AG Carinae:ಬಾನಂಗಳದಲ್ಲಿ ಭಾರಿ ವಿಸ್ಫೋಟ, ನಡೆದಿದ್ದಾದರು ಏನು?
AG Carinae ಒಂದು ಲುಮಿನಸ್ ಬ್ಲೂ ವೇರಿಯೇಬಲ್ (Luminous Blue Variable) ಶ್ರೇಣಿಯ ನಕ್ಷತ್ರವಾಗಿದೆ. ಇದಕ್ಕೆ ಒಟ್ಟು ಎರಡು ಮೋಡ್ ಗಳಿವೆ. ಮೊದಲ ಮೋಡ್ ನಲ್ಲಿ ಇದು ತುಂಬಾ ಶಾಂತವಾಗಿರುತ್ತದೆ. ಆದರೆ, ಎರಡನೇ ಮೋಡ್ ನಲ್ಲಿ ಇದರಲ್ಲಿ ವಿಸ್ಫೋಟಗಳು ಸಂಭವಿಸುತ್ತವೆ. ಎರಡನೆಯ ಮೋಡ್ ಕಾಲದಲ್ಲಿ ಈ ನಕ್ಷತ್ರ ತುಂಬಾ ಹೊಳೆಯುತ್ತದೆ.
ನವದೆಹಲಿ: AG Carinae - ವಿಜ್ಞಾನಿಗಳು ಹಬಲ್ ಟೆಲಿಸ್ಕೊಪ್ ಸಹಾಯದಿಂದ ಈ ಅಪರೂಪದ ಛಾಯಾಚಿತ್ರಗಳನ್ನು ಕ್ಲಿಕ್ಕಿಸಿದ್ದು, ಈ ಚಿತ್ರಗಳಲ್ಲಿ ನಕ್ಷತ್ರವೊಂದರಲ್ಲಿ ಭಾರಿ ಸ್ಫೋಟ ಸಂಭವಿಸುತ್ತಿರುವುದು ಕಾಣಿಸುತ್ತಿದೆ. ಈ ನಕ್ಷತ್ರದ ಹೆಸರು AG Carinae. ಈ ನಕ್ಷತ್ರದ ನಾಲ್ಕು ಕಡೆಗೆ 5 ಪ್ರಕಾಶವರ್ಷಗಳಷ್ಟು ನೆಬುಲಾ (Nebula) ಇದೆ. ಈ ನಕ್ಷತ್ರದಿಂದ ಹೊರಬೀಳುತ್ತಿರುವ ಮಟೀರಿಯಲ್ ಈ ನೆಬುಲಾ ಸೃಷ್ಟಿಸಿದೆ.
AG Carinae ಹೆಸರಿನ ನಕ್ಷತ್ರದಲ್ಲಿ ಈ ವಿಸ್ಫೋತಸಾವಿರಾರು ವರ್ಷಗಳ ಹಿಂದೆ ಸಂಭವಿಸಿತ್ತು. ಪ್ರಸ್ತುತ ಹೊರಬಂದಿರುವ ಛಾಯಾಚಿತ್ರಗಳಲ್ಲಿ ನೈಟ್ರೋಜನ್ (Nitrogen) ಹಾಗೂ ಹೈಡ್ರೋಜನ್ (Hydrogen) ಗ್ಯಾಸ್ ಕೆಂಪು ಬಣ್ಣದಂತೆ ಕಾಣಿಸುತ್ತಿದ್ದರೆ, ಧೂಳು ನೀಲಿ ಬಣ್ಣದಲ್ಲಿ ಕಾಣಿಸುತ್ತಿದೆ. ಹಬಲ್ ಟೆಲಿಸ್ಕೊಪ್ (Hubble Space Telescope) ಅಲ್ಟ್ರಾವೈಲೆಟ್ ಕಿರಣಗಳು (Ultraviolet Rays) ಹಾಗೂ ಕಾಣಿಸಬಹುದಾದ ಬೆಳಕಿನ ಸಹಾಯದಿಂದ AG Carinae ನಕ್ಷತ್ರವನ್ನು ತನ್ನ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಹಿಡಿದಿದೆ.
