BCG Booster Bose: 100 ವರ್ಷಗಳಷ್ಟು ಹಳೆಯದಾದ ಈ ಲಸಿಕೆ ಮಧುಮೇಹ-ಕೊರೊನಾಗೂ ರಾಮಬಾಣ ಚಿಕಿತ್ಸೆ ಸಾಬೀತಾಗಲಿದೆಯೇ?

BCG Booster Bose: ಇತ್ತೀಚೆಗಷ್ಟೇ ಭಾರತದಲ್ಲಿ ನಡೆದ ಕೊರೊನಾ ಕುರಿತಾದ ವಿಶೇಷ ಅಧ್ಯಯನವೊಂದರಲ್ಲಿ ಕೆಲ ಕಾಲದ ಬಳಿಕ ಶಾರೀರಿಕವಾಗಿ ದುರ್ಬಲರಾದ ಅಥವಾ ವಯೋವೃದ್ಧರಿಗೆ ಕೊರೊನಾ ಬೂಸ್ಟರ್ ಡೋಸ್ ಅವಶ್ಯಕತೆ ಬೀಳಲಿದೆ ಎನ್ನಲಾಗಿತ್ತು. 

BCG Booster Bose: ಇತ್ತೀಚೆಗಷ್ಟೇ ಭಾರತದಲ್ಲಿ ನಡೆದ ಕೊರೊನಾ ಕುರಿತಾದ ವಿಶೇಷ ಅಧ್ಯಯನವೊಂದರಲ್ಲಿ ಕೆಲ ಕಾಲದ ಬಳಿಕ ಶಾರೀರಿಕವಾಗಿ ದುರ್ಬಲರಾದ ಅಥವಾ ವಯೋವೃದ್ಧರಿಗೆ ಕೊರೊನಾ ಬೂಸ್ಟರ್ ಡೋಸ್ ಅವಶ್ಯಕತೆ ಬೀಳಲಿದೆ ಎನ್ನಲಾಗಿತ್ತು. ಆದರೆ ಇದೀಗ, 100 ವರ್ಷಗಳಷ್ಟು ಹಳೆಯದಾದ ಒಂದು ಲಸಿಕೆಯನ್ನು ಬೂಸ್ಟರ್ ಡೋಸ್ ರೂಪದಲ್ಲಿ ನೀಡುವ ಸಿದ್ಧತೆಗಳು ನಡೆಯುತ್ತಿವೆ. ಹೌದು, ಬಿಸಿಜಿ ವ್ಯಾಕ್ಸಿನ್ ಕೊರೊನಾ ಹಾಗೂ ಡಯಾಬಿಟಿಸ್ ಕಾಯಿಲೆಯಿಂದ ರಕ್ಷಣೆ ಒದಗಿಸಲಿದೆ ಎಂಬುದರ ಮೇಲೆ ಭಾರತೀಯ ವಿಜ್ಞಾನಿಗಳು ಸಂಶೋಧನೆಯನ್ನು ನಡೆಸುತ್ತಿದ್ದಾರೆ ಹಾಗೂ ಐಸಿಎಂಆರ್ ಅದರ ಮೇಲೆ ಕಾರ್ಯ ಆರಂಭಿಸಿದೆ. 

 

ಇದನ್ನೂ ಓದಿ-Interesting Video: ಸಸ್ಯಗಳು ಮಲಗಿ ಏಳುವುದನ್ನು ಎಂದಾದರು ನೋಡಿದ್ದೀರಾ? ಈ ವೈರಲ್ ವಿಡಿಯೋ ಒಮ್ಮೆ ನೋಡಿ ಗೊತ್ತಾಗುತ್ತದೆ

