Auto-Kidney Transplant in Delhi: ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಯ ವೈದ್ಯರು ವೈದ್ಯಕೀಯ ಲೋಕಕ್ಕೆ ಸವಾಲಾಗಿದ್ದ ಒಂದು 'ಆಟೋ ಕಿಡ್ನಿ ಟ್ರಾನ್ಸ್ ಪ್ಲಾಂಟ್' ಶಸ್ತ್ರಕ್ರಿಯೆಯನ್ನು ನಡೆಸಿದ್ದಾರೆ. ತೀರಾ ಅಪರೂಪ ಎನ್ನಲಾಗಿದ್ದ ಈ ಶಸ್ತ್ರಕ್ರಿಯೆಯಲ್ಲಿ ವೈದ್ಯರು ಓರ್ವ ರೋಗಿಯ ದೇಹದ ಒಂದು ಭಾಗದಲ್ಲಿರುವ ಮೂತ್ರಪಿಂಡವನ್ನು ತೆಗೆದು ದೇಹದ ಇನ್ನೊಂದು ಭಾಗದಲ್ಲಿದ್ದ ಮೂತ್ರಪಿಂಡದ ಬಳಿ ಅಳವಡಿಸಿದ್ದಾರೆ.

COMMERCIAL BREAK
SCROLL TO CONTINUE READING

ಎರಡೂ ಕಿಡ್ನಿಗಳನ್ನು ದೇಹದ ಬಲಭಾಗಕ್ಕೆ ಅಳವಡಿಸಲಾಗಿದೆ
ಈ ಶಸ್ತ್ರಚಿಕಿತ್ಸೆಯಲ್ಲಿ ರೋಗಿಯ ಎಡಭಾಗದ ಕಿಡ್ನಿಯನ್ನು ತೆಗೆದು ದೇಹದ ಬಲಭಾಗದಲ್ಲಿರುವ ಮೂತ್ರ ಪಿಂಡದ ಬಳಿ ಕಸಿ ಮಾಡಲಾಗಿದೆ. ಹೀಗಾಗಿ ಇದೀಗ ವ್ಯಕ್ತಿಯ ದೇಹದ ಎರಡೂ ಮೂತ್ರಪಿಂಡಗಳು ದೇಹದ ಬಲಭಾಗಕ್ಕೆ ಬಂದಿವೆ. ವ್ಯಕ್ತಿಯ ದೇಹದಲ್ಲಿ 25 ಸೆಂ.ಮೀ ಮೂತ್ರ ನಾಳ ಇಲ್ಲದೆ ಇರುವ ಕಾರಣ ಈ ಶಸ್ತ್ರಕ್ರಿಯೆಯನ್ನು ನಡೆಸಲಾಗಿದೆ. ವ್ಯಕ್ತಿಯ ಮೂತ್ರ ಕೋಶ ಅಂದರೆ ಯುಟೆರಸ್ ಅನ್ನು ಕೂಡ ಎರಡನೇ ಬಾರಿಗೆ ಅಳವಡಿಸಲಾಗಿದೆ.


