ಈ ಐದು ಆಪ್ ಗಳು ನಿಮ್ಮ ಮೊಬೈಲ್ ನಲ್ಲಿದ್ದರೆ ತಕ್ಷಣ ಡಿಲೀಟ್ ಮಾಡಿ.! ಇಲ್ಲವಾದರೆ ಖಾಲಿಯಾವುದು ಖಾತೆ

ಇವುಗಳನ್ನು ಫೋನ್‌ನಲ್ಲಿ ಇನ್‌ಸ್ಟಾಲ್ ಮಾಡಿದ ತಕ್ಷಣ, ಹ್ಯಾಕರ್‌ಗಳು ಫೋನ್ ಅನ್ನು  ಹ್ಯಾಕ್ ಮಾಡಿ ಬಿಡುತ್ತಾರೆ. ಒಮ್ಮೆ ಫೋನ್ ಹ್ಯಾಕ್ ಆಯಿತು ಎಂದರೆ ಬ್ಯಾಂಕ್ ಖಾತೆ ಖಾಲಿಯಾಗುವುದು ಕೂಡಾ ಗ್ಯಾರಂಟಿ. 

Written by - Ranjitha R K | Last Updated : Jan 31, 2023, 12:13 PM IST
  • ಇದೀಗ ಸ್ಮಾರ್ಟ್ ಫೋನ್ ಗಳದ್ದೇ ಕಾರುಬಾರು.
  • ಹೆಚ್ಚಿನ ಜನರು ಆಂಡ್ರಾಯ್ಡ್ ಫೋನ್ ಬಳಸುತ್ತಾರೆ.
  • ಅಪ್ಲಿಕೇಶನ್ ಪೈಕಿ ಅನೇಕವು ಸಾಕಷ್ಟು ಅಪಾಯಕಾರಿಯಾಗಿರುತ್ತದೆ.
ಈ ಐದು ಆಪ್ ಗಳು ನಿಮ್ಮ ಮೊಬೈಲ್ ನಲ್ಲಿದ್ದರೆ ತಕ್ಷಣ ಡಿಲೀಟ್ ಮಾಡಿ.! ಇಲ್ಲವಾದರೆ ಖಾಲಿಯಾವುದು ಖಾತೆ  title=

ನವದೆಹಲಿ : ಇದೀಗ ಸ್ಮಾರ್ಟ್ ಫೋನ್ ಗಳದ್ದೇ ಕಾರುಬಾರು. ಹೆಚ್ಚಿನ ಜನರು ಆಂಡ್ರಾಯ್ಡ್ ಫೋನ್ ಬಳಸುತ್ತಾರೆ. ಸ್ಮಾರ್ಟ್ ಫೋನ್ ಬಳಸುವವರು ಗೂಗಲ್ ಪ್ಲೇ ಸ್ಟೋರ್‌ಗಳಿಂದ ಆಪ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳುತ್ತಾರೆ. ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳು, ಪೇಮೆಂಟ್ ಅಪ್ಲಿಕೇಶನ್‌ಗಳು,   ಎಡಿಟಿಂಗ್ ಅಪ್ಲಿಕೇಶನ್‌ಗಳು ಹೀಗೆ ನಾನಾ ಬಗೆಯ ಆಪ್ ಗಳು ಲಭ್ಯವಿರುತ್ತವೆ. ಆದರೆ, ಈ ಅಪ್ಲಿಕೇಶನ್ ಪೈಕಿ ಅನೇಕವು ಸಾಕಷ್ಟು ಅಪಾಯಕಾರಿಯಾಗಿರುತ್ತದೆ.  ಇವುಗಳನ್ನು ಫೋನ್‌ನಲ್ಲಿ ಇನ್‌ಸ್ಟಾಲ್ ಮಾಡಿದ ತಕ್ಷಣ, ಹ್ಯಾಕರ್‌ಗಳು ಫೋನ್ ಅನ್ನು  ಹ್ಯಾಕ್ ಮಾಡಿ ಬಿಡುತ್ತಾರೆ. ಒಮ್ಮೆ ಫೋನ್ ಹ್ಯಾಕ್ ಆಯಿತು ಎಂದರೆ ಬ್ಯಾಂಕ್ ಖಾತೆ ಖಾಲಿಯಾಗುವುದು ಕೂಡಾ ಗ್ಯಾರಂಟಿ. 

