Reliance Jio ಬಳಕೆದಾರರಿಗೊಂದು ಭಾರಿ ಸಂತಸದ ಸುದ್ದಿ!

ರಿಲಯನ್ಸ್ ರಿಟೇಲ್ ತನ್ನ ಹೊಸ ಮತ್ತು ಪವರ್ಫುಲ್  4G JioBook ಅನ್ನು ಪ್ರರಿಚಯಿಸಿದೆ. ಪ್ರತಿ ವಯಸ್ಸಿನ ವ್ಯಕ್ತಿಗಳಿಗೆ ಸಿದ್ಧಪಡಿಸಲಾದ ಈ ಜಿಯೋಬುಕ್‌ನಲ್ಲಿ ಹಲವು ವಿಶೇಷತೆಗಳಿವೆ. JioBook ಸುಧಾರಿತ Jio OS ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿದೆ. ಇದರ ವಿನ್ಯಾಸ ಸಂಪರ್ಕಿತವಾಗಿದ್ದು, ಸೊಗಸಾಗಿದೆ.  

Written by - Nitin Tabib | Last Updated : Jul 31, 2023, 07:09 PM IST
  • ಜಿಯೋಬುಕ್ ಎಲ್ಲಾ ವಯಸ್ಸಿನ ಜನರಿಗೆ ವಿಭಿನ್ನ ಕಲಿಕೆಯ ಅನುಭವವಾಗಿದೆ.
  • ಆನ್‌ಲೈನ್ ತರಗತಿಯೇ ಆಗಿರಲಿ, ಕೊಡಿಂಗ್ ಕಲಿಯುವವರಿಗಾಗಲಿ ಅಥವಾ ಹೊಸ ವ್ಯಾಪಾರವನ್ನು ಪ್ರಾರಂಭಿಸುತ್ತಿರಲಿ
  • ಯೋಗ ಸ್ಟುಡಿಯೋ ಅಥವಾ ಆನ್‌ಲೈನ್ ಟ್ರೇಡಿಂಗ್ ಅನ್ನು ಆರಂಭಿಸುವವರಿಗೆಲ್ಲರಿಗೂ ಅನುಕೂಲಕರವಾಗಿದೆ
Reliance Jio ಬಳಕೆದಾರರಿಗೊಂದು ಭಾರಿ ಸಂತಸದ ಸುದ್ದಿ! title=

ಬೆಂಗಳೂರು: ರಿಲಯನ್ಸ್ ರಿಟೇಲ್ ತನ್ನ ಹೊಸ ಮತ್ತು ಪವರ್ಫುಲ್  4G JioBook ಅನ್ನು ಪ್ರರಿಚಯಿಸಿದೆ. ಪ್ರತಿ ವಯಸ್ಸಿನ ವ್ಯಕ್ತಿಗಳಿಗೆ ಸಿದ್ಧಪಡಿಸಲಾದ ಈ ಜಿಯೋಬುಕ್‌ನಲ್ಲಿ ಹಲವು ವಿಶೇಷತೆಗಳಿವೆ. JioBook ಸುಧಾರಿತ Jio OS ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿದೆ. ಇದರ ವಿನ್ಯಾಸ ಸಂಪರ್ಕಿತವಾಗಿದ್ದು, ಸೊಗಸಾಗಿದೆ. ಜಿಯೋಬುಕ್ ಎಲ್ಲಾ ವಯಸ್ಸಿನ ಜನರಿಗೆ ವಿಭಿನ್ನ ಕಲಿಕೆಯ ಅನುಭವವಾಗಿದೆ. ಆನ್‌ಲೈನ್ ತರಗತಿಯೇ ಆಗಿರಲಿ, ಕೊಡಿಂಗ್ ಕಲಿಯುವವರಿಗಾಗಲಿ ಅಥವಾ ಹೊಸ ವ್ಯಾಪಾರವನ್ನು ಪ್ರಾರಂಭಿಸುತ್ತಿರಲಿ – ಯೋಗ ಸ್ಟುಡಿಯೋ ಅಥವಾ ಆನ್‌ಲೈನ್ ಟ್ರೇಡಿಂಗ್ ಅನ್ನು ಆರಂಭಿಸುವವರಿಗೆಲ್ಲರಿಗೂ ಅನುಕೂಲಕರವಾಗಿದೆ

ಇದರ ಬೆಲೆ ₹ 16,499
ಇದು ಭಾರತದ ಮೊದಲ ಲರ್ನಿಂಗ್ ಬುಕ್
ಜಿಯೋಬುಕ್ 5 ಆಗಸ್ಟ್ 2023 ರಿಂದ ಲಭ್ಯವಿರುತ್ತದೆ
ರಿಲಯನ್ಸ್ ಡಿಜಿಟಲ್ ಅಥವಾ ಅಂಗಡಿಯಲ್ಲಿ ಅಥವಾ ಅಮೆಜಾನ್‌ನಿಂದ ಆನ್‌ಲೈನ್‌ನಲ್ಲಿ ಇದನ್ನು ನೀವು

