Alert! ಉಪ್ಪಿನ ಜಾಗದಲ್ಲಿ ನೀವೂ ಕೂಡ ಪ್ಲಾಸ್ಟಿಕ್ ಸೇವಿಸುತ್ತಿಲ್ಲವಲ್ಲ? ಸಂಶೋಧನೆಯಿಂದ ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗ
Microplastics In Table Salts: ಗುಜರಾತ್ ಹಾಗೂ ತಮಿಳುನಾಡಿನಿಂದ ಪಡೆಯಲಾಗಿರುವ ಊಟದಲ್ಲಿ ಬಳಸಲಾಗಿರುವ ಉಪ್ಪಿನಲ್ಲಿ 100 ರಿಂದ 200 ಪ್ರಕಾರದ ಮೈಕ್ರೋ ಪ್ಲಾಸ್ಟಿಕ್ ಕಳಬೇರಕೆಯಾಗಿರುವುದು ಪತ್ತೆಯಾಗಿದೆ.
Microplastics In Table Salts: ದಿನದಲ್ಲಿ ನಾವು ಒಮ್ಮೆಯೂ ಕೂಡ ಸಿಹಿಯನ್ನು ಸೇವಿಸಿದ್ದರೆ ಪರವಾಗಿಲ್ಲ. ಆದರೆ, ಊಟದಲ್ಲಿ (Food) ಉಪ್ಪು ಇಲ್ಲ ಎಂದಾದರೆ, ಊಟಕ್ಕೆ ರುಚಿಯೇ ಬರುವುದಿಲ್ಲ. ಆದರೆ, ಉಪ್ಪಿನ (Salt) ಈ ಮಹತ್ವ ಕೇವಲ ಊಟಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಆರೋಗ್ಯದ ದೃಷ್ಟಿಯಿಂದಲೂ ಕೂಡ ಅತ್ಯಂತ ಆವಶ್ಯಕವಾಗಿದೆ. ಆದರೆ. ಇತ್ತೀಚಿಗೆ ಪ್ರತಿಯೊಂದು ಆಹಾರದ ಸಾಮಗ್ರಿಗಳಲ್ಲಿ ಕಲಬೆರಕೆ ಕಂಡು ಬರುತ್ತಿದೆ. ಈ ಕಲಬೆರಕೆಗೆ ಉಪ್ಪೂ ಕೂಡ ಹೊರತಾಗಿಲ್ಲ ಎಂದರೆ ನಿಮಗೂ ಆಶ್ಚರ್ಯವಾಗಬಹುದು. ನ್ಯಾಷನಲ್ ಸೆಂಟರ್ ಫಾರ್ ಪೋಲಾರ್ ಅಂಡ್ ಓಷನ್ ರಿಸರ್ಚ್ (National Centre for Polar and Ocean Research) ತಮಿಳುನಾಡು ಮೂಲಕ ನಡೆಸಲಾಗಿರುವ ಒಂದು ಅಧ್ಯಯನದ ಪ್ರಕಾರ ಉಪ್ಪಿನ ಸ್ಯಾಂಪಲ್ ನಲ್ಲಿ 100 ರಿಂದ 200 ಮೈಕ್ರೋಪ್ಲಾಸ್ಟಿಕ್ (Microplastics) ಪ್ರಕಾರಗಳು ಕಂಡುಬಂದಿವೆ.
ಇದನ್ನೂ ಓದಿ-Corona Delta Variant: ಸಿಡುಬಿನಂತೆ ಹರಡುತ್ತದೆ ಕೊರೊನಾ ವೈರಸ್ ನ ಈ ರೂಪಾಂತರಿ, ವಿಜ್ಞಾನಿಗಳ ಎಚ್ಚರಿಕೆ!
