ಬೆಂಗಳೂರು : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2023-2024 ನೇ ಸಾಲಿನ ಬಜೆಟ್ ಅನ್ನು ಮಂಡಿಸಿದ್ದಾರೆ. ಆಟೋಮೊಬೈಲ್ ಕ್ಷೇತ್ರಕ್ಕೆ ಸಂಬಂಧಿಸಿದ ಘೋಷಣೆ ಕಾರು ಗ್ರಾಹಕರನ್ನು ಬೆಚ್ಚಿಬೀಳಿಸಬಹುದು. ಸಂಪೂರ್ಣವಾಗಿ ಸಿದ್ಧ ಸ್ಥಿತಿಯಲ್ಲಿ ಆಮದು ಮಾಡಿಕೊಳ್ಳುವ ಕಾರುಗಳ ಮೇಲಿನ ಆಮದು ಸುಂಕವನ್ನು (ಕಸ್ಟಮ್ ಡ್ಯೂಟಿ) ಹೆಚ್ಚಿಸುವ ಬಗ್ಗೆ ಬಜೆಟ್‌ನಲ್ಲಿ ಹೇಳಲಾಗಿದೆ. ಈ ಶುಲ್ಕ ಎಲೆಕ್ಟ್ರಿಕ್ ವಾಹನಗಳಿಗೂ ಅನ್ವಯಿಸುತ್ತದೆ. 


COMMERCIAL BREAK
SCROLL TO CONTINUE READING

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಸಂಸತ್ತಿನಲ್ಲಿ ಬಜೆಟ್ ಮಂಡಿಸುವಾಗ ಈ ಘೋಷಣೆ ಮಾಡಿದ್ದಾರೆ. ಅದರಂತೆ, 40,000 ಡಾಲರ್‌ಗಿಂತ ಕಡಿಮೆ ಬೆಲೆಯ CBU ವಾಹನಗಳ ಮೇಲಿನ ಆಮದು ಸುಂಕವನ್ನು 60 ರಿಂದ 70 ಪ್ರತಿಶತಕ್ಕೆ ಹೆಚ್ಚಿಸಲಾಗುತ್ತದೆ. 3,000 ಸಿಸಿಗಿಂತ ಕಡಿಮೆ ಎಂಜಿನ್ ಸಾಮರ್ಥ್ಯದ ಪೆಟ್ರೋಲ್ ಚಾಲಿತ ವಾಹನಗಳು ಮತ್ತು 2,500 ಸಿಸಿಗಿಂತ ಕಡಿಮೆ ಎಂಜಿನ್ ಸಾಮರ್ಥ್ಯದ ಡೀಸೆಲ್ ಚಾಲಿತ ವಾಹನಗಳಿಗೂ ಈ ತೆರಿಗೆ ಅನ್ವಯಿಸುತ್ತದೆ.


ಇದನ್ನೂ ಓದಿ : ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಹೊಸ ಪವರ್‌ಬ್ಯಾಂಕ್


ಅದೇ ರೀತಿ ವಿದೇಶದಲ್ಲಿ ತಯಾರಾಗುವ ಎಲೆಕ್ಟ್ರಿಕ್ ವಾಹನಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ.60ರಿಂದ ಶೇ.70ಕ್ಕೆ ಹೆಚ್ಚಿಸಲಾಗಿದೆ. ವಿದೇಶದಿಂದ ಆಮದು ಮಾಡಿಕೊಳ್ಳುವ ವಾಹನಗಳ ಮೇಲಿನ ಸುಂಕವನ್ನು ಶೇ.30ರಿಂದ ಶೇ.35ಕ್ಕೆ ಹೆಚ್ಚಿಸಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.


40,000 ಕಡಾಲರ್ ಗಿಂತ ಹೆಚ್ಚು ಮೌಲ್ಯದ ಸಂಪೂರ್ಣ ನಿರ್ಮಿಸಿದ ಕಾರುಗಳ ಆಮದಿನ ಮೇಲೆ ಈಗಾಗಲೇ 100 ಪ್ರತಿಶತ ಸುಂಕವನ್ನು ನೀಡಬೇಕಾಗುತ್ತದೆ. ಈ ಸುಂಕ ದರವು 3,000 ಸಿಸಿಗಿಂತ ಹೆಚ್ಚಿನ ಸಾಮರ್ಥ್ಯದ ಪೆಟ್ರೋಲ್ ವಾಹನಗಳು ಮತ್ತು 2,500 ಸಿಸಿಗಿಂತ ಹೆಚ್ಚಿನ ಸಾಮರ್ಥ್ಯದ ಡೀಸೆಲ್ ವಾಹನಗಳಿಗೂ ಅನ್ವಯಿಸುತ್ತದೆ. ಆದರೆ ರೇಟಿಂಗ್ ಏಜೆನ್ಸಿ ಐಸಿಆರ್‌ಎಯ ಹಿರಿಯ ಉಪಾಧ್ಯಕ್ಷ ಶಂಶೇರ್ ದಿವಾನ್ ಪ್ರಕಾರ ಈ ಆಮದು ಸುಂಕ ಹೆಚ್ಚಳವು ದೇಶೀಯ ಕಾರು ತಯಾರಿಕೆಗೆ ಮತ್ತಷ್ಟು ಉತ್ತೇಜನ ನೀಡಲಿದೆ. ಹೆಚ್ಚಿನ ಐಷಾರಾಮಿ ಕಾರುಗಳು ಈಗ ದೇಶದಲ್ಲಿಯೇ ತಯಾರಾಗುತ್ತಿರುವುದರಿಂದ ಈ ಬದಲಾವಣೆಯು ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆಯಿಲ್ಲ. 


ಇದನ್ನೂ ಓದಿ : ಮಾರುಕಟ್ಟೆಗೆ ಕಾಲಿಡುತ್ತಿದೆ ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ! ಬೆಲೆ ಕೂಡಾ ಇಷ್ಟೇ


ಒಟ್ಟಿನಲ್ಲಿ ವಿದೇಶದಿಂದ ಬರುವ ಐಷಾರಾಮಿ ಕಾರುಗಳು ಈಗ ದುಬಾರಿಯಾಗಲಿವೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.