Life On Earth: ಭೂಮಿಯ ಮೇಲಿನ ಜೀವನ ಅಸ್ತಿತ್ವದ ಕುರಿತು ವಿಜ್ಞಾನಿಗಳು ಹೇಳಿದ್ದೇನು?

Life On Earth: ಭೂಮಿಯ (Earth) ಮೇಲಿನ ಜೀವದ ಅಸ್ತಿತ್ವಕ್ಕೆ ಒಂದು ಮುಖ್ಯ ಕಾರಣವೆಂದರೆ ಮಧ್ಯಭಾಗದಲ್ಲಿರುವ (Core) ಅದರ ಅತ್ಯಂತ ಬಿಸಿ ತಿರುಳು. ವಿಜ್ಞಾನಿಗಳು ಇದು ಎಷ್ಟು ಕಾಲ ಬಿಸಿಯಾಗಿರುತ್ತದೆ ಎಂಬುದನ್ನು ಕಂಡುಹಿಡಿಯುವ ಪ್ರಯತ್ನ ನಡೆಸಿದ್ದಾರೆ.

Written by - Nitin Tabib | Last Updated : Jan 10, 2021, 03:33 PM IST
  • ಈ ಕಾರಣದಿಂದ ಭೂಮಿಯ ಮೇಲೆ ಜೀವನ ಅಸ್ತಿತ್ವದಲ್ಲಿದೆ.
  • ಹಲವು ಪ್ರಕ್ರಿಯೆಗಳಲ್ಲಿ ಭೂಮಿಯ ಮಧ್ಯಭಾಗ ಮಹತ್ವದ ಪಾತ್ರ ನಿರ್ವಹಿಸುತ್ತದೆ.
  • ಇದು ಟೆಕ್ಟೋನಿಕ್ ತಟ್ಟೆಗೆ ಗತಿ ಅಥವಾ ವೇಗ ನೀಡುತ್ತದೆ.
Life On Earth: ಭೂಮಿಯ ಮೇಲಿನ ಜೀವನ ಅಸ್ತಿತ್ವದ ಕುರಿತು ವಿಜ್ಞಾನಿಗಳು ಹೇಳಿದ್ದೇನು? title=
Life On Earth (Representational Image)

Life On Earth: ನವದೆಹಲಿ - ನಮ್ಮ ಭೂಮಿಯಲ್ಲಿ ಹಲವು ವಿಶೇಷತೆಗಳಿವೆ. ಈ ವಿಶೇಷತೆಗಳ ಕಾರಣವೇ ಇಲ್ಲಿ ಜೀವನ ಸಾಧ್ಯವಾಗಿದೆ. ಭೂಮಿಯ ಮೇಲಿನ ಜೀವನ ಅಸ್ತಿತ್ವದ ಅತಿ ದೊಡ್ಡ ಕಾರಣ ಎಂದರೆ ಭೂಮಿಯ ಮಧ್ಯಭಾಗದಲ್ಲಿರುವ ಅದರ ಬಿಸಿ ತಿರುಳು. ಇದಕ್ಕೆ ಭೂಮಿಯ ಹೃದಯ ಎಂದೂ ಕೂಡ ಹೇಳಲಾಗುತ್ತದೆ. ಭೂಮಿಯ ಮೇಲೆ ಅಸ್ತಿತ್ವ ಎಷ್ಟು ಕಾಲ ಉಳಿಯಲಿದೆ ಎಂಬ ಪ್ರಶ್ನೆಗೆ ವಿಜ್ಞಾನಿಗಳು ಉತ್ತರ ಕಂಡುಹಿಡಿಯಲು ಪ್ರಯತ್ನಿಸಿದ್ದಾರೆ. ಅಂದರೆ, ಭೂಮಿಯ ಈ ಮಧ್ಯಭಾಗದ ತಿರುಳು  (Know How Long The Earth's Core Will Be Able To Sustain Life On Earth)  ಎಷ್ಟು ಸಮಯದವರೆಗೆ ಬಿಸಿ ಇರಲಿದೆ ಎಂಬುದನ್ನು ವಿಜ್ಞಾನಿಗಳು ಕಂಡುಹಿಡಿಯಲು ಪ್ರಯತ್ನಿಸಿದ್ದಾರೆ. 

