ನವದೆಹಲಿ : ಸೂರ್ಯನಿಂದ ಅಪರಿಮಿತ ಶಾಖ ಬರುವುದು ನಿಮಗೆ ಗೊತ್ತು. ಸೌರ ಶಕ್ತಿ ಗೊತ್ತು. ಸೂರ್ಯ ಸುಂಟರಗಾಳಿ ಎಂಬುದನ್ನು ಕೇಳಿದ್ದೀರಾ..? ಸೂರ್ಯನಿಂದ ವಿಕಿರಣಯುಕ್ತ ಸುಂಟರಗಾಳಿಯೊಂದು  (Solar Wind On Earth) ಉತ್ಪನ್ನವಾಗಿ ಅದು ಬ್ರಹ್ಮಾಂಡದತ್ತ ಬರುತ್ತಿದೆ ಎಂಬ ಮಾಹಿತಿ ಬಂದಿದೆ. ಅಂತಾದ್ದೊಂದು ವಿದ್ಯಮಾನಕ್ಕೆ ಸೌರಮಂಡಲ ಸಾಕ್ಷಿಯಾಗುತ್ತಿದೆ. ಸೌರಸುಂಟರಗಾಳಿ ಭೂಮಿಯತ್ತ ಧಾವಿಸುತ್ತಿದೆ.  ಇಂದು ಅಥವಾ ನಾಳೆ ಧರೆಗೆ ಅಪ್ಪಳಿಸುವ ಸಾಧ್ಯತೆ ಇದೆ. 


COMMERCIAL BREAK
SCROLL TO CONTINUE READING

ಈ ಸೌರ ಸುಂಟರಗಾಳಿಯಲ್ಲಿ ಅಸಂಖ್ಯ ಸೌರ ಕಣಗಳಿರುತ್ತವೆ.  ವಿಕಿರಣಕಾರಿ ಈ ಕಣಗಳು ಸೆಕೆಂಡಿಗೆ 500 ಕಿಲೋ ಮೀಟರ್ ವೇಗದಲ್ಲಿ ಬಾಹ್ಯಾಕಾಶದಲ್ಲಿ ಧಾವಿಸುತ್ತಿವೆ.  ಇವು ಈಗಾಗಲೇ ಸೂರ್ಯನಿಂದ 15 ಕೋಟಿ ಕಿಲೋ ಮೀಟರ್ ಧಾವಿಸಿಯಾಗಿವೆ. ಇಂದು ಅಥವಾ ನಾಳೆ ಭೂಮಿಯ (Earth) ವಾಯುಮಂಡಲವನ್ನೂ ಪ್ರವೇಶಿಸಲಿವೆ. ಈ ಮಾಹಿತಿ ಕೊಟ್ಟಿದ್ದು  ರಾಷ್ಟ್ರೀಯ ಸಾಗರ ಹವಾಮಾನ ಪ್ರಾಧಿಕಾರ (NOAA) .


ಇದನ್ನೂ ಓದಿ : Antarctica Ice Bergs Melting - ಭೂಮಿಗೆ ಹಿಮಯುಗದ ಆಗಮನ! ಆತಂಕ ವ್ಯಕ್ತಪಡಿಸಿದ ವಿಜ್ಞಾನಿಗಳು


ಭೂಮಿಯ ವಾಯುಮಂಡಲ ಪ್ರವೇಶಿಸಿದರೆ ಏನಾಗುತ್ತದೆ?
ಈ ಪ್ರಚಂಡ ಸೌರ ಸುಂಟರಗಾಳಿ  ಆರ್ಕ್ಟಿಕ್ ಅರೋರಾ (Aurora) ಕ್ಕೆ ಕಾರಣವಾಗಬಹುದು ಎಂದು ಎನ್‌ಒಎಎ ಪರಿಣಿತರು ಹೇಳುತ್ತಾರೆ. ಗೊತ್ತಿರಲಿ, ಅರೋರಾ ಎಂದರೆ ಭೂಮಿಯ ಕಾಂತಕ್ಷೇತ್ರದಲ್ಲಿ ಸೌರ ಮಾರುತದ ಘರ್ಷಣೆಯಿಂದ ಉತ್ಪತ್ತಿಯಾಗುವ ಒಂದು ರೀತಿಯ ಬೆಳಕು(Light). ಇದು ನೀಲಿ ಮತ್ತು ಹಸಿರು ಬಣ್ಣದಿಂದ ಕೂಡಿರುತ್ತವೆ.  ಸೌರ ಸುಂಟರ ಗಾಳಿ  ಭೂಮಿಯ  ಉತ್ತರ ಗೋಳಾರ್ಧದಲ್ಲಿ ಅದ್ಭುತ ದೃಶ್ಯವೊಂದನ್ನು ಸೃಷ್ಟಿಸುತ್ತದೆ. ಆಕಾಶವು ನೀಲಿ ಹಸಿರು ಹೊದಿಕೆ ಹೊದ್ದುಕೊಂಡಂತೆ ಕಾಣಿಸುತ್ತದೆ.  ಈ ಅಕರ್ಷಕ ನೋಟಕ್ಕಾಗಿ ಜನ ಕಾಯುತ್ತಿರುತ್ತಾರೆ.  ಇದನ್ನು ನಾರ್ದನ್ ಲೈಟ್ಸ್ Northern Lights ಅಂತಲೂ ಕರೆಯುತ್ತಾರೆ. 


