ನವದೆಹಲಿ: Covid-19 Vaccination Updates - ಭಾರತದ ಕೊವಿಡ್-19 ಟ್ರ್ಯಾಕಿಂಗ್ ಆಪ್ ಆಗಿರುವ ಆರೋಗ್ಯ ಸೇತು ಆಪ್ (Aarogya Setu) ಹಾಗೂ ವ್ಯಾಕ್ಸಿನ್ ರಿಜಿಸ್ಟ್ರೇಷನ್ ಆಪ್ ಆಗಿರುವ Co-WIN ಅನ್ನು ಒಂದುಗೂಡಿಸಲಾಗಿದೆ. ಇದರಿಂದ ಇನ್ಮುಂದೆ ಬಳಕೆದಾರರ ತಮ್ಮ ವ್ಯಾಕ್ಸಿನೇಷನ್ ಸರ್ಟಿಫಿಕೆಟ್ ಅನ್ನು ಆರೋಗ್ಯ ಸೇತು ಆಪ್ ಬಳಸಿ ಡೌನ್ಲೋಡ್ ಮಾಡಿಕೊಳ್ಳಬಹುದು. ಇದಲ್ಲದೆ ಆರೋಗ್ಯ ಸೇತು ಆಪ್ ನಲ್ಲಿ ವ್ಯಾಕ್ಸಿನೇಷನ್ ಗೆ ಸಂಬಂಧಿಸಿದ ಇತರೆ ಮಾಹಿತಿ ಕೂಡ ಸಿಗಲಿದೆ. ಈ ಇಂಟಿಗ್ರೆಶನ್ ಕುರಿತು ಆರೋಗ್ಯ ಸೇತು ಆಪ್ ನ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಪ್ರಕಟಿಸಲಾಗಿದೆ.


COMMERCIAL BREAK
SCROLL TO CONTINUE READING

ಕೊವಿಡ್-19 (Covid-19) ವ್ಯಾಕ್ಸಿನೇಷನ್ ಮಾಹಿತಿ ಬೇಕೇ? ಕೊವಿನ್ (Co-WIN) ವಿವರಗಳು ಆರೋಗ್ಯ ಸೇತು ಆಪ್ ನಲ್ಲಿ ಲೈವ್ ಪಡೆಯಬಹುದು. ಇಲ್ಲಿಂದ ನೀವು ವ್ಯಾಕ್ಸಿನೇಷನ್ ಮಾಹಿತಿ (Corona Vaccination Update) ಪಡೆಯಬಹುದು, ಕೊವಿನ್ ಡ್ಯಾಶ್ ಬೋರ್ಡ್ ಅನ್ನು ವಿಕ್ಷೀಸಬಹುದು ಹಾಗೂ ಒಂದು ವೇಳೆ ನೀವು ಕೊವಿಡ್ ವ್ಯಾಕ್ಸಿನೇಷನ್ (Coronavirus Vaccine) ನ ಒಂದು ಡೋಸ್ ಪಡೆದುಕೊಂಡಿದ್ದರೆ, ಇಲ್ಲಿಂದ ನೀವು ವ್ಯಾಕ್ಸಿನೇಷನ್ ಸರ್ಟಿಫಿಕೆಟ್ (Vaccination Certificate) ಕೂಡ ಪಡೆಯಬಹುದು.


ಈ ಮೂರು ಆಯ್ಕೆಗಳು ಲಭ್ಯವಿರಲಿವೆ
ಭಾರತದಲ್ಲಿ ಕೊವಿಡ್ -19 ವ್ಯಾಕ್ಸಿನೇಷನ್ ನ ಮೊದಲ ಹಂತ ಕಳೆದ ತಿಂಗಳಿನಿಂದ ಪ್ರಾರಂಭಿಸಲಾಗಿದೆ. ಮೊದಲ ಹಂತದಲ್ಲಿ ಆರೋಗ್ಯಾಧಿಕಾರಿಗಳು, ಮುಂಚೂಣಿಯಲ್ಲಿರುವ ಕೆಲಸಗಾರರಿಗೆ ಹಾಗೂ 50 ವರ್ಷ ವಯಸ್ಸಿಗಿಂತ ಮೇಲ್ಪಟ್ಟವರಿಗೆ ಲಸಿಕೆಯ ಡೋಸ್ ನೀಡಲಾಗುತ್ತಿದೆ. ಪ್ರಸ್ತುತ ಆರೋಗ್ಯ ಸೇತು ಆಪ್ ನ ಕೊವಿನ್ ವಿಭಾಗದಲ್ಲಿ ಬಳಕೆದಾರರಿಗೆ  ಒಟ್ಟು ಮೂರು ಆಯ್ಕೆಗಳನ್ನು ನೀಡಲಾಗುತ್ತಿದೆ. ವ್ಯಾಕ್ಸಿನೇಷನ್ ಇನ್ಫರ್ಮೇಷನ್, ವ್ಯಾಕ್ಸಿನೇಷನ್ ಸರ್ಟಿಫಿಕೆಟ್ ಹಾಗೂ ವ್ಯಾಕ್ಸಿನೇಷನ್ ಡ್ಯಾಶ್ ಬೋರ್ಡ್ ಈ ಮೂರು ಆಯ್ಕೆಗಳು ಅಲ್ಲಿ ನೀಡಲಾಗಿದೆ.


