ಸಿನಿಮಾ ಹಾಲ್ ನ ಅನುಭವ ನೀಡುವ ಟಿವಿ ! Acer ಬಿಡುಗಡೆ ಮಾಡಿದೆ 75 ಇಂಚಿನ Google TV
New Google TV Launch :ಇಂಡಿಕಲ್ ತನ್ನ ಹೊಸ ಹೊಸ ಏಸರ್ ಬ್ರ್ಯಾಂಡ್ ಸರಣಿ ಟಿವಿಗಳನ್ನು ಬಿಡುಆಂಡ್ರಾಯ್ಡ್ 14 ಆಧಾರಿತ ಗೂಗಲ್ ಟಿವಿಗಡೆ ಮಾಡಿದೆ. ಈ ಟಿವಿಯ ವಿಶೇಷಣ ಮತ್ತು ಬೆಲೆ ಎಷ್ಟಿದೆ ನೋಡೋಣ.
New Google TV Launch : Indkal Technologies ಏಸರ್ ಬ್ರಾಂಡ್ ಅಡಿಯಲ್ಲಿ ಸೂಪರ್ ಸೀರೀಸ್ ಟಿವಿ ಮಾದರಿಗಳನ್ನು ಬಿಡುಗಡೆ ಮಾಡಿದೆ.ಇದರೊಂದಿಗೆ ಕಂಪನಿಯು ಆಂಡ್ರಾಯ್ಡ್ 14 ಆಧಾರಿತ ಗೂಗಲ್ ಟಿವಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ ಮೊದಲ ಕಂಪನಿಯಾಗಿದೆ.ಇದಲ್ಲದೆ,ಇಂಡಿಕಲ್ ತನ್ನ ಹೊಸ ಏಸರ್ ಬ್ರ್ಯಾಂಡ್ M ಸರಣಿ ಮತ್ತು L ಸರಣಿ ಟಿವಿಗಳನ್ನು ಪರಿಚಯಿಸಿದೆ.
ಏಸರ್ ಸೂಪರ್,ಎಲ್ ಮತ್ತು ಎಂ ಸರಣಿ ಟಿವಿಗಳು:
ಸೂಪರ್ ಸಿರೀಸ್‌ನ ಬೆಲೆ 32,999 ರೂ.ನಿಂದ ಪ್ರಾರಂಭವಾಗುತ್ತದೆ.M ಸರಣಿಯ ಆರಂಭಿಕ ಬೆಲೆ 89,999 ರೂ. ಆಗಿದ್ದರೆ, L ಸರಣಿಯ ಆರಂಭಿಕ ಬೆಲೆ 14,999 ರೂ. ಆಗಿದೆ.
ಇದನ್ನೂ ಓದಿ : ರಾತ್ರಿ ವೇಳೆ ಪುರುಷರು ಗೂಗಲ್ʼನಲ್ಲಿ ಅತಿ ಹೆಚ್ಚು ಸರ್ಚ್ ಮಾಡುವುದು ಈ ವಿಷಯವನ್ನಂತೆ!