 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
 

1 /6

BCG ಯ ಬೂಸ್ಟರ್ ಡೋಸ್ ಅನ್ನು ಅನ್ವಯಿಸುವ ಮೂಲಕ TB ಯಿಂದ ಬಳಲುತ್ತಿರುವ ಜನರನ್ನು TB ಯಿಂದ ರಕ್ಷಿಸಬಹುದೇ ಎಂದು ನೋಡುವುದು ಈ ಸಂಶೋಧನೆಯ ಮುಖ್ಯ ಉದ್ದೇಶವಾಗಿತ್ತು. ಆದರೆ ಈ ಲಸಿಕೆ ಮಧುಮೇಹದ ವಿರುದ್ಧವೂ ರಕ್ಷಣೆ ನೀಡುತ್ತಿದೆ ಎಂದು ಸಂಶೋಧನೆ ಬಹಿರಂಗಪಡಿಸಿದೆ. ಭಾರತದಲ್ಲಿ ನಡೆಯುತ್ತಿರುವ ಈ ಸಂಶೋಧನೆಯಲ್ಲಿ, ನವಜಾತ ಶಿಶುಗಳಿಗೆ ರೋಗನಿರೋಧಕ ಶಕ್ತಿಯನ್ನು ನೀಡುವ ಈ ಲಸಿಕೆ ಮಧುಮೇಹ ಮತ್ತು ಕರೋನಾ ವೈರಸ್‌ನಿಂದಲೂ ಕೂಡ ರಕ್ಷಣೆ ನೀಡಲಿದೆಯೇ ಎಂಬ ಬಗ್ಗೆಯೂ ಸಂಶೋಧನೆ ನಡೆಯುತ್ತಿದೆ. ಇದು ಸಂಭವಿಸಿದಲ್ಲಿ, ಈ BCG ಲಸಿಕೆ ಅನೇಕ ರೋಗಗಳಿಗೆ ಔಷಧ ಸಾಬೀತಾಗಲಿದೆ.

2 /6

ಪ್ರಸ್ತುತ BCG ಲಸಿಕೆಯ ಬೂಸ್ಟರ್ ಡೋಸ್‌ಗೆ ಸಿದ್ಧತೆಗಳನ್ನು ನಡೆಸಲಾಗುತ್ತಿದೆ.ಇದುವರೆಗೆ ಭಾರತದಲ್ಲಿ ಜನರು ಈ ಲಸಿಕೆಯನ್ನು ನವಜಾತ ಶಿಶುಗಳಿಗೆ ಪ್ರತಿರಕ್ಷಣೆಗಾಗಿ ಅತ್ಯಗತ್ಯ ಲಸಿಕೆ ಎಂದು ತಿಳಿದಿದ್ದರು, ಆದರೆ ಶೀಘ್ರದಲ್ಲೇ ಈ ಲಸಿಕೆಯ ಪ್ರಾಮುಖ್ಯತೆ ಮತ್ತು ಗುರುತು ಎರಡೂ ಬದಲಾಗಬಹುದು. ಸಂಶೋಧನೆಯ ಸ್ಟ್ಯಾಂಪ್ ಮಾಡಿದ ನಂತರ, ಶೀಘ್ರದಲ್ಲೇ ಜನರಿಗೆ ಕರೋನಾದ ಬೂಸ್ಟರ್ ಡೋಸ್ ಜೊತೆಗೆ BCG ಯ ಬೂಸ್ಟರ್ ಡೋಸ್ ಅನ್ನು ಕೂಡ ನೀಡಲಾಗುವುದು ಎನ್ನಲಾಗುತ್ತಿದೆ.

3 /6

ಐಸಿಎಂಆರ್‌ನ ರಾಷ್ಟ್ರೀಯ ಕ್ಷಯರೋಗ ಸಂಶೋಧನಾ ಸಂಸ್ಥೆ (ಎನ್‌ಐಆರ್‌ಟಿ) ಈ ಸಂಶೋಧನೆಗೆ ಸಿದ್ಧತೆ ನಡೆಸಿದೆ. ಟಿಬಿ ರೋಗಿಗಳೊಂದಿಗೆ ಸಂಪರ್ಕದಲ್ಲಿರುವ 6 ರಿಂದ 18 ವರ್ಷ ವಯಸ್ಸಿನ ಮಕ್ಕಳು ಮತ್ತು ಹದಿಹರೆಯದವರನ್ನು ಈ ಸಂಶೋಧನೆಯಲ್ಲಿ ಶಾಮೀಲುಗೊಳಿಸಲಾಗದೆ. ಅವರಿಗೆ ಬಿಸಿಜಿ ಲಸಿಕೆಯ ಬೂಸ್ಟರ್ ಡೋಸ್ ನೀಡಿ, ನಂತರ ಫಲಿತಾಂಶಗಳ ಅಧ್ಯಯನ ನಡೆಸಲಾಗುವುದು ಎನ್ನಲಾಗಿದೆ. BCG ಲಸಿಕೆಯ ಬೂಸ್ಟರ್ ಡೋಸ್ ಟಿಬಿ ರೋಗಕ್ಕೆ ಒಡ್ಡಿಕೊಂಡವರ ಸಂಪರ್ಕಕ್ಕೆ ಬರುವ ಯಾರನ್ನಾದರೂ ಕೂಡ ರಕ್ಷಿಸಬಹುದೇ ಎಂಬುದು ಈ ಸಂಶೋಧನೆ ನಿರ್ಧರಿಸಲಿದೆ.

