Antarctica Ice Bergs Melting - ಭೂಮಿಗೆ ಹಿಮಯುಗದ ಆಗಮನ! ಆತಂಕ ವ್ಯಕ್ತಪಡಿಸಿದ ವಿಜ್ಞಾನಿಗಳು
Antarctica Ice Bergs Melting - ಗ್ಲೋಬಲ್ ವಾರ್ಮಿಂಗ್ ಕಾರಣ ವಾತಾವರಣದಲ್ಲಿ ಜಲವಾಯು ಪರಿವರ್ತನೆಯಾಗುತ್ತಿದೆ. ಇದರಿಂದ ಅಂಟಾರ್ಕ್ಟಿಕಾದ ಐಸ್ ಬರ್ಗ್ ಗಳು ಕರಗಲಾರಂಭಿಸಿವೆ. ಇದರಿಂದ ಭೂಮಿಯ ಮೇಲೆ ಹಿಮಯುಗ ಆಗಮಿಸಲಿದೆ ಎಂಬ ಆತಂಕ ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ.
Antarctica Ice Bergs Melting - ನವದೆಹಲಿ: ಪ್ರಸ್ತುತ ಇಡೀ ವಿಶ್ವ ಜಾಗತಿಕ ತಾಪಮಾನ ಏರಿಕೆ ಎದುರಿಸುತ್ತಿದೆ. ವಿಜ್ಞಾನಿಗಳು ಕೂಡ ಈ ಸಮಸ್ಯೆ ಬಗೆಹರಿಸಲು ಯತ್ನಿಸುತ್ತಿದ್ದಾರೆ. ಜಲವಾಯು ಪರಿವರ್ತನೆಯ ಕಾರಣ ಹಲವು ಘಟನೆಗಳು ನಡೆಯುತ್ತಿವೆ. ವಿಜ್ಞಾನಿಗಳಿಗೆ ಇದರ ಹಲವು ಸಂಕೇತಗಳು ದೊರೆತಿವೆ. ಇವುಗಳಲ್ಲಿ ಎಲ್ಲಕ್ಕಿಂತ ಆತಂಕದ ಸಂಗತಿ ಎಂದರೆ ಭೂಮಿಯ ಧ್ರುವಗಳಲ್ಲಿ ಹಿಮ ಕರಗಲಾರಂಭಿಸಿದೆ. ಇದರಿಂದ ಸಮುದ್ರಗಳ ಮಟ್ಟದಲ್ಲಿ ಭಾರಿ ಏರಿಕೆಯಾಗುವ ಸಾಧ್ಯತೆ ಇದೆ. ಈ ಕುರಿತಾಗಿ ಪ್ರಕಟಗೊಂಡಿರುವ ಒಂದು ಹೊಸ ಅಧ್ಯಯನದ ಪ್ರಕಾರ, ಅಂಟಾರ್ಕ್ಟಿಕಾದ ಮಂಜುಗಡ್ಡೆಗಳ (Ice Bergs)ಕರಗುವಿಕೆಯಿಂದ ಭೂಮಿಯ ಮೇಲೆ ಹಿಮಯುಗದ ಆಗಮನವಾಗಲಿದೆ ಎನ್ನಲಾಗಿದೆ. ಆದರೆ, ಈ ಬಾರಿಯ ಹಿಮಯುಗ ಸ್ವಲ್ಪ ಭಿನ್ನವಾಗಿರಲಿದೆ.
