Dangerous Mobile Apps - ಭಾರತ ಸೇರಿದಂತೆ ವಿಶ್ವಾದ್ಯಂತ ಬಹುತೇಕ ಜನರು ಆಂಡ್ರಾಯ್ಡ್ ಸಾಧನಗಳನ್ನು ಬಳಸುತ್ತಾರೆ. ಆಂಡ್ರಾಯ್ಡ್ ಸಾಧನಗಳಿಗಾಗಿ ಬಳಕೆದಾರರು ಕಡಿಮೆ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಈ ಕಾರಣಗಳಿಗಾಗಿ, Android ವಿಶ್ವದ ಅತ್ಯಂತ ಜನಪ್ರಿಯ ಆಪರೇಟಿಂಗ್ ಸಿಸ್ಟಮ್ ಆಗಿದೆ, ಆದರೆ Google ನ ಈ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಯಾವಾಗಲೂ ಗೌಪ್ಯತೆ ಮತ್ತು ಡೇಟಾ ಸುರಕ್ಷತೆಯ ಸಮಸ್ಯೆ ಮೊದಲಿನಿಂದಲೂ ಇದೆ.


COMMERCIAL BREAK
SCROLL TO CONTINUE READING

ಡಿಸೆಂಬರ್ 2021 ರಲ್ಲಿ, Android ಸಾಧನಗಳ ಅಪ್ಲಿಕೇಶನ್‌ಗಳಲ್ಲಿ ಗೌಪ್ಯತೆ ಮತ್ತು ಡೇಟಾ ಸುರಕ್ಷತೆಯ ಸಮಸ್ಯೆ ಕಂಡುಬಂದಿದೆ, ನಂತರ 12 Android ಅಪ್ಲಿಕೇಶನ್‌ಗಳನ್ನು ತೆಗೆದುಹಾಗಲಾಗಿದೆ. ಇದೀಗ 17 ಹೊಸ ಆ್ಯಪ್‌ಗಳನ್ನು ಅವುಗಳ ಗೌಪ್ಯತೆ ಮತ್ತು ಡೇಟಾ ಸುರಕ್ಷತೆ ಸಮಸ್ಯೆಗಳ ಕಾರಣ Google Play Store ನಿಂದ ಗೂಗಲ್ ತೆಗೆದುಹಾಕಿದೆ. 


ಬ್ಯಾಂಕಿಂಗ್ ವಿವರಗಳನ್ನು ಕದಿಯುತ್ತಿದ್ದವು ಈ ಆಪ್ ಗಳು
ಭದ್ರತಾ ಸಂಶೋಧನಾ ಸಂಸ್ಥೆಯಾದ ಟ್ರೆಂಡ್ ಮೈಕ್ರೋ ವರದಿಯ ಪ್ರಕಾರ, ಆಂಡ್ರಾಯ್ಡ್ ಸಾಧನಗಳಿಗಾಗಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಕೆಲವು ಮಾಲ್‌ವೇರ್ ಅಪ್ಲಿಕೇಶನ್‌ಗಳಿವೆ, ಅವು ಬಳಕೆದಾರರ ಬ್ಯಾಂಕಿಂಗ್ ವಿವರಗಳ ಮೇಲೆ ನೇರವಾಗಿ ದಾಳಿ ಮಾಡುತ್ತವೆ. ಈ ಅಪ್ಲಿಕೇಶನ್‌ಗಳು ಪಿನ್‌ಗಳು, ಪಾಸ್‌ವರ್ಡ್‌ಗಳು ಮತ್ತು ಇತರ ಆನ್‌ಲೈನ್ ಬ್ಯಾಂಕಿಂಗ್ ಮಾಹಿತಿಯಂತಹ ಬಳಕೆದಾರರ ಬ್ಯಾಂಕಿಂಗ್ ವಿವರಗಳನ್ನು ಕದಿಯುತ್ತವೆ ಎನ್ನಲಾಗಿದೆ. 