4 /6

ಈ ಕುರಿತು ಹೇಳಿಕೆ ನೀಡಿರುವ ಡಾ.ಪದ್ಮಾ-ಪ್ರಿಯದರ್ಶಿನಿ, ಮನೆಯಲ್ಲಿ ಟಿಬಿ ರೋಗಿಗಳನ್ನು ಹೊಂದಿರುವ ಸುಮಾರು 9 ಸಾವಿರ ಮಕ್ಕಳ ಮೇಲೆ ಈ ಸಂಶೋಧನೆ ನಡೆಯಲಿದೆ ಎಂದಿದ್ದಾರೆ. ಈ ಹದಿಹರೆಯದವರನ್ನು 2 ವರ್ಷಗಳ ಕಾಲ ಮೇಲ್ವಿಚಾರಣೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ. ದೇಶದ 8 ನಗರಗಳಲ್ಲಿ ಈ ಸಂಶೋಧನೆ ನಡೆಯಲಿದ್ದು, ಈ ವರ್ಷದ ಆಗಸ್ಟ್‌ನಲ್ಲಿ ಅಧ್ಯಯನ ಆರಂಭವಾಗುವ ನಿರೀಕ್ಷೆಯಿದೆ. BCG ಲಸಿಕೆಯನ್ನು ಮಗುವಿಗೆ ಹುಟ್ಟಿದ ಸಮಯದಿಂದ ಒಂದು ವರ್ಷದ ಅವಧಿಯೊಳಗೆ ನೀಡಲಾಗುತ್ತದೆ. ಪ್ರಸ್ತುತ ಈ ಲಸಿಕೆಯು ಭಾರತದಲ್ಲಿ ರಾಷ್ಟ್ರೀಯ ವ್ಯಾಕ್ಸಿನೇಷನ್ ಅಭಿಯಾನದ ಭಾಗವಾಗಿದೆ. NIRT ಸಂಶೋಧಕ ಡಾ. ಶ್ರೀ ರಾಮ್ ಹೇಳುವ ಪ್ರಕಾರ, ಈ ಲಸಿಕೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ ಮತ್ತು ಶ್ವಾಸಕೋಶದ ಕಾಯಿಲೆಗಳು, ಅದರಲ್ಲಿಯೂ ವಿಶೇಷವಾಗಿ ಟಿಬಿ ವಿರುದ್ಧ ರಕ್ಷಿಸುವಲ್ಲಿ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಇದೀಗ ಮಧುಮೇಹ ಹಾಗೂ ಕೋವಿಡ್‌ನಲ್ಲೂ ಕೂಡ ಇದರ ಪ್ರಯೋಜನಗಳು ಸಾಬೀತಾಗುತ್ತಿವೆ.

