NASA Mars Mission: ಬೇರೊಂದು ಗ್ರಹದ ಮೇಲೆ ಮೊದಲ ಬಾರಿಗೆ ಹೆಲಿಕ್ಯಾಪ್ಟರ್ ಹಾರಾಟ ನಡೆಸಿ ಇತಿಹಾಸ ಬರೆದ NASA

NASA Mars Mission: ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ NASAದ ಪರ್ಸೆವರೆನ್ಸ್ ರೋವರ್ (Perseverance Rover) ಮೂಲಕ ಮಂಗಳನ ಅಂಗಳಕ್ಕೆ ತಲುಪಿದ್ದ ಇಂಜೆನ್ಯುಟಿ ಹೆಲಿಕ್ಯಾಪ್ಟರ್  (Ingenuity Helicopter)ಮೊದಲ ಹಾರಾಟ ಕೈಗೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದೆ. ಸತತ ಆರು ವರ್ಷಗಳ ಪರಿಶ್ರಮದ ಬಳಿಕ ನಾಸಾ ಮಂಗಳ ಗ್ರಹದ ಮೇಲೆ ಫ್ಲೈಟ್ ಟೆಸ್ಟಿಂಗ್ ನಡೆಸುವಲ್ಲಿ ಯಶಸ್ವಿಯಾಗಿದೆ.

Written by - Nitin Tabib | Last Updated : Apr 19, 2021, 06:46 PM IST
  • ಬೇರೊಂದು ಗ್ರಹದ ಮೇಲ್ಮೈ ಮೇಲೆ ಹೆಲಿಕ್ಯಾಪ್ಟರ್ ಉಡಾವಣೆ ಕೈಗೊಂಡ ಮಾನವ
  • ಮಂಗಳನ ಅಂಗಳದ ಮೇಲೆ ಇಂಜೆನ್ಯುಟಿ ಹೆಲಿಕ್ಯಾಪ್ಟರ್ ಹಾರಿಸಿ ಇತಿಹಾಸ ಬರೆದ NASA
  • NASA ಪರ್ಸೆವರನ್ಸ್ ರೋವರ್ ಮೂಲಕ ಇದನ್ನು ಮಂಗಳನ ಮೇಲ್ಮೈಗೆ ಇಳಿಸಲಾಗಿತ್ತು.
NASA Mars Mission: ಬೇರೊಂದು ಗ್ರಹದ ಮೇಲೆ ಮೊದಲ ಬಾರಿಗೆ ಹೆಲಿಕ್ಯಾಪ್ಟರ್ ಹಾರಾಟ ನಡೆಸಿ ಇತಿಹಾಸ ಬರೆದ NASA title=
Photo Courtesy - NASA/JPL-Caltech.

ವಾಷಿಂಗ್ಟನ್ : NASA Mars Mission - ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ NASAದ ಪರ್ಸೆವರೆನ್ಸ್ ರೋವರ್ (Perseverance Rover) ಮೂಲಕ ಮಂಗಳನ ಅಂಗಳಕ್ಕೆ ತಲುಪಿದ್ದ ಇಂಜೆನ್ಯುಟಿ ಹೆಲಿಕ್ಯಾಪ್ಟರ್  (Ingenuity Helicopter)ಮೊದಲ ಹಾರಾಟ ಕೈಗೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದೆ. ಸತತ ಆರು ವರ್ಷಗಳ ಪರಿಶ್ರಮದ ಬಳಿಕ ನಾಸಾ ಮಂಗಳ ಗ್ರಹದ ಮೇಲೆ ಫ್ಲೈಟ್ ಟೆಸ್ಟಿಂಗ್ ನಡೆಸುವಲ್ಲಿ ಯಶಸ್ವಿಯಾಗಿದೆ. ನಾಸಾ ಈ ಐತಿಹಾಸಿಕ ಘಟನೆಯ ಲೈವ್ ಟೆಲಿಕಾಸ್ಟ್ ನಡೆಸಿದೆ.