ಭೂಮಿಯ ಮೇಲಿನ ಪರಿಸ್ಥಿತಿ ಹಿಮಯುಗದತ್ತ ಸಾಗುತ್ತಿದೆ
ಮಹಾಸಾಗರಗಳ ಈ ಪ್ರಕ್ರಿಯೆಯ ಪರಿಣಾಮ ಗ್ರೀನ್ ಹೌಸ್ ಎಫೆಕ್ಟ್ ಕಡಿಮೆಯಾಗಲಿದ್ದು, ಭೂಮಿಯ ಮೇಲಿನ ಪರಸ್ಥಿತಿ ಹಿಮಯುಗದೆಡೆಗೆ ಸಾಗಲಿದೆ. ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಕಾರ್ಡಿಫ್ ಯುನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿರುವ ಇಯಾನ್ ಹಾಲ್, ಅಂಟಾರ್ಕ್ಟಿಕಾ ಹಾಗೂ ಭೂಮಿಯ ಸೂರ್ಯನ ಕಕ್ಷೆಗೆ ಸಂಬಂಧಿಸಿದ ಜಲವಾಯು ಸಿಸ್ಟಂನ ಪ್ರಾಕೃತಿಕ ಲಯದ ಪ್ರತಿ ದಕ್ಷಿಣದ ಮಹಾಸಾಗರದಲ್ಲಿ ಪ್ರತಿಕ್ರಿಯೆಗಳನ್ನು ಸ್ಥಾಪಿಸುತ್ತಿವೆ ಎಂದು ಹೇಳಿದ್ದಾರೆ.
ಸೂರ್ಯನ ಉಷ್ಣಾಂಶದಲ್ಲಾಗುತ್ತಿವೆ ಈ ಬದಲಾವಣೆಗಳು
'ನೇಚರ್' ಜರ್ನಲ್ ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ ಕಾರ್ಡಿಫ್ ಯುನಿವರ್ಸಿಟಿಯ ಸಂಶೋಧನಾ ವಿಜ್ಞಾನಿಗಳು ಭೂಮಿಯ ಮೇಲೆ ಹಿಮಯುಗದ ಆರಂಭ ಹೇಗಾಗುತ್ತದೆ ಎಂಬುದರ ಮೇಲೆ ಬೆಳಕುಚೆಲ್ಲಿದ್ದಾರೆ. ಇದುವರೆಗೆ ದೊರೆತ ಮಾಹಿತಿಗಳ ಪ್ರಕಾರ, ಭೂಮಿ ಸೂರ್ಯನ ಸುತ್ತ ಸುತ್ತುವ ಕಕ್ಷೆಯಲ್ಲಿ ಸಾವಿರಾರು ವರ್ಷಗಳಲ್ಲಿ ಕಂಡುಬಂದಿರುವ ಬದಲಾವಣೆಗಳ ಕಾರಣ ಹಿಮಯುಗ ಆಗಮಿಸುತ್ತದೆ ಎಂದು ಭಾವಿಸಲಾಗಿದೆ. ಇದರಿಂದ ಭೂಮಿಗೆ ಸೂರ್ಯನಿಂದ ಬರುವ ಉಷ್ಣಾಂಶದಲ್ಲಿ ಅಡೆತಡೆ ಉಂಟಾಗುತ್ತದೆ.
ಇದನ್ನು ಓದಿ-Earth Rotation Video: ಭೂಮಿ ತಿರುಗುವಿಕೆಯನ್ನು ನೀವು ನೋಡಿದ್ದಿರಾ? ಇಲ್ಲಿದೆ ರೋಮಾಂಚಕ ವಿಡಿಯೋ
ಹಿಮಯುಗದ ಆರಂಭಕ್ಕೂ ಮುನ್ನ ಈ ಘಟನೆಗಳು ನಡೆಯುತ್ತವೆ
ಈ ಅಧ್ಯಯನದ ವೇಳೆ ವಿಜ್ಞಾನಿಗಳು ಈ ಹಿಂದಿನ ಜಲವಾಯು ಪರಿಸ್ಥಿತಿಗಳನ್ನು ಪತ್ತೆಹಚ್ಚಿದ್ದಾರೆ. ಹಿಮಗಡ್ಡೆಗಳ ಕರಗುವಿಕೆ ಹಿನ್ನೆಲೆ ಅಂಟಾರ್ಕ್ಟಿಕಾದ ಗಡ್ಡೆಗಳು ಸಮುದ್ರದಲ್ಲಿ ಬೀಳುವುದರಿಂದ ಸಮುದ್ರದ ಆಳದಲ್ಲಿನ ಪ್ರವಾಹದ ಮೇಲೆ ಇವು ಪ್ರಭಾವ ಬೀರುತ್ತವೆ ಎನ್ನಲಾಗಿದೆ. ಕಳೆದ 16 ಲಕ್ಷ ವರ್ಷಗಳಲ್ಲಿ ಕಂಡುಬಂದಿರುವ ಹಿಮಯುಗದ ಆರಂಭದ ಮೊದಲು ಈ ಘಟನೆಗಳು ನಡೆದಿವೆ ಎಂಬುದು ನಮ್ಮ ಆತಂಕ ಹೆಚ್ಚಿಸಿದೆ ಎಂದು ಕಾರ್ಡಿಫ್ ವಿವಿಯ ಐಡನ್ ಹೇಳುತ್ತಾರೆ.