ಮೊಬೈಲ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಯುಗದಲ್ಲಿ, ಅನೇಕ ವಿಷಯಗಳು ಇದೀಗ ತುಂಬಾ ಸರಳವಾಗಿವೆ, ಆದರೆ ಇದೀಗ ಸೈಬರ್ ಅಪರಾಧಿಗಳು ಅಪರಾಧಗಳನ್ನು ಅಷ್ಟೇ ಸುಲಭವಾಗಿ ಎಸಗುತ್ತಿದ್ದಾರೆ. ತೆಗೆದುಹಾಕಲಾದ ಎಲ್ಲಾ ಆಪ್ ಗಳ ಪಟ್ಟಿ ಈ ಕೆಳಗೆ ನೀಡಲಾಗಿದೆ. ಈ ಎಲ್ಲಾ ಅಪ್ಲಿಕೇಶನ್ ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಅಪ್ಲಿಕೇಶನ್‌ಗಳಾಗಿವೆ ಮತ್ತು ನಿಮ್ಮ ಮೊಬೈಲ್‌ನಿಂದ ನಿಮ್ಮ ಬ್ಯಾಂಕಿಂಗ್ ವಿವರಗಳನ್ನು ಕದಿಯಲು ಮಾತ್ರವಲ್ಲದೆ ನಿಮ್ಮ ಖಾತೆಯಲ್ಲಿರುವ ಎಲ್ಲಾ ಹಣವನ್ನು ನಿಮಗೆ ಗೊತ್ತಾಗದಂತೆ ಕೆಲವೇ ನಿಮಿಷಗಳಲ್ಲಿ ಎಗರಿಸುವ ಸಾಮರ್ಥ್ಯ ಹೊಂದಿವೆ. ಆದರೆ, ಇದೀಗ ಗೂಗಲ್ ಈ ಆಪ್ ಗಳನ್ನು ತನ್ನ ಪ್ಲೇ ಸ್ಟೋರ್ ನಿಂದ ಬ್ಯಾನ್ ಮಾಡಿದೆ. ಈ ಆಪ್ ಗಳು ಇಂತಿವೆ.


ಇದನ್ನೂ ಓದಿ-Infinix Smart 6 Plus: ಕಡಿಮೆ ಬೆಲೆಯ ಜಬರ್ದಸ್ತ್ ಸ್ಮಾರ್ಟ್‌ಫೋನ್, ಬೆಲೆ ಎಷ್ಟು ಗೊತ್ತಾ?


>> Call Recorder APK (com.caduta.aisevsk)
>> Rooster VPN (com.vpntool.androidweb)
>> Super Cleaner- hyper & smart (com.j2ca.callrecorder)
>> Document Scanner – PDF Creator (com.codeword.docscann)
>> Universal Saver Pro (com.virtualapps.universalsaver)
>> Eagle photo editor (com.techmediapro.photoediting)
>> Call recorder pro+ (com.chestudio.callrecorder)
>> Extra Cleaner (com.casualplay.leadbro)
>> Crypto Utils(com.utilsmycrypto.mainer)
>> FixCleaner (com.cleaner.fixgate)
>> Just In: Video Motion (com.olivia.openpuremind)
>> com.myunique.sequencestore
>> com.flowmysequto.yamer
com.qaz.universalsaver
Lucky Cleaner (com.luckyg.cleaner)
>>  Simpli Cleaner (com.scando.qukscanner)
>> Unicc QR Scanner (com.qrdscannerratedx)


ಇದನ್ನೂ ಓದಿ-PubGಗೆ ಪರ್ಯಾಯವಾಗಿ ಬಂದ BGMI ಗೇಮ್ ಭಾರತದಲ್ಲಿ ಬ್ಯಾನ್: ಕಾರಣ ಏನು?


Google ಇದೀಗ ಈ ಎಲ್ಲಾ 17 ಅಪ್ಲಿಕೇಶನ್‌ಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿದೆ, ಆದರೆ ನಿಮ್ಮ ಫೋನ್‌ನಲ್ಲಿ ಈ ಅಪ್ಲಿಕೇಶನ್‌ಗಳಲ್ಲಿ ಯಾವುದಾದರೂ ಇದ್ದರೆ, ತಕ್ಷಣ ಅದನ್ನು ಅನ್‌ಇನ್‌ಸ್ಟಾಲ್ ಮಾಡಿ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.