Burj Khalifa ಗಾತ್ರದ ಈ Asteroid ಭೂಮಿಗೆ ಡಿಕ್ಕಿ ಹೊಡೆಯಲಿದೆಯೇ? ಇಲ್ಲಿದೆ ವಿವರ

ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ನೀಡಿರುವ ಮಾಹಿತಿ ಪ್ರಕಾರ ಗಾತ್ರದಲ್ಲಿ ಬುರ್ಜ್ ಖಲೀಫಾದಷ್ಟು ದೊಡ್ಡದಾದ ಉಲ್ಕಾಶಿಲೆಯೊಂದು  ಇಂದು ( ಅಂದರೆ ನವೆಂಬರ್ 29) ರಾತ್ರಿ ಭೂಮಿಯ  ಹತ್ತಿರದಿಂದ ಹಾದುಹೋಗಲಿದೆ ಮತ್ತು ಅದರ ವೇಗವು ಕ್ಷಿಪಣಿಗಿಂತ ಹಲವು ಪಟ್ಟು ಹೆಚ್ಚಾಗಿದೆ ಎನ್ನಲಾಗಿದೆ.

Last Updated : Nov 29, 2020, 11:21 AM IST
  • ದೈತ್ಯಾಕಾರದ ಕ್ಷುದ್ರಗ್ರಹವೊಂದು ಭೂಮಿಯತ್ತ ವೇಗವಾಗಿ ಧಾವಿಸುತ್ತಿದೆ.
  • ಈ ಕ್ಷುದ್ರಗ್ರಹ ಗಂಟೆಗೆ 92 ಸಾವಿರ ಕಿ.ಮೀ.ಗಿಂತ ಹೆಚ್ಚನ ವೇಗ ಹೊಂದಿದೆ.
  • NASA ವಿಜ್ಞಾನಿಗಳು ಈ ಕ್ಷುದ್ರಗ್ರಹದ ಮೇಲೆ ತನ್ನ ಗಮನ ಕೇಂದ್ರೀಕರಿಸಿದ್ದಾರೆ.
Burj Khalifa ಗಾತ್ರದ ಈ Asteroid ಭೂಮಿಗೆ ಡಿಕ್ಕಿ ಹೊಡೆಯಲಿದೆಯೇ? ಇಲ್ಲಿದೆ ವಿವರ title=

ವಾಷಿಂಗ್ಟನ್: ದೈತ್ಯಾಕಾರದ ಕ್ಷುದ್ರಗ್ರಹ (Asteroid) ಭೂಮಿಯ ಕಡೆಗೆ ವೇಗವಾಗಿ ಚಲಿಸುತ್ತಿದೆ, ಇದು ವಿಶ್ವದ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾಗೆ ಸಮಾನವಾಗಿರುತ್ತದೆ. ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ (NASA)ನೀಡಿರುವ ಮಾಹಿತಿ ಪ್ರಕಾರ ಗಾತ್ರದಲ್ಲಿ ಬುರ್ಜ್ ಖಲೀಫಾದಷ್ಟು ದೊಡ್ಡದಾಗಿರುವ ಉಲ್ಕಾಶಿಲೆಯೊಂದು  ಇಂದು ( ಅಂದರೆ ನವೆಂಬರ್ 29) ರಾತ್ರಿ ಭೂಮಿಯ  ಹತ್ತಿರದಿಂದ ಹಾದುಹೋಗಲಿದೆ ಮತ್ತು ಅದರ ವೇಗವು ಕ್ಷಿಪಣಿಗಿಂತ ಹಲವು ಪಟ್ಟು ಹೆಚ್ಚಾಗಿದೆ ಎನ್ನಲಾಗಿದೆ.

ಇದನ್ನು ಓದಿ- Blackhole ಹತ್ತಿರಕ್ಕೆ ತಲುಪಿದ Earth, ನಮ್ಮ ಮೇಲೆ ಅಪಾಯ ಎಷ್ಟು? ಸಂಶೋಧಕರು ಹೇಳಿದ್ದೇನು?