ಏಕೆ ಈ ರೀತಿ ಮಾಡಲಾಯಿತು?
ಕಳೆದ ತಿಂಗಳು, ಪಂಜಾಬ್‌ನ 29 ವರ್ಷದ ಅಭಯ್ (ಹೆಸರು ಬದಲಾಯಿಸಲಾಗಿದೆ) ಎಂಬ ರೋಗಿಯು ಸರ್ ಗಂಗಾ ರಾಮ್ ಆಸ್ಪತ್ರೆಯ ಮೂತ್ರಶಾಸ್ತ್ರ ಮತ್ತು ಕಿಡ್ನಿ ಕಸಿ ವಿಭಾಗಕ್ಕೆ ಭೇಟಿ ನೀಡಿದ್ದರು. ಅವರಿಗೆ ಮೂತ್ರನಾಳದಲ್ಲಿ ಕಲ್ಲುಗಳ ಸಮಸ್ಯೆ ಇತ್ತು. ಪಂಜಾಬ್‌ನ ಸ್ಥಳೀಯ ವೈದ್ಯರು ಆ ಕಲ್ಲನ್ನು ತೆಗೆದುಹಾಕಲು ಪ್ರಯತ್ನಿಸಿದರು, ಆದರೆ ಈ ಸಮಯದಲ್ಲಿ ರೋಗಿಯ ಎಡ ಮೂತ್ರನಾಳವೂ ಕಿಡ್ನಿ ಸ್ಟೋನ್ ನೊಂದಿಗೆ ಹೊರಬಂದಿತು. ಅಂದರೆ, ಈಗ ಎಡ ಮೂತ್ರಪಿಂಡವನ್ನು ಚೀಲಕ್ಕೆ ಸಂಪರ್ಕಿಸುವ ಟ್ಯೂಬ್ (ಮೂತ್ರನಾಳ) ಸಂಪೂರ್ಣವಾಗಿ ಮಾಯವಾಗಿತ್ತು.


ಆಸ್ಪತ್ರೆಯ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸಕ ಡಾ.ವಿಪಿನ್ ತ್ಯಾಗಿ ಅವರ ಪ್ರಕಾರ, 'ಸಾಮಾನ್ಯ ರೋಗಿಯಲ್ಲಿ, ಒಂದು ಮೂತ್ರಪಿಂಡವು ಎಡಭಾಗದಲ್ಲಿ ಮತ್ತು ಒಂದು ಬಲಭಾಗದಲ್ಲಿರುತ್ತದೆ. ಈ ಮೂತ್ರಪಿಂಡಗಳನ್ನು ಮೂತ್ರದ ಚೀಲಕ್ಕೆ ಸಂಪರ್ಕಿಸುವ ಎರಡು ಮೂತ್ರನಾಳಗಳು ಇರುತ್ತವೆ. ಆದರೆ ಈ ಸಂದರ್ಭದಲ್ಲಿ ಎಡಭಾಗದ ಕಿಡ್ನಿಗೆ ಮಾತ್ರ ಮೂತ್ರ ವಿಸರ್ಜನಾ ನಾಳ ಇಲ್ಲದೆ ಇರುವುದು ಗಮನಕ್ಕೆ ಬಂದಿದೆ' ಎಂದಿದ್ದಾರೆ.


ಇದನ್ನೂ ಓದಿ-Interesting Video: ಸಸ್ಯಗಳು ಮಲಗಿ ಏಳುವುದನ್ನು ಎಂದಾದರು ನೋಡಿದ್ದೀರಾ? ಈ ವೈರಲ್ ವಿಡಿಯೋ ಒಮ್ಮೆ ನೋಡಿ ಗೊತ್ತಾಗುತ್ತದೆ


