ನೀವು ಬಳಸುವ ವೆಬ್‌ಸೈಟ್‌ ಅಸಲಿಯೋ ನಕಲಿಯೋ ನಿಮಿಷಗಳಲ್ಲಿ ಪತ್ತೆ ಹಚ್ಚಿ ..!

ಕಂಪನಿಯೊಂದು ವೆಬ್‌ಸೈಟ್ ಅಸಲಿಯೋ ಅಥವಾ ನಕಲಿಯೋ ಎಂಬುದನ್ನು ನಿಮಿಷಗಳಲ್ಲಿ ಪತ್ತೆ ಹಚ್ಚುವ ಟೂಲ್ ಅನ್ನು ಕಂಡು ಹಿಡಿದಿದೆ. ಈ ಉಪಕರಣವನ್ನು ಬಳಸಿಕೊಂಡರೆ ಜನರು ಸೈಬರ್ ಕ್ರಿಮಿನಲ್‌ಗಳ ಜಾಲಕ್ಕೆ ಸಿಲುಕಿ ಹಾಕಿಕೊಳ್ಳುವುದನ್ನು ತಪ್ಪಿಸಬಹುದು. 

Written by - Ranjitha R K | Last Updated : Jul 5, 2022, 11:50 AM IST
  • ಸೈಬರ್ ವಂಚನೆಯ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ.
  • ನಕಲಿ ವೆಬ್‌ಸೈಟ್‌ ಮೂಲಕ ಜನರನ್ನು ವಂಚಿಸಲಾಗುತ್ತಿದೆ
  • ಈಗ ನಕಲಿ ವೆಬ್ ಸೈಟ್ ಪತ್ತೆ ಹಚ್ಚುವುದು ಸುಲಭ
ನೀವು ಬಳಸುವ  ವೆಬ್‌ಸೈಟ್‌  ಅಸಲಿಯೋ ನಕಲಿಯೋ ನಿಮಿಷಗಳಲ್ಲಿ  ಪತ್ತೆ ಹಚ್ಚಿ ..! title=
Online Fraud (file photo)

ಬೆಂಗಳೂರು : ಕಳೆದ ಕೆಲವು ವರ್ಷಗಳಲ್ಲಿ, ಸೈಬರ್ ವಂಚನೆಯ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ನಕಲಿ ವೆಬ್‌ಸೈಟ್‌ಗಳನ್ನು ರಚಿಸುವ ಮೂಲಕ ಬಳಕೆದಾರನ್ನು ವಂಚಿಸಲಾಗುತ್ತಿದೆ. ನಕಲಿ ವೆಬ್‌ಸೈಟ್‌ಗಳ ವಂಚಕರು ಬೇರೆ ಬೇರೆ ರೀತಿಯಲ್ಲಿ ಜನರನ್ನು ತಮ್ಮ ಬಲೆಗೆ ಬೀಳಿಸುತ್ತಾರೆ.  ನಕಲಿ ವೆಬ್ ಸೈಟ್ ಗಳ ಮೂಲಕ ಡೇಟಾ ಹ್ಯಾಕ್ ಮಾಡುವುದು, ಹಣ ವರ್ಗಾವಣೆ ಮಾಡುವುದು ಮುಂತಾದ ಪ್ರಕರಣಗಳು ಬೆಳಕಿಗೆ  ಬರುತ್ತಿರುತ್ತವೆ. ಒಟ್ಟಿನಲ್ಲಿ ಮಾಹಿತಿ ಕೊರತೆ ಹಾಗೂ ನಕಲಿ ವೆಬ್ ಸೈಟ್ ಗಳನ್ನು ಹಿಡಿಯುವ ವ್ಯವಸ್ಥೆ ಇಲ್ಲದ ಕಾರಣ ಜನ ಸೈಬರ್ ಕ್ರಿಮಿನಲ್ ಗಳ ಜಾಲಕ್ಕೆ ಸಿಕ್ಕಿ ಹಾಕಿಕೊಳ್ಳುತ್ತಿದ್ದರು. ಆದರೆ ಇದೀಗ ನಾವು ಬಳಸುವ ವೆಬ್ ಸೈಟ್ ಅಸಲಿಯೋ ನಕಲಿಯೋ ಎನ್ನುವುದನ್ನು ಸುಲಭವಾಗಿ ಕಂಡು ಹಿಡಿಯಬಹುದು. 

ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ ಉಪಕರಣ :
ವರದಿಯ ಪ್ರಕಾರ, ಈ ಹೊಸ ಟೂಲ್‌ನ ವೈಶಿಷ್ಟ್ಯವೆಂದರೆ ಇದು ಬಳಕೆದಾರರಿಗೆ ಯಾವುದೇ ವೆಬ್‌ಸೈಟ್‌ನ  ಅಡ್ರೆಸ್ ನಮೂದಿಸುವ ಆಯ್ಕೆಯನ್ನು ನೀಡುತ್ತದೆ.  ಇದರಿಂದ  ಆ ವೆಬ್‌ಸೈಟ್ ಅಸಲಿಯೋ ನಕಲಿಯೋ ಎನ್ನುವುದನ್ನು ಕಂಡು ಹಿಡಿಯುವುದು ಸಾಧ್ಯವಾಗುತ್ತದೆ. ಈ ಪ್ರಕ್ರಿಯೆಯಲ್ಲಿ, ಈ ಉಪಕರಣವು ವೆಬ್‌ಸೈಟ್‌ಗೆ ವಿಶ್ವಾಸಾರ್ಹ ಸ್ಕೋರ್ ನೀಡುತ್ತದೆ. 