ಈ ಟಿವಿಯ ವಿಶೇಷಣಗಳು :
ಈ ಹೊಸ ಟಿವಿಗಳು ಅತ್ಯಂತ ವಿಶೇಷವಾದವು ಏಕೆಂದರೆ ಅವುಗಳು ಆಂಡ್ರಾಯ್ಡ್ 14 ಆಧಾರಿತ ಗೂಗಲ್ ಟಿವಿಯನ್ನು ಹೊಂದಿರುವ ಮೊದಲ ಟಿವಿಗಳಾಗಿವೆ.ಸೂಪರ್ ಸೀರೀಸ್ ಟಿವಿಯು ಉತ್ತಮ ಗುಣಮಟ್ಟದ ಅಲ್ಟ್ರಾ-ಕ್ಯೂಎಲ್‌ಇಡಿ ಪರದೆಯನ್ನು ಹೊಂದಿದ್ದು ಅದು ಡಾಲ್ಬಿ ವಿಷನ್, MEMC, ಸೂಪರ್ ಬ್ರೈಟ್‌ನೆಸ್, WCG+, HDR10+ ಮತ್ತು ಇತರ ಹಲವು ವೈಶಿಷ್ಟ್ಯಗಳನ್ನು ಸಪೋರ್ಟ್ ಮಾಡುತ್ತದೆ. ALM ಮತ್ತು VRR 120Hz ಅನ್ನು ಬೆಂಬಲಿಸುವ ಕಾರಣ ಈ ಟಿವಿಗಳಲ್ಲಿನ ಚಿತ್ರದ ಗುಣಮಟ್ಟವು ತುಂಬಾ ಉತ್ತಮವಾಗಿದೆ.ಆದ್ದರಿಂದ,ಈ ಟಿವಿ ಗೇಮರ್ ಗಳಿಗೆ ತುಂಬಾ ಒಳ್ಳೆಯದು.ಸೂಪರ್ ಸಿರೀಸ್‌ನ ಮತ್ತೊಂದು ವಿಶೇಷವೆಂದರೆ ಇದು 80 ವ್ಯಾಟ್‌ಗಳ ಉತ್ತಮ ಧ್ವನಿ ವ್ಯವಸ್ಥೆಯನ್ನು ಹೊಂದಿದೆ.
ಏಸರ್ ಬ್ರಾಂಡ್‌ನ M ಸರಣಿಯ ಟಿವಿಗಳು ಗಾತ್ರದಲ್ಲಿ ದೊಡ್ಡದಾಗಿದ್ದು, ಮಿನಿ LED ಯೊಂದಿಗೆ QLED ಡಿಸ್ಪ್ಲೇಯನ್ನು ಹೊಂದಿವೆ.ಈ ಮಾದರಿಗಳು 65 ಇಂಚು ಮತ್ತು 75 ಇಂಚಿನ ಗಾತ್ರದಲ್ಲಿ ಲಭ್ಯವಿದೆ.ಎರಡೂ ಮಾದರಿಗಳು 1400 ನಿಟ್‌ಗಳ ಗರಿಷ್ಠ ಹೊಳಪು, 144 Hz ನ ರಿಫ್ರೆಶ್ ದರ ಮತ್ತು ಹಿಂಭಾಗದಲ್ಲಿ ವೂಫರ್‌ನೊಂದಿಗೆ 2.1 ಚಾನಲ್ 60-ವ್ಯಾಟ್ ಸ್ಪೀಕರ್‌ಗಳನ್ನು ಹೊಂದಿವೆ.
ಇದನ್ನೂ ಓದಿ : Reliance Jio: ಗ್ರಾಹಕರಿಗಾಗಿ '4' ಪೈಸಾ ವಸೂಲ್ ಯೋಜನೆಗಳನ್ನು ಪರಿಚಯಿಸಿದ ಮುಖೇಶ್ ಅಂಬಾನಿ
ಹೊಸ L ಸರಣಿಯು ಸುತ್ತಲೂ ಫ್ರೇಮ್‌ಲೆಸ್ ವಿನ್ಯಾಸವನ್ನು ಹೊಂದಿದೆ. L ಸರಣಿಯ ಟಿವಿಗಳು 32 ಇಂಚುಗಳಿಂದ (HD ಡಿಸ್ಪ್ಲೇಯೊಂದಿಗೆ)65 ಇಂಚುಗಳವರೆಗಿನ (4K-UHD ರೆಸಲ್ಯೂಶನ್ನೊಂದಿಗೆ) ಗಾತ್ರದಲ್ಲಿ ಬರುತ್ತವೆ.ಎಂ ಮತ್ತು ಎಲ್ ಸರಣಿಗಳೆರಡೂ ಆಂಡ್ರಾಯ್ಡ್ 14 ಮತ್ತು ಎಐ-ಶಕ್ತಗೊಂಡ ಡ್ಯುಯಲ್-ಪ್ರೊಸೆಸರ್ ಎಂಜಿನ್ ಆಧಾರಿತ ಗೂಗಲ್ ಟಿವಿಯನ್ನು ಹೊಂದಿವೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.