Second Hand Automatic Cars : ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಕಾರನ್ನು ಖರೀದಿಸುವ ಯೋಚನೆಯಿದ್ದರೆ, ಅಂತಹ ಕೆಲವು ವಾಹನಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಿದ್ದೇವೆ. ಮಾರುತಿ ಸುಜುಕಿ ಟ್ರೂ ವ್ಯಾಲ್ಯೂ ವೆಬ್‌ಸೈಟ್‌ನಲ್ಲಿ ಕೆಲವು ಅಗ್ಗದ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಕಾರುಗಳನ್ನು ಲಿಸ್ಟ್ ಮಾಡಲಾಗಿದೆ. ಈ ಕಾರುಗಳ ಬೆಲೆ ನಾಲ್ಕು ಲಕ್ಷ ರೂಪಾಯಿಗಿಂತಲೂ ಕಡಿಮೆಯಾಗಿದೆ. ಕಾರು ಖರೀದಿಗೆ ನೀವು ನಿಗದಿ ಮಾಡಿರುವ ಬಜೆಟ್ 4 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಇದ್ದರೆ, ಈ ಕಾರುಗಳನ್ನು ಖರೀದಿಸುವ ಬಗ್ಗೆ ಯೋಚನೆ ಮಾಡಬಹುದು.  


COMMERCIAL BREAK
SCROLL TO CONTINUE READING

ಆಟೋಮ್ಯಾಟಿಕ್ ಟ್ರಾನ್ಸ್ ಮಿಶನ್ ಹೊಂದಿರುವ ಮಾರುತಿ ಆಲ್ಟೊ K10 VXI ಇಲ್ಲಿ ಲಿಸ್ಟ್ ಮಾಡಿರುವ ಕಾರಿನಲ್ಲಿ ಒಂದು. ಇದು 2019 ರ ಮಾಡೆಲ್ ಆಗಿದ್ದು, ಇದುವರೆಗೆ 16446 ಕಿಮೀ ಕ್ರಮಿಸಿದೆ. ಪೆಟ್ರೋಲ್ ಇಂಜಿನ್  ಚಾಲಿತ ಕಾರು ಇದಾಗಿದೆ. ಅಲ್ಲದೆ, ಇದು ಫಸ್ಟ್ ಓನರ್ ಕಾರು. ಈ ಕಾರಿನ ಮೇಲೆ ಒಂದು ವರ್ಷದ ವಾರಂಟಿ ಮತ್ತು ಮೂರು ಸರ್ವಿಸ್ ನೀಡಲಾಗುತ್ತಿದೆ. ಈ ಕಾರಿಗೆ ಇಲ್ಲಿ ನಿಗದಿ ಮಾಡಿಸಿರುವ ಬೆಲೆ 360,000 ರೂಪಾಯಿ. 


ಇದನ್ನೂ ಓದಿ : Christmas Day Offer: ಬರೀ ಒಂದು ಟ್ವೀಟ್ ಮಾಡಿದರೆ ಸಾಕು ಕಂಪನಿ ಉಚಿತವಾಗಿ ನೀಡುತ್ತಿದೆ Nothing Phone 1.!


ಮತ್ತೊಂದು ಮಾರುತಿ ಆಲ್ಟೊ K10 VXI ಅನ್ನು ಸಹ ಇಲ್ಲಿ  ಲಿಸ್ಟ್ ಮಾಡಲಾಗಿದೆ. ಇದಕ್ಕೆ ಮೇಲಿನ ಕಾರಿಗಿಂತ 10,000 ರೂ. ಜಾಸ್ತಿ ಪಾವತಿಸಬೇಕಾಗುತ್ತದೆ. ಅಂದರೆ ಈ ಕಾರನ್ನು 3,70,000 ರೂ.ಗಳಿಗೆ ಮಾರಾಟಕ್ಕೆ ಇಡಲಾಗಿದೆ.  2018 ರ ಮಾದರಿಯ ಫಸ್ಟ್ ಓನರ್ ಕಾರು ಇದಾಗಿದ್ದು, ಇಲ್ಲಿಯವರೆಗೆ 41421 ಕಿಮೀ ಓಡಿದೆ. ಇದು ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಇದರ ಮೇಲೆ ಆರು ತಿಂಗಳ ವಾರಂಟಿ ಮತ್ತು ಮೂರು ಫ್ರೀ ನೀಡಲಾಗುತ್ತಿದೆ. 


ವ್ಯಾಗನ್ R VXI AMT ಅನ್ನು ಸಹಾ ಇಲ್ಲಿ ಮಾರಾಟಕ್ಕೆ ಇಡಲಾಗಿದೆ.  ಈ ಕಾರಿಗೆ ನಿಗದಿ ಪಡಿಸಿರುವ ಬೆಲೆ 360,000 ರೂಪಾಯಿ. 2017 ರ ಮಾದರಿಯ ಫಸ್ಟ್ ಓನರ್ ಕಾರು ಇದಾಗಿದ್ದು, 70851 ಕಿಮೀ ಓಡಿದೆ. ಇದು ಕೂಡಾ ಪೆಟ್ರೋಲ್ ಎಂಜಿನ್ ಹೊಂದಿದೆ.  ಈ ಕಾರಿನ ಮೇಲೆ ಆರು ತಿಂಗಳ ವಾರಂಟಿ ಮತ್ತು ಮೂರು  ಫ್ರೀ ಸರ್ವಿಸ್ ನೀಡಲಾಗುತ್ತದೆ.  


ಇದನ್ನೂ ಓದಿ : ಅನಗತ್ಯ ಕರೆಗಳನ್ನು ತಪ್ಪಿಸಲು ಈ ಸಣ್ಣ ಕೆಲಸ ಮಾಡಿ


ಇಲ್ಲಿ ಪಟ್ಟಿ ಮಾಡಲಾದ ಮಾರುತಿ ಸೆಲೆರಿಯೊ ZXI ಅನ್ನು ಸಹಾ 3,60,000 ರೂಪಾಯಿಗಳಿಗೆ ಮಾರಾಟಕ್ಕೆ ಇಡಲಾಗಿದೆ. ಈ  ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಕಾರು,  2017ರ ಮಾಡೆಲ್  ಆಗಿದ್ದು, 196858 ಕಿ.ಮೀ. ವರೆಗೆ ಕ್ರಮಿಸಿದೆ.


ಮೇಲೆ ಹೇಳಿದ ಎಲ್ಲಾ ಕಾರುಗಳು ಕ್ರಮವಾಗಿ ಲಕ್ನೋ, ಜೈಪುರ, ರಾಂಚಿ ಮತ್ತು ಗೋವಾದಲ್ಲಿ ಮಾರಾಟಕ್ಕೆ ಲಭ್ಯವಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.