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ರಿಲಯನ್ಸ್ ರಿಟೇಲ್, “ಕಲಿಯಲು ಮತ್ತು ಜೀವನವನ್ನು ಸುಲಭಗೊಳಿಸಲು ಸಹಾಯ ಮಾಡಲು ಹೊಸದೊಂದನ್ನು ತರುವುದು  ನಮ್ಮ ನಿರಂತರ ಪ್ರಯತ್ನವಾಗಿದೆ. ಹೊಸ ಜಿಯೋಬುಕ್ ಅನ್ನು ಎಲ್ಲಾ ವಯಸ್ಸಿನ ಜನರಿಗಾಗಿ ತಯಾರಿಸಲಾಗಿದೆ. ಇದು ಅನೇಕ ಸುಧಾರಿತ ವೈಶಿಷ್ಟ್ಯಗಳನ್ನು ಮತ್ತು ಸಂಪರ್ಕಿಸಲು ಹಲವು ಮಾರ್ಗಗಳನ್ನು ಹೊಂದಿದೆ. JioBook ಕಲಿಕಾ ಪದ್ಧತಿಯಲ್ಲಿ ಕ್ರಾಂತಿಯನ್ನುಂಟು ಮಾಡುತ್ತದೆ, ಜನರಿಗೆ ಅಭಿವೃದ್ಧಿಯ ಹೊಸ ಮಾರ್ಗಗಳನ್ನು ತೋರಿಸಲಿದೆ ಮತ್ತು ನಿಮಗೆ ಹೊಸ ಕೌಶಲ್ಯಗಳನ್ನು ಹೇಳಿಕೊಡಲಿದೆ" ಎಂದು ಹೇಳಿದೆ.

4G JioBook ನ ವೈಶಿಷ್ಟ್ಯಗಳು
• ಜಿಯೋಬುಕ್ ಅನ್ನು ನೀವು 4G LTE ಮತ್ತು ಡ್ಯುಯಲ್ ಬ್ಯಾಂಡ್ ವೈಫೈಗೆ ಸಂಪರ್ಕಿಸಬಹುದು.
ಇಂಟರ್ಫೇಸ್ ಅರ್ಥಗರ್ಭಿತವಾಗಿದೆ
•ಸ್ಕ್ರೀನ್ ವಿಸ್ತರಣೆ
•ವೈರ್ಲೆಸ್ ಪ್ರಿಂಟಿಂಗ್
• ಪರದೆಯ ಮೇಲೆ ಮಲ್ಟಿಟಾಸ್ಕಿಂಗ್
•ಇಂಟಿಗ್ರೇಟೆಡ್ ಚಾಟ್‌ಬಾಟ್
•ಜಿಯೋ ಟಿವಿ ಅಪ್ಲಿಕೇಶನ್‌ನಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ
•ಜಿಯೋ ಗೇಮ್‌ಗಳನ್ನು ಪ್ಲೇ ಮಾಡಿ
• ಜಿಯೋಬಿಯನ್ ಮೂಲಕ ನೀವು ಕೋಡ್ ಅನ್ನು ಓದಲು ಸಾಧ್ಯವಾಗಲಿದೆ. ವಿದ್ಯಾರ್ಥಿಗಳು ಸಿ ಮತ್ತು ಸಿಸಿ ಪ್ಲಸ್ ಪ್ಲಸ್, ಜಾವಾ, ಪೈಥಾನ್ ಮತ್ತು ಪರ್ಲ್ ಅನ್ನು ಅಧ್ಯಯನ ಮಾಡಲು ಇದರಿಂದ ಸಾಧ್ಯವಾಗಲಿದೆ.

ಇದನ್ನೂ ಓದಿ-

ಜಿಯೋಬುಕ್‌ನಲ್ಲಿ ಹಲವು ಹೊಸ ವೈಶಿಷ್ಟ್ಯಗಳು
ಸ್ಟೈಲಿಶ್ ವಿನ್ಯಾಸ
•ಮ್ಯಾಟ್ ಫಿನಿಶ್
•ಅಲ್ಟ್ರಾ ಸ್ಲಿಮ್
•ತೂಕ ಕೇವಲ 990 ಗ್ರಾಂ
• 2 GHz ಆಕ್ಟಾ ಪ್ರೊಸೆಸರ್
• 4 GB LPDDR4 RAM
•64GB ಮೆಮೊರಿ, SD ಕಾರ್ಡ್‌ನೊಂದಿಗೆ 256GB ವರೆಗೆ ವಿಸ್ತರಿಸಬಹುದಾಗಿದೆ
•ಇನ್ಫಿನಿಟಿ ಕೀಬೋರ್ಡ್
•2 USB ಪೋರ್ಟ್‌ಗಳು ಮತ್ತು
•HDMI ಗಾಗಿ ಪೋರ್ಟ್ ಕೂಡ
• 11.6-ಇಂಚಿನ (29.46 cm) ಆಂಟಿ-ಗ್ಲೇರ್ ಡಿಸ್ಪ್ಲೇ

ಇದನ್ನೂ ನೋಡಿ-

Trending News