ತುಂಬಾ ಮಹತ್ವಪೂರ್ಣವಾಗಿದೆ ಭೂಮಿಯ ಈ ಮಧ್ಯಭಾಗದ ತಿರುಳು
ಅನೇಕ ಪ್ರಕ್ರಿಯೆಗಳಲ್ಲಿ ಭೂಮಿಯ ಈ ಮಧ್ಯಭಾಗದ ತಿರುಳು ಮಹತ್ವದ ಪಾತ್ರ ನಿರ್ವಹಿಸುತ್ತದೆ. ಇದು ಟೆಕ್ಟೋನಿಕ್ ತಟ್ಟೆಗೆ ಗತಿ ನೀಡುತ್ತದೆ ಮತ್ತು ಮುಖ್ಯವಾಗಿ, ಇದು ಸೂರ್ಯನ ಅಪಾಯಕಾರಿ ವಿಕಿರಣದಿಂದ ಭೂಮಿಯನ್ನು ರಕ್ಷಿಸುತ್ತದೆ. ಇದಕ್ಕೆ ಹೆಚ್ಚಿನ ಶಕ್ತಿಯ ಅಗತ್ಯತೆ ಇರುತ್ತದೆ. ಇದು ಶಕ್ತಿಯುತ ಕಾಂತಕ್ಷೇತ್ರವನ್ನು ಸೃಷ್ಟಿಸುತ್ತದೆ.

ಅತಿ ಹೆಚ್ಚು ಶಕ್ತಿ ಬೇಕಾಗುತ್ತದೆ
ಭೂಮಿಯ ಈ ಮಧ್ಯಭಾಗಕ್ಕೆ ಅತಿ ಹೆಚ್ಚು ಉಷ್ಣಾಂಶ ಬೇಕಾಗುತ್ತದೆ ಮತ್ತು ಇದು ನಿಧಾನಗತಿಯಲ್ಲಿ ತಣ್ಣಗಾಗುತ್ತಿದೆ ಎಂಬುದು ವಿಜ್ಞಾನಿಗಳ ಮಾತುಗಳಿಂದ ಸಾಬೀತಾಗುತ್ತದೆ. ಭೂಮಿಯ ಮಧ್ಯಭಾಗದ ತಾಪಮಾನ ಸೂರ್ಯನ (Sun) ಮೇಲ್ಮೈ ಉಷ್ಣಾಂಶಕ್ಕಿಂತ ಹೆಚ್ಚಾಗಿದೆ ಎಂದರೆ ನಿಮಗೂ ಆಶ್ಚರ್ಯವಾಗಲಿದೆ. ಇದು 10 ಸಾವಿರ ಡಿಗ್ರೀ ಸೆಲ್ಸಿಯಸ್ ನಷ್ಟಿದೆ.

ವಿಶಿಷ್ಟ ರಕ್ಷಾ ಕವಚ
ಭೂಮಿಯ (Earth) ಬೃಹತ್ ಕಾಂತೀಯ ಕ್ಷೇತ್ರ ಬಾಹ್ಯಾಕಾಶದಲ್ಲಿ ದೂರದವರೆಗೆ ಹರಡಿದೆ. ಇದರಿಂದಾಗಿ ಸೂರ್ಯನಿಂದ ಬರುವ ಆವೇಶಕ್ಕೆ ಒಳಗಾದ ಕಣಗಳು ಭೂಮಿಯ ಹತ್ತಿರ ಬರಲು ಸಾಧ್ಯವಾಗುವುದಿಲ್ಲ. ಅಷ್ಟೇ ಅಲ್ಲ ಈ ಕ್ಷೇತ್ರದಿಂದಾಗಿ, ಶಕ್ತಿಯುತ ಎಲೆಕ್ಟ್ರಾನ್‌ಗಳು ಭೂಮಿಯೊಂದಿಗೆ ಘರ್ಷಿಸುವುದಿಲ್ಲ, ಹೀಗಾಗಿ ಈ ವಿಕೀರಣಗಳಿಂದ ಹಾಗೂ ಮಳೆಗಳಿಂದ ಭೂಮಿಯ ಮೇಲಿನ ಜೀವನವು ಪ್ರಭಾವಕ್ಕೊಳಗಾಗುವುದಿಲ್ಲ.

