Manual Car Tips: ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಕಾರುಗಳ ಮಾರಾಟ ತುಂಬಾ ಹೆಚ್ಚಾಗಿದೆ. ಆದಾಗ್ಯೂ, ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿರುವ ಕಾರುಗಳನ್ನೇ ಹೆಚ್ಚು ಇಷ್ಟಪಡುವವರೂ ಇದ್ದಾರೆ. ನೀವೂ ಕೂಡ  ಮ್ಯಾನುವಲ್ ಟ್ರಾನ್ಸ್‌ಮಿಷನ್ ಕಾರುಗಳನ್ನು ಇಷ್ಟಪಡುವವರಾಗಿದ್ದು   ಮ್ಯಾನುವಲ್ ಟ್ರಾನ್ಸ್‌ಮಿಷನ್ ಕಾರ್ ಮಾಲೀಕರಾಗಿದ್ದರೆ ಕೆಲವು ವಿಚಾರಗಳ ಬಗ್ಗೆ ನಿಗಾ ವಹಿಸುವುದು ತುಂಬಾ ಅಗತ್ಯ. ಇಲ್ಲವಾದರೆ, ಭವಿಷ್ಯದಲ್ಲಿ ಭಾರೀ ನಷ್ಟವನ್ನು ಅನುಭವಿಸಬೇಕಾಗಬಹುದು ಎಂದು ನಿಮಗೆ ತಿಳಿದಿದೆಯೇ? 


COMMERCIAL BREAK
SCROLL TO CONTINUE READING

ಹೌದು, ಮ್ಯಾನುಯಲ್ ಕಾರ್ ಮಾಲೀಕರು ನಾಲ್ಕು ಪ್ರಮುಖ ವಿಷಯಗಳನ್ನು ಸದಾ ನೆನಪಿನಲ್ಲಿಡಬೇಕು. ಇಲ್ಲವಾದರೆ, ಭಾರೀ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಆ ನಾಲ್ಕು ಪ್ರಮುಖ ವಿಷಯಗಳೆಂದರೆ....


* ಗೇರ್ ಶಿಫ್ಟರ್ ಮೇಲೆ ಕೈ ಹಾಕಬೇಡಿ: 
ನೀವು ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿರುವ ಕಾರುಗಳನ್ನು ಬಳಸುತ್ತಿದ್ದರೆ ಗೇರ್ ಶಿಫ್ಟರ್‌ನಲ್ಲಿ ಕೈ ಹಾಕಬೇಡಿ. ವಾಸ್ತವವಾಗಿ ಗೇರ್ ಶಿಫ್ಟರ್‌ನಲ್ಲಿ ನಿಮ್ಮ ಕೈಯನ್ನು ಇಟ್ಟುಕೊಳ್ಳುವುದು ಅದು ಪ್ರಸರಣ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಆರಂಭಿಕ ಹಂತದಲ್ಲಿ ಕಾರಿನ ಕಾರ್ಯಕ್ಷಮತೆಯ ಅಪಾಯವನ್ನು ಹೆಚ್ಚಿಸುತ್ತದೆ. ಇದನ್ನು ತಪ್ಪಿಸಲು ಗೇರ್ ಬದಲಾಯಿಸುವಾಗ ಮಾತ್ರ ಅದನ್ನು ಸ್ಪರ್ಶಿಸಿ, ಉಳಿದ ಸಮಯದಲ್ಲಿ ಅದನ್ನು ಮುಟ್ಟಬೇಡಿ. ಚಾಲನೆ ಮಾಡುವಾಗ, ಎರಡೂ ಕೈಗಳನ್ನು ಸ್ಟೀರಿಂಗ್ ಚಕ್ರದಲ್ಲಿ ಇರಿಸಿ ಮತ್ತು ಗೇರ್ ಅನ್ನು ಬದಲಾಯಿಸಲು ಮಾತ್ರ ಗೇರ್ ಸ್ಟಿಕ್ಗೆ ಕೈ ಹಾಕಿ. 


ಇದನ್ನೂ ಓದಿ- WhatsApp New Scam: ವಾಟ್ಸಾಪ್ ನಲ್ಲಿ ಈ ಮೊಬೈಲ್ ನಂಬರ್‌ಗಳಿಂದ ಕರೆ ಬಂದರೆ ಹುಷಾರ್!


