ನವದೆಹಲಿ : ಕಳೆದ ವಾರ iQOO iQOO Z5 5G ಅನ್ನು ಚೀನಾದಲ್ಲಿ ಬಿಡುಗಡೆ ಮಾಡಲಾಗಿದೆ. ಈಗ ಈ ಫೋನ್ ಅನ್ನು ಭಾರತದಲ್ಲಿಯೂ ಪರಿಚಯಿಸಲಾಗಿದೆ. ಈ ಬ್ರ್ಯಾಂಡ್ ಹೊಸ ಪೋನ್‌  iQOO Z3 5Gಯ ​​ಸಕ್ಸಸೆರ್‌ ಅಲ್ಲ ಎನ್ನಲಾಗಿದೆ.  ಆದರೆ ಇದರ ವಿಸ್ತೃತ ರೂಪವಾಗಿದೆ. ಕಂಪನಿಯು ಹಳೆಯ ಮಾದರಿಯನ್ನು ಮಾರಾಟ ಮಾಡುವುದನ್ನು ಮುಂದುವರಿಸುತ್ತದೆ. ಮಧ್ಯ ಶ್ರೇಣಿಯಲ್ಲಿ, ಈ ಫೋನ್ ಭಾರತದ ಹಲವು ದೊಡ್ಡ ಬ್ರಾಂಡ್‌ಗಳೊಂದಿಗೆ ಸ್ಪರ್ಧಿಸಬಹುದು. 


COMMERCIAL BREAK
SCROLL TO CONTINUE READING

IQOO Z5 5G ವಿಶೇಷತೆಗಳು :
iQOO Z5 5G 6.67-ಇಂಚಿನ LCD ಪ್ಯಾನಲ್ ಅನ್ನು ಹೊಂದಿದ್ದು, 2400 x 1080 ಪಿಕ್ಸೆಲ್‌ಗಳು (FHD+) ರೆಸೆಲ್ಯೂಶನ್‌ ಅನ್ನು ಒಳಗೊಂಡಿದೆ.  16.7 ಮಿಲಿಯನ್ ಬಣ್ಣಗಳು, 1500: 1 ಕಾಂಟ್ರಾಸ್ಟ್ ರೆಶಿಯೋ, 20Hz ರಿಫ್ರೆಶ್ ರೇಟ್‌ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಅನ್ನು ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778G ಚಿಪ್‌ಸೆಟ್ ಜೊತೆಗೆ LPDDR5 RAM ಮತ್ತು UFS 3.1 ಸ್ಟೋರೇಜ್‌ನಿಂದ ನಿಯಂತ್ರಿಸಲ್ಪಡುತ್ತದೆ. smartphone 'ವಿಸ್ತೃತ RAM 2.0' (ವರ್ಚುವಲ್ RAM) ವೈಶಿಷ್ಟ್ಯದೊಂದಿಗೆ ಬರುತ್ತದೆ.


ಇದನ್ನೂ ಓದಿ : OPPO ಬಿಡುಗಡೆ ಮಾಡಿದೆ ಅತ್ಯಂತ ತೆಳ್ಳಗಿನ ‘Gold’ Smartphone, ಫೀಚರ್ಸ್‌ ಮತ್ತು ಆಫರ್‌ ಏನಿದೆ ಗೊತ್ತಾ?


iQOO Z5 5G ಕ್ಯಾಮೆರಾ :
ಫೋಟೋಗ್ರಫಿ ಮತ್ತು ವಿಡಿಯೋಗ್ರಫಿಗಾಗಿ, ಇದರಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ನೀಡಲಾಗಿದೆ.  64MP ಪ್ರಾಥಮಿಕ ಸೆನ್ಸಾರ್, 8MP ಅಲ್ಟ್ರಾ-ವೈಡ್ ಯುನಿಟ್ ಮತ್ತು 2MP ಮ್ಯಾಕ್ರೋ ಸ್ನ್ಯಾಪರ್ ಸೇರಿವೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 16MP ಶೂಟರ್ ಇದೆ.


