ನೆಲಕ್ಕೆ ಬಿದ್ದರೂ ಒಡೆಯದ NOKIA ಫೋನ್; ಒಮ್ಮೆ ಚಾರ್ಜ್ ಮಾಡಿದ್ರೆ 22 ದಿನ ಯೂಸ್ ಮಾಡಬಹುದು; ಬೆಲೆ ಕೂಡ ಅಗ್ಗ!

Nokia 105 Specifications: ಫಿನ್ಲೆಂಡ್ ಮೂಲದ ಬಹುರಾಷ್ಟ್ರೀಯ ಕಾರ್ಪೊರೇಶನ್ ಕಂಪನಿ ನೋಕಿಯಾ. ಪ್ರಪಂಚದ ಮೊಬೈಲ್ ಫೋನುಗಳ ಅತಿ ದೊಡ್ಡ ತಯಾರಕ ಎನಿಸಿಕೊಂಡಿರುವ ನೋಕಿಯಾ ಇದೀಗ ಹೊಸ ಮೊಬೈಲ್ ಒಂದನ್ನು ಬಿಡುಗಡೆ ಮಾಡಲಿದೆ. ಇದರ ವೈಶಿಷ್ಟ್ಯ, ಬೆಲೆಯ ಬಗ್ಗೆ ತಿಳಿದರೆ ಶಾಕ್ ಆಗೋದು ಪಕ್ಕಾ.

Written by - Bhavishya Shetty | Last Updated : May 8, 2023, 10:43 AM IST
    • ನೋಕಿಯಾ ಫೋನ್ ಮೇಲಿರುವ ಮೋಹವನ್ನು ತಗ್ಗಿಸಲು ಸಾಧ್ಯವಿಲ್ಲ
    • ನೋಕಿಯಾ ಇದೀಗ ಹೊಸ ಮೊಬೈಲ್ ಒಂದನ್ನು ಬಿಡುಗಡೆ ಮಾಡಲಿದೆ.
    • ಇದರ ವೈಶಿಷ್ಟ್ಯ, ಬೆಲೆಯ ಬಗ್ಗೆ ತಿಳಿದರೆ ಶಾಕ್ ಆಗೋದು ಪಕ್ಕಾ.
ನೆಲಕ್ಕೆ ಬಿದ್ದರೂ ಒಡೆಯದ NOKIA ಫೋನ್; ಒಮ್ಮೆ ಚಾರ್ಜ್ ಮಾಡಿದ್ರೆ 22 ದಿನ ಯೂಸ್ ಮಾಡಬಹುದು; ಬೆಲೆ ಕೂಡ ಅಗ್ಗ!  title=
Nokia

Nokia 105 Specifications: ನೋಕಿಯಾ ಫೋನ್. ಈ ಹೆಸರು ಕೇಳಿದ್ರೆ ಒಂದು ಬಾರಿ ಬಾಲ್ಯದ ದಿನಗಳು ನಿಮಗೆ ನೆನಪಾಗಬಹುದು. ಭಾರತಕ್ಕೆ ಅದೆಷ್ಟೋ ಮೊಬೈಲ್ ಬ್ರಾಂಡ್ ಗಳು ಬಂದರೂ ಸಹ ನೋಕಿಯಾ ಫೋನ್ ಮೇಲಿರುವ ಮೋಹವನ್ನು ತಗ್ಗಿಸಲು ಸಾಧ್ಯವಿಲ್ಲ.

ಫಿನ್ಲೆಂಡ್ ಮೂಲದ ಬಹುರಾಷ್ಟ್ರೀಯ ಕಾರ್ಪೊರೇಶನ್ ಕಂಪನಿ ನೋಕಿಯಾ. ಪ್ರಪಂಚದ ಮೊಬೈಲ್ ಫೋನುಗಳ ಅತಿ ದೊಡ್ಡ ತಯಾರಕ ಎನಿಸಿಕೊಂಡಿರುವ ನೋಕಿಯಾ ಇದೀಗ ಹೊಸ ಮೊಬೈಲ್ ಒಂದನ್ನು ಬಿಡುಗಡೆ ಮಾಡಲಿದೆ. ಇದರ ವೈಶಿಷ್ಟ್ಯ, ಬೆಲೆಯ ಬಗ್ಗೆ ತಿಳಿದರೆ ಶಾಕ್ ಆಗೋದು ಪಕ್ಕಾ.