ಈ ಎರಡು ರಾಜ್ಯಗಳಿಂದ ಉಪ್ಪಿನ ಸ್ಯಾಂಪಲ್ ಪಡೆಯಲಾಗಿದೆ
ಮೈಕ್ರೋಪ್ಲಾಸ್ಟಿಕ್ (Microplastic) ವಾಸ್ತವದಲ್ಲಿ ಪ್ಲಾಸ್ಟಿಕ್ ನ ಅತಿ ಚಿಕ್ಕ ಕಣಗಳಾಗಿರುತ್ತವೆ. ಈ ಮೈಕ್ರೋಪ್ಲಾಸ್ಟಿಕ್ ಕಣಗಳ ಗಾತ್ರ 5 ಮಿಲಿಮೀಟರ್ ಗಿಂತ ಕಡಿಮೆಯಾಗಿರುತ್ತದೆ. ಪರಿಸರದಲ್ಲಿನ ಮಾಲಿನ್ಯದಿಂದಾಗಿ ಅವು ಗಾಳಿಯಲ್ಲಿ ಇರುತ್ತವೆ. National Centre for Polar and Ocean Research ಗುಜರಾತ್ ಮತ್ತು ತಮಿಳುನಾಡಿನಿಂದ ಉಪ್ಪಿನ ಮಾದರಿಗಳನ್ನು ಸಂಶೋಧನೆಗಾಗಿ ತೆಗೆದುಕೊಂಡಿದೆ.
ಇದನ್ನೂ ಓದಿ-NASA Study: 9 ವರ್ಷಗಳ ಬಳಿಕ ಚಂದ್ರನ ಸ್ಥಿತಿಯಲ್ಲಿ ಬದಲಾವಣೆ, ಇಡೀ ವಿಶ್ವಕ್ಕೆ ಎದುರಾಗಲಿದೆ ಭಾರಿ ಅಪಾಯ!
ಸಂಶೋಧನೆಯ ಪ್ರಕಾರ, ಗುಜರಾತಿನಿಂದ ಪಡೆದ 200 ಗ್ರಾಂ ಉಪ್ಪಿನ ಮಾದರಿಯಲ್ಲಿ ಸುಮಾರು 46-115 ಮೈಕ್ರೋಪ್ಲಾಸ್ಟಿಕ್ ಕಣಗಳು ಪತ್ತೆಯಾಗಿವೆ. ಇದೇ ವೇಳೆ ತಮಿಳುನಾಡಿನಿಂದ ಪಡೆಯಲಾಗಿರುವ 200 ಗ್ರಾಂ ಉಪ್ಪಿನಮಾದರಿಯಲ್ಲಿ ಸುಮಾರು 23-110 ಮೈಕ್ರೋಪ್ಲಾಸ್ಟಿಕ್ ಕಣಗಳು ಕಂಡುಬಂದಿವೆ. Polyethylene, Polyester ಹಾಗೂ Polyvinyl Chloride ನಂತಹ (Impurities In Table Salt) ಅತ್ಯಂತ ಅಪಾಯಕಾರಿ ರಾಸಾಯನಿಕಗಳು ಈ ಮಾದರಿಗಳಲ್ಲಿ ಕಂಡುಬಂದಿವೆ. ಇವು ದೇಹಕ್ಕೆ ತುಂಬಾ ಹಾನಿಕಾರಕವಾಗಿದೆ. ಈ ಕುರಿತು ಹೇಳಿಕೆ ನೀಡಿರುವ ರಾಷ್ಟ್ರೀಯ ಧ್ರುವ ಮತ್ತು ಸಾಗರ ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕಿ ವಿದ್ಯಾ ಸಾಕರ್, ಸಂಶೋಧನೆಯ ಉದ್ದಕ್ಕೂ ಕಂಡು ಬಂದಿರುವ ಈ ಕಣಗಳು ದೇಹಕ್ಕೆ ತುಂಬಾ ಹಾನಿಕಾರಕ ಮತ್ತು ಅನೇಕ ರೋಗಗಳಿಗೆ ಕಾರಣವಾಗುವಂತಹ ಕಣಗಳಾಗಿವೆ ಎಂದಿದ್ದಾರೆ.
ಇದನ್ನೂ ಓದಿ-Android ಬಳಕೆದಾರರೇ ಗಮನಿಸಿ! ಫೇಸ್‌ಬುಕ್‌ನ ಲಾಗಿನ್ ಪಾಸ್‌ವರ್ಡ್ ಕದಿಯುತ್ತಿರುವ ಅಪ್ಲಿಕೇಶನ್‌ಗಳ ಬಗ್ಗೆ ಇರಲಿ ಎಚ್ಚರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