92 ಸಾವಿರ ಕಿ.ಮೀ/ಗಂಟೆ ಸ್ಪೀಡ್
ನಾಸಾ ಪ್ರಕಾರ, ಈ ಕ್ಷುದ್ರಗ್ರಹಕ್ಕೆ 153201 2000 WO107 ಎಂದು ಹೆಸರಿಸಲಾಗಿದೆ ಮತ್ತು ಇದು ನವೆಂಬರ್ 29 ರ ರಾತ್ರಿ ಭೂಮಿಯಿಂದ ಕೆಲವು ಸಾವಿರ ಕಿಲೋಮೀಟರ್ ಅಂತರದಿಂದ ಹಾದುಹೋಗುತ್ತದೆ. ಈ ಸಮಯದಲ್ಲಿ, ಇದರ ವೇಗ ಗಂಟೆಗೆ 56 ಸಾವಿರ ಮೈಲುಗಳು, ಅಂದರೆ ಗಂಟೆಗೆ 92 ಸಾವಿರ ಕಿಲೋಮೀಟರ್ ಗಳಷ್ಟು ಇರಲಿದೆ. ನಾಸಾ ವಿಜ್ಞಾನಿಗಳು ಈ ಉಲ್ಕಾಶಿಲೆ (Asteroid) ಮೇಲೆ  ದೀರ್ಘಕಾಲದಿಂದ ನಿಗಾ ವಹಿಸುತ್ತಿದ್ದಾರೆ.

ಇದನ್ನು ಓದಿ- ಬಾಹ್ಯಾಕಾಶದಲ್ಲಿ ಭಾರತೀಯ, ರಷ್ಯಾ ಉಪಗ್ರಹಗಳು ಮುಖಾಮುಖಿ, ದೊಡ್ಡ ಅನಾಹುತ ತಪ್ಪಿದ್ದೇಗೆ?

ಭೂಮಿಗೆ ಇದರಿಂದ ಯಾವ ರೀತಿಯ ಅಪಾಯ?
ವರದಿಗಳ  ಪ್ರಕಾರ, ಈ ಉಲ್ಕಾಶಿಲೆ ಭೂಮಿಗೆ ಅಪ್ಪಳಿಸುವ ಸಾಧ್ಯತೆಯಿಲ್ಲ ಮತ್ತು ಅದು ಭೂಮಿಯಿಂದ ಸುಮಾರು 43 ಲಕ್ಷ ಕಿಲೋಮೀಟರ್ ಅಂತರದಿಂದ ಹಾದುಹೋಗಲಿದೆ. ಈ ಖಗೋಲಿಯ ಘಟನೆ ನವೆಂಬರ್ 29 ರಂದು ಮಧ್ಯಾಹ್ನ 1:08 ಕ್ಕೆ ನಡೆಯಲಿದೆ. ಈ ಉಲ್ಕೆಯ ಅಗಲ 500 ಮೀಟರ್‌ಗಿಂತ ಹೆಚ್ಚು ಮತ್ತು ಉದ್ದ 800 ಮೀಟರ್‌ಗಳಿಗಿಂತ ಹೆಚ್ಚಾಗಿದೆ. ದುಬೈನ ಬುರ್ಜ್ ಖಲೀಫಾ (Burj Khalifa) ಎತ್ತರ 830 ಮೀಟರ್ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ-ಬಾಹ್ಯಾಕಾಶದಲ್ಲಿ ಭಾರತೀಯ, ರಷ್ಯಾ ಉಪಗ್ರಹಗಳು ಮುಖಾಮುಖಿ, ದೊಡ್ಡ ಅನಾಹುತ ತಪ್ಪಿದ್ದೇಗೆ?

ಒಂದು ಮಿಸೈಲ್ ಗಿಂತ ಹಲವು ಪಟ್ಟು ಹೆಚ್ಚು ಇದರ ಸ್ಪೀಡ್
153201 2000 WO107 ಹೆಸರಿನ ಈ ಕ್ಷುದ್ರಗ್ರಹದ ವೇಗ ಕ್ಷಿಪಣಿಗಿಂತ ಹಲವು ಪಟ್ಟು ಹೆಚ್ಚಾಗಿದೆ. ಕ್ಷಿಪಣಿಯ ಸರಾಸರಿ ವೇಗ ಗಂಟೆಗೆ 4000-5000 ಕಿಲೋಮೀಟರ್‌ಗಳಷ್ಟಿದ್ದರೆ, ಈ ಉಲ್ಕೆಯ ವೇಗವು ಗಂಟೆಗೆ ಸುಮಾರು 92 ಸಾವಿರ ಕಿಲೋಮೀಟರ್‌ಗಳಿಗಿಂತ ಹೆಚ್ಚಾಗಿದೆ.

Trending News