ನವದೆಹಲಿ : ಇಂದಿನ ಕಾಲದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಪೈಪೋಟಿ ಇದೆ. ಇ-ಕಾಮರ್ಸ್ ಜಗತ್ತಿನಲ್ಲಿ ಸಹ, ಕಂಪನಿಗಳು ಪರಸ್ಪರ ಸ್ಪರ್ಧಯಲ್ಲಿ ತೊಡಗಿಕೊಂಡಿವೆ. ನಾವು ಆನ್‌ಲೈನ್ ಶಾಪಿಂಗ್ ಕ್ಷೇತ್ರ ದೇಶದ ಎರಡು ದೊಡ್ಡ ವೇದಿಕೆಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ಗಳ(Flipkart and Amazon) ಕುರಿತು ಮಾತನಾಡುತ್ತಿದ್ದೇವೆ. ಎರಡೂ ಸೈಟ್ ಗಳು ತಮ್ಮ ವಾರ್ಷಿಕ ಮಾರಾಟವನ್ನು ಕೆಲವೇ ದಿನಗಳಲ್ಲಿ ಲೈವ್ ಮಾಡಲಿವೆ. ಅಮೆಜಾನ್ ಮಾರಾಟವು ಫ್ಲಿಪ್‌ಕಾರ್ಟ್‌ಗಿಂತ ಮೊದಲು ಆರಂಭವಾಗಬೇಕಿತ್ತು, ಆದರೆ ಈಗ ಅದರೊಂದಿಗೆ ಸ್ಪರ್ಧಿಸಲು, ಫ್ಲಿಪ್‌ಕಾರ್ಟ್ ತನ್ನ 'ಬಿಗ್ ಬಿಲಿಯನ್ ಡೇಸ್' ದಿನಾಂಕವನ್ನು ಬದಲಾಯಿಸಿದೆ. ಈ ಇತ್ತೀಚಿನ ಬದಲಾವಣೆಯ ಬಗ್ಗೆ ತಿಳಿಯೋಣ ..
ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ದಿನಾಂಕ ಬದಲಾಯಿಸಿದೆ
ಸೆಪ್ಟೆಂಬರ್ 23 ರಂದು, ಫ್ಲಿಪ್‌ಕಾರ್ಟ್ ತನ್ನ ಜನಪ್ರಿಯ ವಾರ್ಷಿಕ ಮಾರಾಟವಾದ 'ಬಿಗ್ ಬಿಲಿಯನ್ ಡೇಸ್'(Flipkart Big Billion Days) ದಿನಾಂಕಗಳನ್ನು ಘೋಷಿಸಿತ್ತು. ಈ ಮಾರಾಟವು ಅಕ್ಟೋಬರ್ 7 ರಿಂದ ಆರಂಭವಾಗಬೇಕಿತ್ತು ಮತ್ತು 12 ಅಕ್ಟೋಬರ್ ವರೆಗೆ ನಡೆಯಬೇಕಿತ್ತು. ಆದರೆ ಈಗ ಇದ್ದಕ್ಕಿದ್ದಂತೆ ಫ್ಲಿಪ್‌ಕಾರ್ಟ್ ತಮ್ಮ ಮಾರಾಟವನ್ನು ಅಕ್ಟೋಬರ್ 7 ರ ಬದಲಾಗಿ ಅಕ್ಟೋಬರ್ 3 ರಿಂದ 10 ರವರೆಗೆ ನಡೆಯಲಿದೆ ಎಂದು ಘೋಷಿಸಿದೆ.
ಇದನ್ನೂ ಓದಿ : Bihar Boat Capsized:ಬಿಹಾರದ ಮೋತಿಹಾರಿಯಲ್ಲಿ ಭೀಕರ ದೋಣಿ ದುರಂತ, 22 ಜನರು ನೀರುಪಾಲು, ಒಂದು ಶವ ಪತ್ತೆ
ಏಕೆ ಈ ದಿಟ್ಟ ಹೆಜ್ಜೆ ಇಟ್ಟ ಫ್ಲಿಪ್‌ಕಾರ್ಟ್
ಗಮನಿಸಬೇಕಾದ ಅಂಶವೆಂದರೆ ಫ್ಲಿಪ್‌ಕಾರ್ಟ್‌ನ ಅತಿದೊಡ್ಡ ಸ್ಪರ್ಧಿಯಾದ ಅಮೆಜಾನ್ ತನ್ನ ವಾರ್ಷಿಕ ಮಾರಾಟವಾದ 'ಗ್ರೇಟ್ ಇಂಡಿಯನ್ ಫೆಸ್ಟಿವಲ್'(Amazon Great Indian Festival) ಅನ್ನು ಅಕ್ಟೋಬರ್ 4 ರಂದು ನೇರ ಪ್ರಸಾರ ಮಾಡುತ್ತಿದೆ. ಫ್ಲಿಪ್‌ಕಾರ್ಟ್ ತನ್ನ ಮಾರಾಟದ ದಿನಾಂಕಗಳನ್ನು ಬದಲಾಯಿಸಿರುವುದನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇನಲ್ಲ ಅದು ಅಮೆಜಾನ್‌ಗೆ ಪೈಪೋಟಿ ನೀಡಲು.