ನಾಸಾದ (NASA)  ಈ ಹೆಲಿಕ್ಯಾಪ್ಟರ್ ಸೋಮವಾರ ಮಂಗಳನ (Mars Mission) ಧೂಳು ತುಂಬಿದ ಕೆಂಪು ಮೇಲ್ಮೈ ಮೇಲೆ ಹಾರಾಟ ಈ ಇತಿಹಾಸ ನಿರ್ಮಿಸಿದೆ. ಈ ಹೆಲಿಕ್ಯಾಪ್ಟರ್ ಸುಮಾರು 4 ಪೌಂಡ್ ಅಂದರೆ 1.8 ಕೆ.ಜಿ ಭಾರವಾಗಿದೆ. ಇಂಜೆನ್ಯುಟಿ ಹೆಲಿಕ್ಯಾಪ್ಟರ್ ಸುಮಾರು 1.6 ಅಡಿ ಅಂದರೆ 0.5 ಮೀಟರ್ ಉದ್ದವಾಗಿದೆ. ಇದರಲ್ಲಿ ಬ್ಯಾಟರಿ, ಹೀಟರ್ ಹಾಗೂ ಸೆನ್ಸರ್ ಗಳನ್ನು ಅಳವಡಿಸಲಾಗಿದೆ. ಈ ಹೆಲಿಕ್ಯಾಪ್ಟರ್ ನ ಮೇಲ್ಭಾಗದಲ್ಲಿ ಸೋಲಾರ್ ಪ್ಯಾನೆಲ್ ಅಳವಡಿಸಲಾಗಿದ್ದು, ಇದರಿಂದ ಬ್ಯಾಟರಿ ಚಾರ್ಜ್ ಆಗುತ್ತದೆ. ಈ ಹೆಲಿಕ್ಯಾಪ್ಟರ್ ಮೈನಸ್ 90 ಡಿಗ್ರಿ ಉಷ್ಣಾಂಶದಲ್ಲಿಯೂ ಕೂಡ ಹಾರಾಟ ನಡೆಸಬಲ್ಲದು.

ಈ ಕುರಿತು ಹೇಳಿಕೆ ನೀಡಿರುವ ಇಂಜೆನ್ಯುಟಿ ಹೆಲಿಕ್ಯಾಪ್ಟರ್ ನ ಪ್ರಾಜೆಕ್ಟ್ ಮ್ಯಾನೇಜರ್ ಮಿಮಿ ಆಂಗ್, 'ಮಾನವ ಇತರ ಗ್ರಹಗಳ ಮೇಲೂ ಕೂಡ ರೋಟರ್ ಕ್ರಾಫ್ಟ್ ಉಡಾಯಿಸುವುದರಲ್ಲಿಯೂ ಕೂಡ ಯಶಸ್ವಿಯಾಗಿದ್ದಾನೆ ಎಂದು ನಾವು ಹೇಳಬಹುದು' ಎಂದಿದ್ದಾರೆ.

ಮಂಗಳನ ಮೇಲ್ಮೈ ಮೇಲೆ ಹೆಲಿಕ್ಯಾಪ್ಟರ್ ಹಾರಾಟ ಕೈಗೊಂಡ ಬಳಿಕ ಕ್ಯಾಲಿಫೋರ್ನಿಯಾದ ವಿಜ್ಞಾನಿಗಳು ಪರ್ಸೆವರನ್ಸ್ ನಿಂದ ಸಿಗ್ನಲ್ ಕೂಡ ಪಡೆದುಕೊಂಡಿದ್ದಾರೆ. 

