ಬೆಂಗಳೂರು : ದೇಶದ ಎರಡನೇ ಅತಿ ದೊಡ್ಡ ಟೆಲಿಕಾಂ ಆಪರೇಟರ್ ಏರ್‌ಟೆಲ್ ಅನೇಕ ಅದ್ಬುತ ಯೋಜನೆಗಳನ್ನು ಹೊಂದಿದೆ. ಈ ರಿಚಾರ್ಜ್ ಪ್ಲಾನ್ ಗಳ ಮೂಲಕ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ. ಏರ್‌ಟೆಲ್ ಯಾವ ಬೆಲೆಗೆ ಎರಡು ರಿಚಾರ್ಜ್ ಪ್ಲಾನ್ ಗಳನ್ನು ನೀಡುತ್ತದೆಯೋ ಅದೇ ಬೆಲೆಯಲ್ಲಿ ಜಿಯೋ ಮತ್ತು ವೊಡಾಫೋನ್ ಐಡಿಯಾವನ್ನು ಕೂಡಾ ಹೊಂದಿದೆ. ಆದರೆ ಏರ್‌ಟೆಲ್‌ನ  ಪ್ಲಾನ್ ಮಾತ್ರ ಈ ಎರಡು ಕಂಪನಿಗಳ ಪ್ಲಾನ್ ಗಿಂತ ಭಿನ್ನವಾಗಿದೆ.  


COMMERCIAL BREAK
SCROLL TO CONTINUE READING

ಏರ್‌ಟೆಲ್  699 ರೂ.  ಪ್ರಿಪೇಯ್ಡ್ ಪ್ಲಾನ್ : 
ಏರ್‌ಟೆಲ್ ನೀಡುವ  699 ರೂ ಪ್ಲಾನ್ ನಲ್ಲಿ ಬಳಕೆದಾರರು 56 ದಿನಗಳವರೆಗೆ ಪ್ರತಿದಿನ 3GB ಡೇಟಾವನ್ನು ಪಡೆಯುತ್ತಾರೆ. ಈ ಯೋಜನೆಯಲ್ಲಿ ಒಳಗೊಂಡಿರುವ ಇತರ ಉಚಿತ ವೈಶಿಷ್ಟ್ಯಗಳೆಂದರೆ  ಅನ್ಲಿಮಿಟೆಡ್ ವಾಯ್ಸ್ ಕಾಲ್ ಮತ್ತು ದಿನಕ್ಕೆ 100 SMS.


ಇದನ್ನೂ ಓದಿ :  Reliance jio: ಅಗ್ಗದ ದರದಲ್ಲಿ ನಿತ್ಯ 1GB ಡೇಟಾ, ಅನಿಯಮಿತ ಕರೆ ಜೊತೆಗೆ ಸಿಗುತ್ತೆ ಹಲವು ಪ್ರಯೋಜನ


ಏರ್‌ಟೆಲ್  999 ರೂ ಪ್ರಿಪೇಯ್ಡ್ ಯೋಜನೆ :
ಏರ್‌ಟೆಲ್‌ನ  999 ರೂ ಪ್ರಿಪೇಯ್ಡ್ ಯೋಜನೆಯಲ್ಲಿ, ಬಳಕೆದಾರರು ದಿನಕ್ಕೆ 2.5GB ಡೇಟಾ, ದಿನಕ್ಕೆ 100 SMS, ಮತ್ತು ಅನಿಯಮಿತ ಧ್ವನಿ ಕರೆಯನ್ನು ಪಡೆಯುತ್ತಾರೆ. ಈ ಯೋಜನೆಯ ಮಾನ್ಯತೆ 84 ದಿನಗಳು. ಎರಡೂ ಯೋಜನೆಗಳು ನೀಡುವ ವಿಶಿಷ್ಟ ಪ್ರಯೋಜನಗಳೆಂದರೆ  999 ಮತ್ತು  699 ರೂ ಪ್ರಿಪೇಯ್ಡ್ ಯೋಜನೆಗಳೊಂದಿಗೆ, ಏರ್‌ಟೆಲ್ ಉಚಿತ Amazon Prime ಚಂದಾದಾರಿಕೆಯನ್ನು ನೀಡುತ್ತದೆ.   ಈ ಎರಡು ಯೋಜನೆಗಳು ಕ್ರಮವಾಗಿ 56 ದಿನಗಳು ಮತ್ತು 84 ದಿನಗಳ ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನೀಡುತ್ತವೆ.


ಇದು ಮಾತ್ರವಲ್ಲದೆ, ಬಳಕೆದಾರರು ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಮೊಬೈಲ್ ಪ್ಯಾಕ್, ಅಪೊಲೊ 24|7 ಸರ್ಕಲ್, ಉಚಿತ ಹಲೋಟ್ಯೂನ್ಸ್ ಮತ್ತು ವಿಂಕ್ ಮ್ಯೂಸಿಕ್ ನಂತಹ ಇತರ ಪ್ರಯೋಜನಗಳನ್ನು ಕೂಡಾ ಪಡೆಯುತ್ತಾರೆ.


ಇದನ್ನೂ ಓದಿ :  Mobile Addiction: ಸೆಲ್ ಫೋನ್-ವೈಫೈಗಳ ಕಾರಣ ಯೌವನಾವಸ್ಥೆಯಲ್ಲಿಯೇ ಜನರು ಇದಕ್ಕೆ ಗುರಿಯಾಗುತ್ತಿದ್ದಾರೆ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.