5 /6

ಬಿಸಿಜಿ ಲಸಿಕೆಯನ್ನು 1920 ರಲ್ಲಿ ಕಂಡುಹಿಡಿಯಲಾಗಿದೆ. ಹಾವರ್ಡ್ ಮೆಡಿಕಲ್ ಕಾಲೇಜಿನಲ್ಲಿ ಈ ಲಸಿಕೆ ಕುರಿತು ನಡೆಯುತ್ತಿರುವ ಸಂಶೋಧನೆಯ ಸಮಯದಲ್ಲಿ, ಸಂಶೋಧಕರು ಕಾಲಕಾಲಕ್ಕೆ ಈ ಲಸಿಕೆಯು ಇತರ ಅನೇಕ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಎಂಬ ಸಂಕೇತಗಳನ್ನು ಪಡೆದಿದ್ದಾರೆ. ಇದು ಮಲ್ಟಿಪಲ್ ಸ್ಕ್ಲೆರೋಸಿಸ್ ಅಥವಾ ಟೈಪ್ 1 ಮಧುಮೇಹದಂತಹ ಸ್ವಯಂ-ನಿರೋಧಕ ಅಸ್ವಸ್ಥತೆಯಾಗಿರಬಹುದು. ಇಂಡಿಯನ್ ಜರ್ನಲ್ ಆಫ್ ಅಪ್ಲೈಡ್ ರಿಸರ್ಚ್‌ನಲ್ಲಿ ಕಳೆದ ವರ್ಷ ಪ್ರಕಟವಾದ ಸಂಶೋಧನೆಯ ಪ್ರಕಾರ, ಬಿಸಿಜಿ ಲಸಿಕೆಯು ಕರೋನಾದಿಂದ ರಕ್ಷಣೆ ಒದಗಿಸುತ್ತದೆ ಎಂದೂ ಕೂಡ ಹೇಳಲಾಗಿದೆ. ಈ ಸಂಶೋಧನೆಯನ್ನು 2021 ರಲ್ಲಿ ನೋಯ್ಡಾದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಲಾಗಿತ್ತು.

6 /6

ಪ್ರಸ್ತುತ ಭಾರತದಲ್ಲಿ ಸುಮಾರು 80 ಮಿಲಿಯನ್ ಗೂ ಅಧಿಕ ಮಧುಮೇಹ ರೋಗಿಗಳಿದ್ದಾರೆ . ಹೀಗಾಗಿ ಮಧುಮೇಹ ಭಾರತದ ಪಾಲಿಗೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಇವರಲ್ಲಿ 2.5 ಲಕ್ಷ ಜನರು ಟೈಪ್ 1 ಡಯಾಬಿಟಿಸ್ ನಿಂದ ಬಳಲುತ್ತಿದ್ದಾರೆ. ಅಂದರೆ, ಹುಟ್ಟಿನಿಂದಲೇ ಮಧುಮೇಹ ಎಂದರ್ಥ. ಮಧುಮೇಹದ ವಿಷಯದಲ್ಲಿ ಭಾರತವು ವಿಶ್ವದಲ್ಲಿಯೇ  ಎರಡನೇ ಸ್ಥಾನದಲ್ಲಿದೆ. ಇದೇ ವೇಳೆಪ್ರಸ್ತುತ ಭಾರತದಲ್ಲಿ ಸುಮಾರು 19 ಲಕ್ಷಕ್ಕೂ ಅಧಿಕ ಟಿಬಿ ರೋಗಿಗಳಿದ್ದಾರೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಟಿಬಿ ರೋಗಿಗಳನ್ನು ಹೊಂದಿರುವ ದೇಶವಾಗಿದೆ. 2025 ರ ವೇಳೆಗೆ ಟಿಬಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಪಣತೊಟ್ಟಿದೆ. ಆದರೆ ಕಳೆದ ಒಂದು ವರ್ಷದಲ್ಲಿ ಅಂದರೆ 2021ರಲ್ಲಿಯೇ ಟಿಬಿ ರೋಗಿಗಳ ಸಂಖ್ಯೆಯಲ್ಲಿ ಶೇ.19ರಷ್ಟು ಹೆಚ್ಚಳವಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಈ ಸಂಶೋಧನೆಯು ಉತ್ತಮ ಫಲಿತಾಂಶವನ್ನು ನೀಡಿದರೆ, ದೇಶವು ಟಿಬಿ, ಮಧುಮೇಹ ಮತ್ತು ಕರೋನಾ ಪ್ರಕರಣಗಳ ವಿಷಯದಲ್ಲಿ ಭಾರಿ ಯಶಸ್ಸನ್ನೇ ಸಾಧಿಸಬಹುದು ಎನ್ನಲಾಗುತ್ತಿದೆ.