* ಕ್ಲಚ್ ಮೇಲೆ ಪಾದವನ್ನು ಇರಿಸಬೇಡಿ:
ಎರಡನೆಯದಾಗಿ ಯಾವುದೇ ಕಾರಣಕ್ಕೂ ಯಾವಾಗಲೂ ಕ್ಲಚ್ ಪೆಡಲ್ ಮೇಲೆ ಕಾಲು ಇಡಬೇಡಿ. ವಾಸ್ತವವಾಗಿ, ನಮ್ಮಲ್ಲಿ ಹಲವರು ಡ್ರೈವ್ ಮಾಡುವಾಗ ತಮ್ಮ ಪಾದಗಳನ್ನು ಕ್ಲಚ್ ಪೆಡಲ್ ಮೇಲೆ ಇಟ್ಟುಕೊಳ್ಳುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ, ಇದು ತಪ್ಪು ಅಭ್ಯಾಸ. ಚಾಲನೆ ಮಾಡುವಾಗ ಕ್ಲಚ್ ಪೆಡಲ್ ಮೇಲೆ ನಿಮ್ಮ ಪಾದವನ್ನು ಇಟ್ಟುಕೊಳ್ಳುವುದರಿಂದ ಅದು ಹಾನಿಗೊಳಗಾಗುವ ಸಾಧ್ಯತೆ ದಟ್ಟವಾಗಿರುತ್ತದೆ. ಇದನ್ನು ತಪ್ಪಿಸಲು ಅಗತ್ಯವಿದ್ದಾಗ ಮಾತ್ರವಷ್ಟೇ  ಕ್ಲಚ್ ಒತ್ತಿರಿ. 


* ಗೇರ್ ಬದಲಾಯಿಸುವಾಗ ಕ್ಲಚ್ ಅನ್ನು ಸಂಪೂರ್ಣವಾಗಿ ಒತ್ತಿ ಹಿಡಿಯಿರಿ: 
ಮ್ಯಾನ್ಯುವಲ್ ಕಾರುಗಳಲ್ಲಿ ನೀವು ಗೇರ್ ಬದಲಾಯಿಸುವಾಗ ಮೊದಲು ಕಾರಿನ ಕ್ಲಚ್ ಅನ್ನು ಸಂಪೂರ್ಣವಾಗಿ ಒತ್ತಿ ಹಿಡಿಯಬೇಕು ಎಂಬುದನ್ನು ನೆನಪಿನಲ್ಲಿಡಿ.  ನೀವು ಆತುರಾತುರ ವಾಗಿ ಕ್ಲಚ್ ಹಿಡಿಯದೆ ಗೇರ್ ಬದಲಾಯಿಸಿದರೆ ಅದು ನಿಮ್ಮ ಗೇರ್ ಬಾಕ್ಸ್ ಗೆ ಹಾನಿ ಉಂಟು ಮಾಡಬಹುದು. 


ಇದನ್ನೂ ಓದಿ- ನೆಲಕ್ಕೆ ಬಿದ್ದರೂ ಒಡೆಯದ NOKIA ಫೋನ್; ಒಮ್ಮೆ ಚಾರ್ಜ್ ಮಾಡಿದ್ರೆ 22 ದಿನ ಯೂಸ್ ಮಾಡಬಹುದು; ಬೆಲೆ ಕೂಡ ಅಗ್ಗ!


* ವೇಗವನ್ನು ನಿಧಾನಗೊಳಿಸಲು ಡೌನ್‌ಶಿಫ್ಟ್ ಬಳಸಬೇಡಿ: 
ಮ್ಯಾನ್ಯುವಲ್ ಕಾರುಗಳಲ್ಲಿ ಕಾರಿನ ವೇಗವನ್ನು ನಿಧಾನಗೊಳಿಸಲು ಯಾವುದೇ ಕಾರಣಕ್ಕೂ ಡೌನ್‌ಶಿಫ್ಟಿಂಗ್ ಅನ್ನು ಬಳಸಬೇಡಿ. ಡೌನ್‌ಶಿಫ್ಟಿಂಗ್ ಅನ್ನು ಎಂಜಿನ್ ಬ್ರೇಕಿಂಗ್ ಎಂತಲೂ ಕರೆಯಲಾಗುತ್ತದೆ. ಇದು ಕೆಲವು ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಬಳಸುವ ಟ್ರಿಕ್ ಆಗಿರಬೇಕೇ ಹೊರತು ಸದಾ ಕಾಲ ಇದನ್ನು ಬಳಸುವ ತಪ್ಪನ್ನು ಮಾಡಬೇಡಿ. ಇದೂ ಸಹ ನಿಮ್ಮ ಕಾರಿನ ಕಾರ್ಯಕ್ಷಮತೆಯ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.