5 ಅತ್ಯಂತ ಅಪಾಯಕಾರಿ ಆಪ್‌ಗಳು :
ವರದಿಯ ಪ್ರಕಾರ, ಅತ್ಯಂತ ಅಪಾಯಕಾರಿ 5 ಅಪ್ಲಿಕೇಶನ್‌ಗಳನ್ನು ಪತ್ತೆ ಹಚ್ಚಲಾಗಿದೆ. ಈ app ಮೂಲಕ ಹ್ಯಾಕರ್ ಗಳು ಸುಲಭವಾಗಿ ನಿಮ್ಮ ಫೋನ್ ಅನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಾರೆ. ನಂತರ ಬಳಕೆದಾರರ ಖಾತೆ ಸಂಖ್ಯೆ, ಲಾಗಿನ್ ಐಡಿ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಈ ಐದು appಗಳ  ಬಗ್ಗೆ ಜಾಗರೂಕರಾಗಿರಬೇಕು. ಜನರನ್ನು ವಂಚನೆಗೆ ಗುರಿ  ಮಾಡುವ ಮತ್ತೊಂದು ಬ್ಯಾಂಕಿಂಗ್ ಟ್ರೋಜನ್ ರೌಂಡ್ ಎಂದರೆ  ವಲ್ಚರ್ .

ಇದನ್ನೂ ಓದಿ : ಕೇವಲ 1 ಗಂಟೆಯಲ್ಲಿ ಫುಲ್ ಚಾರ್ಜ್ ಆಗಬಲ್ಲ, 450kg ತೂಕದ ಮಿನಿ ಎಲೆಕ್ಟ್ರಿಕ್ ಕಾರ್, ಮೈಲೇಜ್ ಕೇಳಿದ್ರೆ ಶಾಕ್ ಆಗ್ತೀರಾ!

ವಲ್ಚರ್ ಎಂಬುದು ಆಂಡ್ರಾಯ್ಡ್ ಬ್ಯಾಂಕಿಂಗ್ ಟ್ರೋಜನ್ ಆಗಿದ್ದು, ಅದು ಸೋಂಕಿತ ಸಾಧನಗಳಿಂದ PII ಕದಿಯುವುದರಲ್ಲಿ ಮತ್ತು  ಸ್ಕ್ರೀನ್-ಸ್ಟ್ರೀಮಿಂಗ್ ಸಾಮರ್ಥ್ಯಗಳನ್ನು ಬಳಸುವುದರಲ್ಲಿ ಪರಿಣತಿ ಹೊಂದಿದೆ  ಎಂದು ಥ್ರೆಟ್ ಫ್ಯಾಬ್ರಿಕ್ ವರದಿ ಮಾಡಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ 1,000 ರಿಂದ 100,000  ಇನ್ಸ್ಟಲೆಶನ್ ನೊಂದಿಗೆ ಮೂರು ಹೊಸ ಡ್ರಾಪ್ಪರ್‌ಗಳನ್ನು  ಥ್ರೆಟ್ ಫ್ಯಾಬ್ರಿಕ್  ಕಂಡುಹಿಡಿದಿದೆ. 

ಈ ಆಪ್‌ಗಳನ್ನು ತಕ್ಷಣ  ಡಿಲೀಟ್ ಮಾಡಿ : 
Manager Small Lite
My Finances Tracker
Zetter Authentiction
Codice Fiscale 2022
Recover Audio
Image and Videos

ಇದನ್ನೂ ಓದಿ : ದೇಶದ ಅತೀ ಅಗ್ಗದ Car ಮಾರುಕಟ್ಟೆಗೆ ಲಗ್ಗೆ! ಇದರ ಫೀಚರ್ ನೋಡಿದ್ರೆ ವಾವ್ಹ್.. ಅನ್ನೋದು ಪಕ್ಕಾ

ಈ ಅಪ್ಲಿಕೇಶನ್‌ಗಳನ್ನು ಕೂಡಾ google ಪ್ಲೇ ಸ್ಟೋರ್ ನಿಂದ  ಲಕ್ಷಾಂತರ ಮಂದಿ  ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಆದರೆ ಈ app ಗಳು ಖಂಡಿತವಾಗಿಯೂ  ಮೋಸದ ಜಾಲ. ಈ ಅಪ್ಲಿಕೇಶನ್‌ಗಳಲ್ಲಿ ಯಾವುದನ್ನಾದರೂ ನೀವು ಕೂಡಾ ಡೌನ್‌ಲೋಡ್ ಮಾಡಿದ್ದರೆ, ತಕ್ಷಣ ಅವುಗಳನ್ನು  ಡಿಲೀಟ್ ಮಾಡಿ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News