ಒಂದೇ ದಾರಿ ಉಳಿದಿತ್ತು
ಈ ಕುರಿತು ಮಾಹಿತಿ ನೀಡಿರುವ ಮೂತ್ರಶಾಸ್ತ್ರಜ್ಞ ಡಾ. ಸುಧೀರ್ ಚಡ್ಡಾ, 'ನಮ್ಮ ತಂಡಕ್ಕೆ ಸೀಮಿತ ಆಯ್ಕೆಗಳೆಂದರೆ ಮೂತ್ರಪಿಂಡವನ್ನು ತೆಗೆದುಹಾಕುವುದು ಅಥವಾ ಮೂತ್ರಪಿಂಡ ಮತ್ತು ಮೂತ್ರಕೋಶದ ನಡುವಿನ ಕಾಣೆಯಾದ ಸಂಪರ್ಕವನ್ನು ಮರುಸ್ಥಾಪಿಸುವುದು ಅಥವಾ ಮೂತ್ರಪಿಂಡದ ಸ್ವಯಂ ಕಸಿ ಮಾಡುವ ಆಯ್ಕೆಗಳಿದ್ದವು. ರೋಗಿಯು ಚಿಕ್ಕವನಾಗಿದ್ದರಿಂದ ಮತ್ತು ಮೂತ್ರನಾಳಕ್ಕೆ ಕರುಳಿನ ಪುನರ್ನಿರ್ಮಾಣವು ಸರಿಯಾದ ಆಯ್ಕೆಯಾಗಿರಲಿಲ್ಲ. ಹೀಗಾಗಿ ‘ಸ್ವಯಂ ಕಿಡ್ನಿ ಕಸಿ’ ಮಾಡಲು ನಿರ್ಧರಿಸಲಾಯಿತು.  ಅಂದರೆ ಈ ರೋಗಿಯಲ್ಲಿನ ಸಾಮಾನ್ಯ ಕಿಡ್ನಿಯನ್ನು ಎಡಭಾಗದಿಂದ ತೆಗೆದು ಬಲಭಾಗದಲ್ಲಿರುವ ಮೂತ್ರ ಚೀಲಕ್ಕೆ ಸಾಧ್ಯವಾದಷ್ಟು ಹತ್ತಿರಕ್ಕೆ ತರಲಾಯಿತು. ಈಗ ಬಲಭಾಗದಲ್ಲಿ ಅಳವಡಿಸಲಾಗಿರುವ ಕಿಡ್ನಿಗೂ ಮೂತ್ರ ಚೀಲಕ್ಕೂ 4ರಿಂದ 5 ಸೆಂ.ಮೀ ಅಂತರವಿದೆ. ಇದೀಗ ರೋಗಿಯ ಎರಡೂ ಕಿಡ್ನಿಗಳು ಒಂದೇ ಕಡೆ ಅಂದರೆ ಬಲಭಾಗದಲ್ಲಿವೆ' ಎಂದು ಹೇಳಿದ್ದಾರೆ.


ಇದನ್ನೂ ಓದಿ-BCG Booster Bose: 100 ವರ್ಷಗಳಷ್ಟು ಹಳೆಯದಾದ ಈ ಲಸಿಕೆ ಮಧುಮೇಹ-ಕೊರೊನಾಗೂ ರಾಮಬಾಣ ಚಿಕಿತ್ಸೆ ಸಾಬೀತಾಗಲಿದೆಯೇ?


ಈ ರೀತಿ ಶಸ್ತ್ರಕ್ರಿಯೆ ನಡೆಸಲಾಗಿದೆ
ಈ ಶಸ್ತ್ರಕ್ರಿಯೆಯಲ್ಲಿ ಮೂತ್ರ ಚೀಲದ ಗೋಡೆಯನ್ನು ಬಳಸಿಕೊಂಡು 4 ರಿಂದ 5 ಸೆಂ.ಮೀ ಹೊಸ ಟ್ಯೂಬ್ ಅನ್ನು ಮರುನಿರ್ಮಾಣ ಮಾಡಲು ನಿರ್ಧರಿಸಲಾಯಿತು. ಈ ಪುನರ್ನಿರ್ಮಾಣ ಟ್ಯೂಬ್ ಅನ್ನು ಮೂತ್ರಕೋಶಕ್ಕೆ ಜೋಡಿಸಿದ ತಕ್ಷಣ, ಈ ಮೂತ್ರಪಿಂಡದಲ್ಲಿ ಮತ್ತೆ ರಕ್ತ ಪರಿಚಲನೆ ಪ್ರಾರಂಭವಾಯಿತು ಮತ್ತು ಈ ಟ್ಯೂಬ್ನಿಂದ ಮೂತ್ರವನ್ನು ಹಾದುಹೋಗುವ ಪ್ರಕ್ರಿಯೆಯು ಆರಂಭಗೊಂಡಿದೆ. 


ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.