ನವದೆಹಲಿ: Android 13 Update - ಇಂದಿನ ಕಾಲದಲ್ಲಿ, ಬಹುತೇಕ ಸ್ಮಾರ್ಟ್‌ಫೋನ್‌ (Tech News) ಗಳಲ್ಲಿ ಡ್ಯುಯಲ್ ಸಿಮ್ ಸೇವೆಗಳನ್ನು ಒದಗಿಸಲಾಗುತ್ತಿದೆ. ಇದರರ್ಥ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ಏಕಕಾಲದಲ್ಲಿ ಎರಡು ಫೋನ್ ಸಂಖ್ಯೆಗಳನ್ನು ಬಳಸಬಹುದು. ಶೀಘ್ರದಲ್ಲೇ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಒಂದೇ ಬಾರಿಗೆ ಮೂರು ಫೋನ್ ಸಂಖ್ಯೆಗಳನ್ನು ಬಳಸಲು ನಿಮಗೆ ಸಾಧ್ಯವಾಗಲಿದೆ. ಆದರೆ, ಇದು ಥರ್ಡ್-ಪಾರ್ಟಿ ಅಪ್ಲಿಕೇಶನ್‌ಗಳು ಅಳವಡಿಸಿಕೊಂಡ ಟ್ರಿಕ್ ಅಲ್ಲ. ಅಂಡ್ರಾಯಿಡ್ ನಿಂದ ಅಧಿಕೃತವಾಗಿ ಬಿಡುಗಡೆಯಾಗುತ್ತಿರುವ ವೈಶಿಷ್ಟ್ಯ ಇದಾಗಿದೆ. ವಿಸ್ತೃತ ವಿವರ ಇಂತಿದೆ,

COMMERCIAL BREAK
SCROLL TO CONTINUE READING

Android Updateನಲ್ಲಿ ಬರುತ್ತಿದೆ ಈ ಅದ್ಭುತ ವೈಶಿಷ್ಟ್ಯ
ಆಪಲ್, ಸ್ಯಾಮ್‌ಸಂಗ್ ಮತ್ತು ಗೂಗಲ್‌ನಂತಹ ಕಂಪನಿಗಳು ಶೀಘ್ರದಲ್ಲೇ ತಮ್ಮ ಸ್ಮಾರ್ಟ್‌ಫೋನ್‌ಗಳಿಂದ ಫಿಸಿಕಲ್ ಸಿಮ್ ಸ್ಲಾಟ್ ಅನ್ನು ತೆಗೆದುಹಾಕಲು ಯೋಜನೆ ರೂಪಿಸಿವೆ ಎಂಬ ಹಲವು ವರದಿಗಳು ಕೇಳಿಬಂದಿದ್ದು, e-SIM (eSIM) ಗೆ ಶಿಫ್ಟ್ ಆಗುತ್ತಿವೆ ಎನ್ನಲಾಗಿದೆ. ಈ ಕುರಿತು ಸದ್ಯಕ್ಕೆ ಯಾವುದೇ ರೀತಿಯ ಅಧಿಕೃತ ದೃಢೀಕರಣ ಪ್ರಕಟಗೊಂಡಿಲ್ಲ, ಆದರೆ, ಡ್ರಾಯ್ಡ್ ಹೊಸ ಸಾಫ್ಟ್‌ವೇರ್ ಅಪ್‌ಡೇಟ್‌ನೊಂದಿಗೆ ಬರುತ್ತಿದೆ, ಇದರಲ್ಲಿ ಮಲ್ಟಿಪಲ್ ಎನೇಬಲ್ಡ್ ಪ್ರೊಫೈಲ್ (MEP) ಎಂಬ ವೈಶಿಷ್ಟ್ಯವನ್ನು ಅಂಡ್ರಾಯಿಡ್ ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಈ ವೈಶಿಷ್ಟ್ಯದೊಂದಿಗೆ, ನೀವು ಒಂದೇ ಸ್ಮಾರ್ಟ್‌ಫೋನ್‌ನಲ್ಲಿ ಮೂರು ಸಂಖ್ಯೆಗಳನ್ನು ಬಳಸಲು ಸಾಧ್ಯವಾಗಲಿದೆ. 

