ನಿಜವಾಗುತ್ತಾ Nostradamus ಭವಿಷ್ಯವಾಣಿ? ಭೂಮಿಯತ್ತ ಧಾವಿಸುತ್ತಿದೆ ಬೃಹದಾಕಾರದ ಕ್ಷುದ್ರ ಗ್ರಹ
2021 CO247 Asteroid: ಫ್ರೆಂಚ್ ಜ್ಯೋತಿಷಿ ನಾಸ್ಟ್ರಾಡಾಮಸ್‌ನ (Nostradamus)ನ ಮತ್ತೊಂದು ಭವಿಷ್ಯವಾಣಿ ನಿಜವಾಗಲಿದೆಯಾ?
ನವದೆಹಲಿ: 2021 CO247 Asteroid - ಫ್ರೆಂಚ್ ಜ್ಯೋತಿಷಿ ನಾಸ್ಟ್ರಾಡಾಮಸ್‌ನ (Nostradamus)ನ ಮತ್ತೊಂದು ಭವಿಷ್ಯವಾಣಿ ನಿಜವಾಗಲಿದೆಯಾ? ಬಾಹ್ಯಾಕಾಶದಿಂದ ಭಾರಿ ವಿಪತ್ತೊಂದು ಭೂಮಿಯತ್ತ ವೇಗವಾಗಿ ಧಾವಿಸುತ್ತಿದೆ. ಈ ವಿಪತ್ತು ಗಾತ್ರದಲ್ಲಿ ಹೇಳಿಕೊಳ್ಳುವಷ್ಟು ಚಿಕ್ಕದಾಗಿಲ್ಲ. ಇದು ಫ್ರಾನ್ಸ್ ನ ಐಫೇಲ್ ಟವರ್ ಗಿಂತ ದೊಡ್ಡದಾಗಿದೆ. ಹೌದು, ಐಫೆಲ್ ಟವರ್‌ನಷ್ಟು ಗಾತ್ರದಲ್ಲಿ ದೊಡ್ಡದಾದ ಕ್ಷುದ್ರಗ್ರಹವೊಂದು ಭೂಮಿಯತ್ತ ವೇಗವಾಗಿ ಚಲಿಸುತ್ತದೆ.
2021 CO247 ಹೆಸರಿನ ಈ ದೈತ್ಯಾಕಾರದ ಕ್ಷುದ್ರಗ್ರಹ ಐಫೇಲ್ ಟವರ್ ಗಾತ್ರದ 0.83 ರಷ್ಟಿದೆ ಹಾಗೂ ಭೂಮಿಯಿಂದ ಇದು ಸುಮಾರು 7.4 ಮಿಲಿಯನ್ ಕಿ.ಮೀ ದೂರದಿಂದ ಹಾಯ್ದುಹೋಗಲಿದೆ. ಇದಕ್ಕೂ ಮೊದಲು ಜನವರಿ 3 ರಂದು 220 ಮೀಟರ್ ಉದ್ದದ ಗೋಲ್ಡನ್ ಗೇಟ್ ಬ್ರಿಡ್ಜ್ ಗಾತ್ರದ ಕ್ಷುದ್ರಗ್ರಹ ಭೂಮಿಯಿಂದ 6.9 ಮಿಲಿಯನ್ ಕಿ.ಮೀ ದೂರದಿಂದ ಹಾಯ್ದುಹೋಗಿತ್ತು.
