Ola S1 Rival- Ather 450S Launch : ಅಥರ್ ತನ್ನ  ಎಂಟ್ರಿ ಲೆವೆಲ್ ಎಲೆಕ್ಟ್ರಿಕ್ ಸ್ಕೂಟರ್ 450S ಅನ್ನು ಬಿಡುಗಡೆ ಮಾಡಿದೆ. ಅಥರ್ 450Sಗಾಗಿ ಬುಕಿಂಗ್ ಜುಲೈನಲ್ಲಿ ಪ್ರಾರಂಭವಾಗುತ್ತದೆ. ಇದು ಮಾರುಕಟ್ಟೆಯಲ್ಲಿ Ola S1ಗೆ ಪೈಪೋಟಿ ನೀಡಲಿದೆ. ಆದರೂ ಹೊಸ 450S ಬಗ್ಗೆ ಅಥರ್ ಹೆಚ್ಚಿನ ಮಾಹಿತಿ ಬಿಟ್ಟು ಕೊಟ್ಟಿಲ್ಲ.  ಹೊಸ ಟ್ರಿಮ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿಲ್ಲ. ಕಂಪನಿಯು ಬಹಿರಂಗಪಡಿಸಿದ ಮಾಹಿತಿಯ ಆಧಾರದ ಮೇಲೆ, 450S 3kWh ಬ್ಯಾಟರಿ ಪ್ಯಾಕ್ ನೊಂದಿಗೆ ಬರುತ್ತದೆ. ಇದು 450X ಗಿಂತ ಚಿಕ್ಕದಾಗಿದೆ ಏಕೆಂದರೆ 450X 3.7 kWh ಲಿಥಿಯಂ-ಐಯಾನ್ ಬ್ಯಾಟರಿಯನ್ನು ಪಡೆಯುತ್ತದೆ.  ಅಲ್ಲದೆ ಇದರ ಬೆಲೆ 1.30 ಲಕ್ಷ ಎಂದು ಹೇಳಲಾಗಿದೆ. 


COMMERCIAL BREAK
SCROLL TO CONTINUE READING

Ather 450S ವೈಶಿಷ್ಟ್ಯ :   
ಈ ಸಂದರ್ಭದಲ್ಲಿ, 450S ಒಂದೇ ಚಾರ್ಜ್‌ನಲ್ಲಿ 115 ಕಿಮೀ ರೇಂಜ್  ನೀಡುತ್ತದೆ ಎಂದಿ ಹೇಳಲಾಗುತ್ತಿದೆ. ಆದರೆ ನೈಜವಾಗಿ ಇದರ ರೇಂಜ್ 115km ಗಿಂತ ಕಡಿಮೆಯಿರಲಿದೆ. ಏಕೆಂದರೆ 450X ನ ಸರ್ಟಿಫೈಡ್  ರೇಂಜ್ 146km ಆಗಿದ್ದರೂ, ಅದರ ನಿಜವಾದ ರೇಂಜ್ ಕೇವಲ 105km ಆಗಿದೆ. 450S ರೇಂಜ್ 450Xಗಿಂತ 20 ಪ್ರತಿಶತ ಕಡಿಮೆಯಾದರೂ, ಅದರ ವೇಗವು 90 kmph ಆಗಿದೆ. 0-40 kmph ವೇಗದ ಅಂಕಿಅಂಶಗಳನ್ನು ಅಥರ್ ಇನ್ನೂ ಬಹಿರಂಗಪಡಿಸಿಲ್ಲ. ಇದು 450X ರೂಪಾಂತರಕ್ಕಿಂತ ಕಡಿಮೆ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ.


ಇದನ್ನೂ ಓದಿ : ಎಲೆಕ್ಟ್ರಿಕ್ ಸ್ಕೂಟರ್ ಗಳ ಬೆಲೆ ಏರಿಸಿದ TVS, Ather Ola : ಹೊಸ ದರ ಪಟ್ಟಿ ಇಲ್ಲಿದೆ


ಬೆಲೆಗಳನ್ನು ಹೆಚ್ಚಿಸಿದ ಅಥರ್ 450X : 
ಇದರ ಹೊರತಾಗಿ, ಇತ್ತೀಚೆಗೆ ಅಥರ್ ತನ್ನ 450X ಬೆಲೆಗಳನ್ನು ಹೆಚ್ಚಿಸಿದೆ. 450X ಬೆಲೆ ಈಗ 1,45,000ಕ್ಕೆ ಏರಿದೆ. 450X ಪ್ರೊ ಪ್ಯಾಕ್  ಬೆಲೆ 8,000 ಏರಿಕೆಯೊಂದಿಗೆ 1,65,435 ರೂಪಾಯಿಗೆ ತಲುಪಿದೆ. ಪರಿಷ್ಕೃತ FAME-2 ಸಬ್ಸಿಡಿಯನ್ನು ಗುರುವಾರದಿಂದ (ಜೂನ್ 1) ಜಾರಿಗೆ ತರಲಾಗುತ್ತಿದ್ದು,  ಇದರೊಂದಿಗೆ  ಅಥರ್ ಎನರ್ಜಿ  ತನ್ನ ಸ್ಕೂಟರ್‌ಗಳ ಬೆಲೆಯನ್ನು ಹೆಚ್ಚಿಸಿದೆ ಎಂದು ಹೇಳಲಾಗಿದೆ.


ಇದನ್ನೂ ಓದಿ MiG-Miraj ನಂತಹ ಸಣ್ಣ ಫೈಟರ್ ಜೆಟ್ ಗಳಿಂದಲೂ ಇನ್ಮುಂದೆ ಬ್ರಹ್ಮೋಸ್ ಕ್ಷಿಪಣಿ ಉಡಾಯಿಸಬಹುದು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.