ಇದನ್ನೂ ಓದಿ: Today Gold Price: ಜೀವಮಾನದಲ್ಲಿ ಇಷ್ಟೊಂದು ಕಡಿಮೆಯಾಗಿರಲಿಲ್ಲ ಚಿನ್ನದ ಬೆಲೆ! 10 ಗ್ರಾಂ ಬಂಗಾರದ ಬೆಲೆ ಎಷ್ಟಿದೆ ಗೊತ್ತಾ?

ನೋಕಿಯಾ (Nokia) ಇದೀಗ ಪ್ರಬಲ ವೈಶಿಷ್ಟ್ಯಗಳೊಂದಿಗೆ ಹೊಸ ಫೋನ್ ನ್ನು ಪರಿಚಯಿಸಿದೆ. ಇದನ್ನು 2023ರಲ್ಲಿಯೇ ಬಿಡುಗಡೆಗೊಳಿಸಿದ್ದು, ಇದಕ್ಕೆ Nokia 106 ಎಂದು ಹೆಸರಿಸಲಾಗಿದೆ. ಇದು ಅತ್ಯಂತ ಶಕ್ತಿಶಾಲಿ ಫೋನ್ ಮತ್ತು ಬಲವಾದ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.

Nokia 106 ಇತ್ತೀಚೆಗೆ ಘೋಷಿಸಲಾದ ಹೊಸ Nokia 105 4G (2023)ಗೆ ಸಮಾನವಾದ ಸಾಮರ್ಥ್ಯಗಳನ್ನು ಹೊಂದಿದೆ. ಆದರೆ ವೈಶಿಷ್ಟ್ಯಗಳ ವಿಷಯದಲ್ಲಿ 106 ಒಂದು ಹೆಜ್ಜೆ ಮುಂದೆಯೇ ಇದೆ. Nokia 106 ನಲ್ಲಿ ಮ್ಯೂಸಿಕ್ ಪ್ಲೇಯರ್ ಮತ್ತು ಸ್ನೇಕ್ ಗೇಮ್ ಅಂತಹ ವಿಶೇಷ ವೈಶಿಷ್ಟ್ಯವೂ ಇದೆ. Nokia 105 4G (2023) ನಲ್ಲಿ ಇಂತಹ ವ್ಯವಸ್ಥೆ ಇಲ್ಲ. ಇಷ್ಟೇ ಅಲ್ಲದೆ, ಈ ಫೋನ್ ನ್ನು ಸಂಪೂರ್ಣವಾಗಿ ಒಮ್ಮೆ ಚಾರ್ಜ್‌ ಮಾಡಿದರೆ 22 ದಿನಗಳವರೆಗೆ ಕಾರ್ಯನಿರ್ವಹಿಸುತ್ತದೆ.

ನೋಕಿಯಾ 106 (2023) ವೈಶಿಷ್ಟ್ಯಗಳನ್ನು ತಿಳಿಯೋಣ...

ನೋಕಿಯಾ ಫೋನ್ ಒಂದೊಮ್ಮೆ ಇಡೀ ಜಗತ್ತನ್ನೇ ಆಳಿದ ಕಾಲವಿತ್ತು, ಸ್ಮಾರ್ಟ್ ಫೋನ್ ಯುಗಕ್ಕೂ ಮುನ್ನ ಬಂದ ಪುಟ್ಟ ಪುಟ್ಟ ಫೀಚರ್ ಫೋನ್ ಯುಗದಲ್ಲಿ ಈ ನೋಕಿಯಾ ಕಂಪನಿ ಜನಸಾಮಾನ್ಯರನ್ನು ಮರಳು ಮಾಡಿದ್ದಂತು ಸುಳ್ಳಲ್ಲ. ಆದರೆ ಸ್ಮಾರ್ಟ್ ಫೋನ್ ಬಂದ ನಂತರ ಫೀಚರ್ ಫೋನ್ ಗಳ ಕ್ರೇಜ್ ಕೊನೆಗೊಂಡಿತು ಎಂದೇ ಹೇಳಬಹುದು. ಆದರೆ ಇನ್ನೂ ನೋಕಿಯಾದ ಫೀಚರ್ ಫೋನ್ ಕಂಡರೆ ಅದೆಷ್ಟೋ ಮಂದಿ ಇಷ್ಟಪಟ್ಟು ಖರೀದಿಸುತ್ತಾರೆ. ಆದರೆ ಇದೀಗ ಬಂದ ನೋಕಿಯಾ 106 (2023)  ಫೋನ್ ನ ದೃಢತೆ ಮತ್ತು ಕೈಗೆಟುಕುವ ಬೆಲೆ, ವಿಸ್ತೃತ ಬ್ಯಾಟರಿ ಅವಧಿಯನ್ನು ನೋಡಿದ್ರೆ ಅದ್ಭುತ ಎನಿಸದೆ ಇರದು. ಈ ಫೋನ್ ನೆಲಕ್ಕೆ ಬಿದ್ದರೂ ಸಹ ಒಡೆಯುವುದಿಲ್ಲ ಎಂದು ಹೇಳಲಾಗಿದೆ.