ಸ್ಮಾರ್ಟ್‌ಫೋನ್‌ನಲ್ಲಿ ಮೂರು ಸಂಖ್ಯೆಗಳು ರನ್ ಆಗುತ್ತವೆ
ವರದಿಗಳ ಪ್ರಕಾರ, ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂನ ಇತ್ತೀಚಿನ ನವೀಕರಣ, Multipla Enable Profile (MEP) ವೈಶಿಷ್ಟ್ಯವನ್ನು Android 13  (Android 13 Update) ನಲ್ಲಿ ಪರೀಕ್ಷಿಸಲಾಗುತ್ತಿದೆ. ಈ ವೈಶಿಷ್ಟ್ಯದ ಬಿಡುಗಡೆಯ ನಂತರ, ನಿಮ್ಮ Android ಸ್ಮಾರ್ಟ್‌ಫೋನ್‌ನಲ್ಲಿ ಒಂದೇ MEP ಯಲ್ಲಿ ಎರಡು ವಿಭಿನ್ನ ಟೆಲಿಕಾಂ ಕಂಪನಿಗಳ SIM ಕಾರ್ಡ್‌ಗಳನ್ನು ಬಳಸಲು ನಿಮಗೆ ಸಾಧ್ಯವಾಗಲಿದೆ. ಇದರರ್ಥ ನೀವು ಫಿಸಿಕಲ್ ಸಿಮ್‌ಗಾಗಿ ನಿಮ್ಮ ಸ್ಮಾರ್ಟ್ ಫೋನ್‌ನಲ್ಲಿ ಒಂದು ಮತ್ತು ಇ-ಸಿಮ್‌ಗಾಗಿ ಎರಡು ಸ್ಲಾಟ್‌ಗಳನ್ನು ಹೊಂದಿರುವಿರಿ. ಒಟ್ಟಾರೆಯಾಗಿ, ನೀವು ಒಂದು ಸ್ಮಾರ್ಟ್‌ಫೋನ್‌ನಲ್ಲಿ ಮೂರು ಸಂಖ್ಯೆಗಳನ್ನು ಬಳಸಲು ಸಾಧ್ಯವಾಗಲಿದೆ.


ಇದನ್ನೂ ಓದಿ-Royal Enfield Electric: ಶೀಘ್ರದಲ್ಲಿಯೇ ರಾಯಲ್ ಎನ್ಫಿಲ್ದ್ ನಿಂದ Royal Enfield ಇಲೆಕ್ಟ್ರಿಕ್ ಬಿಡುಗಡೆ

ಇ-ಸಿಮ್ ಹೇಗೆ ಕೆಲಸ ಮಾಡುತ್ತದೆ
ಇ-ಸಿಮ್ ಎಂದರೇನು ಮತ್ತು ಅದು ಹೇಗೆ ಕೆಲಸ ಮಾಡುತ್ತದೆ ಎಂಬ ಪ್ರಶ್ನೆಗಳು ನಿಮಗೂ ಕಾಡುತ್ತಿದ್ದರೆ,  ಇದು ಯಾವುದೇ ಸ್ಮಾರ್ಟ್‌ಫೋನ್‌ನಲ್ಲಿ ಕಾರ್ಯನಿರ್ವಹಿಸುವ ಮಾಡೆಲ್ ಆಗಿದೆ. ಇ-ಸಿಮ್ ಎನ್ನುವುದು ಸಿಮ್ ಆಧಾರಿತ ಸಾಫ್ಟ್‌ವೇರ್ ಆಗಿದ್ದು, ಇದು, ವಾಸ್ತವದಲ್ಲಿ  ಕಾರ್ಯನಿರ್ವಹಿಸುತ್ತದೆ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ಅದನ್ನು ಭೌತಿಕವಾಗಿ ಇನ್ಸ್ಟಾಲ್ ಮಾಡಬೇಕಾಗಿಲ್ಲ.


ಇದನ್ನೂ ಓದಿ-Honda: 1 ಕೋಟಿಗೂ ಅಧಿಕ ಭಾರತೀಯರ ಈ ಅಚ್ಚುಮೆಚ್ಚಿನ ಬೈಕ್ ಅನ್ನು ಕೇವಲ 5999 ಪಾವತಿಸಿ ಮನೆಗೆ ಕೊಂಡೊಯ್ಯಿರಿ!

ಆಂಡ್ರಾಯ್ಡ್‌ನ (Android 13) ಇತ್ತೀಚಿನ ಅಪ್‌ಡೇಟ್‌ನಲ್ಲಿ ಬರುವ ಈ MEP ವೈಶಿಷ್ಟ್ಯವನ್ನು ಬಳಸಲು, ನೀವು ಇನ್ನೂ ಕೆಲವು ತಿಂಗಳುಗಳು ಕಾಯಬೇಕಾಗಲಿದೆ. ಆಂಡ್ರಾಯ್ಡ್ (Android) 13 ಅಪ್‌ಡೇಟ್ ಈ ವರ್ಷ ಜುಲೈನಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.


ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.