ಇದನ್ನು ಓದಿ- Burj Khalifa ಗಾತ್ರದ ಈ Asteroid ಭೂಮಿಗೆ ಡಿಕ್ಕಿ ಹೊಡೆಯಲಿದೆಯೇ? ಇಲ್ಲಿದೆ ವಿವರ
ಈ ಕುರಿತು ಹೇಳಿಕೆ ನೀಡಿರುವ NASA ವಿಜ್ಞಾನಿಗಳು, 2021AC ಹೆಅರಿನ ಒಂದು ಕ್ಷುದ್ರಗ್ರಹ ಬುಧವಾರ ಭೂಮಿಯ ಕಕ್ಷೆಯಲ್ಲಿ ಬರಲಿದೆ ಎಂದಿದ್ದಾರೆ. ಇದು ಗಾತ್ರದಲ್ಲಿ ಗೀಜಾದ ಗ್ರೇಟ್ ಪಿರಾಮಿಡ್ ಗಿಂತ ಎರಡುಪಟ್ಟು ದೊಡ್ಡದಾಗಿದೆ ಹಾಗೂ ಇದು ಭೂಮಿಯಿಂದ 3.5 ಮಿಲಿಯನ್ ಕಿ.ಮೀ ಅಂತರದಿಂದ ಹಾದುಹೋಗಲಿದೆ.
ಇದನ್ನು ಓದಿ- Alert: ಭೂಮಿಯೆಡೆಗೆ ವೇಗವಾಗಿ ಧಾವಿಸುತ್ತಿದೆ ಬೋಯಿಂಗ್-737 ನಷ್ಟು ದೊಡ್ಡ ಗಾತ್ರದ ಅಸ್ಟ್ರಾಯಿಡ್
3 NEO ಗಳು ಕೂಡ ಸರದಿಯಲ್ಲಿವೆ
ಜನವರಿಯ ಈ ಆರಂಭಿಕ ಟ್ರೆಂಡ್ ಗಳು ಮುಂದುವರೆಯಲಿದ್ದು, ಮತ್ತೆ ಮೂರು ನಿಯರ್ ಅರ್ಥ ಆಬ್ಜೆಕ್ಟಿವ್ (NEO)ಗಳು ಭೂಮಿಯತ್ತ ಬರಲಿವೆ. ಇದರಲ್ಲಿ 15 ಮೆತರ್ ಉದ್ದದ 2019 YB4 ಕ್ಷುದ್ರಗ್ರಹ ಭೂಮಿಯಿಂದ 6.4 ಮಿಲಿಯನ್ ಸುರಕ್ಷಿತ ಅಂತರದಿಂದ ಹಾದುಹೋಗಲಿದೆ. ಇದಾದ ಬಳಿಕ ಮತ್ತೊಂದು 15 ಮೀಟರ್ ಉದ್ದದ 2020 YA1 ಕ್ಷುದ್ರಗ್ರಹ 1.5 ಮಿಲಿಯನ್ ಕಿ.ಮೀ ಹಾಗೂ 21 ಮೀಟರ್ ಉದ್ದದ 2020 YP4 ಕ್ಷುದ್ರಗ್ರಹಗಳು ಮಾರನೆಯ ದಿನ ಸುಮಾರು 2.1 ಮಿಲಿಯನ್ ಕಿ.ಮೀ ಅಂತರದಿಂದ ಹಾಯ್ದುಹೋಗಲಿವೆ .
ಇದನ್ನು ಓದಿ- ಮಂಗಳನ ಅಂಗಳದಲ್ಲಿ ಮಾನವನ ಅಸ್ತಿತ್ವ ಹುಡುಕಾಟಕ್ಕೆ ಕೌಂಟ್ ಡೌನ್ ಆರಂಭ, NASAದಿಂದ ಸಿದ್ಧತೆ
ವಿಶ್ವ ವಿಖ್ಯಾತ ಜ್ಯೋತಿಷಿ ನಾಸ್ಟ್ರಾಡೆಮಸ್ ಒಟ್ಟು 6,338 ಭವಿಷ್ಯವಾಣಿಗಳನ್ನು ಮಾಡಿದ್ದರೆ. ಅವುಗಳಲ್ಲಿ ಇದುವರೆಗೆ ಸುಮಾರು 3797 ಭವಿಷ್ಯವಾಣಿಗಳು ನಿಜ ಎಂದು ಸಾಬೀತಾಗಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.