ಇದನ್ನು ಓದಿ- Earth Rotation:ಭೂಮಿ ತಿರುಗುವಿಕೆ ವೇಗದಲ್ಲಿ ಹೆಚ್ಚಳ, ದಣಿದ ಗಡಿಯಾರಗಳು, ಆತಂಕಕ್ಕೊಳಗಾದ ವಿಜ್ಞಾನಿಗಳು

ಇದೆ ಕಾರಣದಿಂದ ಭೂಮಿಯ ಮೇಲೆ ಜೀವನ ಅಸ್ತಿತ್ವದಲ್ಲಿದೆ.
ಈ ಆಯಸ್ಕಾಂತೀಯ ಕ್ಷೇತ್ರದ ಕಾರಣ ಶಕ್ತಿಯುತ ಹಾಗೂ ಆವೇಶಕ್ಕೆ ಒಳಗಾದ ಕಣಗಳು ಹಾಗೂ ಎಲೆಕ್ಟ್ರಾನ್ ಗಳು ನಿರ್ಧಿಷ್ಟ ಪ್ರದೇಶದಲ್ಲಿಯೇ ಉಳಿದುಹೋಗುತ್ತವೆ ಮತ್ತು ಅವು ಭೂಮಿಯ ಹತ್ತಿರ ಬರುವುದಿಲ್ಲ. ಈ ಪ್ರದೇಶವನ್ನು ವ್ಯಾನ್ ಅಲನ್ ಬೆಲ್ಟ್ ಎಂದು ಕರೆಯಲಾಗುತ್ತದೆ. ಇದೆ ಕಾರಣದಿಂದ ಭೂಮಿಯ ಮೇಲಿನ ಜೀವನ ನಿರಂತರವಾಗಿ ಅಭಿವೃದ್ಧಿ ಹೊಂದುತ್ತದೆ. ಇದು ಒಂದು ವೇಳೆ ತನ್ನ ಅಸ್ತಿತ್ವ ಕಳೆದುಕೊಂಡರೆ ಸೌರ ಮಾರುತಗಳು ಓಝೋನ್ ಪದರನ್ನು ಸ್ಫೋಟಿಸಲಿವೆ. ಬಳಿಕ ನೆರಳಾತೀತ ವಿಕಿರಣಗಳು ಭೂಮಿಯನ್ನು ಆವರಿಸಲಿವೆ ಮತ್ತು ಭೂಮಿಯ ಮೇಲೆ ಜೀವನ ನಡೆಸುವುದು ತುಂಬಾ ಕಷ್ಟಕರವಾಗಲಿದೆ.

ಇದನ್ನು ಓದಿ- Research: ಸಾವಿನ ನಿಖರ ಸಮಯ ತಿಳಿದುಕೊಳ್ಳಬೇಕೆ? ಈ ಸುದ್ದಿ ತಪ್ಪದೆ ಓದಿ

ಭೂಮಿಯ ಗರ್ಭದಲ್ಲಿರುವ ಈ ಉಷ್ಣಾಂಶ ಎಲ್ಲಿಯವರೆಗೆ ತಣ್ಣಗಾಗಲಿದೆ?
ಭೂಮಿ ನಿಧಾನ ಗತಿಯಲ್ಲಿ ತಣ್ಣಗಾಗುತ್ತಿದೆ ಎಂದರೂ ಕೂಡ, ಅದು ಪ್ರಾಚೀನ ಕಾಲದಲ್ಲಿ ಒಂದು ಬೆಂಕಿಯ ಚೆಂಡು ಆಗಿತ್ತು. ನಂತರದ ಕಾಲದಲ್ಲಿ ಅದರ ಉಷ್ಣಾಂಶದಲ್ಲಿ ಇಳಿಕೆಯಾಗಲಾರಂಭಿಸಿದೆ. ಆದರೆ, ಭೂಮಿಯ ಮೆಂಟರ್ ಹಾಗೂ ಕೋರ್ ಪದರುಗಳು ಇನ್ನೂ ಬಿಸಿಯಾಗಿರಲು ಕಾರಣ ಎಂದರೆ, ಭೂಮಿಯ ಆಳದಲ್ಲಿ ಕಂಡು ಬರುವ ವಿಕಿರಣಶೀಲ ವಸ್ತುಗಳು ಭೂಮಿಯ ಮಧ್ಯಭಾಗಕ್ಕೆ ಹತ್ತಿರದಲ್ಲಿರುವುದು.