ಇದನ್ನೂ ಓದಿ : ಕಡಿಮೆ ವಿದ್ಯುತ್ ಬಳಕೆಯೊಂದಿಗೆ ಎಸಿ ಅಂತಹ ಹವಾ ನೀಡುವ ಫ್ಯಾನ್

ಟೂಲ್ ಅನ್ನು ಇಂಟರ್ನೆಟ್ ಸೇಫ್ಟಿ ಗ್ರೂಪ್ 'ಗೆಟ್ ಸೇಫ್ ಆನ್‌ಲೈನ್' ವೆಬ್‌ಸೈಟ್‌ನಲ್ಲಿ ಹೋಸ್ಟ್ ಮಾಡಲಾಗಿದೆ. ಇದು  ಫ್ರಾಡ್ ಪ್ರಿವೆಂಶನ್ ಸರ್ವಿಸ್ ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಸ್ಕೋರ್ ಅನ್ನು 40 ಕ್ಕೂ ಹೆಚ್ಚು ಡೇಟಾ ಮೂಲಗಳು ಮತ್ತು ದುರುದ್ದೇಶಪೂರಿತ ವೆಬ್‌ಸೈಟ್ ವರದಿಗಳ ಆಧಾರದ ಮೇಲೆ ಅಲ್ಗಾರಿದಮ್ ಮೂಲಕ ಲೆಕ್ಕಹಾಕಲಾಗುತ್ತದೆ. ಬಳಕೆದಾರರು ಮೇಲೆ ತಿಳಿಸಲಾದ ವೆಬ್‌ಸೈಟ್‌ನ ಅಡ್ರೆಸ್ ನಲ್ಲಿ  ತಿಳಿದುಕೊಳ್ಳಲು ಬಯಸುವ ವೆಬ್‌ಸೈಟ್ ಅನ್ನು ಟೈಪ್ ಮಾಡಬೇಕು. ಇದರ ನಂತರ, ಆ ವೆಬ್‌ಸೈಟ್ ಮುಂದೆ ಸರಿ ಅಥವಾ ತಪ್ಪು ಎಂಬ ಮಾಹಿತಿ ಕಂಡುಬರುತ್ತದೆ. ಈ ಉಪಕರಣವು ಹೇಳಿದ ವೆಬ್‌ಸೈಟ್ ಫಿಶಿಂಗ್ ಅಥವಾ ಮಾಲ್‌ವೇರ್‌ಗಾಗಿ ರಿಪೋರ್ಟ್ ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸುತ್ತದೆ.

ವಂಚಕರ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳದಂತೆ ಜನರನ್ನು ರಕ್ಷಿಸುವುದೇ ಇದರ ಉದ್ದೇಶ ಎಂದು 'ಗೆಟ್ ಸೇಫ್ ಆನ್‌ಲೈನ್' ನ ಸಿಇಒ ಟೋನಿ ನೀಟ್  ತಿಳಿಸಿದ್ದಾರೆ. ಸಣ್ಣ ವ್ಯಾಪಾರಗಳಿಗೆ ಮತ್ತು ಅಗತ್ಯವಿದ್ದವರಿಗೆ ಆನ್‌ಲೈನ್ ಸುರಕ್ಷತಾ ಸಲಹೆಗಳನ್ನು ನೀಡುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಇಂಟರ್ನೆಟ್ ಬಳಕೆಯ ಸಮಯದಲ್ಲಿ ಜನರನ್ನು ಸುರಕ್ಷಿತವಾಗಿರಿಸುವುದು ನಮ್ಮ ಉದ್ದೇಶವಾಗಿದೆ. ಈ ಉದ್ದೇಶಕ್ಕಾಗಿ, ಈ ಉಪಕರಣವನ್ನು ತಯಾರಿಸಲಾಗಿದೆ ಎಂದಿದ್ದಾರೆ. ಆನ್‌ಲೈನ್ ವಂಚನೆಯೂ ಬಹಳವಾಗಿ ನಡೆಯುತ್ತಿರುವ ಈ ಸಂದರ್ಭದಲ್ಲಿ ಬಳಕೆದಾರರಿಗೆ ಸಹಾಯ ಮಾಡಲು ಇದು ಉತ್ತಮ ಸಾಧನವಾಗಿದೆ. ಭೇಟಿ ನೀಡುವ ವೆಬ್‌ಸೈಟ್ ವಿಶ್ವಾಸಾರ್ಹವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತ್ವರಿತವಾಗಿ ಪರಿಶೀಲಿಸಲು ಸಾಧ್ಯವಾಗುವ ಮೂಲಕ, ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಬಹುದು. ಮಾತ್ರವಲ್ಲ ಅಕ್ರಮ ವೆಬ್‌ಸೈಟ್‌ಗಳ ಬಲೆಗೆ ಬೀಳುವುದನ್ನು ತಪ್ಪಿಸಬಹುದು.

ಇದನ್ನೂ ಓದಿ : ಹುಡುಗಿಯರ ಈ ವಿಚಾರಗಳ ಬಗ್ಗೆ ಹೆಚ್ಚು ಸರ್ಚ್ ಮಾಡಿ ತಿಳಿದುಕೊಳ್ಳುತ್ತಾರಂತೆ ಹುಡುಗರು

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News