ಮಳೆಗಾಲದಲ್ಲಿ ಇಷ್ಟೇ ಇರಬೇಕು ಫ್ರಿಜ್ ನ ಟೆಂಪರೇಚರ್! 90% ದಷ್ಟು ಜನರಿಗಿಲ್ಲ ಈ ಮಾಹಿತಿ
ಮಳೆಗಾಲ ಬಂತೆಂದರೆ ಸುತ್ತಮುತ್ತಲಿನ ತಾಪಮಾನವು ಕಡಿಮೆಯಾಗುತ್ತದೆ. ಮಾತ್ರವಲ್ಲ ವಾತಾವರಣದಲ್ಲಿ ತೇವಾಂಶದ ಪ್ರಮಾಣವು ಹೆಚ್ಚಾಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ.
ಬೆಂಗಳೂರು : ಮಳೆಗಾಲದಲ್ಲಿ ಫ್ರಿಡ್ಜ್ ಅನ್ನು ಸರಿಯಾದ ತಾಪಮಾನದಲ್ಲಿ ಇಡುವುದು ಅವಶ್ಯಕ. ಇದರಿಂದ ಫ್ರಿಡ್ಜ್ ನಲ್ಲಿ ಇಟ್ಟಿರುವ ವಸ್ತುಗಳು ತಂಪಾಗಿ, ತಾಜಾ ಮತ್ತು ಸುರಕ್ಷಿತವಾಗಿ ಉಳಿಯುತ್ತವೆ. ಮಳೆಗಾಲದಲ್ಲಿ ಹೊರಗಿನ ತಾಪಮಾನದಲ್ಲಿ ಬದಲಾವಣೆಯಾಗುತ್ತದೆ. ಆದ್ದರಿಂದ ಫ್ರಿಡ್ಜ್‌ನ ತಾಪಮಾನವನ್ನು ಸರಿಯಾಗಿಡಲು ಸಹಾಯ ಮಾಡುವ ಕೆಲವು ಸಲಹೆಗಳು ಇಲ್ಲಿವೆ.
ಮಳೆಗಾಲದಲ್ಲಿ ಫ್ರಿಡ್ಜ್‌ನ ತಾಪಮಾನ ಹೇಗಿರಬೇಕು :
ಮಳೆಗಾಲ ಬಂತೆಂದರೆ ಸುತ್ತಮುತ್ತಲಿನ ತಾಪಮಾನವು ಕಡಿಮೆಯಾಗುತ್ತದೆ. ಮಾತ್ರವಲ್ಲ ವಾತಾವರಣದಲ್ಲಿ ತೇವಾಂಶದ ಪ್ರಮಾಣವು ಹೆಚ್ಚಾಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ. ಆದರೆ, ಈ ಆರ್ದ್ರತೆಯ ಋತುವಿನಲ್ಲಿ, ಆಹಾರ ಪದಾರ್ಥಗಳನ್ನು ದೀರ್ಘಕಾಲದವರೆಗೆ ತಾಜಾವಾಗಿ ಉಳಿಯುವಂತೆ ಮಾಡಬೇಕಾದರೆ ಫ್ರಿಜ್ ತಾಪಮಾನವನ್ನು ಸರಿಯಾಗಿ ಹೊಂದಿಸಿಕೊಳ್ಳುವುದು ಬಹಳ ಮುಖ್ಯ.
ಇದನ್ನೂ ಓದಿ : ಭಾರತದಲ್ಲಿ ಯಾವ ಕಂಪನಿಯ ಸ್ಮಾರ್ಟ್‌ಫೋನ್ ಹೆಚ್ಚಾಗಿ ಮಾರಾಟವಾಗುತ್ತೆ ಗೊತ್ತಾ?
ಇಷ್ಟೇ ಡಿಗ್ರಿ ಇರಲಿ ತಾಪಮಾನ :
ಸ್ಯಾಮ್‌ಸಂಗ್‌ನ ಬ್ಲಾಗ್ ಪೋಸ್ಟ್ ಮಾನ್ಸೂನ್‌ನಲ್ಲಿ ತಮ್ಮ ಫ್ರಿಜ್‌ಗಳಿಗೆ ಸೂಕ್ತವಾದ ತಾಪಮಾನವು 3 ಡಿಗ್ರಿ ಸೆಲ್ಸಿಯಸ್ ಎಂದು ಹೇಳುತ್ತದೆ. ಈ ತಾಪಮಾನದಲ್ಲಿ ರೆಫ್ರಿಜರೇಟರ್ ನಲ್ಲಿ ಇರಿಸಲಾದ ಆಹಾರ ಪದಾರ್ಥಗಳು ಬಹಳ ಸಮಯದವರೆಗೆ ತಾಜಾವಾಗಿ ಉಳಿಯುತ್ತದೆ ಎಂದು ಹೇಳಾಗಿದೆ. ಇದರಿಂದ ಬಹಳ ಸಮಯದವರೆಗೆ ನಿಮ್ಮ ನೆಚ್ಚಿನ ಆಹಾರವನ್ನು ಆನಂದಿಸಬಹುದು. ಮಾನ್ಸೂನ್ ಅಥವಾ ಇತರ ಯಾವುದೇ ಋತುವಿನಲ್ಲಿ ಫ್ರಿಜ್ ತಾಪಮಾನವು 1.7 ಡಿಗ್ರಿಯಿಂದ 3.3 ಡಿಗ್ರಿಗಳ ನಡುವೆ ಇರಬೇಕು ಎನ್ನುತ್ತಾರೆ ತಜ್ಞರು.
ಬ್ಯಾಕ್ಟೀರಿಯಾ ಬೆಳೆಯುವುದನ್ನು ತಡೆಯಲು ಈ ತಾಪಮಾನವನ್ನು ಬಳಸಲಾಗುತ್ತದೆ. ಈ ತಾಪಮಾನದಲ್ಲಿ ಇರಿಸಲಾದ ರೆಫ್ರಿಜರೇಟರ್ ನಿಮ್ಮ ಆಹಾರವನ್ನು ತಾಜಾವಾಗಿಡಲು ಸಹಾಯ ಮಾಡುತ್ತದೆ ಮತ್ತು ಅದರ ರುಚಿ ಕಡಿಮೆಯಾಗುವುದಿಲ್ಲ.
ಇದನ್ನೂ ಓದಿ : ಬ್ಲೂಟೂತ್ ಕಾಲಿಂಗ್ ಸಪೋರ್ಟ್ ಜೊತೆಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಲಿದೆ ನಾಯ್ಸ್‌ನ ಕಲರ್‌ಫಿಟ್ ಥ್ರೈವ್ ಸ್ಮಾರ್ಟ್‌ವಾಚ್
ಫ್ರಿಜ್ ನ ತಾಪಮಾನವನ್ನು 5 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇಡುವುದು ಸೂಕ್ತ. ಆಹಾರ ಪದಾರ್ಥಗಳನ್ನು ತಾಜಾ ಮತ್ತು ಸುರಕ್ಷಿತವಾಗಿಡಲು ಈ ತಾಪಮಾನವು ಮಾನ್ಸೂನ್ ಅಥವಾ ಇತರ ವಾತಾವರಣದಲ್ಲಿ ಪರಿಪೂರ್ಣವಾಗಿರುತ್ತದೆ. ಇದು ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯುತ್ತದೆ ಮತ್ತು ಆಹಾರವು ತಾಜಾ ಮತ್ತು ರುಚಿಕರವಾಗಿರುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.