ಈ ದಿನದಿಂದ Amazon Prime Day Sale ಆರಂಭ , ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿ
ಅಮೆಜಾನ್ ಮೂಲಕ ಅಗತ್ಯ ಮತ್ತು ಆಯ್ಕೆಯ ಸರಕುಗಳನ್ನು ಖರೀದಿಸುವುದಾದರೆ ಇನ್ನೇನು ಕೆಲವೇ ದಿನಗಳಲ್ಲಿ `ಅಮೆಜಾನ್ ಪ್ರೈಮ್ ಡೇ ಸೇಲ್` ಪ್ರಾರಂಭವಾಗಲಿದೆ. ಈ ಸೇಲ್ ನಲ್ಲಿ ಸರಕುಗಳ ಮೇಲೆ ಆಕರ್ಷಕ ಕೊಡುಗೆಗಳನ್ನು ನೀಡಲಾಗುತ್ತಿದೆ.
Amazon Prime Day Sale 2022 : ಕಳೆದ ಕೆಲವು ವರ್ಷಗಳಲ್ಲಿ, ಆನ್‌ಲೈನ್ ಶಾಪಿಂಗ್ ಪ್ರವೃತ್ತಿಯು ಸಾಕಷ್ಟು ಬೆಳೆದಿದೆ. ಜನರು ಆನ್ ಲೈನ್ ಶಾಪಿಂಗ್ ಮಾಡುವ ಅನೇಕ ಪ್ಲಾಟ್‌ಫಾರ್ಮ್‌ಗಳಿವೆ. ಈ ಪೈಕಿ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಹೆಸರು ಹೆಚ್ಚಾಗಿ ಕೇಳಿ ಬರುತ್ತದೆ. ಅಮೆಜಾನ್ ಮೂಲಕ ಅಗತ್ಯ ಮತ್ತು ಆಯ್ಕೆಯ ಸರಕುಗಳನ್ನು ಖರೀದಿಸುವುದಾದರೆ ಇನ್ನೇನು ಕೆಲವೇ ದಿನಗಳಲ್ಲಿ 'ಅಮೆಜಾನ್ ಪ್ರೈಮ್ ಡೇ ಸೇಲ್' ಪ್ರಾರಂಭವಾಗಲಿದೆ . ಈ ಸೇಲ್ ನಲ್ಲಿ ಸರಕುಗಳ ಮೇಲೆ ಆಕರ್ಷಕ ಕೊಡುಗೆಗಳನ್ನು ನೀಡಲಾಗುತ್ತಿದೆ.
ಅಮೆಜಾನ್ ಪ್ರೈಮ್ ಡೇ ಸೇಲ್ :
ಅಮೆಜಾನ್ ತನ್ನ ವಿಶೇಷ ಮಾರಾಟವಾದ 'ಅಮೆಜಾನ್ ಪ್ರೈಮ್ ಡೇ ಸೇಲ್' ಅನ್ನು ಅಧಿಕೃತವಾಗಿ ಘೋಷಿಸಿದೆ. ಈ ಸೇಲ್ ಅನ್ನು ಭಾರತದಲ್ಲಿ ಜುಲೈ 23 ಮತ್ತು 24 ರ ನಡುವೆ ಆಯೋಜಿಸಲಾಗಿದೆ. ಜುಲೈ 23 ರಂದು ಸೇಲ್ ಮಧ್ಯಾಹ್ನ 12 ಗಂಟೆಗೆ ಸೇಲ್ ಪ್ರಾರಂಭವಾಗಿ, ಜುಲೈ 24 ರಂದು ರಾತ್ರಿ 11:59 ರವರೆಗೆ ಲೈವ್ ಆಗಿರಲಿದೆ.