ಭೂಮಿಯಲ್ಲಿ ಏನಾಗಬಹುದು ಗೊತ್ತಾ..?
ಈ ಸೌರ ಸುಂಟರಗಾಳಿ ಭೂಮಿಯ ವಾಯುಮಂಡಲ ಪ್ರವೇಶಿಸಿದಾಗ ಭೂಮಿಯ ಹೊರ ವಾತಾವರಣ ಬಿಸಿಯಾಗುತ್ತದೆ.  ಇದು ಕಕ್ಷೆಯಲ್ಲಿರುವ ನಮ್ಮ ಉಪಗ್ರಹಗಳ ಮೇಲೆ ಪರಿಣಾಮ ಬೀರುತ್ತದೆ.  ಜಿಪಿಎಸ್ (GPS) ಮತ್ತು ಮೊಬೈಲ್ (Mobile) ಪೋನ್ ಸಿಗ್ನಲ್ ನಲ್ಲೂ ವ್ಯತ್ಯಯವಾಗುತ್ತದೆ.  ವಿದ್ಯುತ್ ತಂತಿಗಳಲ್ಲಿ ವಿದ್ಯುತ್ ಪ್ರವಾಹ ಏರಬಹುದು. ಟ್ರಾನ್ಸ್ ಫಾರ್ಮರ್ (Transformer) ಸ್ಪೋಟಗೊಳ್ಳಬಹುದು.   ಭೂಮಿಯ ಕಾಂತ ಕ್ಷೇತ್ರ ಸೌರ ಸುಂಟರ ಗಾಳಿಯ ವಿರುದ್ಧ ನಮಗೆ ರಕ್ಷಣೆ ನೀಡುತ್ತದೆ.  ಹಾಗಾಗಿ,  ಇದರ ಬಗ್ಗೆ ನಾವು ತುಂಬಾ ಟೆನ್ಶನ್ ಮಾಡಿಕೊಳ್ಳಬೇಕಾದ ಅಗತ್ಯ  ಇಲ್ಲ. 


ಇದನ್ನೂ ಓದಿ :Earth Rotation Video: ಭೂಮಿ ತಿರುಗುವಿಕೆಯನ್ನು ನೀವು ನೋಡಿದ್ದಿರಾ? ಇಲ್ಲಿದೆ ರೋಮಾಂಚಕ ವಿಡಿಯೋ


1859ರಲ್ಲಿ ತಲ್ಲಣ ಸೃಷ್ಟಿಸಿದ್ದ ಸೂರ್ಯ ಸುಂಟರಗಾಳಿ
1859ರಲ್ಲಿ ಸಿಡಿದ ಸೂರ್ಯ ಸುಂಟರಗಾಳಿ ಯೂರೋಪಿನಲ್ಲಿ ತಲ್ಲಣ ಸೃಷ್ಟಿಸಿತ್ತು. ಅದರ ಕಾರಣದಿಂದ ಟೆಲಿಗ್ರಾಫ್ (Telegraph) ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು. ಸೌರ ಸುಂಟರಗಾಳಿಯ  ಅಧ್ಯಯನ ಬಹಳ ಮುಖ್ಯ ಎಂದು ಹೇಳುತ್ತಾರೆ ತಜ್ಞರು. ಅದರ ವಿಕಿರಣಗಳು ಭೂಮಿಗೆ ಅಪಾರ ನಷ್ಟ  ಉಂಟುಮಾಡುವ ಸಾಧ್ಯತೆಗಳೂ ಇರುತ್ತವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.