ಈ ಕುರಿತು ಫ್ಲಿಪ್ ಕಾರ್ಟ್ ಹೇಳಿದ್ದೇನು?
ಈ ಬದಲಾವಣೆಯ ಕುರಿತು, ಫ್ಲಿಪ್‌ಕಾರ್ಟ್ ಗ್ರೂಪ್‌ನ ಸಿಇಒ(Flipkart CEO) ಶ್ರೀ ಕಲ್ಯಾಣ್ ಕೃಷ್ಣಮೂರ್ತಿ ಅವರು ತಮ್ಮ ಗ್ರಾಹಕರು ಮತ್ತು ಪಾಲುದಾರರನ್ನು ಗಮನದಲ್ಲಿಟ್ಟುಕೊಂಡು ಈ ಬದಲಾವಣೆಯನ್ನು ಮಾಡಿದ್ದಾರೆ ಎಂದು ಹೇಳಿದ್ದಾರೆ. ಅಕ್ಟೋಬರ್ 3 ರಿಂದ ಆರಂಭವಾದ ಮಾರಾಟವು ಹಿಂದಿನ ಆರು ದಿನಗಳಿಗೆ ಹೋಲಿಸಿದರೆ ಈಗ ಎಂಟು ದಿನಗಳವರೆಗೆ ನಡೆಯಲಿದೆ. ಈ ಬದಲಾವಣೆಯನ್ನು ಫ್ಲಿಪ್‌ಕಾರ್ಟ್‌ನ ವೆಬ್‌ಸೈಟ್ ಮತ್ತು ಆಪ್‌ನಲ್ಲಿ ಶೀಘ್ರವೇ ಅಪ್‌ಡೇಟ್ ಮಾಡಲಾಗುವುದು ಮತ್ತು ಎಲ್ಲ ಮಾರಾಟಗಾರರಿಗೂ ಇದರ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಕಲ್ಯಾಣ್ ಹೇಳಿದ್ದಾರೆ.
ಇದನ್ನೂ ಓದಿ : PM Kisan FPO Yojana : ಕೇಂದ್ರ ಸರ್ಕಾರವು ರೈತರಿಗೆ ₹15 ಲಕ್ಷ ಸಹಾಯ ನೀಡುತ್ತಿದೆ : ನೀವು ಈ ರೀತಿ ಅರ್ಜಿ ಸಲ್ಲಿಸಬಹುದು!
ಈ ಮಾರಾಟದಲ್ಲಿ ನೀವು ಎಲ್ಲಾ ರೀತಿಯ ಉತ್ಪನ್ನಗಳ ಮೇಲೆ ಅದ್ಭುತವಾದ ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ಪಡೆಯುತ್ತೀರಿ, ಅದು ಅನೇಕ ಬ್ಯಾಂಕ್ ಕೊಡುಗೆಗಳು ಮತ್ತು ಕ್ಯಾಶ್‌ಬ್ಯಾಕ್(Cash Back Offer) ಅವಕಾಶಗಳೊಂದಿಗೆ ಬರುತ್ತದೆ. ಅಲ್ಲದೆ, ಕೆಲವು ಬ್ರಾಂಡ್‌ಗಳು ತಮ್ಮ ಉತ್ಪನ್ನಗಳನ್ನು ಈ ಸೇಲ್‌ನಲ್ಲಿ ಬಿಡುಗಡೆ ಮಾಡಲಿವೆ. ಈಗ ಈ ಮಾರಾಟವನ್ನು ಮುಂಚಿತವಾಗಿ ಮಾಡಲಾಗಿದೆ, ನೀವು ಅದನ್ನು ತಪ್ಪಿಸಿಕೊಳ್ಳದಂತೆ ಫ್ಲಿಪ್‌ಕಾರ್ಟ್‌ನ ಅಪ್ಲಿಕೇಶನ್ ಅನ್ನು ತ್ವರಿತವಾಗಿ ಡೌನ್‌ಲೋಡ್ ಮಾಡಬೇಕು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.