ನಕ್ಷತ್ರದಲ್ಲಿ ಭಯಾನಕ ವಿಸ್ಫೋಟ
AG Carinae ಒಂದು ಲುಮಿನಸ್ ಬ್ಲೂ ವೇರಿಯೇಬಲ್ (Luminous Blue Variable) ಶ್ರೇಣಿಯ ನಕ್ಷತ್ರವಾಗಿದೆ. ಇದಕ್ಕೆ ಒಟ್ಟು ಎರಡು ಮೋಡ್ ಗಳಿವೆ. ಮೊದಲ ಮೋಡ್ ನಲ್ಲಿ ಇದು ತುಂಬಾ ಶಾಂತವಾಗಿರುತ್ತದೆ. ಆದರೆ, ಎರಡನೇ ಮೋಡ್ ನಲ್ಲಿ ಇದರಲ್ಲಿ ವಿಸ್ಫೋಟಗಳು ಸಂಭವಿಸುತ್ತವೆ. ಎರಡನೆಯ ಮೋಡ್ ಕಾಲದಲ್ಲಿ ಈ ನಕ್ಷತ್ರ ತುಂಬಾ ಹೊಳೆಯುತ್ತದೆ.
ಇದನ್ನೂ ಓದಿ- Spiders On Mars: ವಿಜ್ಞಾನಿಗಳ ನಿದ್ದೆಗೆಡಿಸಿದ ಮಂಗಳನ ಅಂಗಳದ ಜೇಡರಹುಳ ಆಕೃತಿಗಳ ರಹಸ್ಯ
ವಿಜ್ಞಾನಿಗಳ ಪ್ರಕಾರ ಈ ನಕ್ಷತ್ರ ವಿಸ್ಫೋಟದ ಸಮಯದಲ್ಲಿ ಈ ನಕ್ಷತ್ರ ಸೂರ್ಯನಿಗಿಂತಲೂ ತೀವ್ರವಾಗಿ ಹೊಳೆಯುತ್ತದೆ ಎನ್ನಲಾಗಿದೆ. ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ (European Space Agency) ಪ್ರಕಾರ ಈ ವಿಸ್ಫೋಟವೆ ಈ ನಕ್ಷತ್ರದ ಉಳಿವಿಗೆ ಕಾರಣ ಎಂದು ಹೇಳಿದೆ.
ಇದನ್ನೂ ಓದಿ- NASA Mars Mission: ಬೇರೊಂದು ಗ್ರಹದ ಮೇಲೆ ಮೊದಲ ಬಾರಿಗೆ ಹೆಲಿಕ್ಯಾಪ್ಟರ್ ಹಾರಾಟ ನಡೆಸಿ ಇತಿಹಾಸ ಬರೆದ NASA
ಈ ರೀತಿ ನಕ್ಷತ್ರ ತನ್ನ ಬ್ಯಾಲೆನ್ಸ್ ಕಾಯುತ್ತದೆ
ಈ ನಕ್ಷತ್ರದಲ್ಲಿ ಒಳಭಾಗಕ್ಕೆ ಬೇಕಾಗುವ ಗುರುತ್ವಾಕರ್ಷಣ ಶಕ್ತಿ ಹಾಗೂ ಹೊರಭಾಗದಲ್ಲಿರುವ ರೇಡಿಯೇಶನ್ ಒತ್ತಡ ಒಂದೇ ಸಮನಾಗಿರುತ್ತದೆ. ಆದರೆ ಅಸ್ಥಿರವಾಗಿರುವ ನಕ್ಷತ್ರದಲ್ಲಿ ಬ್ಯಾಲೆನ್ಸ್ ಇರುವುದಿಲ್ಲ. AG Carinae ನಕ್ಷತ್ರದಲ್ಲಿನ ಮಟೀರಿಯಲ್ ನಕ್ಷತ್ರದ ಹೊರಭಾಗದಲ್ಲಿ ಉಂಟಾಗುವ ಒತ್ತಡದ ಕಾರಣ ವಿಸ್ಫೋಟಗೊಂದು ಹರಡಿಕೊಳ್ಳುತ್ತದೆ ಹಾಗೂ ಇದರಿಂದ ಆ ನಕ್ಷತ್ರ ಬ್ಯಾಲೆನ್ಸ್ ಕಂಡುಕೊಳ್ಳುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.