ಮಂಗಳನ ಮೇಲ್ಮೈ ಮೇಲೆ ಹಾರಾಟ ನಡೆಸಿರುವ ಇಂಜೆನ್ಯುಟಿ ಹೆಲಿಕ್ಯಾಪ್ಟರ್ ಬೆಲೆ ಸುಮಾರು 85 ಮಿಲಿಯನ್ ಡಾಲರ್ ಅಂದರ ಸುಮಾರು 6 ಬಿಲಿಯನ್ ರೂಗಳಾಗಿದೆ. ಫ್ಲೈಟ್ ಟೆಸ್ಟ್ ನಲ್ಲಿ ಇಂಜೆನ್ಯುಟಿ ಹೆಲಿಕ್ಯಾಪ್ಟರ್ ಯಶಸ್ವಿಯಾಗಿರುವುದು ಒಂದು ದೊಡ್ಡ ಸಾಧನೆಯಾಗಿದೆ. ಏಕೆಂದರೆ ಈ ಮಿಶನ್ ನಲ್ಲಿ ಭಾರಿ ಅಪಾಯವಿತ್ತು ಎಂದು ಅವರು ಹೇಳಿದ್ದಾರೆ.

ಈ ಹೆಲಿಕ್ಯಾಪ್ಟರ್ ಮಂಗಳನ ಮೇಲ್ಮೈ ಮೇಲೆ ಹಾರಾಟ ನಡೆಸುವುದಕ್ಕೂ ಮುನ್ನ ಮಿಮಿ ಆಂಗ್ (Mimi Aung) ಹಾಗೂ ಅವರ ತಂಡ ಮೂರುಗಂಟೆಗೂ ಅಧಿಕ ಕಾಲ ನಿರೀಕ್ಷೆಯಲ್ಲಿದ್ದರು. ಈ ಮಿಶನ್ ನಲ್ಲಿ ಯಾವುದೇ ಅಡೆತಡೆ  ಎದುರಾಗದಂತೆ ಅವರು ಈ ಅವಧಿಯಲ್ಲಿ ಎಚ್ಚರಿಕೆ ವಹಿಸಿದ್ದರು. ಇದಕ್ಕೂ ಮೊದಲು ಕಳೆದ ಏಪ್ರಿಲ್ 11 ರಂದು ಈ ಹೆಲಿಕ್ಯಾಪ್ಟರ್ ಹಾರಾಟ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ನಂತರ ಕಂಡುಬಂದಿದ್ದ ತಾಂತ್ರಿಕ ದೋಷದ ಕಾರಣ ಅದನ್ನು ಮುಂದೂಡಲಾಗಿತ್ತು. ನಂತರ ಈ ಹೆಲಿಕ್ಯಾಪ್ಟರ್ ನ ಸಾಫ್ಟ್ ವೆಯರ್ ಅಪ್ಡೇಟ್ ಮಾಡಲಾಗಿದ್ದು, ಇಂದು ಅದು ತನ್ನ ಯಶಸ್ವಿ ಉಡಾವಣೆ ಕೈಗೊಂಡಿದೆ.

ಇದನ್ನೂ ಓದಿ- Spiders On Mars: ವಿಜ್ಞಾನಿಗಳ ನಿದ್ದೆಗೆಡಿಸಿದ ಮಂಗಳನ ಅಂಗಳದ ಜೇಡರಹುಳ ಆಕೃತಿಗಳ ರಹಸ್ಯ

ಈ ಇಂಜೆನ್ಯುಟಿ ಹೆಲಿಕ್ಯಾಪ್ಟರ್ ಹಾರಾಟ ನಡೆಸಿದ ಬಳಿಕ ಒಂದು ಬ್ಲಾಕ್ and ವೈಟ್ ಛಾಯಾಚಿತ್ರವನ್ನು ಕೂಡ ರವಾನಿಸಿದೆ. ಈ ಛಾಯಾಚಿತ್ರದಲ್ಲಿ ಅದರ ನೆರಳು ಕಾಣಿಸುತ್ತಿದೆ. ಮಂಗಳನ ಮೇಲ್ಮೈನಿಂದ ಆಗಸಕ್ಕೆ ಚಿಮ್ಮಿದಾಗ ಅದು ಈ ಫೋಟೋ ಅನ್ನು ಕ್ಲಿಕ್ಕಿಸಿದೆ. ಇದಾದ ಬಳಿಕ ಕೆಲವೇ ಕ್ಷಣಗಳಲ್ಲಿ ಮಂಗಳನ ಮೇಲ್ಮೈನಿಂದ ಕಲರ್ ಫೋಟೋ ಕೂಡ ರವಾನಿಸಿದೆ.

