ನವದೆಹಲಿ :  ಕರೋನಾ ಕಾಲದಲ್ಲಿ ಕಡಿಮೆ ಆದಾಯ ಹೊಂದಿರು ಗ್ರಾಹಕರ ನೆರವಿಗೆ ಏರ್ ಟೆಲ್ (Airtel) ನಿಂತಿದೆ. ಏರ್‌ಟೆಲ್ ತನ್ನ ಗ್ರಾಹಕರಿಗೆ 49 ರೂ.ಗಳ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯನ್ನು (Recharge Plan) ಉಚಿತವಾಗಿ ನೀಡುವುದಾಗಿ ಘೋಷಿಸಿದೆ. ಇದರೊಂದಿಗೆ  79 ರೂಪಾಯಿ ಪ್ರಿಪೇಯ್ಡ್ ಪ್ಯಾಕ್‌ಗಳಲ್ಲಿ ಡಬಲ್ ಪ್ರಯೋಜನಗಳನ್ನು ನೀಡುತ್ತಿದೆ. ಕೋವಿಡ್ (COVID-19) ಸಮಯದಲ್ಲಿ ಕಡಿಮೆ ಆದಾಯದ ಗ್ರಾಹಕರು ಸಂಪರ್ಕದಲ್ಲಿರಲು ಈ ಕೊಡುಗೆಗಳು ಸಹಾಯ ಮಾಡಲಿದೆ ಎಂದು ಏರ್ಟೆಲ್ ಹೇಳಿದೆ. 


COMMERCIAL BREAK
SCROLL TO CONTINUE READING

ಈ ಎರಡೂ ಆಫರ್ ಗಳು ಯಾವ ದಿನದಿಂದ ಆರಂಭವಾಗಲಿದೆ ಎನ್ನುವುದನ್ನು ಕಂಪನಿ ಇನ್ನೂ ಹೇಳಿಲ್ಲ. ಆದರೆ ಈ ವಾರದಿಂದ ಗ್ರಾಹಕರಿಗೆ ಈ ಆಫರ್ ನ ಲಾಭ ಸಿಗಲಿದೆ ಎಂದು ಮಾತ್ರ ಹೇಳಿದೆ. ಅಲ್ಲದೆ, ಈ ಆಫರ್ ನ ಲಾಭವನ್ನು ಗ್ರಾಹಕರು ಒಂದು ಬಾರಿ ಮಾತ್ರ ಪಡೆಯಬಹುದಾಗಿದೆ. 


ಇದನ್ನೂ ಓದಿ : BSNL Prepaid Plan: ಬಿಎಸ್‌ಎನ್‌ಎಲ್‌ನ ಅಗ್ಗದ 365 ದಿನಗಳ ಯೋಜನೆಯಲ್ಲಿ Unlimited calls ಜೊತೆಗೆ ಇಷ್ಟು Data ಫ್ರೀ


ಏರ್ಟೆಲ್ ಉಚಿತ ರೀಚಾರ್ಜ್ : 
ಏರ್‌ಟೆಲ್‌ನ (Airtel) 49 ರೂ. ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ 38 ರೂಪಾಯಿಗಳ ಟಾಕ್ ಟೈಂ ಮತ್ತು 100 ಎಂಬಿ ಡೇಟಾ ಸಿಗಲಿದೆ. ಈ  ಯೋಜನೆಯ ವ್ಯಾಲಿಡಿಟಿ 28 ದಿನಗಳವರೆಗೆ ಇರಲಿದೆ. ಕೋವಿಡ್ ಲಾಕ್‌ಡೌನ್ (Lockdown) ಕಾರಣ, ಏರ್‌ಟೆಲ್ ಗ್ರಾಹಕರು ಈ ರೀಚಾರ್ಜ್ ಪ್ಲಾನ್ ಅನ್ನು ಉಚಿತವಾಗಿ ಬಳಸಿಕೊಳ್ಳಬಹುದಾಗಿದೆ. 


ಡಬಲ್ ಬೆನಿಫಿಟ್ ಪ್ಯಾಕ್ :
ಏರ್‌ಟೆಲ್‌ನ 79 ರೂ.ಗಳ ಪ್ರಿಪೇಯ್ಡ್ ಪ್ಲಾನ್ ನಲ್ಲಿ (Prepaid plan)  128 ರೂಪಾಯಿಗಳ ಟಾಕ್‌ಟೈಮ್ ಮತ್ತು 200 ಎಂಬಿ ಡೇಟಾ ಸಿಗಲಿದೆ. ಈ ಯೋಜನೆಯ ವ್ಯಾಲಿಡಿಟಿ ಕೂಡಾ 28 ದಿನಗಳವರೆಗೆ ಇರಲಿದೆ. ಈ ಪ್ರಿಪೇಯ್ಡ್ ಪ್ಯಾಕ್‌ನಲ್ಲಿನ ಆಫರ್ ಬಗ್ಗೆ ಕೂಡಾ ಕಂಪನಿಯು ವಿವರವಾಗಿ ಏನನ್ನೂ ಹೇಳಿಲ್ಲ. ಆದರೆ ಇದರಲ್ಲಿ ಸಿಗುವ ಪ್ರಯೋಜನಗಳು ಡಬಲ್ ಆಗಲಿವೆ ಎಂದು ಮಾತ್ರ  ಹೇಳಿದೆ.   ಅಂದರೆ ಈ ರೀಚಾರ್ಜ್ ಪ್ಲಾನ್ ನಲ್ಲಿ ಲಭ್ಯವಿರುವ ಟಾಕ್ ಟೈಮ್ ಮತ್ತು ಡೇಟಾ ಬ್ಯಾಲೆನ್ಸ್ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ.


ಇದನ್ನೂ ಓದಿ : ಮನೆಯಲ್ಲಿದ್ದುಕೊಂಡೇ ಫಟಾಪಟ್ ನಿಮ್ಮ ಹಳೆಯ ಸ್ಮಾರ್ಟ್‍ಫೋನ್ ಸೇಲ್ ಮಾಡಿ..!


ಕೋಟ್ಯಂತರ ಗ್ರಾಹಕರಿಗೆ ಸಿಗಲಿದೆ ಲಾಭ : 
ಏರ್‌ಟೆಲ್ ನ ಈ ಆಫರ್ ಕಡಿಮೆ ಆದಾಯ ಹೊಂದಿರುವ  5.5 ಕೋಟಿ ಗ್ರಾಹಕರಿಗೆ ಪ್ರಯೋಜನವನ್ನು ನೀಡಲಿದೆ.  ಏರ್‌ಟೆಲ್ ಪ್ರಕಾರ, ಈ ಕೊಡುಗೆಗಳ ಖರ್ಚು 270 ಕೋಟಿ ರೂ ಆಗಿರಲಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.