ಇದನ್ನು ಓದಿ-Life On Earth: ಭೂಮಿಯ ಮೇಲಿನ ಜೀವನ ಅಸ್ತಿತ್ವದ ಕುರಿತು ವಿಜ್ಞಾನಿಗಳು ಹೇಳಿದ್ದೇನು?
ನಾವು ಇಂಟರ್ ಗ್ಲೇಸಿಯರ್ ಕಾಲದಲ್ಲಿ ವಾಸಿಸುತ್ತಿದ್ದೇವೆ
ಕಳೆದ 30 ಲಕ್ಷ ವರ್ಷಗಳಿಂದ ಭೂಮಿ(Earth) ನಿರಂತರವಾಗಿ ಹಿಮಯುಗದ (Iceage)ಪರಿಸ್ಥಿತಿಯಲ್ಲಿದೆ. ಪ್ರಸ್ತುತ ನಾವು ಇಂಟರ್ಗ್ಲೇಸಿಯರ್ ಕಾಲದಲ್ಲಿದ್ದು, ಈ ಕಾಲದಲ್ಲಿ ತಾಪಮಾನ ತುಲನಾತ್ಮಕ ರೂಪದಲ್ಲಿ ಬಿದಿಯಾಗಿದೆ. ಆದರೆ, ಗ್ಲೋಬಲ್ ವಾರ್ಮಿಂಗ್ ಪ್ರಭಾವ ಹೆಚ್ಚಾದಂತೆ ಹಿಮಯುಗದ ನೈಸರ್ಗಿಗೆ ಲಯ ಹಾಳಾಗಲಿದೆ ಮತ್ತು ದಕ್ಷಿಣ ಮಹಾಸಾಗರ (Southern Ocean) ಅಂಟಾರ್ಕ್ಟಿಕಾದ (Antarctica) ಹಿಮಗಡ್ಡೆಗಳಿಗೆ ಬಿಸಿ ತಲುಪಿಸಲಿವೆ. ಮಂಜುಗಡ್ಡೆ ಕರಗಿ ಸಮುದ್ರದಲ್ಲಿ ಬೀಳುವ ಕಾರಣ, ಮಹಾಸಾಗರಗಳ ಆಳದಲ್ಲಿ ಪ್ರವಾಹ ಬದಲಾವಣೆ ಆರಂಭಗೊಳ್ಳಲಿದೆ ಮತ್ತು ಇದು ಹಿಮಯುಗಕ್ಕೆ ನಾಂದಿಹಾಡಲಿದೆ ಎಂದು ಹೇಳಲಾಗಿದೆ.
ಇದನ್ನು ಓದಿ- ವಿಜ್ಞಾನಿಗಳಿಗೆ ದೊರೆತ Super Earth, ಭೂಮಿಯ ರೀತಿಯ ಜೀವನದ ಸಾಧ್ಯತೆ!