Nokia 106 ವಿಶೇಷಣಗಳು:

Nokia 106 ನ ವೈಶಿಷ್ಟ್ಯಗಳು ವೈರ್‌ ಲೆಸ್ FM ರೇಡಿಯೋ, ಟಾರ್ಚ್ ಮತ್ತು ಕಾಲಿಂಗ್ ಮೆನುವನ್ನು ಒಳಗೊಂಡಿವೆ. ನೋಕಿಯಾ 106 MP3 ಪ್ಲೇಯರ್, ಸ್ನೇಕ್ ಗೇಮ್ ಮತ್ತು ಅದ್ಭುತ ಬ್ಯಾಟರಿಯನ್ನು ಹೊಂದಿದೆ. ಇದರಲ್ಲಿ 22 ದಿನಗಳ ಚಾರ್ಜ್ ನಿಲ್ಲುತ್ತದೆ. ಮ್ಯೂಜಿಕ್ ಕೇಳಬೇಕೆಂದರೆ ಈ ಫೋನ್ ನಲ್ಲಿ SD ಕಾರ್ಡ್ ಅನ್ನು ಅಳವಡಿಸಬೇಕಾಗುತ್ತದೆ. ಸದ್ಯ ನೋಕಿಯಾ 106 ರೆಡ್, ಸಯಾನ್ ಮತ್ತು ಬ್ಲ್ಯಾಕ್ ಬಣ್ಣಗಳಲ್ಲಿ ಬರುತ್ತಿದೆ.

ಇದನ್ನೂ ಓದಿ: ಜೀ ಕನ್ನಡ ನ್ಯೂಸ್‌ ಚುನಾವಣಾ ಪೂರ್ವ ಫಲಿತಾಂಶ ಪ್ರಕಟ : ಮತದಾರನ ಜೈಕಾರ ಯಾರಿಗೆ..?

ಎಲ್ಲಾ ಮೂರು ಹೊಸ Nokia ಫೀಚರ್ ಫೋನ್‌ ಗಳು 2G ನೆಟ್‌ ವರ್ಕ್ ಸಾಮರ್ಥ್ಯವನ್ನು ಹೊಂದಿವೆ. ಮೊದಲು ಬಿಡುಗಡೆಯಾದ Nokia 110 ನ 4G ಆವೃತ್ತಿಯಲ್ಲಿ ಕೆಲಸ ಮಾಡುತ್ತದೆ. ನೆಟ್‌ ವರ್ಕ್ ಸಾಮರ್ಥ್ಯದ ವಿಭಿನ್ನವಾಗಿದ್ದರೂ ಸಹ Nokia 110ರಲ್ಲಿರುವ ಫೀಚರ್ ಗಳೇ ಇಲ್ಲಿಯೂ ಇದೆ. ನೋಕಿಯಾ ಇನ್ನೂ ಮೂರು ಹೊಸ ಫೀಚರ್ ಫೋನ್‌ ಗಳ ಸಂಪೂರ್ಣ ಬೆಲೆಯ ಬಗ್ಗೆ ಮಾಹಿತಿಯನ್ನು ನೀಡಿಲ್ಲ. ಆದರೆ ಭಾರೀ ಕೈಗೆಟಕುವ ಬೆಲೆಯಲ್ಲಿದೆ ಎಂದು ಹೇಳಲಾತ್ತದೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News