ಇದನ್ನು ಓದಿ- Space Scienceಗಾಗಿ ಕುತೂಹಲಕಾರಿಯಾಗಿದೆ ಈ ವರ್ಷ, ಇಲ್ಲಿದೆ ಡೀಟೇಲ್ಸ್

ವಿಕಿರಣಶೀಲ ವಸ್ತುಗಳ ಪಾತ್ರವೇನು?
ವಿಕಿರಣಶೀಲ ವಸ್ತುಗಳ ವಿಭಜನಾ ಪ್ರಕ್ರಿಯೆಯಿಂದ ಎಷ್ಟು  ಪ್ರಮಾಣದ ಶಾಖ ಉತ್ಪತ್ತಿಯಾಗುತ್ತದೆ ಮತ್ತು ಅದು ಭೂಮಿಯ ಮಧ್ಯಭಾಗವನ್ನು ಬಿಸಿಯಾಗಿಡಲು ಎಷ್ಟು ಸಹಾಯ ಮಾಡುತ್ತದೆ ಎಂದು ತಿಳಿಯುವುದು ಕಷ್ಟ. ಆದರೆ ಒಂದು ವೇಳೆ ಭೂಮಿಯ ಮಧ್ಯಭಾಗದಲ್ಲಿರುವ ಉಷ್ಮಾಂಶ ಪ್ರಾಚೀನ ಉಷ್ಣಾಂಶವಾಗಿದ್ದರೆ, ಅದು ಬೇಗನೆ ತಣ್ಣಗಾಗಲಿದೆ ಎಂಬುದು ಮಾತ್ರ ನಿಜ. ಇನ್ನೊಂದೆಡೆ ಈ ಉಷ್ಣಾಂಶದಲ್ಲಿ ಬಹುತೇಕ ಪಾಲುದಾರಿಕೆ ವಿಕಿರಣಶೀಲ ವಸ್ತುಗಳದ್ದಾಗಿದೆ ಎಂದಾದಲ್ಲಿ ಭೂಮಿಯ ಮಧ್ಯಭಾಗ ದೀರ್ಘಕಾಲದವರೆಗೆ ಉಷ್ಣಾಂಶದಿಂದ ಕೂಡಿರಲಿದೆ.

ಇದನ್ನು ಓದಿ- ನಿಜವಾಗುತ್ತಾ Nostradamus ಭವಿಷ್ಯವಾಣಿ? ಭೂಮಿಯತ್ತ ಧಾವಿಸುತ್ತಿದೆ ಬೃಹದಾಕಾರದ ಕ್ಷುದ್ರ ಗ್ರಹ

ಎಲ್ಲಿಯವರೆಗೆ ಭೂಮಿಯ ಮಧ್ಯಭಾಗ ಬಿಸಿಯಾಗಿರಲಿದೆ?
ಭೂಮಿಯ ಗರ್ಭ ಅತಿ ವೇಗವಾಗಿ ತಣ್ಣಗಾಗುತ್ತಿದೆ ಎಂದು ಭಾವಿಸಿದರೂ ಕೂಡ ಈ ಪ್ರಕ್ರಿಯೆ ಪೂರ್ಣಗೊಳ್ಳಲು 20 ಶತಕೋಟಿ ವರ್ಷಗಳು ಬೇಕಾಗಲಿವೆ ಮತ್ತು ಇದೊಂದು ಸುದೀರ್ಘ ಕಾಲದ ಪ್ರಕ್ರಿಯೇಯಾಗಿದ್ದು, ಭೂಮಿಯ ಗರ್ಭ ತಣ್ಣಗಾಗುವ ಮೊದಲು ಸೂರ್ಯ ತಣ್ಣಗಾಗಲಿದ್ದಾನೆ. ಏಕೆಂದರೆ ಸೂರ್ಯ ತಣ್ಣಗಾಗಲು 5 ಶತಕೋಟಿ ವರ್ಷಗಳ ಕಾಲಾವಕಾಶ ಬೇಕಾಗಲಿದೆ.  ವಿಶೇಷ ರೀತಿಯ ಸಂವೇದಕಗಳನ್ನು ಬಳಸಿಕೊಂಡು ಜಿಯೋನ್ಯೂಟ್ರಿನೊಗಳ ಸಹಾಯದಿಂದ ವಿಜ್ಞಾನಿಗಳು ಮಧ್ಯಭಾಗದ ಪರಮಾಣು ಇಂಧನವನ್ನು ಪತ್ತೆ ಹಚ್ಚುತ್ತಾರೆ. ಉಳಿದಿರುವದನ್ನು ಕಂಡುಹಿಡಿಯಲು, ವಿಜ್ಞಾನಿಗಳು ಜಿಯೋನ್ಯೂಟ್ರಿನೊಗಳಿಗೆ ಸಹಾಯ ಮಾಡುವ ವಿಶೇಷ ರೀತಿಯ ಸಂವೇದಕವನ್ನು  ಬಳಸಬೇಕಾಗುತ್ತದೆ.

ಇದನ್ನು ಓದಿ- Aliens On Earth: ಭೂಮಿಗೆ ಬರಲಿವೆಯೇ Aliens? ವಿಜ್ಞಾನಿಗಳು ಹೇಳುವುದೇನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News