IQOO Z5 5G ಯ ​​ಇತರ ವೈಶಿಷ್ಟ್ಯಗಳು :
ಹ್ಯಾಂಡ್‌ಸೆಟ್ Dual SIM, 5 ಜಿ, ಡ್ಯುಯಲ್-ಬ್ಯಾಂಡ್ ವೈಫೈ, ಜಿಎನ್ಎಸ್ಎಸ್ (ಜಿಪಿಎಸ್, ಗ್ಲೋನಾಸ್, ಗೆಲಿಲಿಯೋ), ಯುಎಸ್‌ಬಿ ಟೈಪ್-ಸಿ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಅನ್ನು ಬೆಂಬಲಿಸುತ್ತದೆ. ಇದು ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಗೈರೊಸ್ಕೋಪ್, ಪ್ರಾಕ್ಸಿಮಿಟಿ ಸೆನ್ಸರ್ ಮತ್ತು ಕಂಪಸ್‌ ನಂತಹ ಎಲ್ಲಾ ಅಗತ್ಯ ಸೆನ್ಸಾರ್‌ ಗಳನ್ನು  ಹೊಂದಿದೆ.


ಇದನ್ನೂ ಓದಿ : Instagramನಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಲು ಈ ಸುಲಭ ಕೆಲಸ ಮಾಡಿ


iQOO Z5 5G ಬ್ಯಾಟರಿ :
ಮೈಕ್ರೊ ಎಸ್ಡಿ ಕಾರ್ಡ್ ಸ್ಲಾಟ್, ಸೈಡ್-ಮೌಂಟೆಡ್ ಫಿಂಗರ್ ಪ್ರಿಂಟ್ ಸೆನ್ಸರ್, ಡ್ಯುಯಲ್ ಸ್ಟೀರಿಯೋ ಸ್ಪೀಕರ್, ಲೀನಿಯರ್ ವೈಬ್ರೇಶನ್ ಮೋಟಾರ್, ಆಂಡ್ರಾಯ್ಡ್ 11 ಆಧಾರಿತ ಫಂಟಚ್ ಓಎಸ್ ಮತ್ತು 44W ಫ್ಲ್ಯಾಶ್ ಚಾರ್ಜ್ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದ ಬೆಂಬಲದೊಂದಿಗೆ 5,000mAh ಬ್ಯಾಟರಿ ಸ್ಮಾರ್ಟ್ ಫೋನಿನ ಇತರ ವೈಶಿಷ್ಟ್ಯಗಳಾಗಿವೆ.


iQOO Z5 5G ಬೆಲೆ :
QOO Z5 5G ಭಾರತದಲ್ಲಿ ಅಕ್ಟೋಬರ್ 3 ರಿಂದ ಎರಡು ಬಣ್ಣದ ರೂಪಾಂತರಗಳಲ್ಲಿ ಮಾರಾಟವಾಗಲಿದೆ. (ಆರ್ಕ್ಟಿಕ್ ಡಾನ್, ಮಿಸ್ಟಿಕ್ ಸ್ಪೇಸ್). Amazon great Indian Festival sale ಸಮಯದಲ್ಲಿ (ಅಕ್ಟೋಬರ್ 3-12) ಸೀಮಿತ ಅವಧಿಗೆ, ಗ್ರಾಹಕರು ಅಮೆಜಾನ್ ಕೂಪನ್ಸ್ (ರೂ. 1,500 ರಿಯಾಯಿತಿ) ಮತ್ತು HDFC ಬ್ಯಾಂಕ್ (ರೂ. 1,500 ರಿಯಾಯಿತಿ) credit/Debit cardಮೂಲಕ ರೂ .3,000 ವರೆಗೆ ರಿಯಾಯಿತಿ ಪಡೆಯಬಹುದು. 


8GB + 128GB ರೂಪಾಂತರದ ಬೆಲೆ - ರೂ 23,990
12GB + 256GB ರೂಪಾಂತರದ ಬೆಲೆ - ರೂ 26,990


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.