ಇದನ್ನೂ ಓದಿ : ಬಿಎಸ್ಎನ್ಎಲ್ ಬಳಕೆದಾರರಿಗೆ ಡಬಲ್ ಶಾಕ್
ನೆಚ್ಚಿನ ಸರಕುಗಳ ಮೇಲೆ ಸಿಗಲಿದೆ ಭಾರೀ ರಿಯಾಯಿತಿ :
ಅಮೆಜಾನ್ ಪ್ರೈಮ್ ಡೇ ಸೇಲ್ ಸಮಯದಲ್ಲಿ, ಸ್ಮಾರ್ಟ್‌ಫೋನ್‌ಗಳು, ಎಲೆಕ್ಟ್ರಾನಿಕ್ ವಸ್ತುಗಳು, ಅಡುಗೆ ವಸ್ತುಗಳು, ಬಟ್ಟೆಗಳು, ಆಟಿಕೆಗಳು ಮುಂತಾದ ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿ ನೀಡಲಾಗುವುದು. ಐಫೋನ್ 13 ನಂತಹ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳನ್ನು ಸಹ ತುಂಬಾ ಅಗ್ಗವಾಗಿ ಖರೀದಿಸಬಹುದು. ಸೇಲ್‌ನಲ್ಲಿ ಅಮೆಜಾನ್ ಎಕೋ, ಫೈರ್ ಟಿವಿ ಮತ್ತು ಕಿಂಡಲ್ ಡಿವೈಸ್‌ಗಳ ಮೇಲೆ ಭಾರಿ ರಿಯಾಯಿತಿಗಳನ್ನು ಘೋಷಿಸಲಾಗಿದೆ. ಅಮೆಜಾನ್ ಪ್ರೈಮ್ ಡೇ ಸೇಲ್‌ನೊಂದಿಗೆ ಇತ್ತೀಚಿನ ಸ್ಮಾರ್ಟ್ ಸ್ಪೀಕರ್‌ಗಳು, ಸ್ಮಾರ್ಟ್ ಡಿಸ್ಪ್ಲೇಗಳು ಮತ್ತು ಫೈರ್ ಟಿವಿ ಉತ್ಪನ್ನಗಳನ್ನು 55% ರಷ್ಟು ರಿಯಾಯಿತಿಯಲ್ಲಿ ಖರೀದಿಸಲು ಸಾಧ್ಯವಾಗುತ್ತದೆ.
30 ಸಾವಿರಕ್ಕೂ ಹೆಚ್ಚು ಉತ್ಪನ್ನಗಳ ಲಾಂಚ್ :
ಈ ಸೇಲ್‌ನಲ್ಲಿ ರಿಯಾಯಿತಿಗಳು ಮತ್ತು ಆಕರ್ಷಕ ಡೀಲ್‌ಗಳನ್ನು ನೀಡಲಾಗುವುದು. ಮಾತ್ರವಲ್ಲ ಹೊಸ ಉತ್ಪನ್ನಗಳು ಸಹಾ ಮಾರಾಟಕ್ಕೆ ಲಭ್ಯವಿರುವುದು. ಅಮೆಜಾನ್ ಪ್ರೈಮ್ ಡೇ ಸೇಲ್‌ನಲ್ಲಿ 400 ಕ್ಕೂ ಹೆಚ್ಚು ಬ್ರಾಂಡ್‌ಗಳು ಒಟ್ಟು 30 ಸಾವಿರಕ್ಕೂ ಹೆಚ್ಚು ಉತ್ಪನ್ನಗಳನ್ನು ಬಿಡುಗಡೆ ಮಾಡಲಿವೆ. ಇದರಲ್ಲಿ Samsung, Xiaomi, boAt, Fastrack, Tresemme, Mamaearth, Sony, Puma, Whirlpool ಮುಂತಾದ ದೊಡ್ಡ ಬ್ರ್ಯಾಂಡ್‌ಗಳು ಸೇರಿವೆ.
ಇದನ್ನೂ ಓದಿ : Airtel Cheapest Recharge Plan: 150 ರೂ.ಗಳಿಗೂ ಕಮ್ಮಿ ಬೆಲೆಯ ಮೂರು ಜಬರ್ದಸ್ತ್ ಮಾಸಿಕ ಪ್ಲಾನ್ ಬಿಡುಗಡೆಗೊಳಿಸಿದ ಏರ್ಟೆಲ್
ಈ ಸೇಲ್‌ನ ಹೆಸರಿನಂತೆ, ಪ್ರೈಮ್ ಸದಸ್ಯರು ಮಾತ್ರ ಇದರ ಲಾಭವನ್ನು ಪಡೆಯಬಹುದು. ಅಂದರೆ, ಅಮೆಜಾನ್ ಪ್ರೈಮ್ ಡೇ ಸೇಲ್ ನಲ್ಲಿ ಖರೀದಿ ಮಾಡಬೇಕಾದರೆ ಅಮೆಜಾನ್ ಪ್ರೈಮ್‌ಗೆ ಚಂದಾದಾರಿಕೆ ಪಡೆಯಬೇಕಾಗುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.