ಮಂಗಳನ ಮೇಲ್ಮೈಯಲ್ಲಿ ಮಾನವನ ಮುಖ ? ನಾಸಾದ ರೋವರ್ ಸೆರೆ ಹಿಡಿದ ಫೋಟೋ ಇದು

ಯಾದೃಚ್ಛಿಕ ವಸ್ತುಗಳಲ್ಲಿ ಅರ್ಥಪೂರ್ಣ ಆಕಾರಗಳು ಮತ್ತು ಚಿತ್ರಗಳನ್ನು ಗುರುತಿಸುವುದನ್ನು ಪ್ಯಾರೆಡೋಲಿಯಾ ಎಂದು ಕರೆಯಲಾಗುತ್ತದೆ.   

Written by - Ranjitha R K | Last Updated : Oct 18, 2024, 03:58 PM IST
  • ಮಂಗಳ ಗ್ರಹದಿಂದ ಮತ್ತೊಂದು ವಿಶಿಷ್ಟ ಫೋಟೋ
  • ನಾಸಾದ ರೋವರ್ ಸೆರೆ ಹಿಡಿದ ಫೋಟೋ ಇದು
  • ಸೆಪ್ಟೆಂಬರ್ 27 ರಂದು ನಾಸಾದ ಪರ್ಸೆವೆರೆನ್ಸ್ ರೋವರ್ ಈ ಫೋಟೋ ತೆಗೆದಿದೆ
ಮಂಗಳನ ಮೇಲ್ಮೈಯಲ್ಲಿ ಮಾನವನ ಮುಖ ? ನಾಸಾದ ರೋವರ್ ಸೆರೆ ಹಿಡಿದ ಫೋಟೋ ಇದು  title=

ಮಂಗಳ ಗ್ರಹದಿಂದ ಮತ್ತೊಂದು ವಿಶಿಷ್ಟ ಫೋಟೋ ಹೊರಬಂದಿದೆ.ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ರೋವರ್ ಮಂಗಳನ ಗ್ರಹದಲ್ಲಿ ಒಂದು ಬಂಡೆಯನ್ನು ಪತ್ತೆ ಹಚ್ಚಿದೆ. ಅದನ್ನು ಒಂದು ಅಂಗಲ್ ನಿಂದ ನೋಡಿದಾಗ ಮಾನವ ಮುಖದಂತೆ ಕಾಣುತ್ತದೆ. ಸೂರ್ಯನ ಕಠೋರ ಬೆಳಕಿನಲ್ಲಿ ನಾಶವಾಗುತ್ತಿರುವ ಕತ್ತರಿಸಿದ, ಕೊಳೆಯುತ್ತಿರುವ ಮಾನವ ತಲೆ ಈ ಫೋಟೋದಲ್ಲಿ ಕಾಣಿಸುತ್ತಿದೆ ಎಂದು ಕೆಲವರು ಹೇಳಿದ್ದಾರೆ. ಈ ಫೋಟೋವನ್ನು ಸೆಪ್ಟೆಂಬರ್ 27 ರಂದು ನಾಸಾದ ಪರ್ಸೆವೆರೆನ್ಸ್ ರೋವರ್ ತೆಗೆದಿದೆ.

ಮಂಗಳ ಗ್ರಹದಲ್ಲಿ ಮಾನವ ತಲೆಯಂತೆ ಬಂಡೆ :
ಈ ಬಂಡೆಯನ್ನು ಅಸಾಮಾನ್ಯವಾಗಿಸುವುದು ಅದರ ಆಕಾರ.ಅದು ಹಾನಿಗೊಳಗಾದ ರೀತಿಯಲ್ಲಿ ಮತ್ತು ಮಾನವನ ತಲೆಯಂತೆ ಕಾಣಿಸುತ್ತದೆ. ಇದರಲ್ಲಿ ಹುಬ್ಬುಗಳು, ಮೂಗು, ಬಾಯಿ ಮತ್ತು ಗಲ್ಲದ ಹೋಲಿಕೆಗಳನ್ನು ಕಾಣಬಹುದು. ಯಾದೃಚ್ಛಿಕ ವಸ್ತುಗಳಲ್ಲಿ ಅರ್ಥಪೂರ್ಣ ಆಕಾರಗಳು ಮತ್ತು ಚಿತ್ರಗಳನ್ನು ಗುರುತಿಸುವುದನ್ನು ಪ್ಯಾರೆಡೋಲಿಯಾ ಎಂದು ಕರೆಯಲಾಗುತ್ತದೆ. 

ಇದನ್ನೂ ಓದಿ: ಟಿವಿಯನ್ನೇ ಕಂಪ್ಯೂಟರ್ ಆಗಿ ಪರಿವರ್ತಿಸಿಕೊಳ್ಳುವ ಸುಲಭ ವಿಧಾನ!ಇದು ಹೊಸ ಟೆಕ್ನಾಲಜಿ ಪರಿಚಯ

ಪ್ಯಾರಿಡೋಲಿಯಾ ಎಂದರೇನು? :
ನಿಮ್ಮ ಕಣ್ಣುಗಳು ಏನನ್ನಾದರೂ ನೋಡಿದಾಗ ನಿಮ್ಮ ಮೆದುಳಿನ ಕೆಲವು ಭಾಗಗಳು  ಅದನ್ನು ಪ್ರೋಸೆಸ್ ಮಾಡಿದಾಗ ಪ್ಯಾರೆಡೋಲಿಯಾ ಸಂಭವಿಸುತ್ತದೆ. ಹೀಗಾದಾಗ ಗ್ರೇ  ಮ್ಯಾಟರ್ ಅನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳುವ ಮೊದಲೇ ಒಂದು ತೀರ್ಮಾನಕ್ಕೆ ಬರುತ್ತದೆ. ಹಾಗಾಗಿಯೇ ಜನರು ಪರ್ವತಗಳು, ಮರಗಳು, ಸಸ್ಯಗಳು ಮತ್ತು ನೀರಿನಲ್ಲಿಯೂ ಕೆಲವು ಆಕಾರಗಳನ್ನು ಕಾಣುತ್ತಾರೆ.ಗೂಗಲ್ ಅರ್ಥ್‌ನಲ್ಲಿ ಮಾನವ ಮುಖಗಳಂತೆ ಕಾಣುವ ಹಲವು ಸ್ಥಳಗಳಿವೆ. 

ಇದನ್ನೂ ಓದಿ: ಮನೆಯಲ್ಲಿ ರಾಶಿರಾಶಿ ಹಳೆಯ ಸೀರೆ-ಬಟ್ಟೆಗಳಿದ್ಯಾ? ಹಾಗಾದ್ರೆ ಈ ವೆಬ್‌ಸೈಟ್‌ಗಳಲ್ಲಿ ಮಾರಾಟ ಮಾಡಿ ಸಾವಿರ ಸಾವಿರ ರೂಪಾಯಿ ಪಡೆಯಿರಿ! ಬಟ್ಟೆ ಮಾರುವ ಸೈಟ್ ಇಲ್ಲಿದೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News