Advanced BT Calling Smartwatch : ಮುಂಚೂಣಿಯಲ್ಲಿರುವ ಸ್ಮಾರ್ಟ್ ವಾಚ್ ತಯಾರಿಕಾ ಕಂಪನಿ ಪೆಬಲ್ ಅತ್ಯಂತ ಕಡಿಮೆ ಬೆಲೆಗೆ ಮತ್ತೊಂದು ವಾಚ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಗಡಿಯಾರವು ಆಪಲ್ ವಾಚ್ ಆಕಾರದಲ್ಲಿದೆ ಮತ್ತು ಅತ್ಯುತ್ತಮ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಪೆಬಲ್ ಕಂಪನಿಗೆ ಸೇರಿದ ಈ ವಾಚ್ ಗೆ ಫ್ರಾಸ್ಟ್ ಸ್ಮಾರ್ಟ್ ವಾಚ್ ಎಂದು ಕಂಪನಿ ಹೆಸರಿಸಿದೆ. ತಾಂತ್ರಿಕವಾಗಿ ಸಾಕಷ್ಟು ಅಪ್‌ಡೇಟ್‌ಗಳೊಂದಿಗೆ ಬಂದಿದೆ. ಬಳಕೆದಾರರು ಇಷ್ಟಪಡುವ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ.  


COMMERCIAL BREAK
SCROLL TO CONTINUE READING

ಇದನ್ನೂ ಓದಿ : Flipkart Deal: iPhone 13ನಲ್ಲಿ ಬಂಪರ್ ಡಿಸ್ಕೌಂಟ್


ಬ್ಲೂಟೂತ್ ಕಾಲಿಂಗ್ : ಈಗ ಅನೇಕರು ಕಡಿಮೆ ಬೆಲೆಗೆ ಹೆಚ್ಚು ವೈಶಿಷ್ಟ್ಯತೆಗಳಿರುವ ಸ್ಮಾರ್ಟ್ ವಾಚ್ ಗಳನ್ನು ಖರೀದಿಸುತ್ತಿದ್ದಾರೆ. ಅದರಲ್ಲೂ ಅವುಗಳನ್ನು ಖರೀದಿಸುವಾಗ ಮೊದಲು ಪರಿಶೀಲಿಸುವುದು ಬ್ಲೂಟೂತ್ ಕಾಲಿಂಗ್ ಇದೆಯೋ ಇಲ್ಲವೋ ಎಂಬುದನ್ನು. ಡ್ರೈವಿಂಗ್‌ ಮಾಡುವಾಗ ಅನೇಕ ಜನರು ತಮ್ಮ ಸ್ಮಾರ್ಟ್ ವಾಚ್‌ನಲ್ಲಿ ಬ್ಲೂಟೂತ್ ಕರೆ ಮಾಡುವ ಆಯ್ಕೆಯನ್ನು ಬಳಸುತ್ತಾರೆ. ಹಾಗಾಗಿ ಪ್ರತಿಯೊಬ್ಬರೂ ತಾವು ಖರೀದಿಸುವ ವಾಚ್‌ನಲ್ಲಿ ಬ್ಲೂಟೂತ್ ಕರೆ ಮಾಡುವ ಆಯ್ಕೆ ಇದೆಯೇ ಅಥವಾ ಇಲ್ಲವೇ ಎಂದು ಹತ್ತು ಬಾರಿ ಪರಿಶೀಲಿಸುತ್ತಿದ್ದಾರೆ. ಪೆಬಲ್ ಕಂಪನಿಯ ವಾಚ್‌ನಲ್ಲಿಯೂ ಈ ಆಯ್ಕೆ ಇದೆ.


ಅತಿ ಕಡಿಮೆ ಬೆಲೆ : ಇದು ಆಪಲ್ ವಾಚ್ ಅನ್ನು ಹೋಲುತ್ತದೆ. 1.87 ಇಂಚಿನ LCD ಸ್ಕ್ರೀನ್ ಲಭ್ಯವಿದೆ. ಇದು ಇತ್ತೀಚಿನ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುತ್ತದೆ. ಪ್ರಸ್ತುತ, ಭಾರತದಲ್ಲಿ ಪೆಬಲ್ ಫ್ರಾಸ್ಟ್ ಸ್ಮಾರ್ಟ್ ವಾಚ್ ಬೆಲೆ 1,999 ರೂಪಾಯಿ. ನೀವು ಇದನ್ನು ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಿದರೆ, ಬ್ಯಾಂಕ್ ಆಫರ್‌ಗಳಲ್ಲಿ ನೀವು ಅದನ್ನು ಕಡಿಮೆ ಬೆಲೆಗೆ ಪಡೆಯುತ್ತೀರಿ. ಪ್ರಸ್ತುತ, ಇದು ಈ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಬೆಲೆಯ ವಿಷಯದಲ್ಲಿ ವಾಚ್ boAt, Noise, Fire Bolt ಸ್ಮಾರ್ಟ್‌ವಾಚ್‌ಗಳೊಂದಿಗೆ ಸ್ಪರ್ಧಿಸುತ್ತದೆ.


ಇದನ್ನೂ ಓದಿ : ಕೇವಲ 174 ರೂ.ಗೆ ಮನೆಗೆ ತನ್ನಿ 15 ಲೀಟರ್ ಗೀಸರ್ .! ಮುಗಿ ಬಿದ್ದು ಖರೀದಿಸುತ್ತಿದ್ದಾರೆ ಗ್ರಾಹಕರು


ಪೆಬ್ಬಲ್ ಫ್ರಾಸ್ಟ್ ಸ್ಮಾರ್ಟ್ ವಾಚ್ ವಿಶೇಷತೆಗಳು: ಈ ವಾಚ್ ಹಲವಾರು ಅಂತರ್ನಿರ್ಮಿತ ಫಿಟ್‌ನೆಸ್ ಮತ್ತು ಹೆಲ್ತ್‌ ಟ್ರ್ಯಾಕಿಂಗ್ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ವಾಚ್‌ನಲ್ಲಿ ಹೃದಯ ಬಡಿತ,  ಬ್ಲಡ್‌ ಆಕ್ಸಿಜನ್‌, ನಿದ್ರೆಯ ಟ್ರ್ಯಾಕಿಂಗ್ ಲಭ್ಯವಿದೆ. ವಾಚ್ IP67 ರೇಟೆಡ್ ವಾಟರ್ ರೆಸಿಸ್ಟೆಂಟ್‌ನೊಂದಿಗೆ ಲಭ್ಯವಿದೆ. ಈ ಗಡಿಯಾರದಿಂದ ನಿಮ್ಮ ಮೊಬೈಲ್ ಕ್ಯಾಮರಾ ಮತ್ತು ಸಂಗೀತವನ್ನು ನೀವು ನಿಯಂತ್ರಿಸಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.