ವ್ಯಾಕ್ಸಿನೇಷನ್ ಇನ್ಫರ್ಮೇಷನ್ ನಲ್ಲಿ ಒತ್ತು ಮೂರು ವಿಡಿಯೋಗಳನ್ನು ನೀಡಲಾಗಿದೆ. ಇದರಲ್ಲಿ ಬಳಕೆದಾರರು ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ. AIIMS ನಿರ್ದೇಶಕ ರಣದೀಪ್ ಗುಲೇರಿಯಾ ಇದರಲ್ಲಿ ಬಳಕೆದಾರರ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಇದಲ್ಲದೆ ಅಲ್ಲಿ ನೀಡಲಾಗಿರುವ ಒಂದು ಲಿಂಕ್ ಅನ್ನು ಬಳಸಿ ಬಳಕೆದಾರರು 13 ಪುಟಗಳ ಪಿಡಿಎಫ್ ಫೈಲ್ ಅನ್ನು ಕೂಡ ಡೌನ್ಲೋಡ್ ಮಾಡಿಕೊಳ್ಳಬಹುದು.


ಇದನ್ನು ಓದಿ-Cowin Register: ಕೊರೊನಾ ಲಸಿಕೆ‌ 'Co-Win ' ರಿಜಿಸ್ಟ್ರೇಷನ್‌ʼಗೆ ಆಧಾರ್ ಕಡ್ಡಾಯವಲ್ಲ..!


ಎರಡನೇ ಆಯ್ಕೆ ವ್ಯಾಕ್ಸಿನೇಷನ್ ಸರ್ಟಿಫಿಕೆಟ್ ನಲ್ಲಿ ಕನಿಷ್ಠ ಒಂದು ವ್ಯಾಕ್ಸಿನ್ ಡೋಸ್ ಹಾಕಿಸಿಕೊಂಡವರು ತಮ್ಮ ಸರ್ಟಿಫಿಕೆಟ್ ಡೌನ್ ಲೋಡ್  ಮಾಡಿಕೊಳ್ಳಬಹುದು. ಆದರೆ ಪ್ರಕ್ರಿಯೆ ಪೂರ್ಣಗೊಳಿಸಲು ಬಳಕೆದಾರರು ತಮ್ಮ ಅಧಿಕೃತ ಮೊಬೈಲ್ ಸಂಖ್ಯೆಯನ್ನು ಬಳಸುತ್ತಿರುವುದನ್ನು ಸುನಿಶ್ಚಿತಗೊಳಿಸಬೇಕು.


ಇದನ್ನು ಓದಿ-COVID Vaccine ತೆಗೆದುಕೊಳ್ಳುವ ಬಗ್ಗೆ ಜನ ಏನೇಳುತ್ತಾರೆ ಗೊತ್ತಾ?


ಕೊನೆಯ ಆಯ್ಕೆ ವ್ಯಾಕ್ಸಿನೇಷನ್ ಡ್ಯಾಶ್ ಬೋರ್ಡ್ ನಲ್ಲಿ ಬಳಕೆದಾರರಿಗೆ ಇದುವರೆಗೆ ವ್ಯಾಕ್ಸಿನ್ ಹಾಕಿಸಿಕೊಂಡವರ ಮಾಹಿತಿ ಸಿಗಲಿದೆ. ಗುರುವಾರ ಬೆಳಗ್ಗೆ ಇದು 68 ಲಕ್ಷಕ್ಕೆ ತಲುಪಿತ್ತು. ಈ ಪುಟದಲ್ಲಿ ನಿಮಗೆ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಸಿಕೆ ಹಾಕಿಸಿಕೊಂಡವವರ ಮಾಹಿತಿ ಸಿಗಲಿದೆ.


ಇದನ್ನು ಓದಿ- Corona Vaccine ನಿಮ್ಮ ಬಳಿ ಹೇಗೆ ತಲುಪಲಿದೆ ಗೊತ್ತೇ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.