ಮಂಗಳನ ಮೇಲ್ಮೈ ಮೇಲೆ ಹಾರಾಟ ನಡೆಸಲು ಈ ಹೆಲಿಕ್ಯಾಪ್ಟರ್ ಗೆ ಅಳವಡಿಸಲಾಗಿರುವ ಬ್ಲೆಡ್ ಗಳು ಉಲ್ಟಾ ದಿಕ್ಕಿನಲ್ಲಿ ಭೂಮಿಯ ಮೇಲ್ಭಾಗದಲ್ಲಿ ಇರುವ ಸ್ಪೀಡ್ ಗಿಂತ ಐದು ಪಟ್ಟು ಹೆಚ್ಚು ಸ್ಪೀಡ್ ನಲ್ಲಿ ತಿರುಗಿಸಲಾಗಿದೆ. ಈ ಬ್ಲೇಡ್ ಗಳು ವಿರುದ್ಧ ದಿಕ್ಕಿನಲ್ಲಿ ಒಂದು ನಿಮಿಷಕ್ಕೆ 2500 ಸುತ್ತು ಸುತ್ತುತ್ತವೆ.

ಇದನ್ನೂ ಓದಿ- NASA, GJ 1132 b: ಎರಡನೇ ಭೂಮಿಯ ಕುರಿತು ಸಿಕ್ಕ ಸಂಕೇತ! ಲಾವಾರಸದಿಂದ ಕೂಡಿದ ಈ Alien ಗ್ರಹ (Alien Planet) ತನ್ನದೇ ವಾಯುಮಂಡಲ ಸೃಷ್ಟಿಸುತ್ತಿದೆ

ಇದೊಂದು ತುಂಬಾ ಹಗುರವಾದ ಹೆಲಿಕ್ಯಾಪ್ಟರ್ ಆಗಿದೆ. ಹೀಗಾಗಿ ಇದರ ಬ್ಲೇಡ್ ಗಳು ತುಂಬಾ ವೇಗವಾಗಿ ತಿರುಗುತ್ತವೆ. ಇದು ಮಂಗಳನ ವಾತಾವರಣ ಹಾಗೂ ಭಯಂಕರ ಚಳಿಯಲ್ಲಿಯೂ ಕೂಡ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದೆ.

ಈ ಹೆಲಿಕ್ಯಾಪ್ಟರ್ ನ ಹಾರಾಟ ನಡೆಸಲು NASA ಮಂಗಳನ ಅಂಗಳದಲ್ಲಿ ಸುಮಾರು 100 ವರ್ಗ ಮೀಟರ್ ಸಮತಟ್ಟಾದ ಕ್ಷೇತ್ರವನ್ನು ಆಯ್ಕೆ ಮಾಡಿತ್ತು. ರೋವರ್ ಏಪ್ರಿಲ್ 3 ರಂದು ಈ ಹೆಲಿಕ್ಯಾಪ್ಟರ್ ಅನ್ನು ಏರ್ ಫೀಲ್ಡ್ ಗೆ ರಿಲೀಸ್ ಮಾಡಿತ್ತು. ಏಪ್ರಿಲ್ 18 ರಂದು ಇದರ ನಿಯಂತ್ರಕರು ಇಂಜೆನ್ಯುಟಿಗೆ ಆದೇಶಗಳನ್ನು ನೀಡಿ ಅದರ ಸಾಫ್ಟವೆಯರ್ ಅನ್ನು ಉನ್ನತ ದರ್ಜೆಗೆ ಏರಿಸಿದ್ದರು.

ಇದನ್ನೂ ಓದಿ-Parker Solar Probe : ಶುಕ್ರ ಗ್ರಹದ ಬಹು ಅಪರೂಪದ ಫೋಟೋ ಕ್ಲಿಕ್ಕಿಸಿದ ನಾಸಾ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News