನಿಮ್ಮ ಸ್ಮಾರ್ಟ್ ಫೋನ್ ಹ್ಯಾಕ್ ಆಗಿದೆಯೋ ಇಲ್ಲವೋ ಅಂತಾ ತಿಳಿಯುವುದು ಹೇಗೆ ಎಂದರೆ, ನೀವು ಕ್ಯಾಮರಾ ಆನ್ ಮಾಡಿಲ್ಲದಿದ್ದರೂ ನಿಮ್ಮ ಕ್ಯಾಮರಾ ಲೈಟ್ ಆನ್ ಆಗಿದ್ದರೆ ಅದು ನಿಮ್ಮ ಫೋನ್ ಹ್ಯಾಕ್ ಆಗಿದೆ ಎನ್ನುವುದರ ಸ್ಪಷ್ಟವಾದ ಸುಳಿವು. ಕ್ಯಾಮರಾ ಲೈಟ್ ಹೇಗೆ ಮುಖ್ಯ ಎಂದರೆ ಹ್ಯಾಕರ್ ಗಳು ಫೋನ್ ಹ್ಯಾಕ್ ಮಾಡಿದ ಮೇಲೆ ನಿಮ್ಮ ಫೋನಿಗೆ ಸ್ಪೈವೇರ್ ಹಾಕುತ್ತಾರೆ. ಅನಂತರ ಫೋನಿನ ಕ್ಯಾಮರಾವನ್ನು ಬಳಸಿಕೊಂಡು ನಿಮ್ಮ ಇತರೆ ಚಲನವಲನಗಳನ್ನು ಗಮನಿಸುತ್ತಿರುತ್ತಾರೆ. ಅದರಿಂದಾಗಿ ಕ್ಯಾಮರಾ ಲೈಟ್ ಆನ್ ಆಗಿರುತ್ತದೆ.
ಫೋನ್ ಹ್ಯಾಕ್ ಆಗಿಬಿಟ್ಟಿದ್ದರೆ ಏನು ಮಾಡಬೇಕು?
ಒಟ್ಟಿನಲ್ಲಿ ಮುಂಚಿತವಾಗಿಯೋ ಅಥವಾ ತಡಯಾಗಿಯೋ ನಿಮ್ಮ ಸ್ಮಾರ್ಟ್ ಫೋನ್ ಹ್ಯಾಕ್ ಆಗಿದೆ ಅಂತಾ ಗೊತ್ತಾದರೆ ತಕ್ಷಣವೇ ನೀವು ಫೋನಿಗೆ ನೀಡಿರುವ ಪಾಸ್ ವಾರ್ಡ್ ಬದಲಾಯಿಸಬೇಕು. ನಂತರ ನಿಮಗೆ ಗೊತ್ತಿಲ್ಲದೆ ಇನ್ಸ್ಟಾಲ್ ಆಗಿರುವ ಅಪ್ಲಿಕೇಶನ್ ಗಳನ್ನು ಹುಡುಕಿ ಅನ್ ಇನ್ಸ್ಟಾಲ್ ಮಾಡಬೇಕು. ಪ್ಲೇಸ್ಟೋರ್ ಅಥವಾ ಆಪ್ ಸ್ಟೋರ್ ನಿಂದ ಯಾವುದಾದರೂ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿದ್ದರೆ ಅಂತಹವನ್ನು ಅನ್ ಇನ್ಸ್ಟಾಲ್ ಮಾಡಿ ರಿಸ್ಟಾರ್ಟ್ ಮಾಡಬೇಕು. ಬಹಳ ಮುಖ್ಯವಾಗಿ ‘ನಮ್ಮ ಫೋನ್ ನಮ್ಮ ಎಚ್ಚರ’ ಎನ್ನುವುದನ್ನು ಮರೆಯಬಾರದು.
https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